Toll Gate New Rules : ಸ್ವಂತ ಕಾರು ಅಥವಾ ಟ್ಯಾಕ್ಸಿ ಅಥವಾ ಗೂಡ್ಸ್ ವಾಹನ ಇರುವ ಎಲ್ಲ ವಾಹನ ಮಾಲೀಕರಿಗೆ ಕೇಂದ್ರದ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರು ಭರ್ಜರಿ ಗಿಫ್ಟ್ ಘೋಷಿಸಿದ್ದಾರೆ. ವರ್ಷವಿಡಿ ಟೋಲ್ ಫ್ರೀ..! ಹೌದು, ನೀವು ಕೇಳುತ್ತಿರುವುದು ನಿಜ. ದೇಶದಾದ್ಯಂತ ಇರುವ ಎಲ್ಲ ಟೋಲ್ ಪ್ಲಾಜಾಗಳಲ್ಲಿ ಇನ್ನು ಮುಂದೆ ಸಾಲುಗಟ್ಟಿ ನಿಂತು ಹಣ ಕಟ್ಟುವ ಅಗತ್ಯವಿಲ್ಲ. ಇದರಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿ ಇಡೀ ದೇಶದ ಎಲ್ಲ ಕಾರು, ಟ್ಯಾಕ್ಸಿ ಮತ್ತು ಗೂಡ್ಸ್ ವಾಹನಗಳಿಗೆ ಸಿಹಿಸುದ್ದಿ ನೀಡಿದ್ದಾರೆ.
E-khata : ಮನೆ ಅಥವಾ ಪ್ಲಾಟ್ ಇ-ಖಾತಾ ಅಥವಾ ಬಿ-ಖಾತಾ ಇಲ್ಲದವರಿಗೆ ಬಂಪರ್ – ನಗರ & ಗ್ರಾಮೀಣ ಜನರಿಗೆ ಸುವರ್ಣ ಅವಕಾಶ
ಕೇಂದ್ರ ಸರ್ಕಾರವು ಶೀಘ್ರದಲ್ಲೇ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾರ್ಷಿಕ ಅಥವಾ ಜೀವಿತಾವಧಿ ಟೋಲ್ ಪಾಸ್‌ಗಳ ಸೌಲಭ್ಯವನ್ನ ಪರಿಚಯಿಸಲಿದೆ. ಕೇಂದ್ರ ಸರ್ಕಾರದ ಪ್ರಸ್ತಾವನೆಯ ಪ್ರಕಾರ ಪ್ರಯಾಣಿಕರು ಕೇವಲ ₹3,000/- ರೂಪಾಯಿಗಳಿಗೆ ಟೋಲ್ ಪ್ಲಾಜಾಗಳ ಮೂಲಕ ಪ್ರಯಾಣಿಸುವ ಸೌಲಭ್ಯವನ್ನು ಪಡೆಯುತ್ತಾರೆ. ಅದೇ ರೀತಿ 15 ವರ್ಷಗಳ ವ್ಯಾಲಿಡಿಟಿ ಜೀವಿತಾವಧಿ ಟೋಲ್ ಪಾಸ್ ₹30,000/- ರೂಪಾಯಿಗಳಿಗೆ ಲಭ್ಯವಿರುತ್ತದೆ. ಈ ಯೋಜನೆಯ ಅನುಷ್ಠಾನದ ನಂತರ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಲಕ್ಷಾಂತರ ಪ್ರಯಾಣಿಕರು ನೇರ ಪ್ರಯೋಜನವನ್ನು ಪಡೆಯುತ್ತಾರೆ ಮತ್ತು ಟೋಲ್ ಪ್ಲಾಜಾಗಳಲ್ಲಿನ ದಟ್ಟಣೆಯು ಕಡಿಮೆಯಾಗುತ್ತದೆ.
ವರದಿಗಳ ಪ್ರಕಾರ ಈ ಪ್ರಸ್ತಾಪವು ರಸ್ತೆ ಸಾರಿಗೆ ಸಚಿವಾಲಯದೊಂದಿಗೆ ಅಂತಿಮ ಹಂತದಲ್ಲಿದೆ. ಇದಕ್ಕೆ ಸಂಬಂಧಿಸಿದಂತೆ ಸಚಿವಾಲಯವು ಕಾರುಗಳಿಗೆ ಪ್ರತಿ ಕಿಲೋಮೀಟರ್‌ಗೆ ಟೋಲ್ ದರವನ್ನು ಕಡಿಮೆ ಮಾಡುವ ಬಗ್ಗೆ ಪರಿಗಣಿಸುತ್ತಿದೆ. ಇದು ಹೆದ್ದಾರಿಯಲ್ಲಿ ಸಂಚರಿಸುವ ಜನರಿಗೆ ನೆಮ್ಮದಿ ನೀಡುತ್ತದೆ. ಭಾರತದ ಟೋಲ್‌ಗೇಟ್ಗಳಿಗಾಗಿ ಈ ಹೊಸ ಪಾಸ್ ಗಾಗಿ ಯಾವುದೇ ಹೊಸ ಕಾರ್ಡ್ ಖರೀದಿಸುವ ಅಗತ್ಯವಿಲ್ಲ. ಇದನ್ನು ಫಾಸ್ಟ್ ಗೆ ಲಿಂಕ್ ಮಾಡಲಾಗುತ್ತದೆ. ಪ್ರತಿ 60 ಕಿಲೋಮೀಟರ್ ಗೆ ಒಂದು ಟೋಲ್ ಗೇಟ್ ಇದೆ. ಈ ಟೋಲ್ ಗೇಟ್ ಗಳಲ್ಲಿ ನಿಗದಿತ ಮೊತ್ತವನ್ನು ಪಾವತಿಸಿದ ನಂತರವೇ ನೀವು ಮುಂದೆ ಸಾಗಬಹುದು.
RTC Transfer : ಜಮೀನಿನ ಪಹಣಿ ತಂದೆ, ತಾತ, ಮುತ್ತಾತ, ಪೂರ್ವಜರ ಹೆಸರಿನಲ್ಲಿ ಇದ್ದರೆ – ನಿಮ್ಮ ಹೆಸರಿಗೆ ವರ್ಗಾವಣೆ
ಆದರೆ ಈಗ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ಕೈಗೊಂಡ ನಿರ್ಧಾರಗಳು ಎಲ್ಲ ವಾಹನ ಚಾಲಕರಿಗೆ ನೆಮ್ಮದಿ ನೀಡುತ್ತದೆ. ಪ್ರಸ್ತುತ ಟೋಲ್ ಪ್ಲಾಜಾಗಳಲ್ಲಿ ಮಾಸಿಕ ಪಾಸ್‌ಗಳು ಲಭ್ಯವಿದೆ. ಈ ಮಾಸಿಕ ಪಾಸ್ ತಿಂಗಳಿಗೆ ₹340/- ರೂಪಾಯಿಗಳಿಗೆ ಲಭ್ಯವಿದ್ದರೆ, ವಾರ್ಷಿಕ ಶುಲ್ಕ ₹4,080/- ರೂಪಾಯಿಗಳು. ಆದಾಗಿಯೂ ಇದನ್ನೀಗ ಮೂರು ಸಾವಿರಕ್ಕೆ ಇಳಿಸಿದರೆ ಇಡೀ ರಾಷ್ಟ್ರೀಯ ಹೆದ್ದಾರಿ ಜಾಲದಲ್ಲಿ ಅನಿಯಮಿತ ಪ್ರಯಾಣಕ್ಕೆ ನೂರಾರು ಪ್ರಯಾಣಿಕರು ಪ್ರಯೋಜನ ಪಡೆಯುತ್ತಾರೆ. ಕೇಂದ್ರ ರಸ್ತೆ, ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಮಾತನಾಡಿ, ವಾಹನ ಮಾಲೀಕರು ಶಾಂತಿಯುತವಾಗಿ ತಮ್ಮ ವಾಹನಗಳನ್ನು ಚಲಾಯಿಸಲು ಅವಕಾಶ ಕಲ್ಪಿಸುವ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಟೋಲ್ ಪ್ಲಾಜಾಗಳಲ್ಲಿ ಪಾಸ್ ಯೋಜನೆಯ ಕುರಿತು ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.