e-Shram Card : ನಮಸ್ಕಾರ ಸ್ನೇಹಿತರೇ, ಕೇಂದ್ರ ಸರ್ಕಾರದಿಂದ ಈ ಕಾರ್ಡ್ ಇದ್ದವರಿಗೆ ಪ್ರತಿ ತಿಂಗಳಿಗೆ ₹3,000 ಹಣ ಬಿಡುಗಡೆ. ಇತ್ತೀಚಿಗೆ ಕರ್ನಾಟಕ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳಿಗೆ ಮಹಿಳೆಯರಿಗೆ ₹2,000 ಹಣ ನೀಡುತ್ತಿರುವ ರಾಜ್ಯ ಸರ್ಕಾರಕ್ಕೆ ಏಟಿಗೆ ಎದುರೇಟು ನೀಡಲು ಕೇಂದ್ರ ಸರ್ಕಾರ ಈ ಕಾರ್ಡ್ ಇದ್ದವರಿಗೆ ಪ್ರತಿ ತಿಂಗಳಿಗೆ ₹3,000 ಹಣ ಬಿಡುಗಡೆ ಮಾಡಿದೆ.
ಕಾರ್, ಟ್ಯಾಕ್ಸಿ, ಗೂಡ್ಸ್ ಎಲ್ಲಾ ವಾಹನಗಳಿಗೆ 1 ವರ್ಷದವರೆಗೆ ಎಲ್ಲಾ ಟೋಲ್ ಫ್ರೀ.! Toll Gate New Rules
ದೇಶದಲ್ಲಿ ಸಾಕಷ್ಟು ಜನರು ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿರುವ ಹಾಗು ಸರ್ಕಾರಿ ನೌಕರಿ ಇಲ್ಲದ ಕೃಷಿ ಕಾರ್ಮಿಕರು ಮತ್ತು ಅಸಂಘಟಿತ ವಲಯದ ಕಾರ್ಮಿಕರು ಬಹಳಷ್ಟು ಜನ ಇದ್ದಾರೆ. ಆದರೆ ಇಂತಹ ಜನರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ಯೋಜನೆಯನ್ನು ಜಾರಿಗೊಳಿಸಿದೆ. ಈ ಕಾರ್ಡ್ ಇರುವ ಪ್ರತಿಯೊಬ್ಬರಿಗೂ ಕೇಂದ್ರ ಸರ್ಕಾರದಿಂದ ಪ್ರತಿ ತಿಂಗಳಿಗೆ ₹3,000 ಹಣ ಬಿಡುಗಡೆ ಮಾಡಲಾಗಿದ್ದು, ಈ ಕಾರ್ಡ್ ಪಡೆದುಕೊಳ್ಳುವುದು ಹೇಗೆ.? ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.
ಭಾರತ ಸರ್ಕಾರವು ದೇಶದ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಒಂದು ವಿಶೇಷ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯ ಹೆಸರು ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆ. ಈ ಯೋಜನೆಯ ಅಡಿಯಲ್ಲಿ ದಿನಗೂಲಿ ರೈತರಿಗೆ ಪ್ರತಿ ತಿಂಗಳು ₹3,000 ಪಿಂಚಣಿ ನೀಡಲಾಗುತ್ತಿದೆ. ಈ ಯೋಜನೆಯಿಂದ ಅಂಗಡಿ ಮುಂಗಟ್ಟುಗಳಲ್ಲಿ ಕೆಲಸ ಮಾಡುವವರು ಚಾಲಕರು, ರಿಕ್ಷಾ ಚಾಲಕರು, ಬಟ್ಟೆ ಹೊಲಿಯುವವರು, ಪ್ಲಂಬರ್, ದರ್ಜಿ, ದೋಬಿ ನೌಕರರು, ಕ್ಷೌರಿಕರು ಮತ್ತು ಈ ರೀತಿಯ ಕೆಲಸ ಮಾಡುವ ಕಾರ್ಮಿಕರಿಗೆ ಸಿಗಲಿದೆ.
Gold Price Today : ಮತ್ತೆ ಕುಸಿತ ಕಂಡಿತಾ ಚಿನ್ನದ ಬೆಲೆ.? ಬೆಲೆಯಲ್ಲಿ ಎಷ್ಟು ಇಳಿಕೆ ಕಂಡಿದೆ ನೋಡಿ
ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಕಾರ್ಮಿಕರ ವಯಸ್ಸು 18 ರಿಂದ 40 ವರ್ಷದ ನಡುವೆ ಇರಬೇಕು. ಅರ್ಜಿ ಸಲ್ಲಿಸಲು ನೀವು ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ ಹೋಗಬೇಕು. ಅಲ್ಲಿ ನೀವು ಈ ಯೋಜನೆ ಅಡಿಯಲ್ಲಿ ನೋಂದಣಿ ಮಾಡಬೇಕು. ನೋಂದಣಿಗಾಗಿ ನೀವು ಕೆಲವು ದಾಖಲಾತಿಗಳನ್ನು ನೀಡಬೇಕಾಗುತ್ತದೆ.
ಬೇಕಾಗುವ ದಾಖಲೆಗಳೇನು.?
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ನಿಮ್ಮ ಉಳಿತಾಯ ಖಾತೆಯ ಪಾಸ್‌ಬುಕ್ ಅಥವಾ ಚೆಕ್ ಬುಕ್
ಈ ಯೋಜನೆಯ ಅಡಿಯಲ್ಲಿ ಕಾರ್ಮಿಕರಿಗೆ ₹3,000 ರೂಪಾಯಿವರೆಗೆ ಪಿಂಚಣಿ ನೀಡಲಾಗುತ್ತದೆ. ಪ್ರತಿ ತಿಂಗಳು ಕಾರ್ಮಿಕರು ಕೊಡುಗೆ ನೀಡಬೇಕಾಗುತ್ತದೆ. ಇದರಲ್ಲಿ ಕಾರ್ಮಿಕರ ಕಡೆಯಿಂದ ಎಷ್ಟು ಕೊಡುಗೆ ನೀಡಲಾಗುತ್ತದೆಯೋ ಅಷ್ಟೇ ಸರ್ಕಾರವು ನೀಡುತ್ತದೆ. ಈ ಯೋಜನೆ ಆರ್ಥಿಕವಾಗಿ ದುರ್ಬಲರಾಗಿರುವಂತಹ ಮತ್ತು ವೃದ್ಯಾಪ್ಯದಲ್ಲಿ ಯಾವುದೇ ಆಧಾರವಿಲ್ಲದ ಕಾರ್ಮಿಕರಿಗೆ ತುಂಬಾನೇ ಪ್ರಯೋಜನಕಾರಿಯಾಗಿದೆ. ಈ ಯೋಜನೆಯ ಮೂಲಕ ಅವರಿಗೆ ಆರ್ಥಿಕ ಭದ್ರತೆ ಸಿಗುತ್ತೆ ಮತ್ತು ಅವರು ಗೌರವದಿಂದ ತಮ್ಮ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ.
ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರವು ಈಗಾಗಲೇ ಈ ಶ್ರಮ್ ಕಾರ್ಡ್ ಜಾರಿಗೆ ತರಲಾಗಿದೆ. ಈ ಕಾರ್ಡ್ ಇರುವ ಪ್ರತಿಯೊಬ್ಬರಿಗೂ ಕೂಡ ಶ್ರಮಯೋಗಿ ಮಾನ್ ಧನ್ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳಿಗೆ 3000 ಹಣ ನೀಡಲಾಗುತ್ತಿದೆ. ಆದರೆ ಈ ಶ್ರಮ್ ಕಾರ್ಡ್ ಮಾಡಿಸಿಕೊಂಡಿರುವ ಪ್ರತಿಯೊಬ್ಬ 60 ವರ್ಷ ಮೇಲ್ಪಟ್ಟವರಿಗೆ ಮಾತ್ರ ಪ್ರತಿ ತಿಂಗಳಿಗೆ ಹಣ ದೊರೆಯುತ್ತದೆ.