E-khata : ಕರ್ನಾಟಕದಲ್ಲಿ ಸ್ವಂತ ಮನೆ ಅಥವಾ ಫ್ಲ್ಯಾಟ್ ಅಥವಾ ಜಾಗ ಇರುವ ಎಲ್ಲ ಆಸ್ತಿಗಳ ಮಾಲೀಕರಿಗೆ ರಾಜ್ಯ ಸರ್ಕಾರ ಮತ್ತೊಂದು ಸಿಹಿ ಸುದ್ದಿಯನ್ನು ನೀಡಿದೆ. ಅನಧಿಕೃತವಾಗಿ ಪಡೆದಿರುವ ಜಾಗ ಅಥವಾ ಕಟ್ಟಿರುವ ಮನೆ ಅಥವಾ 30*40 ಅಳತೆಯ ಜಾಗ ಇದ್ದು, ಅದನ್ನು ಇ-ಖಾತಾ ಮಾಡಿಕೊಳ್ಳದೆ ಇದ್ದಲ್ಲಿ ಅಥವಾ ಬಿ-ಖಾತ ಮಾಡಿಕೊಳ್ಳದೆ ಇದ್ದಲ್ಲಿ ಅಂತಹ ಆಸ್ತಿಗಳ ಮಾಲೀಕರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್.!
Gold Rate : ಹೆಣ್ಣುಮಕ್ಕಳಿಗೆ ಸಿಹಿಸುದ್ಧಿ ಇದೆಯಾ.? ಚಿನ್ನದ ಬೆಲೆಯಲ್ಲಿ ಎಷ್ಟು ಏರಿಳಿತ ಕಂಡಿದೆ ನೋಡಿ.?
ಇ-ಖಾತಾ ಮತ್ತು ಬಿ-ಖಾತ ಇಲ್ಲದ ಆಸ್ತಿಗಳಿಗೆ ರಾಜ್ಯ ಸರ್ಕಾರ ಸರಳ ರೀತಿಯಲ್ಲಿ ಇ-ಖಾತಾ ಮತ್ತು ಬಿ-ಖಾತಾ ಮಾಡಲು ಅನಧಿಕೃತವಾಗಿ ಪಡೆದ ಆಸ್ತಿಗಳ ಎಲ್ಲ ಮಾಲೀಕರಿಗೆ ಸುವರ್ಣ ಅವಕಾಶವನ್ನ ನೀಡಿದೆ. ಅಂದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಕೃಷಿ ಜಮೀನುಗಳಲ್ಲಿ ಪಡೆದಿರುವ ಫ್ಲಾಟ್ ಗಳು ಕೇವಲ ಗ್ರಾಮ ಪಂಚಾಯಿತಿಗಳಲ್ಲಿನ ನಜೂಲಿ ಅಥವಾ ಟ್ಯಾಕ್ಸ್ ಕಟ್ಟುತ್ತಿರುವ ಎಲ್ಲ ಫ್ಲಾಟ್ ಮಾಲೀಕರಿಗೆ ಮತ್ತು ಕೃಷಿ ಜಮೀನುಗಳಲ್ಲಿ ಮನೆ ಕಟ್ಟಿರುವ ಮನೆಗಳ ಮಾಲೀಕರಿಗೆ ತಮ್ಮ ಆಸ್ತಿಗಳನ್ನು ಇ ಸ್ವತ್ತುಗಳಲ್ಲಿ ನೋಂದಾಯಿಸಿಕೊಳ್ಳಲು ರಾಜ್ಯ ಸರಕಾರ ಅವಕಾಶ ಮಾಡಿಕೊಟ್ಟಿದೆ.
ಅದೇ ರೀತಿಯಲ್ಲಿ ಕರ್ನಾಟಕ ರಾಜ್ಯದ ಎಲ್ಲ ನಗರಸಭೆ ಮತ್ತು ಪಟ್ಟಣ ಪ್ರದೇಶ ಅಥವಾ ಮಹಾನಗರ ಪಾಲಿಕೆಗಳಲ್ಲಿ ಒಳಪಡುವ ಅನಧಿಕೃತವಾಗಿ ಕಟ್ಟಿರುವ ಮನೆಗಳಿಗೆ ಮತ್ತು ಫ್ಲ್ಯಾಟ್‌ಗಳಿಗೆ ಈ ಸ್ವತ್ತುಗಳಲ್ಲಿ ನೋಂದಾಯಿಸಿಕೊಳ್ಳಲು ಇದೊಂದು ಸುವರ್ಣ ಅವಕಾಶವಾಗಿದೆ. ಕೇವಲ ತಾತ್ಕಾಲಿಕ ನೋಂದಾವಣಿ ಮಾಡಿಕೊಂಡಿರುವ ಕಾರಣಕ್ಕಾಗಿ ಸಿಟಿ ಸುತ್ತಮುತ್ತ ಇರುವ ಜಮೀನುಗಳಲ್ಲಿ ಯಾವುದೇ ಅನುಮತಿ ಇಲ್ಲದೆ ಮನೆ ನಿರ್ಮಾಣ ಮಾಡಿದವರಿಗೆ ಹಾಗೂ ಫ್ಲಾಟ್ ಖರೀದಿ ಮಾಡಿದವರಿಗೆ ಯಾವುದೇ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯ ಕೂಡ ನೀಡುತ್ತಿಲ್ಲ.
ಇಂತಹ ಆಸ್ತಿಗಳನ್ನ ಹೊಂದಿರುವ ಆಸ್ತಿಗಳ ಮಾಲೀಕರು ಇ ಸ್ವತ್ತು ತಂತ್ರಾಂಶದಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ಇ-ಖಾತಾ ಮತ್ತು ಬಿ-ಖಾತಾ ಮಾಡಿಕೊಳ್ಳುವ ಮೂಲಕ ಎಲ್ಲ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯವನ್ನ ಮನೆ ನಿರ್ಮಾಣಕ್ಕಾಗಿ ಪಡೆದುಕೊಳ್ಳಬಹುದು. ಹಾಗು ಮನೆ ಈಗಾಗಲೇ ನಿರ್ಮಾಣ ಮಾಡಿಕೊಂಡಿದ್ದರೆ, ಮನೆಯ ಮೇಲೆ ಬ್ಯಾಂಕ್‌ಗಳಲ್ಲಿ ಸಾಲವನ್ನು ಕೂಡ ಪಡೆಯಬಹುದು. ಮತ್ತು ಖಾಲಿ ಜಾಗ ಅಥವಾ ಫ್ಲಾಟ್ ಇದ್ರೆ ಅದರ ಮೇಲೂ ಸಹ ಸಾಲ ಸೌಲಭ್ಯವನ್ನು ಪಡೆಯಬಹುದಾಗಿದೆ. ಅದಕ್ಕಾಗಿ ಕರ್ನಾಟಕ ರಾಜ್ಯದ ಕಂದಾಯ ಇಲಾಖೆಯ ಇ ಸ್ವತ್ತು ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.
ಈ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಂಡರೆ ನಿಮ್ಮ ಆಸ್ತಿಗೆ ಒಂದು ಭದ್ರತೆ ಒದಗಿಸಿದಂತೆ ಆಗುತ್ತದೆ. ಅಂದರೆ ಇ-ಖಾತೆ ಅಥವಾ ಬಿ-ಖಾತೆ ಮಾಡುವುದರಿಂದ ನಿಮಗೆ ಮಾರಾಟ ಮಾಡಿದವನು ಯಾವುದೇ ರೀತಿಯಲ್ಲೂ ಮೋಸ ಮಾಡುವುದಕ್ಕೆ ಬರುವುದಿಲ್ಲ. ಹಾಗು ನಿಮ್ಮ ಆಸ್ತಿಯು ಇಡೀ ದೇಶದ ಯಾವುದೇ ಮೂಲೆಯಿಂದ ಆನ್‌ಲೈನ್ ಮೂಲಕ ಚೆಕ್ ಮಾಡಿದ್ರೆ ಎಲ್ಲ ದಾಖಲೆಗಳು ಮತ್ತು ನಿಮ್ಮ ಆಸ್ತಿಯ ವಿವರವು ಆನ್‌ಲೈನ್‌ನಲ್ಲಿ ದೊರೆಯುತ್ತದೆ.
ನಿಮ್ಮ ಆಸ್ತಿಯು ಭದ್ರವಾಗಿರುತ್ತದೆ. ಯಾರು ಕೂಡ ನಿಮ್ಮನ್ನು ಮೋಸಗೊಳಿಸಲು ಆಗಲ್ಲ.
State Budget 2025 : ರಾಜ್ಯ ಬಜೆಟ್ 2025 ಸಿಎಂ ಸಿದ್ದರಾಮಯ್ಯ ಕಡೆಯಿಂದ ಎಲ್ಲಾ ಜನತೆಗೆ ಬಂಪರ್ ಕೊಡುಗೆ.!
ರಾಜ್ಯದಲ್ಲಿ ಬಿ-ಖಾತಾ ಇರುವವರಿಗೆ ಗುಡ್ ನ್ಯೂಸ್.! ರಾಜ್ಯದಲ್ಲಿ ಬಿ-ಖಾತಾ ಆಸ್ತಿ ಇರುವವರು ಭಾರಿ ಸಂಕಷ್ಟಕ್ಕೆ ಸಿಲುಕಿದ್ದರು. ಆಸ್ತಿಗಳಿಗೆ ಇ-ಖಾತಾ ಕಡ್ಡಾಯ ಮಾಡಿದ ಮೇಲೆ ಸಾಕಷ್ಟು ಗೊಂದಲ ಸೃಷ್ಟಿಯಾಗಿತ್ತು. ಅಲ್ಲದೇ ಎಲ್ಲ ಆಸ್ತಿದಾರರು ಕಡ್ಡಾಯವಾಗಿ ಇ-ಖಾತಾ ಮಾಡಿಸಿಕೊಳ್ಳಬೇಕೆಂದು ರಾಜ್ಯ ಸರ್ಕಾರವು ನಿರ್ದೇಶನ ನೀಡಿತ್ತು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಎಲ್ಲ ಆಸ್ತಿಗಳು ಸಹ ರಾಜ್ಯದಲ್ಲಿ ಕಡ್ಡಾಯವಾಗಿ ಇ-ಖಾತವನ್ನ ಹೊಂದಿರಬೇಕೆಂದು ಹೇಳಿದ ಮೇಲೆ ರಾಜ್ಯದಲ್ಲಿ ಇ-ಖಾತಾ ಮಾಡಿಸಿಕೊಳ್ಳಲು ಸಾಕಷ್ಟು ಸಮಸ್ಯೆಯಾಗಿದೆ. ಅದರಲ್ಲೂ ಮುಖ್ಯವಾಗಿ ಬಿ-ಖಾತಾ ಇರುವವರಿಗೆ ಸಮಸ್ಯೆಯಾಗಿದೆ. ಇದರಿಂದಾಗಿ ರಾಜ್ಯದ ಖಜಾನೆಯ ಮೇಲೂ ಪರಿಣಾಮವನ್ನು ಬೀರಿದೆ. ಇದೀಗ ರಾಜ್ಯದಲ್ಲಿ ಬಿ-ಖಾತಾಗೆ ಸಂಬಂಧಿಸಿದ ಗೊಂದಲಗಳನ್ನು ಪರಿಹರಿಸುವಂತೆ ಹಾಗೂ ಕೆಲವು ಬದಲಾವಣೆಗಳನ್ನು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಮೂರು ತಿಂಗಳ ಒಳಗಾಗಿ ಬಿ-ಖಾತಾ
ಇನ್ನು ರಾಜ್ಯದಲ್ಲಿ ಎಲ್ಲ ಅನಧಿಕೃತ ಬಡಾವಣೆಗಳ ನಿವೇಶನದಾರರಿಗೂ ಗುಡ್ ನ್ಯೂಸ್ ಕೊಡಲಾಗಿದ್ದು, ರಾಜ್ಯದಲ್ಲಿ ಬಿಬಿಎಂಪಿ ಸೇರಿದಂತೆ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಅಧಿಕೃತ ಅನಧಿಕೃತ ಬಡಾವಣೆಗಳ ನಿವೇಶನದಾರರಿಗೆ ಮೂರು ತಿಂಗಳ ಒಳಗಾಗಿ ಬಿ-ಖಾತಾ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಹಾಗೂ ಪೌರಾಡಳಿತ ಇಲಾಖೆ ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟಿದ್ದಾರೆ.
RTC Transfer : ಜಮೀನಿನ ಪಹಣಿ ತಂದೆ, ತಾತ, ಮುತ್ತಾತ, ಪೂರ್ವಜರ ಹೆಸರಿನಲ್ಲಿ ಇದ್ದರೆ – ನಿಮ್ಮ ಹೆಸರಿಗೆ ವರ್ಗಾವಣೆ
ಯಾವುದೇ ನಗರ, ಸ್ಥಳೀಯ ಸಂಸ್ಥೆಗಳಲ್ಲಿರುವ ಅಧಿಕೃತ ಬಡಾವಣೆಗಳಲ್ಲಿ ನಿವೇಶನದಾರರಿಗೆ ಎ-ಖಾತಾ ಕೊಡುವುದಕ್ಕೆ ಬರುವುದಿಲ್ಲ. ಈ ಸಂಬಂಧ ಈಗಾಗಲೇ ಸುಪ್ರೀಂ ಕೋರ್ಟ್ ಆದೇಶ ಇದೆ. ಹೀಗಾಗಿ ಇಂತಹ ನಿರ್ದಿಷ್ಟ ನಿವೇಶನಗಳಿಗೆ ಬಿ-ಖಾತೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ಕೊಟ್ಟಿದ್ದಾರೆ. ಇನ್ನು ಮೂರು ತಿಂಗಳ ಒಳಗಾಗಿ ಎಲ್ಲರಿಗೂ ಬಿ-ಖಾತಾ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜನರನ್ನು ಕಚೇರಿಗೆ ಸುತ್ತಿಸದೇ ಬಿ-ಖಾತಾ ಕೊಡಬೇಕು ಅಂತ ಹೇಳಲಾಗಿದೆ.
ಒಂದು ಬಾರಿ ಪರಿಹಾರ
ರಾಜ್ಯದಲ್ಲಿ ಬಿ-ಖಾತಾ ಒಂದು ಬಾರಿ ಪರಿಹಾರವಾಗಿರಲಿದೆ. ಯಾವ ಆಸ್ತಿದಾರರ ಬಳಿ ಖರೀದಿ ಪತ್ರ ಪಡೆದು ನೋಂದಣಿ ಇಲಾಖೆಯಲ್ಲಿ ನೋಂದಣಿ ಮಾಡಿಸಿದರೆ ಮಾತ್ರ ಅವರಿಗೆ ಬಿ-ಖಾತಾ ಸಿಗಲಿದೆ. ಇನ್ನು ಬಿ-ಖಾತಾ ಪಡೆದುಕೊಳ್ಳುವುದಕ್ಕೆ ಒಮ್ಮೆ ಮಾತ್ರ ಅವಕಾಶ ಇರಲಿದೆ. ಇದು ಒಂದು ಬಾರಿ ಮಾತ್ರ ಪರಿಹಾರವಾಗಿದೆ. ಮುಂದಿನ ದಿನಗಳಲ್ಲಿ ನಡೆಯುವ ಮಾರಾಟಗಳಿಗೆ ಅನ್ವಯಿಸುವುದಿಲ್ಲ ಎಂದು ಹೇಳಲಾಗಿದೆ. ಒಟ್ಟಾರೆ ಈ ಮೂಲಕ ಆಸ್ತಿದಾರರಿಗೆ ರಾಜ್ಯ ಸರ್ಕಾರವು ಗುಡ್‌ನ್ಯೂಸ್ ಕೊಟ್ಟಿದೆ. ಆಂದೋಲನ ಮಾದರಿಯಲ್ಲಿ ಬಿ-ಖಾತಾ ನೀಡಬೇಕೆಂದು ಹೇಳಲಾಗಿದೆ. ಆದರೆ ಮುಖ್ಯವಾಗಿ ಇದು ಒಂದು ಬಾರಿ ಮಾತ್ರ ಇರಲಿದೆ ಎಂದು ಹೇಳಲಾಗಿದೆ.
ಲೇಬರ್ ಕಾರ್ಡ್ ಇದ್ದವರಿಗೆ ₹120000 ಹಣ ಉಚಿತ – ಕಾರ್ಮಿಕ ಕಾರ್ಡ್ ಇದ್ದರೆ ತಪ್ಪದೇ ನೋಡಿ – Labour Card Benefits
ಸಾವಿರಾರು ಆಸ್ತಿಗಳಿಗೆ ಅನುಕೂಲ
ರಾಜ್ಯದಲ್ಲಿ ಒಂದು ಬಾರಿ ಬಿ-ಖಾತಾ ನೀಡುವುದಕ್ಕೆ ರಾಜ್ಯ ಸರ್ಕಾರವು ಅನುಮೋದನೆ ನೀಡಿರುವುದರಿಂದ ಸಾವಿರಾರು ಬಿ-ಖಾತಾ ಆಸ್ತಿದಾರರಿಗೆ ಹಾಗು ಅನಧೀಕೃತ ಬಡಾವಣೆಗಳನ್ನ ಹೊಂದಿರುವವರಿಗೆ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ ಸಾವಿರಾರು ಬಿ-ಖಾತಾ ಆಸ್ತಿಗಳಿವೆ. ಇ-ಖಾತಾ ಪ್ರಾರಂಭವಾದ ಮೇಲೆ ಬಿ-ಖಾತಾ ನೀಡುವುದನ್ನ ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿತ್ತು.