Shrama Shakthi Scheme : ಕರ್ನಾಟಕ ಶ್ರಮ ಶಕ್ತಿ ಯೋಜನೆ ಮೂಲಕ ₹50,000/- ಹಣ ಸಿಗಲಿದೆ.! ಅರ್ಜಿ ಸಲ್ಲಿಸುವುದು ಹೇಗೆ.?

Shrama Shakthi Scheme : ನಮಸ್ಕಾರ ಸ್ನೇಹಿತರೇ, ಶ್ರಮಶಕ್ತಿ ಸಾಲ ಯೋಜನೆಯ ಸಂಪೂರ್ಣವಾದ ಮಾಹಿತಿಯನ್ನು ತಿಳಿದು ನೀವು ಕೂಡ 50,000 ಹಣವನ್ನು ಪಡೆಯಲು ಸರ್ಕಾರಕ್ಕೆ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಬಹುದಾಗಿದೆ. ಇದರ ಸಂಪೂರ್ಣ ಮಾಹಿತಿಗಳನ್ನು ತಿಳಿದುಕೊಳ್ಳೋಣ ಬನ್ನಿರಿ.

ಶ್ರಮ ಶಕ್ತಿ ಯೋಜನೆ (Shrama Shakthi Scheme)

ಈ ಶ್ರಮ ಶಕ್ತಿ ಯೋಜನೆಯು(Shrama Shakthi Scheme) ಕರ್ನಾಟಕದಲ್ಲಿರುವಂತಹ ಎಲ್ಲಾ ಅಲ್ಪಸಂಖ್ಯಾತರಿಗೆ ಕೂಡ ಹಣವನ್ನು ನೀಡುತ್ತದೆ. ಅರ್ಧದಷ್ಟು ಹಣವನ್ನು ರಾಜ್ಯ ಸರ್ಕಾರವು ಸಬ್ಸಿಡಿಯಾಗಿ ನೀಡಲಿದೆ. ನೀವು ಉಳಿದಂತಹ ಅರ್ಧದಷ್ಟು ಹಣವನ್ನು ಮಾತ್ರ ಮರುಪಾವತಿ ಮಾಡಬೇಕಾಗುತ್ತದೆ. ಈ ಶ್ರಮ ಶಕ್ತಿ ಯೋಜನೆಯನ್ನ (Shrama Shakthi Scheme) ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ಇಲಾಖೆಯು ಜಾರಿಗೊಳಿಸಿದೆ. ಇದು ಕೂಡ ಸರ್ಕಾರಿ ಯೋಜನೆಯಾಗಿದೆ. ಆದ್ದರಿಂದ ನೀವು ಈ ಯೋಜನೆ ಮೂಲಕ ₹50,000/- ದವರೆಗೆ ಹಣವನ್ನು ಪಡೆಯಬಹುದು.

WhatsApp Group Join Now

ಇದನ್ನೂ ಕೂಡ ಓದಿ : e-Shram Card 2024 : ಈ ಕಾರ್ಡ್ ಮಾಡಿದ್ರೆ 2 ಲಕ್ಷ ರೂ. ವಿಮೆ ಮತ್ತು 3000 ರೂ. ಸಹಾಯಧನ! ಹೇಗೆ ಅರ್ಜಿ ಸಲ್ಲಿಸುವುದು.?

ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಗೆ ಮಾತ್ರ ಈ ಸಾಲ ದೊರೆಯುತ್ತದೆ. ಆದ ಕಾರಣ ಅಂತಹ ಅಭ್ಯರ್ಥಿಗಳು ನೀವಾಗಿದ್ದರೆ, ನೀವು ಕೂಡ ನಿಮ್ಮ ಸ್ವಂತ ವ್ಯಾಪಾರವನ್ನು ಪ್ರಾರಂಭಿಸಲು ಅಥವಾ ವ್ಯಾಪಾರ ಈಗಾಗಲೇ ಇದ್ದು, ಆ ವ್ಯಾಪಾರವನ್ನು ವಿಸ್ತರಿಸಲು ನೀವು ಕೂಡ ಈ ಶ್ರಮ ಶಕ್ತಿ ಯೋಜನೆಯ (Shrama Shakthi Scheme) ಹಣವನ್ನ ಪಡೆಯಬಹುದು. ಈ ಯೋಜನೆ ಮೂಲಕ ನಿಮಗೆ ಸಬ್ಸಿಡಿ ಹಣ ಕೂಡ ದೊರೆಯುತ್ತದೆ. ಹಾಗೂ ಸಾಲದ ರೂಪದಲ್ಲೂ ಕೂಡ ಹಣ ದೊರೆಯುತ್ತದೆ.

WhatsApp Group Join Now

ಉದಾಹರಣೆಗೆ ನೀವು ₹50,000/- ಹಣವನ್ನು ಪಡೆಯಲು ಅರ್ಜಿ ಸಲ್ಲಿಸಿದ್ದರೆ, ನಿಮಗೆ 25ರಷ್ಟು ಸಬ್ಸಿಡಿ ಹಣ ಕೂಡ ದೊರೆಯುತ್ತದೆ. ಇನ್ನು ಬಾಕಿ ಉಳಿದಂತಹ ₹25,000/- ಹಣವನ್ನು ಮಾತ್ರ 36 ತಿಂಗಳ ಒಳಗೆ ಪಾವತಿ ಮಾಡಬೇಕು ನೀವೇನಾದರೂ 36 ತಿಂಗಳ ಒಳಗೆ ಹಣವನ್ನು ಪಾವತಿ ಮಾಡದಿದ್ದರೆ ನಿಮಗೆ ಸಬ್ಸಿಡಿ ಹಣವನ್ನು ಕೂಡ ನೀಡಲಗುವುದಿಲ್ಲ. ಅಂದರೆ ನೀವು ಪಡೆದಿರುವಂತಹ ₹50,000/- ಹಣವನ್ನು ಕೂಡ ಮರುಪಾವತಿ ಮಾಡಲೇಬೇಕಾಗುತ್ತದೆ. 4% ಬಡ್ಡಿ ದರದಲ್ಲಿ ಹಣ ನಿಮ್ಮ ಕೈ ಸೇರಲಿದೆ.

ಇದನ್ನೂ ಕೂಡ ಓದಿ : PM Vishwakarma : ಕೇಂದ್ರದ ಈ ಯೋಜನೆಯಲ್ಲಿ ನಿಮಗೂ ಸಿಗಲಿದೆ 3 ಲಕ್ಷ ರೂಪಾಯಿ ಸಾಲ. ಡೈರೆಕ್ಟ್ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ

WhatsApp Group Join Now

ಬೇಕಾಗುವ ದಾಖಲೆಗಳೇನು.?

  • ಆಧಾರ್ ಕಾರ್ಡ್
  • ವಯೋಮಿತಿಯ ಪ್ರಮಾಣ ಪತ್ರ
  • KMDC ಯಿಂದ ಪಡೆದುಕೊಂಡಿರುವಂತಹ ಅರ್ಜಿ ನಮೂನೆ
  • ಖಾಯಂ ವಿಳಾಸದ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆ ವಿವರ
  • ನೀವು ಪ್ರಾರಂಭಿಸುತ್ತಿರುವಂತಹ ವ್ಯಾಪಾರದ ಬಗ್ಗೆ ಮಾಹಿತಿ ಅಥವಾ ಈಗಾಗಲೇ ಪ್ರಾರಂಭ ಮಾಡಿರುವಂತಹ ಸ್ವಂತ ಉದ್ಯೋಗದ ಮಾಹಿತಿ

ಏನೆಲ್ಲಾ ಅರ್ಹತೆಗಳಿರಬೇಕು.?

  • ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
  • ಅಲ್ಪಸಂಖ್ಯಾತ ಸಮುದಾಯದವಾಗಿರಬೇಕು.
  • 18 ರಿಂದ 55 ವರ್ಷದೊಳಗಿನ ವಯೋಮಿತಿ ಹೊಂದಿರತಕ್ಕದ್ದು.
  • ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುತ್ತಿರುವವರ ಕುಟುಂಬದ ಆದಾಯವು 3.50 ಲಕ್ಷಕ್ಕಿಂತ ಕಡಿಮೆಯಿರಬೇಕು.
  • ನಗರವಾಸಿಯ ವಾರ್ಷಿಕ ಆದಾಯವು 4 ಲಕ್ಷಕ್ಕಿಂತ ಕಡಿಮೆ ಇರತಕ್ಕದ್ದು.

ಇದನ್ನೂ ಕೂಡ ಓದಿ : Manaswini Pension : ಪ್ರತಿ ತಿಂಗಳು 800 ರೂಪಾಯಿ ಉಚಿತ – ಮನಸ್ವಿನಿ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಸುವ ವಿಧಾನ :-

ಶ್ರಮ ಶಕ್ತಿ ಯೋಜನೆ (Shrama Shakthi Scheme) ಅಡಿಯಲ್ಲಿ ಅರ್ಜಿ ಸಲ್ಲಿಸಲು ಬಯಸುವವರು KMDC ಕಚೇರಿಗಳಿಗೆ ಭೇಟಿ ನೀಡಿ ಅರ್ಜಿಯನ್ನು ಕೂಡ ನೇರವಾಗಿ ಸಲ್ಲಿಕೆ ಮಾಡಬಹುದಾಗಿದೆ. ಮೇಲೆ ತಿಳಿಸಿದಂತಹ ದಾಖಲೆಗಳನ್ನು ನೀವು ತೆಗೆದುಕೊಂಡು ಹೋಗಿ KMDC ಕಚೇರಿಯಲ್ಲಿ ನೀಡುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಕೆ ಮಾಡಬಹುದಾಗಿದೆ. ನೀವು KMDC ಅಧೀಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಕೂಡ ಅರ್ಜಿಯನ್ನ ಸಲ್ಲಿಸಬಹುದು.

ಇದೇ ರೀತಿಯ ಹೊಸ ಹೊಸ ಮಾಹಿತಿಗಳು ತಿಳಿಯಲು, ವಿದ್ಯಾರ್ಥಿವೇತನಗಳು, ಸರ್ಕಾರಿ ಯೋಜನೆಗಳು, ಸರ್ಕಾರಿ ಕೆಲಸಗಳು ಹಾಗೂ ಖಾಸಗಿ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ನಮ್ಮ Telegram & Whatsapp ಗ್ರೂಪ್ ಗಳಿಗೆ ಜಾಯಿನ್ ಆಗಿ ದಿನನಿತ್ಯ ನಡೆಯುವ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply