ಮೆಟ್ರೋದಲ್ಲಿ ಉದ್ಯೋಗಾವಕಾಶ.! ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳೇನು.? ಕೊನೆಯ ದಿನಾಂಕ.? – Metro Recruitment 2025

Metro Recruitment 2025 : ಮೆಟ್ರೋದಲ್ಲಿ (Metro) ಕೆಲಸ ಮಾಡಲು ಇಷ್ಟವಿರುವವರಿಗೆ ಇದೀಗ ಸುವರ್ಣಾವಕಾಶ ಬಂದಿದೆ. ದೆಹಲಿ (Delhi) ಮೆಟ್ರೋ ರೈಲು ಕಾರ್ಪೊರೇಷನ್ (DMRC) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಗೆ ಜನವರಿ 28ರಂದು ಕೊನೆಯ ದಿನಾಂಕವಾಗಿದ್ದು, ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಬೇಕು. ಇನ್ನು ಅರ್ಜಿ ಸಲ್ಲಿಸಲು ಕೆಲವು ನಿಯಮಗಳಿದ್ದು, ಅಭ್ಯರ್ಥಿಗಳು ಈ ಅರ್ಹತೆಯನ್ನು ಹೊಂದಿರಬೇಕು. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

Post Office Franchise : ಪೋಸ್ಟ್ ಆಫೀಸ್’ ಮೂಲಕ ಈ ‘ಬ್ಯುಸಿನೆಸ್’ ಮಾಡಿ, ತಿಂಗಳಿಗೆ 80,000 ರೂ. ಗಳಿಸಿ.!

ಒಟ್ಟೂ ಎಷ್ಟು ಹುದ್ದೆ.?

ಇದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಉದ್ಯೋಗ ಮಾಡುವ ಅವಕಾಶವಾಗಿದೆ. ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ ಖಾಲಿ ಇರುವ ಸಿಸ್ಟಮ್ ಸೂಪರ್‌ವೈಸರ್ ಹಾಗೂ ಸಿಸ್ಟಮ್ ಟೆಕ್ನಿಷಿಯನ್ ಸೇರಿ ಒಟ್ಟು 13 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡುವ ಮೊದಲು ಈ ಎಲ್ಲಾ ಮಾಹಿತಿಯನ್ನು ಸರಿಯಾಗಿ ತಿಳಿದುಕೊಳ್ಳಿ.

ಹುದ್ದೆಗಳ ಕುರಿತು ಸಂಪೂರ್ಣ ವಿವರ :-

• ನೇಮಕಾತಿ ಸಂಸ್ಥೆ : ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್.
• ಹುದ್ದೆಗಳು ಹೆಸರು : ಸಿಸ್ಟಮ್ ಸೂಪರ್‌ವೈಸರ್, ಸಿಸ್ಟಮ್ ಟೆಕ್ನಿಷಿಯನ್.
• ಅರ್ಜಿ ಸಲ್ಲಿಕೆ ಕೊನೆ ದಿನಾಂಕ : ಜನವರಿ
• ಗರಿಷ್ಠ ವಯಸ್ಸು : 40 ವರ್ಷ.
• ಅರ್ಜಿ ಸಲ್ಲಿಕೆ ವಿಧಾನ : ಅಂಚೆ ಅಥವಾ ಇ-ಮೇಲ್
• ಮಾಸಿಕ ವೇತನ: ಆಯ್ಕೆ ಆದ ಅಭ್ಯರ್ಥಿಗಳಿಗೆ ಮಾಸಿಕ 46,000 ರೂ.ನಿಂದ 65,000 ರೂ.ವರೆಗೆ ವೇತನ ನೀಡಲಾಗುವುದು.

ವಿದ್ಯಾರ್ಹತೆ :-

ಅಭ್ಯರ್ಥಿಗಳು ಮಾನ್ಯತೆ ಪಡೆದ ಶೈಕ್ಷಣಿಕ ಮಂಡಳಿ ಇಲ್ಲವೇ ವಿಶ್ವವಿದ್ಯಾಲಯದಲ್ಲಿ ಕಡ್ಡಾಯವಾಗಿ ಐಟಿಐ, ಡಿಪ್ಲೊಮಾ ಅಥವಾ ಬಿಇ/ಬಿ.ಟೆಕ್ ಪದವಿ ಪಡೆದಿರಬೇಕು ಎಂದು ನೇಮಕಾತಿ ಅಧಿಸೂಚನೆ ತಿಳಿಸಿದೆ.

Microfinance Harassment : ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ಮುಂದಾದ ರಾಜ್ಯ ಸರ್ಕಾರ.! ಸುಗ್ರೀವಾಜ್ಞೆ ತರಲು ಸಿದ್ಧತೆ.?

ವಯೋಮಿತಿ ಎಷ್ಟು.?

ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಕನಿಷ್ಠ ವಯೋಮಿತಿಯನ್ನು 18 ವರ್ಷ ಹಾಗೂ ಗರಿಷ್ಠ ವಯಸ್ಸು 40 ವರ್ಷಗಳು ಎಂದು ನಿಗದಿ ಮಾಡಲಾಗಿದೆ.

ನೇಮಕಾತಿ ಪ್ರಕ್ರಿಯೆ ಹೇಗಿರುತ್ತೆ.?

ಅರ್ಜಿ ಸಲ್ಲಿಸಿದಂತಹ ಅಭ್ಯರ್ಥಿಗಳಿಗೆ ನೇರವಾಗಿ ಸಂದರ್ಶನ ನಡೆಸಲಾಗುತ್ತದೆ. ಸಂದರ್ಶನದಲ್ಲಿ ಆಯ್ಕೆ ಆದವರಿಗೆ ದೆಹಲಿಯಲ್ಲಿ ಉದ್ಯೋಗ ನೀಡಲಾಗುತ್ತದೆ. ಇದಕ್ಕೂ ಮೊದಲು ಅಭ್ಯರ್ಥಿಗಳಿಗೆ ವೈದ್ಯಕೀಯ ಫಿಟ್ನೆಸ್ ಪರೀಕ್ಷೆ ನಡೆಸಲಾಗುವುದು. ಈ ಕೂಡಲೇ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕೊನೆಯ ದಿನಾಂಕದವರೆಗೆ ಕಾಯದೇ ಆದಷ್ಟು ಬೇಗ ಅರ್ಜಿ ಸಲ್ಲಿಸಬೇಕು. ಇನ್ನು ಅರ್ಜಿಯನ್ನು ದೆಹಲಿ ಮೆಟ್ರೋ ವಿಳಾಸಕ್ಕೆ ಅಥವಾ ಇಮೇಲ್ ಮೂಲಕ ಕಳುಹಿಸಬಹುದು.

WhatsApp Group Join Now

Leave a Reply