PDO Recruitment 2024 : ಪಿಡಿಒ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ : ಹೇಗೆ ಅರ್ಜಿ ಸಲ್ಲಿಸುವುದು.? ಕೊನೆಯ ದಿನಾಂಕ ಯಾವುದು.?

PDO Recruitment 2024 : ನಮಸ್ಕಾರ ಸ್ನೇಹಿತರೇ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಕರ್ನಾಟಕ ಲೋಕಸೇವಾ ಆಯೋಗ ಉದ್ಯೋಗ ಸೌಧ ಬೆಂಗಳೂರು ಇವರು ತಿದ್ದುಪಡಿ ಅಧಿಸೂಚನೆಯನ್ನು ಹೊರಡಿಸಿದ್ದಾರೆ. ಉಳಿಕೆ ಮೂಲ ವೃಂದದ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಉಲ್ಲೇಖಿತ ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಇದನ್ನೂ ಕೂಡ ಓದಿ : PM Kisan Mandhan Yojana : ಈ ಯೋಜನೆಯಡಿ ಪ್ರತಿ ತಿಂಗಳು ₹3,000/- ಸಿಗುತ್ತೆ.! ಹೇಗೆ ಅರ್ಜಿ ಸಲ್ಲಿಸುವುದು.? ಬೇಕಾಗುವ ದಾಖಲೆಗಳೇನು.?

ರಾಜ್ಯ ಸಿವಿಲ್ ಸೇವೆಗಳಲ್ಲಿನ ವಿವಿಧ ಇಲಾಖೆಗಳ ಗ್ರೂಪ್- ಸಿ ಹಾಗೂ ಗ್ರೂಪ್- ಬಿ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಈಗಾಗಲೇ ಹೊರಡಿಸಲಾದ ಅಧಿಸೂಚನೆಗಳಿಗೆ ಹಾಗೂ ಮುಂದಿನ 1 ವರ್ಷದಲ್ಲಿ ಹೊರಡಿಸಲಿರುವ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಎಲ್ಲ ಪ್ರವರ್ಗದ ಅಭ್ಯರ್ಥಿಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆ ನೀಡಿ ಆದೇಶಿಸಲಾಗಿದೆ. ಇದು ಕೇವಲ ಈ ಹುದ್ದೆಗೆ ಮಾತ್ರ ಈ ಬಾರಿಗೆ ಮಾತ್ರ ಅನ್ವಯವಾಗುತ್ತದೆ.

ಶೈಕ್ಷಣಿಕ ಅರ್ಹತೆ ಹಾಗು ಹುದ್ದೆಗಳು :-

ಪಿಡಿಒ ಹುದ್ದೆಗಳಿಗೆ ಯಾವುದೇ ಪದವಿ (ಡಿಗ್ರಿ) ಪಾಸಾದವರು. ಪಿಡಿಒ ಉಳಿಕೆ ಮೂಲ ವೃಂದದ 150 ಹುದ್ದೆಗಳು, ಹೈದರಾಬಾದ್‌ ಕರ್ನಾಟಕ ವೃಂದದ 97 ಹುದ್ದೆಗಳು, ಒಟ್ಟು 247 ಹುದ್ದೆಗಳಿವೆ.

ಇದನ್ನೂ ಕೂಡ ಓದಿ : SBI Bank Updates : ಬ್ಯಾಂಕ್ ಅಕೌಂಟ್ ಇದ್ದವರಿಗೆ ಬಂಪರ್ | ಖಾತೆ ಹೊಂದಿರುವ ಗ್ರಾಹಕರು ತಪ್ಪದೆ ನೋಡಿ | ಬ್ಯಾಂಕ್ ನಿಂದ ಬಂಪರ್ ಗಿಫ್ಟ್

ವಯೋಮಿತಿ :-

  • ಅಭ್ಯರ್ಥಿಗಳ ವಯೋಮಿತಿ ಅರ್ಜಿ ಸಲ್ಲಿಸಲು ಕನಿಷ್ಠ – 18 ವರ್ಷಗಳು ಪೂರ್ಣವಾಗಿರಬೇಕು.
  • ಸಾಮಾನ್ಯ ವರ್ಗದವರಿಗೆ- 35 ವರ್ಷಗಳು ಇರುವುದನ್ನು 38 ವರ್ಷಗಳು ಮಾಡಲಾಗಿದೆ.
  • 2ಎ, 2ಬಿ, 3ಎ, 3ಬಿ, 38 ವರ್ಷಗಳು ಇರುವುದನ್ನ 41 ವರ್ಷಕ್ಕೆ ಏರಿಕೆ ಮಾಡಿದೆ.
  • ಎಸ್ಸಿ, ಎಸ್ಟಿ, ಪ್ರವರ್ಗ1 – 40 ವರ್ಷ ಇರುವುದನ್ನು 43 ವರ್ಷಕ್ಕೆ ಏರಿಸಲಾಗಿದೆ.

ಇದನ್ನೂ ಕೂಡ ಓದಿ : Sandhya Suraksha : ರಾಜ್ಯ ಸರ್ಕಾರದ ಈ ಯೋಜನೆಯಡಿ ಮಹಿಳೆಯರಿಗೆ ₹1,200/- ಹಣ ಬ್ಯಾಂಕ್ ಖಾತೆಗೆ ಜಮಾ.!

ಅಭ್ಯರ್ಥಿಗಳಿಗೆ ವಿಶೇಷ ಸೂಚನೆ :-

ತಾಂತ್ರಿಕ ಕಾರಣದಿಂದ ಈ ಹಿಂದೆ ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿ ಮಾಡಲು ಸಾಧ್ಯವಾಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಯನ್ನ ಮಾಡಬಹುದು. ವಯೋಮಿತಿಯನ್ನು ಹೊರತು ಪಡಿಸಿ ಉಳಿದಂತೆ ಆಯೋಗದ ಈ ಮೊದಲು ಹೊರಡಿಸಿದ ಅಧಿಸೂಚನೆಯಲ್ಲಿರುವಂತೆ ಎಲ್ಲ ನಿಯಮಗಳು ಅನ್ವಯವಾಗುತ್ತವೆ. ಈಗಾಗಲೇ ಅಯೋಗದ ಅಂತರ್ಜಾಲದಲ್ಲಿ ಪ್ರಕಟಣೆ ಮಾಡಿರುವಂತೆ ಪಿಡಿಒ ಹುದ್ದೆಗಳ ಪರೀಕ್ಷಾ ದಿನಾಂಕಗಳಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ.

ಅರ್ಜಿ ಶುಲ್ಕ ಎಷ್ಟು.?

  • ಅರ್ಜಿ ಶುಲ್ಕ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ₹600/- ರೂಪಾಯಿ
  • ಇತರೆ ಹಿಂದುಳಿದ ಅಭ್ಯರ್ಥಿಗಳಿಗೆ ₹300/- ರೂಪಾಯಿ
  • ಮಾಜಿ ಸೈನಿಕ ಅಭ್ಯರ್ಥಿಗಳಿಗೆ ₹50/- ರೂಪಾಯಿ,
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.

ಇದನ್ನೂ ಕೂಡ ಓದಿ : Google Pay Loan : ಗೂಗಲ್ ಪೇ ಇದ್ದವರಿಗೆ 5 ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯ.! ಬೇಕಾಗುವ ದಾಖಲೆಗಳೇನು.?

ಆಸಕ್ತ ಹಾಗು ಅರ್ಹ ಅಭ್ಯರ್ಥಿಗಳು ಕರ್ನಾಟಕ ಲೋಕಸೇವಾ ಆಯೋಗದ (KPSC) ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ :- ಸೆಪ್ಟೆಂಬರ್ 18, 2024 
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- ಅಕ್ಟೋಬರ್ 03, 2024

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply