Crop Insurance : ನಮಸ್ಕಾರ ಸ್ನೇಹಿತರೇ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ(Prdhana Manthri Fasal Bima Yojana) ಅರ್ಹ ಫಲಾನುಭವಿ ರೈತರಿಗೆ ದೊರೆಯುವ ಬೆಳೆ ವಿಮೆ ಪರಿಹಾರದ ಹಣ ಈಗಾಗಲೇ ಬಿಡುಗಡೆಯಾಗಿದ್ದು, ಕೆಲ ರೈತರು ಸರಕಾರದಿಂದ ಹಣ ಪಡೆದು ಬರಗಾಲದಿಂದ ಉಂಟಾದ ಆರ್ಥಿಕ ಸಂಕಷ್ಟಕ್ಕೆ ಪರಿಹಾರ ಪಡೆದಿದ್ದಾರೆ. ಇನ್ನೂ ಬೆಳೆ ವಿಮೆ ಪರಿಹಾರ ಹಣ ಸಿಗದ ಅರ್ಹ ರೈತರು ಅರ್ಜಿ ಸಲ್ಲಿಸುವಾಗ ಮಾಡಿದ ಸಣ್ಣ ಪುಟ್ಟ ತಪ್ಪುಗಳಿಂದ ಹೆಚ್ಚಿನ ರೈತರು ವಿಮಾ ಮೊತ್ತದಿಂದ ವಂಚಿತರಾಗಿದ್ದಾರೆ. ನಿಮಗೂ ಕೂಡ ಬೆಳೆ ವಿಮೆ ಪರಿಹಾರ ಸಿಗದೇ ಇದ್ದರೆ, ನೀವೇನು ತಪ್ಪು ಮಾಡಿದ್ದೀರಿ.? ಹಾಗು ನೀವು ಮಾಡಿದ ತಪ್ಪಿಗೆ ಪರಿಹಾರ ಏನು.? ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.
ಇದನ್ನೂ ಕೂಡ ಓದಿ : Housing Scheme : ಸ್ವಂತ ಮನೆ ಇಲ್ಲದವರಿಗೆ ಗುಡ್ ನ್ಯೂಸ್.! ನಿಮ್ಮ ಗ್ರಾಮ ಪಂಚಾಯಿತಿಗಳಲ್ಲಿ ಹೊಸ ಮನೆಗಳು ಬಿಡುಗಡೆ.!
ಪ್ರತಿಯೊಬ್ಬ ಅರ್ಹ ರೈತರು ಬೆಳೆಗೆ ವಿಮೆ ಮಾಡಿದ ನಂತರ ಅರ್ಜಿ ಅನುಮೋದನೆ ಪ್ರಕ್ರಿಯೆ ಯಾವ ಹಂತದಲ್ಲಿದೆ.? ವಿಮಾ ಹಣವನ್ನು ಯಾವಾಗ ಠೇವಣಿ ಮಾಡಲಾಗುತ್ತದೆ.? ಎನ್ನುವ ಬಗ್ಗೆ ಮಾಹಿತಿಯನ್ನು ತಿಳಿಯಲು ನೀವು ಅಧೀಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಮತ್ತು ಪ್ರಕ್ರಿಯೆಯ ಬಗ್ಗೆ ಮಾಹಿತಿಯನ್ನು ತಿಳಿಯಲು ಒಂದೆರಡು ತಿಂಗಳಿಗೊಮ್ಮೆ ಮೊಬೈಲ್‌ನಲ್ಲಿ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಬೇಕು. ನೀವು ಸಲ್ಲಿಸಿರುವ ಅರ್ಜಿಯನ್ನ ಕೆಲವೊಮ್ಮೆ ತಾಂತ್ರಿಕ ಸಮಸ್ಯೆಗಳಿಂದಾಗಿ ತಿರಸ್ಕರಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ಕೂಡಲೇ ಇದನ್ನು ಪರಿಶೀಲಿಸಿ ಸರಿಪಡಿಸಿದರೆ ನಿಮಗೆ ವಿಮೆ ಹಣ ಪಡೆಯಲು ಸಹಕಾರಿಯಾಗುತ್ತದೆ.
ಮೊದಲು ನೀವು ಬೆಳೆ ವಿಮೆ ವಿವರಗಳು ಎಂಬ ಅಧಿಕೃತ ವೆಬ್‌ಸೈಟ್ ಅಥವಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ(Prdhana Manthri Fasal Bima Yojana) ಅಧೀಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಲಭ್ಯವಿರುವ ಲಿಂಕ್ ಅನ್ನು ನೀವು ಕ್ಲಿಕ್ ಮಾಡಿದ ತಕ್ಷಣ ವಿಮಾ ವರ್ಷ ಮತ್ತು ಋತುವನ್ನು ಆಯ್ಕೆ ಮಾಡಲು ನಿಮಗೆ ತೋರಿಸಲಾಗುತ್ತದೆ. ಅಲ್ಲಿ ನೀವು 2023-2024 ಮತ್ತು ಖಾರಿಫ್ ಋತುವನ್ನು ನಮೂದಿಸಬೇಕು. ವರ್ಷವನ್ನು ನಮೂದಿಸಿ ಮತ್ತು ಮುಂದಿನ ಬಟನ್ ಕ್ಲಿಕ್ ಮಾಡಿ, ಎರಡನೇ ಪುಟದಲ್ಲಿ ರೈತರ ಕಾಲಮ್ ಲಭ್ಯವಿರುತ್ತದೆ. ಅಲ್ಲಿ ಕ್ರಾಪ್ ಇನ್ಸೂರೆನ್ಸ್(Crop Insurance) ಡಿಟೇಲ್ಸ್ ಆನ್ ಸರ್ವೆ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಿಮ್ಮ ಜಿಲ್ಲೆಯ ತಾಲೂಕು, ಹೋಬಳಿ, ಗ್ರಾಮ ಮತ್ತು ಸರ್ವೆ ಸಂಖ್ಯೆಯನ್ನು ನಮೂದಿಸಿ ಮತ್ತು ಚೆಕ್ ಸ್ಟೇಟಸ್ ಬಟನ್ ಮೇಲೆ ಕ್ಲಿಕ್ ಮಾಡಿ.
ಇದನ್ನೂ ಕೂಡ ಓದಿ : PM Awas Yojana : ಸ್ವಂತ ಮನೆ ನಿರ್ಮಿಸಿಕೊಳ್ಳಲು ಸಿಗುತ್ತಿದೆ ₹1.5 ಲಕ್ಷ ಸಹಾಯಧನ.! ಕೂಡಲೇ ಪಿಎಂ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಿ.
ನಂತರ ವಿಮಾ ಅಪ್ಲಿಕೇಶನ್ ಸಂಖ್ಯೆ ಮತ್ತು ಕ್ಯಾಪ್ಟಾ ಕೋಡ್ ಅನ್ನು ನಮೂದಿಸಲು ತೋರಿಸಲಾಗುತ್ತದೆ. ನೀವು ಅಲ್ಲಿ ಕೇಳಿರುವ ಎರಡನ್ನೂ ಸರಿಯಾದ ಕ್ರಮದಲ್ಲಿ ನಮೂದಿಸಿದರೆ ನಿಮ್ಮ ಬೆಳೆ ಸಮೀಕ್ಷೆ ಮತ್ತು ಬೆಳೆ ವಿಮೆ ವಿವರಗಳನ್ನು ಪ್ರಕಟಿಸಲಾಗುತ್ತದೆ. ಎರಡರಲ್ಲಿರುವ ಮಾಹಿತಿಯು ಹೊಂದಾಣಿಕೆಯಾಗಿದೆಯೇ ಎನ್ನುವುದನ್ನ ನೀವು ಪರಿಶೀಲಿಸಿಕೊಳ್ಳಿ.
ಕೆಳಗೆ ನೀಡಿರುವ ಮಾಹಿತಿ ತಪ್ಪಾಗಿದ್ದರೆ ಅರ್ಹ ಫಲಾನುಭವಿ ರೈತರಿಗೆ ಬೆಳೆ ವಿಮೆ ಹಣ ಸಿಗುವುದಿಲ್ಲ.!
ಬೆಳೆ ವಿಮೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವ ಅರ್ಹ ಫಲಾನುಭವಿ ರೈತರ ಹೆಸರು ಆಧಾರ್ ಕಾರ್ಡ್(Aadhar Card) ಮತ್ತು ಬ್ಯಾಂಕ್ ಪಾಸ್ ಪುಸ್ತಕದಲ್ಲಿ ಒಂದೇ ಆಗಿರಬೇಕು. ಇದರಲ್ಲಿ ಏನಾದರೂ ಸ್ವಲ್ಪ ವ್ಯತ್ಯಾಸ ಕಂಡು ಬಂದರೂ ಕೂಡ ಬೆಳೆ ಪರಿಹಾರ ಹಣ ರೈತರಿಗೆ ಸಿಗುವುದಿಲ್ಲ. ಮತ್ತು ನಿಮ್ಮ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ. ಹಾಗಾದರೆ ಎರಡರಲ್ಲಿನ ಹೆಸರು ಹೊಂದಾಣಿಕೆಯಾಗಿದೆಯೇ.? ಪರಿಶೀಲಿಸಿಕೊಳ್ಳಿ. ತಪ್ಪಿದ್ದಲ್ಲಿ ಕೂಡಲೇ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಸರಿಪಡಿಸಿಕೊಳ್ಳಿ.
ಇದನ್ನೂ ಕೂಡ ಓದಿ : PMFBY Scheme : ಈ ಯೋಜನೆ ಅಡಿಯಲ್ಲಿ 88,000 ಕ್ಕೂ ಅಧಿಕ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ.!
ರೈತರು ಪಾವತಿಸಿರುವ ಬೆಳೆ ವಿಮೆ ವಿವರವನ್ನೂ ಬೆಳೆ ಸಮೀಕ್ಷೆಯಲ್ಲಿ ಸೇರಿಸಿ ಒಂದಕ್ಕೊಂದು ತಾಳೆ ಹಾಕಬೇಕು. ಹೀಗಾಗಿ ಬೆಳೆ ಸಮೀಕ್ಷೆ ಹಾಗೂ ಬೆಳೆ ವಿಮೆ ವಿವರ ತಾಳೆಯಾಗದಿದ್ದರೆ ರೈತರಿಗೆ ಬೆಳೆ ವಿಮೆ ಪರಿಹಾರ ಸಿಗುವುದಿಲ್ಲ. ಉದಾಹರಣೆಗೆ ಬೆಳೆ ವಿಮೆ ವಿವರದಲ್ಲಿ ‘ಜೋಳ’ ಬೆಳೆಯುವುದಾಗಿ ನಮೂದಿಸಿದ್ದರೂ ಬೆಳೆ ಸಮೀಕ್ಷೆ ಮಾಡುವವರು ‘ರಾಗಿ’ ಎಂದು ತಪ್ಪಾಗಿ ನಮೂದಿಸಿದ್ದರೆ ಕೂಡ ತಾಂತ್ರಿಕ ದೋಷವಿದ್ದು, ಹಣ ಅರ್ಹ ರೈತರ ಬ್ಯಾಂಕ್ ಖಾತೆಗೆ ಜಮಾ ಆಗುವುದಿಲ್ಲ.
ಇಂತಹ ಸಂದರ್ಭದಲ್ಲಿ ಅರ್ಹ ಫಲಾನುಭವಿ ರೈತರು ಕೂಡಲೇ ಹೋಬಳಿಯಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ. ಅಗತ್ಯ ದಾಖಲೆಗಳಾದ ಪಹಣಿ, ಆಧಾರ್ ಕಾರ್ಡ್ ಸಲ್ಲಿಸಿ ಬೆಳೆ ಸಮೀಕ್ಷೆ ಹಾಗೂ ಬೆಳೆ ವಿಮೆಗೆ ತಿದ್ದುಪಡಿ ಮಾಡಿಸಿಕೊಳ್ಳಿ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
- Student Scholarship : ತಂದೆ ಇಲ್ಲದ ಮಕ್ಕಳ ಖಾತೆಗೆ ವರ್ಷಕ್ಕೆ ₹48,000/- ರೂಪಾಯಿ ಸ್ಕಾಲರ್ ಶಿಪ್.! ಹೇಗೆ ಅರ್ಜಿ ಸಲ್ಲಿಸುವುದು.?
- Grama Panchayath Jobs : ಗ್ರಾಮ ಪಂಚಾಯ್ತಿ ಗ್ರಂಥಾಲಯ ಮೇಲ್ವಿಚಾರಕರ ನೇಮಕಾತಿ – 45 ಹುದ್ದೆಗಳಿಗೆ ಅರ್ಜಿ ಆಹ್ವಾನ.!
- Tata Curvv : ಟಾಟಾ ಕರ್ವ್ ಕಾರು ಖರೀದಿಸಬೇಕೆ.? ಯಾವ ವೇರಿಯೆಂಟ್ಗೆ ಎಷ್ಟು ತಿಂಗಳು ಕಾಯಬೇಕು.? ಸಂಪೂರ್ಣ ಮಾಹಿತಿ
- Post Office Scheme : ಮಹಿಳೆಯರಿಗಾಗಿ ಪೋಸ್ಟ್ ಆಫೀಸ್ನಲ್ಲಿ ಬಂಪರ್ ಆಫರ್.! ಪೋಸ್ಟ್ ಆಫೀಸ್ ಖಾತೆ ಇದ್ದರೆ ತಪ್ಪದೇ ನೋಡಿ
- Post Office Franchise : ಪೋಸ್ಟ್ ಆಫೀಸ್’ ಮೂಲಕ ಈ ‘ಬ್ಯುಸಿನೆಸ್’ ಮಾಡಿ, ತಿಂಗಳಿಗೆ 80,000 ರೂ. ಗಳಿಸಿ.!
- Rain Alert : ಕರ್ನಾಟಕದಲ್ಲಿ ನವೆಂಬರ್ 16ರ ವರೆಗೆ ಧಾರಕಾರ ಮಳೆ.! ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ
- Gold Rate Today : ಬಂಗಾರ ಖರೀದಿ ಮಾಡುವವರಿಗೆ ಸಿಹಿಸುದ್ಧಿ.! ಎಷ್ಟಾಗಿದೆ ನೋಡಿ ಇಂದಿನ ಗೋಲ್ಡ್ ರೇಟ್.?
- Gruhalakshmi Updates : ರಾಜ್ಯ ಸರ್ಕಾರದ ಗೃಹಲಕ್ಷಿ ಯೋಜನೆ ನಿಮಗೆ ದೊರೆತಿಲ್ಲವೆ ? ಹೀಗೆ ಮಾಡಿ ನಿಮ್ಮ ಖಾತೆಗೆ ಬರಲಿದೆ ಹಣ!
- Union Bank Recruitment : ಯೂನಿಯನ್ ಬ್ಯಾಂಕ್ನಲ್ಲಿ 85 ಸಾವಿರ ಸಂಬಳದ 1500 ಹುದ್ದೆಗಳಿಗೆ ಅರ್ಜಿ ಆಹ್ವಾನ.! ಡೈರೆಕ್ಟ್ ಲಿಂಕ್.!
- Aadhaar Card Updates : ನವೀಕರಣ ಮಾಡದ 10 ವರ್ಷ ಮೇಲ್ಪಟ್ಟ `ಆಧಾರ್ ಕಾರ್ಡ್’ ನಿಷ್ಕ್ರಿಯ ನವೀಕರಿಸುವುದು ಹೇಗೆ.?
- LPG Gas Cylinder : ಮನೆಯಲ್ಲಿ ‘ಗ್ಯಾಸ್’ ಸಂಪರ್ಕವಿದ್ಯಾ.? ಹಾಗಿದ್ರೆ, ನೀವು 50 ಲಕ್ಷ ರೂ.ಗಳ ಉಚಿತ ವಿಮೆಗೆ ಹೇಗೆ ಅರ್ಹರು ಗೊತ್ತಾ.?
- Railway Recruitment :- ರೈಲ್ವೇ ಇಲಾಖೆಯಲ್ಲಿ 5600 ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ.! ಹೇಗೆ ಅರ್ಜಿ ಸಲ್ಲಿಸುವುದು.?
- ಎಚ್ಚರಿಕೆ : ರೇಷನ್ ಕಾರ್ಡ್ ದಾರರೇ ಗಮನಿಸಿ – ನಿಮ್ಮ ಬಳಿ ಇವುಗಳಿದ್ದರೆ ತಕ್ಷಣ ಪಡಿತರ ಚೀಟಿಯನ್ನ ಹಿಂದಿರುಗಿಸಿ
- Gold Rate Today : ಭರ್ಜರಿ ಇಳಿಕೆಯತ್ತ ಸಾಗಿದ ಚಿನ್ನದ ಬೆಲೆ.! ಎಷ್ಟಿದೆ ಗೊತ್ತಾ ಇಂದಿನ ಚಿನ್ನದ ದರ.?
- Vidya Lakshmi Scheme : ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.! ವಿದ್ಯಾಲಕ್ಷ್ಮೀ ಯೋಜನೆಯಡಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಾಲ.!
- Rain Updates : ರಾಜ್ಯದಲ್ಲಿ ಮತ್ತೆ ಮಳೆ.! ಮಳೆ.! ಮಳೆ.! ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ.!
- Post Office Scheme : ಪೋಸ್ಟ್ ಆಫೀಸ್ ನಲ್ಲಿ e ಯೋಜನೆಯಡಿ ಕೇವಲ 399/- ರೂಪಾಯಿ ಠೇವಣಿ ಮಾಡಿದ್ರೆ, 10 ಲಕ್ಷ ಲಭ್ಯ.!
- e-Shram Card : ಇ-ಶ್ರಮ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್.! ಬಿಪಿಎಲ್ ಕಾರ್ಡ್ ವಿತರಣೆ.!
- Bele Parihara Payment : ರಾಜ್ಯದ ರೈತರಿಗೆ ಸಿಹಿಸುದ್ಧಿ.! ರೈತರ ಬ್ಯಾಂಕ್ ಖಾತೆಗೆ ಬೆಳೆ ಹಾನಿ ಪರಿಹಾರ ಮೊದಲ ಕಂತು ಜಮಾ.!
- Gold Rate : ಹೆಣ್ಣುಮಕ್ಕಳಿಗೆ ಸಿಹಿಸುದ್ಧಿ ಇದೆಯಾ.? ಎಷ್ಟಾಗಿದೆ ನೋಡಿ ಇವತ್ತಿನ ಚಿನ್ನದ ನಿಖರ ಬೆಲೆ.?