ಅರಣ್ಯ ಅಧಿಕಾರಿ ಮೇಲೆ ಲೋಕಾಯುಕ್ತದ ದಾಳಿ: 26 ಕೋಟಿ ಮೌಲ್ಯದ ಆಸ್ತಿ ಪತ್ತೆ!

ಶಿವಮೊಗ್ಗ: ಅರಣ್ಯ ಇಲಾಖೆ ಸಹಾಯಕ ಆಯುಕ್ತ ತೇಜಸ್ ಕುಮಾರ್ ಮೇಲೆ ಲೋಕಾಯುಕ್ತವು ದಾಳಿ ನಡೆಸಿದ್ದು, ಚಿತ್ರದುರ್ಗದ ರೆಸಾರ್ಟ್ ಸೇರಿದಂತೆ ಒಟ್ಟು ಐದು ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ದಾಳಿ ವೇಳೆ ಬರೋಬ್ಬರಿ 26.55 ಕೋಟಿ ರೂಪಾಯಿಯ ಮೌಲ್ಯದ ಆಸ್ತಿ ಪತ್ತೆ ಆಗಿದ್ದು, ಅದರಲ್ಲಿ 4 ನಿವೇಶನಗಳು, 8 ಮನೆ, 16 ಎಕರೆ ಜಮೀನಿನ ದಾಖಲೆಗಳು ಸೇರಿವೆ. ಜೊತೆಗೆ 92 ಲಕ್ಷ ಮೌಲ್ಯದ ವಾಹನಗಳು ಮತ್ತು 50 ಸಾವಿರ ನಗದು ಕೂಡ ಪತ್ತೆ ಮಾಡಲಾಗಿದೆ. ತೇಜಸ್ ಕುಮಾರ್ ವೃತ್ತಿಯಲ್ಲಿ ಸದ್ಯ … Read more

ಖಾತೆ ಮಾಡಿಕೊಡಲು 1 ಲಕ್ಷ ರೂ. ಬೇಡಿಕೆ… ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿ

ಖಾತೆ ಮಾಡಿಕೊಡಲು 1 ಲಕ್ಷ ರೂ. ಹಣ ಸ್ವೀಕರಿಸುವಾಗ ಗ್ರಾಮ ಲೆಕ್ಕಾಧಿಕಾರಿ(ವಿಎ) ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನಲ್ಲಿ ನಡೆದಿದೆ. ವಿಠ್ಠಲ್ ಕೋಲ್ಹಾರ್ ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿ. ತಮ್ಮ ತಂದೆಯ ವಿಲ್ ಪತ್ರದಂತೆ ಶಿಕಾರಿಪುರ ತಾಲೂಕಿನ ಚಿಕ್ಕಬಂಜೂರಿನಲ್ಲಿರುವ ಜಮೀನಿನ ಖಾತೆ ಮಾಡಿಕೊಡುವಂತೆ ಜಮೀನಿನ ಮಾಲೀಕರಾದ ಜಿಕ್ರಿಯಾ ಬೇಗ್ ಎಂಬುವರು ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಗ್ರಾಮ ಲೆಕ್ಕಾಧಿಕಾರಿ ವಿಠ್ಠಲ್ ಕೋಲ್ಹಾರ್ ಅವರನ್ನು ಸಂಪರ್ಕಿಸಿದ್ದರು.ವಿಠ್ಠಲ್ ಕೋಲ್ಹಾರ್ ಖಾತೆ ಬದಲಾವಣೆಗೆ … Read more

ವಿಜಯನಗರ ತ್ರಿವಳಿ ಕೊಲೆಗೆ ಟ್ವಿಸ್ಟ್ : ಮೂವರನ್ನ ಮನೆಯಲ್ಲೇ ಹೂತುಹಾಕಿದ್ದ, ಲವ್ ಮ್ಯಾಟರ್ ಹತ್ಯೆಗೆ ಕಾರಣವಾಯ್ತಾ?

ವಿಜಯನಗರ : ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ಘೋರವೇ ನಡೆದು ಹೋಗಿದೆ. ವ್ಯಕ್ತಿಯೊಬ್ಬ ತನ್ನ ತಂದೆ, ತಾಯಿ ಹಾಗೂ ಸಹೋದರಿಯನ್ನೇ ಕೊಂದು ಹಾಕಿದ್ದಾನೆ. ಅಕ್ಷಯ್ ಎಂಬಾತ ತನ್ನ ತಂದೆ ಭೀಮರಾಜ್, ತಾಯಿ ಜಯಲಕ್ಷ್ಮೀ ಹಾಗೂ ಸಹೋದರಿ ಅಮೃತಾ ಅವರನ್ನ ಜನವರಿ 27 ರಂದೇ ಕೊಲೆ ಮಾಡಿದ್ದಾನೆ. ಮೂವರ ಶವಗಳನ್ನ ಬಾಡಿಗೆ ಮನೆಯಲ್ಲಿ ಸಮಾಧಿ ಮಾಡಿದ್ದಾನೆ. ವಿಜಯನಗರ ಎಸ್ಪಿ ಜಾಹ್ನವಿ, ಕೂಡ್ಲಿಗಿ DySP ಮಲ್ಲೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮನೆಯಲ್ಲೇ ಸಮಾಧಿ ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ … Read more

ಅಪ್ಪ ಮಗನ ಮೇಲೆ ಚಿರತೆ ದಾಳಿ : ಮಗನ ಜೀವ ಉಳಿಸಲು ಚಿರತೆಯ ಕೊಂದ ರೈತನ ವಿರುದ್ಧ ಅರಣ್ಯ ಇಲಾಖೆ ಕೇಸ್

ಸೋಮನಾಥ್ ಗಿರ್: ಮಗನನ್ನು ಚಿರತೆ ದಾಳಿಯಿಂದ ರಕ್ಷಿಸಲು 60 ವರ್ಷದ ವ್ಯಕ್ತಿಯೊಬ್ಬರು ಈಟಿ ಹಾಗೂ ಕುಡುಗೋಲು ಬಳಸಿ ಚಿರತೆ ವಿರುದ್ಧ ಹೋರಾಡಿ ಮಗನನ್ನು ಉಳಿಸಿಕೊಂಡಿದ್ದಾರೆ. ಈ ಮಾನವ ಹಾಗೂ ಪ್ರಾಣಿ ಸಂಘರ್ಷದಲ್ಲಿ ಚಿರತೆ ಉಸಿರು ಚೆಲ್ಲಿದ್ದರೆ, 60 ವರ್ಷದ ವ್ಯಕ್ತಿ ಹಾಗೂ ಅವರ ಮಗ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಗನ ರಕ್ಷಣೆಗಾಗಿ ಚಿರತೆಯನ್ನು ಕೊಂದ ವ್ಯಕ್ತಿಯ ವಿರುದ್ಧ ಈಗ ಅರಣ್ಯ ಇಲಾಖೆ ಕೇಸ್ ದಾಖಲಿಸಿದೆ. ಗುಜರಾತ್‌ನ ಗಿರ್ ಸೋಮನಾಥ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. … Read more

ಬೆಂಗಳೂರಲ್ಲಿ ಸಾಕು ನಾಯಿ ಡೆಡ್ಲಿ ಅಟ್ಯಾಕ್, ಮಹಿಳೆಯ ಮುಖ ವಿರೋಪ, ಕತ್ತು-ತಲೆ ಭಾಗಕ್ಕೆ 50ಕ್ಕೂ ಹೆಚ್ಚು ಹೊಲಿಗೆ!

ಬೆಂಗಳೂರಿನಲ್ಲಿ ವಾಕಿಂಗ್ ಮಾಡುತ್ತಿದ್ದ ಮಹಿಳೆಯ ಮೇಲೆ ಸಾಕು ನಾಯಿಯೊಂದು ಭೀಕರವಾಗಿ ದಾಳಿ ನಡೆಸಿದೆ. ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ನಾಯಿಯ ಮಾಲೀಕರ ನಿರ್ಲಕ್ಷ್ಯದ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ. ಈ ಘಟನೆಯು ನಗರದಲ್ಲಿ ಸಾಕು ಪ್ರಾಣಿಗಳ ನಿರ್ವಹಣೆ,ಸಾರ್ವಜನಿಕ ಸುರಕ್ಷತೆಯ ಬಗ್ಗೆ ಕಳವಳ ಮೂಡಿಸಿದೆ. ಬೆಂಗಳೂರು: ರಾಜ್ಯದಲ್ಲಿ ಬೀದಿ ನಾಯಿಗಳ ಹಾವಳಿ ಮುಂದುವರಿದಿದ್ದು, ಇದೀಗ ಬೆಂಗಳೂರಿನಲ್ಲಿ ಆತಂತಕಾರಿಯಾದ ಘಟನೆ ನಡೆದಿದೆ. ನಗರದ ಹೆಚ್‌.ಎಸ್‌.ಆರ್ ಲೇಔಟ್ ಪ್ರದೇಶದಲ್ಲಿ ಮಹಿಳೆಯೊಬ್ಬರ ಮೇಲೆ ಸಾಕು ನಾಯಿಯೊಂದು ಏಕಾಏಕಿ ಭೀಕರವಾಗಿ ದಾಳಿ ನಡೆಸಿದ ಘಟನೆ ಜನವರಿ … Read more

ತಲೆಗೆ ಗುಂಡಿಕ್ಕಿಕೊಂಡು ಸಾವಿಗೆ ಶರಣಾದ ಕಾನ್ಫಿಡೆಂಟ್ ಗ್ರೂಫ್‌ ಚೇರ್ಮನ್ ಸಿಜೆ ರಾಯ್ ; ಬಿಗ್‌ ಬಾಸ್ ಕನ್ನಡ ಶೋಗೆ ಹಣದ ಹೊಳೆ ಹರಿಸಿದ್ರು!

ಕಾನ್ಫಿಡೆಂಟ್ ಗ್ರೂಫ್ ಸಂಸ್ಥೆಯ ಚೇರ್ಮನ್ ಸಿಜೆ ರಾಯ್ (CJ Roy) ಅವರು ಆತ್ಮ*ಹತ್ಯೆ ಮಾಡಿಕೊಂಡಿರುವ ಸುದ್ದಿ ಇಡೀ ಕರ್ನಾಟಕವನ್ನು ಬೆಚ್ಚಿ ಬೀಳಿಸಿದೆ. ಅವರು ಸಾಕಷ್ಟು ದೊಡ್ಡ ಉದ್ಯಮಿಯಾಗಿದ್ದರು. ಜೊತೆಗೆ, ಕನ್ನಡ ಬಿಗ್ ಬಾಸ್ ಶೋಗೆ ರೂ. 50 ಲಕ್ಷ ಕೊಟ್ಟು ಆಗ ಸಖತ್ ಸುದ್ದಿಯಾಗಿದ್ದರು. ಅವರು ಕಾನ್ಫಿಡೆಂಟ್ ಗ್ರೂಫ್ ಸಂಸ್ಥೆಯನ್ನು ಮುನ್ನಡೆಸುವ ಜೊತೆಗೆ ಬಹಳಷ್ಟು ಸಾಮಾಜಿಕ ಕೆಲಸ ಹಾಗೂ ಸಿನಿಮಾ-ಮನರಂಜನಾ ಕ್ಷೇತ್ರಕ್ಕೆ ಕೊಡುಗೆ ಕೂಡ ನೀಡಿದ್ದಾರೆ. ಕಳೆದ ಸೀಸನ್ ಅಂದರೆ, ಬಿಗ್ ಬಾಸ್ ಕನ್ನಡ 11ಗೆ ರೂ. … Read more

ತೆಂಗಿನ ಕಾಯಿಯಲ್ಲಿ ಸಿಲುಕಿಕೊಂಡ ‘ಖಾಸಗಿ ಅಂಗ’ : ಅವಮಾನದಿಂದ ಯುವಕ ಆತ್ಮಹತ್ಯೆಗೆ ಶರಣು.!

ರಾಜ್ ಕೋಟ್ : ಯುವಕನ ಖಾಸಗಿ ಅಂಗ ತೆಂಗಿನಕಾಯಿಯಲ್ಲಿ ಸಿಲುಕಿಕೊಂಡ ಬಳಿಕ ಆದ ಅವಮಾನದಿಂದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ರಾಜ್‌ಕೋಟ್‌ನ ಯುವಕನೊಬ್ಬ ತನ್ನ ಜನನಾಂಗ ತೆಂಗಿನಕಾಯಿಯಲ್ಲಿ ಸಿಲುಕಿಕೊಂಡ ನಂತರ ಎದುರಿಸಿದ ಕಳಂಕದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಗೊಂಡಾಲ್‌ನಲ್ಲಿ ನಡೆದಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಆತ್ಮಹತ್ಯೆಯ ನಂತರ, ಮೃತನ ಸೋದರ ಮಾವ ಅವನ ಶವವನ್ನು ಅವರ ಮನೆಯ ಹಿತ್ತಲಿನಲ್ಲಿ ಹೂತು ಹಾಕಿದ್ದಾನೆ. ತನ್ನ ಅನಾರೋಗ್ಯ ಪೀಡಿತ ಪತ್ನಿ ತನ್ನ ಸಹೋದರನ ಸಾವಿನ ಆಘಾತವನ್ನು … Read more

ಹೋಂವರ್ಕ್ ಮಾಡಿಲ್ಲ ಎಂದು ಬಾಲಕನ ಮೇಲೆ ಹಲ್ಲೆ! ‘ಪೋಷಕರಿಗೆ ಹೇಳಿದ್ರೆ ಕುತ್ತಿಗೆ ಹಿಸುಕುತ್ತೇನೆ’ ಎಂದ ಶಿಕ್ಷಕಿ

ಹೋಂವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ 4ನೇ ತರಗತಿ ಬಾಲಕನ ಮೇಲೆ ಶಿಕ್ಷಕಿ ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ಜನವರಿ 10ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಂದಿನಿ ಲೇಔಟ್‌ನಲ್ಲಿರುವ ವೀಣಾ ವಿದ್ಯಾ ಸಂಸ್ಥೆಯಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕಿ ಆಂಗ್ಲಿನ್ ಬಾಲಕನಿಗೆ ಬಾಸುಂಡೆ ಬರುವ ಮಟ್ಟಿಗೆ ಥಳಿಸಿದ್ದಾರೆ ಎಂದು ಬಾಲಕನ ತಾಯಿ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನಾನು ಶಾಲೆಗೆ ಹೋಗಲ್ಲಮ್ಮ ಎಂದಿದ್ದ ಬಾಲಕ! ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮೀ ತಮ್ಮ … Read more

Horoscope Today : 30 ಜನವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ಮೇಷ ರಾಶಿಯವರಿಗೆ ಇಂದು ಹಿತಕರ ದಿನವಾಗಲಿದೆ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ವೃತ್ತಿ ಅಥವಾ ವಿರಾಮ ಪ್ರವಾಸವನ್ನು ನೀವು ಕೈಗೊಳ್ಳುವ ಸಾಧ್ಯತೆಯಿರುವುದರಿಂದ ಅದಕ್ಕೆ ಸಿದ್ಧರಾಗಿರಿ. ನಿಮಗೆ ಅನಿರೀಕ್ಷಿತ ತಿಳುವಳಿಕೆ ಮತ್ತು ಪರಿಜ್ಞಾನ ಉಂಟಾಗಬಹುದು ಮತ್ತು ಇದು ನಿಮ್ಮ ಫಲಪ್ರದ ಭವಿಷ್ಯವನ್ನು ಸಾಬೀತುಮಾಡುತ್ತದೆ. ನಿಮ್ಮ ಡೈರಿಯಲ್ಲಿ ಏನೋ ಬರೆಯಬೇಕು ಎಂದೆನಿಸಿದಲ್ಲಿ ಅದನ್ನು ಮುಂದುವರಿಸಿ. ಇಂದು ನೀವು ಮುಕ್ತವಾಗಿ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಶಕ್ತರಾಗಿರುವುದರಿಂದ ಬರಹದಲ್ಲಿ ತೊಡಗಿಕೊಳ್ಳಲು ಅರ್ಹವಾಗಿದೆ. ಏನೇ ಆದರೂ, ನಿಮ್ಮ ಆಲೋಚನಾ ಪ್ರಕ್ರಿಯೆಯಲ್ಲಿ ಅನಿರೀಕ್ಷಿತ … Read more

ಮದುವೆ ಆರತಕ್ಷತೆಗೆ ತೆರಳುತ್ತಿದ್ದ ವರನಿಗೆ ಚೂರಿ ಇರಿತ: ಯುವತಿಯ ಮಾಜಿ ಲವರ್ ಕೃತ್ಯ ಶಂಕೆ

ಮದುವೆಯ ಆರತಕ್ಷತೆಗೆ ತೆರಳುತ್ತಿದ್ದ ವರನ ಕಾರು ಅಡ್ಡಿಗಟ್ಟಿ ಮನಸ್ಸೋ ಇಚ್ಛೆ ಹಲ್ಲೆ ನಡೆಸಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ ನಡೆದಿದೆ. ಕೊಳ್ಳೇಗಾಲದ ವೆಂಕಟೇಶ್ವರ್ ಮಹಲ್ ನಲ್ಲಿ ಆಯೋಜಿಸಿದ್ದ ಆರತಕ್ಷತೆ  ಕಾರ್ಯಕ್ಕೆ ವರ ರವೀಶ್ ತೆರಳುತ್ತಿದ್ದ ವೇಳೆ ಅಪರಿಚಿತರು ಏಕಾಏಕಿ ದಾಳಿ ಮಾಡಿದ್ದಾರೆ. ಕುಣಗಳ್ಳಿ ಗ್ರಾಮದಿಂದ ಹೋಗುತ್ತಿದ್ದ ವೇಳೆ ವರ ರವೀಶ್ ಕಾರನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳು, ನೀನು ಮದ್ವೆ ಮನೆಗಲ್ಲ ಸ್ಮಶಾನಕ್ಕೆ ತೆರಳಬೇಕೆಂದು ಚಾಕು, ಡ್ರ್ಯಾಗರ್ನಿಂದ ಹಲ್ಲೆ ಮಾಡಿದ್ದಾರೆ. ಅಲ್ಲದೇ ರವೀಶ್ ಅಟ್ಟಾಡಿಸಿ ಬೆನ್ನಿಗೆ ಚೂರಿಯಿಂದ ಇರಿದು ಎಸ್ಕೇಪ್ … Read more