RTC Transfer : ರಾಜ್ಯದ ಕಂದಾಯ ಸಚಿವರಾದ ಕೃಷ್ಣಬೈರೇಗೌಡ ಅವರು ರಾಜ್ಯದಾದ್ಯಂತ ಇರುವ ರಾಜ್ಯದ ಎಲ್ಲ ರೈತರಿಗೆ ಭರ್ಜರಿ ಬಂಪರ್ ಗಿಫ್ಟ್ ನೀಡಿದ್ದಾರೆ. ಪೌತಿ ಖಾತೆ ಅಭಿಯಾನಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಇನ್ನು ಮುಂದೆ ರಾಜ್ಯದಾದ್ಯಂತ ಮರಣ ಹೊಂದಿರುವ ತಂದೆ ಅಥವಾ ತಾಯಿ ಹೆಸರಿನಲ್ಲಿ ಇರುವ ಅಥವಾ ತಾತ ಮುತ್ತಾತನ ಹೆಸರಿನಲ್ಲಿ ಇರುವ ಜಮೀನಿನ ಪಹಣಿಯು ಈಗ ಪ್ರಸ್ತುತ ಉಳುಮೆ ಮಾಡುತ್ತಿರುವ ರೈತರ ಹೆಸರಿಗೆ ವರ್ಗಾವಣೆ ಮಾಡಲು ಪೌತಿ ಖಾತೆ ಅಭಿಯಾನ ಆರಂಭಿಸಲಾಗಿದೆ.
ಲೇಬರ್ ಕಾರ್ಡ್ ಇದ್ದವರಿಗೆ ₹120000 ಹಣ ಉಚಿತ – ಕಾರ್ಮಿಕ ಕಾರ್ಡ್ ಇದ್ದರೆ ತಪ್ಪದೇ ನೋಡಿ – Labour Card Benefits
ಈ ಪೌತಿ ಖಾತೆ ಯೋಜನೆ ಅಡಿಯಲ್ಲಿ ರೈತರ ಬಳಿ ಯಾವುದೇ ದಾಖಲೆಗಳು ಇಲ್ಲದಿದ್ದರೂ ಕೂಡ ಲಭ್ಯವಿರುವ ದಾಖಲೆಗಳನ್ನ ಪಡೆದುಕೊಂಡು ಜಮೀನಿನ ಪಹಣಿಯು ತಂದೆ, ತಾತ, ಮುತ್ತಾತನ ಹೆಸರಿನಲ್ಲಿ ಇದ್ದರು ಕೂಡ ಪ್ರಸ್ತುತ ಇರುವ ವಾರಸುದಾರರ ಹೆಸರಿಗೆ ವರ್ಗಾವಣೆ ಮಾಡಲು ಅತಿದೊಡ್ಡ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ನಿಮ್ಮ ಜಮೀನಿನ ಪಹಣಿಯು ಕೂಡ ತಂದೆ, ತಾತ, ಮುತ್ತಾತನ ಹೆಸರಿನಲ್ಲಿ ಇದ್ದರೆ, ಅದು ಈಗ ನೀವು ಉಳುಮೆ ಮಾಡುತ್ತಿರುವ ನಿಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳಲು ಈ ಪೌತಿ ಖಾತೆಗೆ ಸರ್ಕಾರ ಮಾಡಲಾಗುತ್ತಿದ್ದು, ಅದನ್ನ ಹೇಗೆ ಮಾಡಿಕೊಳ್ಳಬೇಕು ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.
ರಾಜ್ಯದಲ್ಲಿ ಹಲವು ಪ್ರಕರಣಗಳಲ್ಲಿ ಜಮೀನುಗಳ ಖಾತೆಗಳು ಇನ್ನು ನಿಧನ ಹೊಂದಿರುವವರ ಹೆಸರಿನಲ್ಲೇ ಇರುವ ಕಾರಣ ಪೌತಿ ಖಾತೆ ಅಭಿಯಾನದ ಮೂಲಕ ವಾರಸುದಾರರ ಹೆಸರಿಗೆ ಜಮೀನು ನೋಂದಣಿ ಮಾಡುವ ಕಾರ್ಯಕ್ಕೆ ಇಲಾಖೆ ಮುಂದಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಸಚಿವ ಕೃಷ್ಣ ಬೈರೇಗೌಡ, ಈ ಹಿಂದೆ ಪೌತಿ ಖಾತೆ ಅಭಿಯಾನ ರಾಜ್ಯದಲ್ಲಿ ನಡೆದಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಜಾರಿಗೆ ಬಂದಿರಲಿಲ್ಲ. ಹೀಗಾಗಿ ಮೃತರ ಹೆಸರಿನಲ್ಲಿ ಉಳಿದಿರುವ ಜಮೀನಿನ ದಾಖಲೆ ವಾರಸುದಾರರಿಗೆ ವರ್ಗಾವಣೆ ಮಾಡುವ ಸಲುವಾಗಿ, ಮನೆ ಬಾಗಿಲಿಗೆ ಪೌತಿಖಾತೆ ತಲುಪಿಸುವ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿದರು.
ಜಮೀನಿಗೆ ಹೋಗುವ ದಾರಿಗೆ ಹೊಸ ನಿಯಮ.! ಪ್ರತಿಯೊಬ್ಬ ರೈತರು ತಪ್ಪದೇ ನೋಡಿ
ಮರಣ ಹೊಂದಿದ ವ್ಯಕ್ತಿಯ ಹೆಸರಿನಲ್ಲಿರುವ ಆಸ್ತಿಯನ್ನ ತಮ್ಮ ವಾರಸುದಾರರ ಅಥವಾ ಕುಟುಂಬಸ್ಥರ ಯಾವುದೇ ವ್ಯಕ್ತಿಯ ಹೆಸರಿಗೆ ಜಮೀನಿನ ಖಾತೆಯನ್ನ ಹೊಂದಿದ್ದರೆ, ವರ್ಗಾವಣೆ ಮಾಡುವುದನ್ನ ಪೌತಿಖಾತೆ ಎನ್ನಲಾಗುತ್ತದೆ. ಮನೆ ಬಾಗಿಲಿಗೆ ಹೋಗಿ ಪೌತಿ ಖಾತೆ ಅಭಿಯಾನ ನಡೆಸಿದ ಅರ್ಹರಿಗೆ ಸುಲಭವಾಗಿ ಪೌತಿಖಾತೆ ಲಭ್ಯವಾಗುತ್ತದೆ. ಜಮೀನಿನ ವಾರಸುದಾರಿಕೆಯ ಪಹಣಿ ಸಿಗುತ್ತದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಯಾವ ಜಿಲ್ಲೆಯಲ್ಲಿ ಕೆಲಸದ ಒತ್ತಡ ಕಡಿಮೆ ಇರುತ್ತದೆಯೋ ಅಥವಾ ಕಡಿಮೆ ಆಗಿದೆಯೋ ಅಂತಹ ಜಿಲ್ಲೆಗಳಲ್ಲಿ ಈ ಅಭಿಯಾನ ಕೈಗೆತ್ತಿಕೊಳ್ಳುತ್ತಿದೆ. ನಂತರ ಬೇರೆ ಬೇರೆ ಜಿಲ್ಲೆಗಳಿಗೆ ಇದನ್ನ ವಿಸ್ತರಿಸಲು ಇಲಾಖೆ ಯೋಜನೆ ಹಾಕಿಕೊಂಡಿದೆ. ಅದರಲ್ಲಿ ಪಹಣಿಯಲ್ಲಿ ಮೃತರ ಹೆಸರುಗಳು ಕಾಣಿಸಿಕೊಂಡಿವೆ. ಇದರಿಂದ ವಾರಸುದಾರರಿಗೆ ಸಮಸ್ಯೆ ಎದುರಾಗಿದೆ. ಹೀಗಾಗಿ ವಾರಸುದಾರರಿಗೆ ವರ್ಗಾವಣೆ ಜಮೀನು ಮಾಡಿಕೊಡಲು ಈ ಯೋಜನೆಯನ್ನು ರೂಪಿಸಲಾಗಿದೆ ಎಂದು ಕೃಷ್ಣ ಭೈರೇಗೌಡ ಹೇಳಿದ್ದಾರೆ.
ಈ 10 ಜಿಲ್ಲೆಗಳಿಗೆ ಗೃಹಲಕ್ಷ್ಮಿ ಹಾಗು ಅನ್ನಭಾಗ್ಯ ಅಕ್ಕಿ ಹಣ ಬಿಡುಗಡೆ – ಇಂದು ಮಧ್ಯಾಹ್ನ 3 ಗಂಟೆಗೆ ಜಮಾ.!
ಪೌತಿ ಖಾತೆಗಾಗಿ ಪ್ರತ್ಯೇಕ ಸಾಫ್ಟ್ ವೇರ್ ನ್ನ ಸಿದ್ಧಪಡಿಸಲಾಗಿದೆ. ಗ್ರಾಮ ಲೆಕ್ಕಿಗರು ಮನೆ ಮನೆಗೆ ಹೋಗುತ್ತಾರೆ. ವಾರಸುದಾರರ ನಿಖರ ಮಾಹಿತಿ ಪಡೆಯುತ್ತಾರೆ. ಇದಕ್ಕೆ ವಂಶವೃಕ್ಷವನ್ನ ಆಧಾರವಾಗಿ ಬಳಸಲಾಗಿದೆ. ಆಧಾರ್ ಮೂಲಕವೇ ಒಟಿಪಿ ಪಡೆದು ದಾಖಲು ಮಾಡಿದೆ. ಒಬ್ಬರಿಗಿಂತ ಹೆಚ್ಚು ವಾರಸುದಾರರ ಪರಿಗಣನೆ ಇದ್ದಲ್ಲಿ, ಒಬ್ಬರ ಬಳಿಕ ಒಬ್ಬರ ಹೆಸರು ದಾಖಲು ಮಾಡಿಕೊಂಡು ಒಟಿಪಿ ಪಡೆದು ಖಾತೆ ನೀಡಿಕೆ ಪ್ರಕ್ರಿಯೆ ಆರಂಭಿಸಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ. ದಾಯಾದಿ ಆಸ್ತಿ ಕಲಹವಿದ್ದರೂ ಕಂಡುಬರುತ್ತದೆ. ಮೃತ ಮಾಲೀಕರ ದಾಖಲೆ ಇಲ್ಲದಿದ್ದರೆ ಪರ್ಯಾಯವಾಗಿ ಸ್ಥಳ ಮಹಜರು ನಡೆಸಿ ದಾಖಲೆ ಸೃಷ್ಟಿಸದಿದ್ದರೆ, ಪೌತಿಖಾತೆ ಒಪ್ಪದಿದ್ದರೆ, ನ್ಯಾಯಾಲಯಕ್ಕೆ ಹೋಗಬಹುದು ಎಂದು ಕೃಷ್ಣ ಭೈರೇಗೌಡ ವಿವರಿಸಿದ್ದಾರೆ.