‘UGC’ ಹೊಸ ನಿಯಮಗಳಿಗೆ ‘ಸುಪ್ರೀಂ ಕೋರ್ಟ್’ ತಡೆ : ಮಾರ್ಚ್ 19ಕ್ಕೆ ಮುಂದಿನ ವಿಚಾರಣೆ | UGC Bill 2026

ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಹೊಸ ನಿಯಮಗಳನ್ನು ಸುಪ್ರೀಂಕೋರ್ಟ್ ತಡೆ ಹಿಡಿದಿದ್ದು, ಮಾರ್ಚ್ 19 ಕ್ಕೆ ವಿಚಾರಣೆ ನಡೆಸುವುದಾಗಿ ತಿಳಿಸಿದೆ. ಜನವರಿ 23, 2026 ರಂದು ಅಧಿಸೂಚನೆ ಹೊರಡಿಸಲಾದ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಉತ್ತೇಜನ) ನಿಯಮಗಳನ್ನು ವಿವಿಧ ಅರ್ಜಿದಾರರು ಅನಿಯಂತ್ರಿತ, ಹೊರಗಿಡುವ, ತಾರತಮ್ಯಕರ ಮತ್ತು ಸಂವಿಧಾನದ ಉಲ್ಲಂಘನೆ ಹಾಗೂ ವಿಶ್ವವಿದ್ಯಾಲಯ ಅನುದಾನ ಆಯೋಗ ಕಾಯ್ದೆ, 1956 ಎಂದು ಪ್ರಶ್ನಿಸಿ ಸುಪ್ರೀಂ ಕೋರ್ಟ್ ತಡೆಹಿಡಿದಿದೆ. ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಹೊಸ ಇಕ್ವಿಟಿ … Read more

6ರ ಬಾಲಕಿಯ ಮೇಲೆ ಮೂವರು ಅಪ್ರಾಪ್ತರಿಂದ ಕಾಮುಕ ಕೃತ್ಯ : 10 ವರ್ಷದ ಆರೋಪಿ ಮಗನನ್ನು ಸ್ವತಃ ಠಾಣೆಗೆ ಕರೆತಂದ ತಾಯಿ.!

ದೇಶದ ರಾಜಧಾನಿ ದೆಹಲಿಯ ಈಶಾನ್ಯ ಭಾಗದ ಭಜನ್‌ಪುರ ಪ್ರದೇಶದಲ್ಲಿ ಅತ್ಯಂತ ಅಮಾನವೀಯ ಮತ್ತು ಕ್ರೂರ ಘಟನೆಯೊಂದು ನಡೆದಿದೆ. ಕೇವಲ ಆರು ವರ್ಷದ ಪುಟ್ಟ ಬಾಲಕಿಯ ಮೇಲೆ ಅದೇ ಪ್ರದೇಶದ ಮೂವರು ಅಪ್ರಾಪ್ತ ಬಾಲಕರು ಸಾಮೂಹಿಕ ಲೈಂಗಿಕ ದೌರ್ಜನ್ಯ ಎಸಗಿದ್ದು, ಇಡೀ ಪ್ರದೇಶದಲ್ಲಿ ಆಕ್ರೋಶ ಭುಗಿಲೆದ್ದಿದೆ. ರಕ್ತಸಿಕ್ತವಾಗಿ ಮನೆಗೆ ಬಂದ ಬಾಲಕಿ ತಾಯಿಯ ಆಕ್ರಂದನ ಜನವರಿ 18 ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಾಲಕಿಯ ತಾಯಿ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದು, “ನನ್ನ ಮಗಳು … Read more

BMTC ಬಸ್ ಗಳಲ್ಲಿ ಗುಟ್ಕಾ ಜಾಹೀರಾತು : ಆಕ್ರೋಶ, ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದೇನು..?

ಬೆಂಗಳೂರು : ನಗರದ ಬಿಎಂಟಿಸಿ ಬಸ್ ಗಳ ಮೇಲೆ ಗುಟ್ಕಾ ಜಾಹೀರಾತುಗಳು ರಾರಾಜಿಸುತ್ತಿದ್ದು, ಇದರ ವಿರುದ್ಧ ಸಾರ್ವಜನಿಕರು ಹಾಗೂ ಕನ್ನಡಪರ ಸಂಘಟನೆಗಳು ಸಮರ ಸಾರಿದ್ದಾರೆ. ಬಸ್ ಗಳ ಮೇಲೆ ಹಾಕಲಾಗಿರುವ ಜಾಹೀರಾತು ಚಿತ್ರಗಳನ್ನು ಕಿತ್ತೆಸೆಯುತ್ತಿರುವ ಕನ್ನಡಪರ ಹೋರಾಟಗಾರರು, ಇಂತಹ ಅನಾರೋಗ್ಯಕರ ವಸ್ತುಗಳನ್ನು ಪ್ರೋತ್ಸಾಹಿಸುವುದು ಎಷ್ಟು ಸರಿ? ಇವುಗಳನ್ನು ತಿಂದು ಜನರು ಬಸ್ ನಿಲ್ದಾಣಗಳು, ಮೆಟ್ರೋ ಸ್ಟೇಷನ್‌ಗಳು ಮತ್ತು ಪ್ರಮುಖ ವೃತ್ತಗಳಲ್ಲಿ ಉಗಿದು ನಗರದ ಅಂದವನ್ನು ಹಾಳು ಮಾಡುತ್ತಿದ್ದಾರೆಂದು ಕಿಡಿಕಾರಿದ್ದಾರೆ. ಈ ಬೆಳವಣಿಗೆ ಕುರಿತು ಸಚಿವ ರಾಮಲಿಂಗಾ ರೆಡ್ಡಿಯವರು … Read more

ಒಂದೇ ಮಹಿಳೆಯ ಜತೆಗೆ ಇಬ್ಬರ ಅನೈತಿಕ ಸಂಬಂಧ : ಚಾಕುವಿನಿಂದ ಇರಿದು ಕೊಲೆ

ರಾಜ್ಯದಲ್ಲಿ ಅನೈತಿಕ ಸಂಬಂಧಗಳ ಪ್ರಕರಣಗಳು ಹೆಚ್ಚಾಗಿದೆ. ಈ ಕಾರಣಕ್ಕೆ ಕೊಲೆಗಳು ಕೂಡ ನಡೆಯುತ್ತಿದೆ. ಇದೀಗ ಹಾಸನದಲ್ಲಿ (Hassan) ಅನೈತಿಕ ಸಂಬಂಧದ ವಿಚಾರವಾಗಿ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ. ಹಾಸನ ನಗರದ ಕೆ.ಆರ್.ಪುರಂ ಬಡಾವಣೆಯಲ್ಲಿ ನೆನ್ನೆ (ಜ.28) ತಡರಾತ್ರಿ ಅನೈತಿಕ ಸಂಬಂಧದ ವಿಚಾರವಾಗಿ ಅಡುಗೆ ಕಂಟ್ರಾಕ್ಟರ್ನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಚಾಕುವಿನಿಂದ ಇರಿದು ಅಡುಗೆ ಗುತ್ತಿಗೆದಾರ ಆನಂದ್(48) ಎಂಬುವವರನ್ನು ಹತ್ಯೆ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ. ಧರ್ಮೇಂದ್ರ ಎಂಬ … Read more

ದಾವಣಗೆರೆ ನವ ವಿವಾಹಿತನ ಆತ್ಮಹ*ತ್ಯೆಗೆ ಮೇಜರ್ ಟ್ವಿಸ್ಟ್; ಹೆಂಡತಿ ಬೇರೆಯವನೊಟ್ಟಿಗೆ ಹೋಗಿದ್ದೇ ಸಾವಿಗೆ ಕಾರಣವಾ?

ದಾವಣಗೆರೆ : ಕೇವಲ ಎರಡೂವರೆ ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನವವಿವಾಹಿತ ಹರೀಶ್ ಆತ್ಮ*ಹತ್ಯೆ ಪ್ರಕರಣಕ್ಕೆ ಇದೀಗ ಮೇಜರ್ ಟ್ವಿಸ್ಟ್ ಸಿಕ್ಕಿದ್ದು, ಡೆತ್‌ ನೋಟ್‌ನಲ್ಲಿ ತಮ್ಮ ಸಾವಿಗೆ ಕಾರಣವೇನು ಎನ್ನುವುದನ್ನು ಹರೀಶ್ ಎಂಬಾತ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ದಾವಣಗೆರೆ ತಾಲೂಕಿನ ಗುಮ್ಮನೂರು ನಿವಾಸಿ 32 ವರ್ಷದ ಹರೀಶ್ ಕಳೆದ ಎರಡೂವರೆ ತಿಂಗಳ ಹಿಂದಷ್ಟೇ ಸರಸ್ವತಿ ಎಂಬುವವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಆ ಸಂತೋಷ ಹೆಚ್ಚು ಸಮಯ ಉಳಿಯಲೇ ಇಲ್ಲ. ಮದುವೆಯಾಗಿ ಕೇವಲ ಎರಡೂವರೆ ತಿಂಗಳಲ್ಲೇ ಹರೀಶ್‌, ತಮ್ಮ … Read more

ಧರ್ಮಸ್ಥಳ ಪಾರ್ಕ್ ನಲ್ಲಿ ನಾನು ಚಿಕನ್ ಬಿರಿಯಾನಿ ಹಾಗೂ ಕಬಾಬ್ ತಿಂದಿದ್ದೇನೆ – ಡಾಗ್ ಸತೀಶ್ ವಿವಾದಾತ್ಮಕ ಹೇಳಿಕೆ

ಬಿಗ್ ಬಾಸ್ ಸೀಸನ್ 12 ಸ್ಪರ್ಧಿ ಡಾಗ್ ಸತೀಶ್ ಇದೀಗ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದು, ಕಾಲೇಜು ದಿನಗಳಲ್ಲಿ ಧರ್ಮಸ್ಥಳ ಪಾರ್ಕ್ ನಲ್ಲಿ ನಾನ್ ವೆಜ್ ತಿಂದಿದ್ದೆ ಎಂದು ಹೇಳಿಕೆ ನೀಡಿದ್ದಾರೆ. ಡಾಲಿ ಧನಂಜಯ್ ಮಾಂಸಾಹಾರ ಸೇವನೆ ಕುರಿತು ಹೇಳಿಕೆ ನೀಡಿದ ಡಾಗ್ ಸತೀಶ್, ಯಾರು, ಯಾವ ದಿನ ಬೇಕಾದರು ಮಾಂಸಾಹಾರ ತಿನ್ನಬಹುದು. ನಾನು ವರ್ಷದ 365 ದಿನ ನಾನ್ ವೆಜ್ ತಿನ್ನುತ್ತೇನೆ. ಸೋಮವಾರನೂ ತಿನ್ನುತ್ತೇನೆ, ಇತರ ದಿನವೂ ತಿನ್ನುತ್ತೇನೆ. ಗಣೇಶ ಹಬ್ಬ, ಗೌರಿ ಹಬ್ಬ ಸೇರಿದಂತೆ … Read more

ಸರ್… ಹಾವಾಡಿಗರಿಗೆ ನಿಮ್ಮ ದೇಶಪ್ರೇಮ ಸಾಬೀತು ಮಾಡುವ ಅಗತ್ಯ ಇಲ್ಲ : ನಟ ಕಿಶೋರ್

ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ (AR Rahman) ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಚಿತ್ರೋಧ್ಯಮದಲ್ಲಿ ಕೋಮುಭಾವನೆ ಹೆಚ್ಚಾಗುತ್ತಿರುವ ಹಿನ್ನಲೆ ತಮಗೆ ಕೆಲಸದ ಅವಕಾಶಗಳು ಕಡಿಮೆಯಾಗುತ್ತಿವೆ ಎಂಬ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಇದೇ ವಿಚಾರವಾಗಿ ಪರ-ವಿರೋಧ ಚರ್ಚೆಗಳು ನಡೆದಿದ್ದವು. ಇದೀಗ ರೆಹಮಾನ್ ಗೆ ನಟ ಕಿಶೋರ್ ಬೆಂಬಲ ವ್ಯಕ್ತಪಡಿಸಿದ್ದಾರೆ. ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಕಿಶೋರ್, ಅಸಂವೈಧಾನಿಕವಾದರೂ ಕೂಡ ಜಾತಿ, ಭಾಷೆ, ದೇಶ, ಧರ್ಮಗಳ ತಾರತಮ್ಯ ಮಾಡದ ಸಂತರು … Read more

ನಾಳೆ ಸಾರಿಗೆ ನೌಕರರ ಮುಷ್ಕರಕ್ಕೆ ಕರೆ ನೀಡಿದ್ದ ಅನಂತ್ ಸುಬ್ಬರಾವ್ ನಿಧನ, ಪ್ರತಿಭಟನೆ ಮುಂದೂಡಿಕೆ

ಕಾರ್ಮಿಕ ಹೋರಾಟ ಚಳುವಳಿ ಮೂಲಕ ರಾಜ್ಯದ ಕಾರ್ಮಿಕ ಮುಖಂಡನಾಗಿ ಬೆಳದ ಅನಂತ್ ಸುಬ್ಬರಾವ್ ನಿಧನರಾಗಿದ್ದಾರೆ. ನಾಳೆ ಸಾರಿಗೆ ನೌಕರರ ಬೆಂಗಳೂರು ಚಲೋ ಪ್ರತಿಭಟನೆ ಹಮ್ಮಿಕೊಂಡಿದ್ದ ಅನಂತ್ ಸುಬ್ಬರಾವ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಂಜೆ 5 ಗಂಟೆಗೆ ಹೃದಯಾಘಾತದಿಂದ ಅಸ್ವಸ್ಥಗೊಂಡ ಅನಂತ್ ಸುಬ್ಬರಾವ್ ನಿಧನರಾಗಿದ್ದಾರೆ. ಮುಷ್ಕರಕ್ಕೆ ಭಾರಿ ತಯಾರಿ ಮಾಡಿದ್ದ ಅನಂತ್ ಸುಬ್ಬರಾವ್ ಸಾರಿಗೆ ನೌಕರರ ಬೇಡಿಕೆ ಸಮಸ್ಯೆಗಳಿಗೆ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡುತ್ತಿದ್ದ ಅನಂತ್ ಸುಬ್ಬರಾವ್ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷರಾಗಿ ಗಮನಸೆಳೆದಿದ್ದರು. ಪ್ರಮುಖವಾಗಿ ಎಸ್ಮಾ ಜಾರಿಗೆ ಭಾರಿ … Read more

ಅವನೇ ಬೇಕು ಅಂತ ಪ್ರೀತಿಸಿ ಮದುವೆಯಾದವಳು ಇಂದು ಆತ್ಮಹತ್ಯೆ – ಆಸ್ಪತ್ರೆಯಲ್ಲಿ ಸಾವು-ಬದುಕಿನ ಜೊತೆ ಗಂಡನ ಹೋರಾಟ

ಅವನೇ ಬೇಕು ಅಂತ ಪ್ರೀತಿಸಿ ಮದುವೆಯಾದವಳು ಇಂದು ಹೆಣವಾಗಿ ಮಸಣ ಸೇರಿದ್ದಾಳೆ. ಇತ್ತ ಏನಾದ್ರೂ ಒಟ್ಟಿಗೆ ಬದುಕೋಣ ಅಂತ ಯುವತಿಗೆ ತಾಳಿ ಕಟ್ಟಿದವನು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ಮಾಡ್ತಿದ್ದಾನೆ. ಈ ಜೋಡಿ ಸಂಸಾರದಲ್ಲಿ ಬಿರುಗಾಳಿ ಎಬ್ಬಿಸಿದವರು ಯಾರು.? ಗಂಡ-ಹೆಂಡ್ತಿ ನಡುವಿನ ಜಗಳಕ್ಕೆ ಕೂಸು ಬಡವಾಯ್ತು. ಪತಿ-ಪತ್ನಿ ಕಲಹಕ್ಕೆ ಬಲಿಯಾಯ್ತ ಬದುಕು!? ಸಂಸಾರದಲ್ಲಿ ಜಗಳ ಬರುತ್ತೆ, ಹೋಗುತ್ತೆ ಅಂತಾರೆ. ಆದ್ರೆ ಈ ಕಲಹ ಸಾವಿನಲ್ಲಿ ಅಂತ್ಯ ಕಾಣೋದೆ ದುರಂತ. ಕಳೆದ ಐದು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ … Read more

ರಾಜ್ಯ ಸರ್ಕಾರದ ಅನುದಾನಿತ ದಿನದಿಂದಲೇ ಶಿಕ್ಷಕರು `ವೇತನ’ಕ್ಕೆ ಅರ್ಹ : ಹೈಕೋರ್ಟ್ ಮಹತ್ವದ ತೀರ್ಪು

ರಾಜ್ಯ ಸರ್ಕಾರದ ಅನುದಾನಕ್ಕೆ ಒಳಪಟ್ಟ ಶಾಲಾ ಶಿಕ್ಷಕರಿಗೆ ಹೈಕೋರ್ಟ್ ಸಿಹಿಸುದ್ದಿ ನೀಡಿದ್ದು, ಅನುದಾನಿತ ಶಾಲೆಯು ಸರ್ಕಾರದ ಅನುದಾನಕ್ಕೆ ಒಳಪಟ್ಟ ದಿನದಿಂದಲೇ ಪೂರ್ವಾನ್ವಯವಾಗುವಂತೆ ಶಿಕ್ಷಕರಿಗೆ ವೇತನ ಸೌಲಭ್ಯ ನೀಡಬೇಕು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ರಾಜ್ಯ ಸರ್ಕಾರ 2011ರಲ್ಲಿ ಹೊರಡಿಸಿದ್ದ ಆದೇಶದ ಅನ್ವಯ ಅರ್ಜಿದಾರ ಶಿಕ್ಷಕರು ಶಾಲೆಯು ಅನುದಾನಕ್ಕೆ ಒಳಪಟ್ಟ ದಿನದಿಂದಲೇ ವೇತನಕ್ಕೆ ಅರ್ಹರಿದ್ದಾರೆ ಎಂದು ತೀರ್ಪು ನೀಡಿದೆ. ಪ್ರಕರಣದ ಹಿನ್ನೆಲೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕೆಂಪವಾಡ ಗಜಾನನ ಎಜುಕೇಶನಲ್ ಸೊಸೈಟಿ ನ್ಯೂ ಹೈಸ್ಕೂಲ್‌ನ ಕನ್ನಡ … Read more