ಹಿಜಾಬ್‌ಗೆ ಗ್ರೀನ್ ಸಿಗ್ನಲ್; ಸರ್ಕಾರದ ನಡೆಗೆ ಹಿಂದೂ ಸಂಘಟನೆಗಳ ವಿರೋಧ – ಉಗ್ರ ಪ್ರತಿಭಟನೆ ಎಚ್ಚರಿಕೆ

ಹಿಜಾಬ್ (Hijab) ವಿಚಾರ ಮತ್ತೆ ಮುನ್ನಲೆಗೆ ಬಂದಿದ್ದು, ಶಾಲಾ – ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಗ್ರೀನ್ ಸಿಗ್ನಲ್ ಕೊಟ್ಟಿರುವ ಸರ್ಕಾರದ ನಡೆಗೆ ಹಿಂದೂ ಸಂಘಟನೆಗಳು (Hindu Organizations) ಭಾರೀ ವಿರೋಧ ವ್ಯಕ್ತಪಡಿಸಿವೆ. ಅಲ್ಲದೇ ರಾಜ್ಯಾದ್ಯಂತ ಉಗ್ರ ಪ್ರತಿಭಟನೆಯ ಎಚ್ಚರಿಕೆಯನ್ನೂ ನೀಡಿದೆ. ಈ ಕುರಿತು ಹಿಂದೂ ಮುಖಂಡ ಸುನೀಲ್ ಕೆ.ಆರ್ (Sunil K.R) ಮಾತನಾಡಿ, ಸರ್ಕಾರ ಇಸ್ಲಾಮಿಕರಣಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿದೆ. ರಾಜ್ಯ ಸರ್ಕಾರಕ್ಕೆ ಮುಸ್ಲಿಮರ ಓಲೈಕೆಯೆ ಬಹು ಮುಖ್ಯವಾದಂತಿದೆ. ಮೂಲಭೂತವಾದಿ ಸಂಘಟನೆಗಳ ಜೊತೆಗೆ ರಾಜ್ಯ ಸರ್ಕಾರ ನಿಂತಿದೆ … Read more

ಯಾರು ಇಲ್ಲಿ ಅತಿ ದೊಡ್ಡ ಮೂರ್ಖರು? ಇಂಧನ ಉಳಿಸಿ ಎಂದು ಹೇಳಿದ ಬೆನ್ನಲ್ಲೇ ರೋಡ್ ಶೋ ಮಾಡಿದ ಮೋದಿಯೋ? ಜನರೋ?

ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ದೇಶದ ಜನರು ಕಡಿಮೆ ಇಂಧನ ಬಳಕೆ ಮಾಡಬೇಕು, ಎಲೆಕ್ಟ್ರಿಕ್ ವಾಹನಗಳ ಬಳಕೆ ಜಾಸ್ತಿ ಮಾಡಬೇಕು ಮತ್ತು ಚಿನ್ನ ಖರೀದಿಸಬಾರದು ಎಂದು ಹೇಳಿದ್ದು, ಇದು ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಫೇಸ್ ಬುಕ್ ನಲ್ಲಿ ಪ್ರತಿಕ್ರಿಯಿಸಿರುವ ಖ್ಯಾತ ಬಹುಭಾಷಾ ನಟ ಕಿಶೋರ್ ಅವರು, ಯಾರು ಇಲ್ಲಿ ಅತಿ ದೊಡ್ಡ ಮೂರ್ಖರು? ನಮ್ಮನ್ನು ಇಂಧನ ಉಳಿಸಿ, ಕಡಿಮೆ ಖರ್ಚು ಮಾಡಿ, ಅದೇ ದೇಶಭಕ್ತಿ ಎಂದು ಹೇಳಿದ ಮರುದಿನವೇ ವಾಹನಗಳ ದಂಡಿನೊಂದಿಗೆ ರೋಡ್ … Read more

‘ನಿಮ್ಮನ್ನು ಕೇರಳ ಕ್ಷಮಿಸಲ್ಲ, ಮತ್ತೆ ಚುನಾವಣೆಯಲ್ಲಿ ಗೆಲ್ಲಲ್ಲ’; ಸಿಎಂ ಆಯ್ಕೆ ವಿಳಂಬ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ವಿರುದ್ಧ ಪೋಸ್ಟರ್ ಪ್ರೊಟೆಸ್ಟ್

‘ಮಿಸ್ಟರ್ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿಯವರೇ ಇನ್ನು ವಯನಾಡನ್ನು ನೀವು ಮರೆತು ಬಿಡಿ. ಏಕೆಂದರೆ ನೀವು ಇಲ್ಲಿಂದ ಎಲೆಕ್ಷನ್ಗೆ ನಿಂತರೆ ಮತ್ತೆಂದು ಗೆಲ್ಲೋದಿಲ್ಲ. ರಾಹುಲ್ ಗಾಂಧಿಯವರೇ ಕೆಸಿ ವೇಣುಗೋಪಾಲ್ ಅವರು ನಿಮ್ಮ ಬಿಗ್ ಬ್ಯಾರರ್(ಬ್ಯಾಗ್ ಹೊರುವವರು) ಆಗಿರಬಹುದು. ಆದರೆ, ನಿಮ್ಮನ್ನು ಕೇರಳದ ಜನರು ಎಂದಿಗೂ ಕ್ಷಮಿಸೋದಿಲ್ಲ’ ಎನ್ನುವ ಪೋಸ್ಟರ್ಗಳು ವಯನಾಡಿನ ಕಾಂಗ್ರೆಸ್ ಕಚೇರಿ ಮುಂದೆ ರಾರಾಜಿಸುತ್ತಿದೆ. ಕೇರಳ ವಿಧಾನಸಭೆ ಚುನಾವಣೆ ಫಲಿತಾಂಶ ಘೋಷಣೆಯಾಗಿ ಒಂದು ವಾರ ಕಳೆದರೂ ಸಹ ಕಾಂಗ್ರೆಸ್ ಹೈಕಮಾಂಡ್ ಇನ್ನು ಯಾರನ್ನು ಸಿಎಂ ಕುರ್ಚಗೆ … Read more

ಹಿಜಾಬ್, ಜನಿವಾರ, ಶಿವದಾರ ಧರಿಸಲು ಅನುಮತಿ ನೀಡಿದ ಸರ್ಕಾರ! ಪರೀಕ್ಷೆಯಲ್ಲಿ ಇನ್ನು ಧಾರ್ಮಿಕ ಪದ್ಧತಿಗೆ ಮುಕ್ತ ಅವಕಾಶ

ಬೆಂಗಳೂರು: ರಾಜ್ಯದ ಶೈಕ್ಷಣಿಕ (Education) ಕ್ಷೇತ್ರದಲ್ಲಿ ಹಲವು ದಿನಗಳಿಂದ ಚರ್ಚೆಯಲ್ಲಿದ್ದ ಧಾರ್ಮಿಕ ಪದ್ಧತಿಗಳ ಪಾಲನೆಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ಸಂಪ್ರದಾಯದಂತೆ ಜನಿವಾರ, ಶಿವದಾರ, ಪೇಟಾ, ಹಿಜಾಬ್ ಹಾಗೂ ಸ್ಕಾರ್ಫ್ ಸೇರಿದಂತೆ ವಿವಿಧ ಧಾರ್ಮಿಕ ಪದ್ಧತಿಗಳನ್ನು ಅನುಸರಿಸಲು ಅವಕಾಶ ನೀಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಅವರು ಪ್ರಕಟಿಸಿದ್ದಾರೆ. ಬೆಂಗಳೂರಿನ ಸಮಗ್ರ ಶಿಕ್ಷಣ ಇಲಾಖೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ … Read more

“ಬೆಂಗಳೂರು ಅಭಿವೃದ್ಧಿ ವಿಚಾರದಲ್ಲಿ ಈ ಹುಚ್ಚುತನ ಬಿಡಿ” : ಡಿ.ಕೆ ಶಿವಕುಮಾರ್‌ಗೆ ಸಂಸದ ತೇಜಸ್ವಿ ಸೂರ್ಯ ಚಾಟಿ

ಸಂಸದ ತೇಜಸ್ವಿ ಸೂರ್ಯ ಅವರು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಕಾರ್ಯ ವೈಖರಿಯನ್ನು ಟೀಕಿಸಿದ್ದಾರೆ. ಈಚೆಗಷ್ಟೇ ಕುಟುಂಬಕ್ಕಿಂತಲೂ ಸಾರ್ವಜನಿಕ ಜೀವನದ ಬಗ್ಗೆ ಹೆಚ್ಚು ಗಮನ ನೀಡಿದ್ದಾರೆ ಎನ್ನುವ ವಿಚಾರಕ್ಕೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರ ಬಗ್ಗೆ ಮೆಚ್ಚುಗೆ ಸೂಚಿಸಿದ್ದ ಸಂಸದ ತೇಜಸ್ವಿ ಸೂರ್ಯ ಅವರು ಇದೀಗ ಬೆಂಗಳೂರಿನ ಪ್ರಮುಖ ಯೋಜನೆ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರು ನಗರಕ್ಕೆ ದುರಸ್ತಿ ಮಾಡಲಾಗದಷ್ಟು ಹಾನಿಯನ್ನು ಡಬಲ್ ಡೆಕ್ಕರ್ … Read more

ಅರಸನ ಅರಮನೆಗೆ ಗ್ರಹಣ ಪಟ್ಟದ ಆನೆಗೆ ಸಂಕಷ್ಟ: ರಾಜಕೀಯ ಸಂಚಲನ ಮೂಡಿಸಿದ ಕೋಡಿಶ್ರೀಗಳ ಸ್ಫೋಟಕ ಭವಿಷ್ಯವಾಣಿ

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜಡೆ ಸಂಸ್ಥಾನ ಮಠದಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಮುಂದಿನ ದಿನಗಳ ಬಗ್ಗೆ ಆತಂಕಕಾರಿ ಹಾಗೂ ಕುತೂಹಲಕಾರಿ ಭವಿಷ್ಯ ನುಡಿದಿದ್ದಾರೆ. ಪ್ರಕೃತಿಯಲ್ಲಿ ಉಂಟಾಗುತ್ತಿರುವ ಅನಿರೀಕ್ಷಿತ ಹವಾಮಾನ ಏರುಪೇರುಗಳಿಂದಾಗಿ ಜಗತ್ತು ಸಂಕಷ್ಟಕ್ಕೆ ಸಿಲುಕಲಿದೆ ಎಂದು ಅವರು ಎಚ್ಚರಿಸಿದ್ದಾರೆ. ಪ್ರಕೃತಿ ವಿಕೋಪದ ಎಚ್ಚರಿಕೆ ಮುಂದಿನ ದಿನಗಳಲ್ಲಿ ಗುಡುಗು, ಸಿಡಿಲು ಹಾಗೂ ಬಿರುಗಾಳಿ ಸಹಿತ ಮಳೆಯ ಆರ್ಭಟ ವಿಪರೀತವಾಗಲಿದ್ದು, ಇದರಿಂದ ಭೂಮಿ ತಲ್ಲಣಗೊಳ್ಳಲಿದೆ. ಅಕಾಲಿಕ ಮಳೆಯ ಅಬ್ಬರಕ್ಕೆ … Read more

NEET UG: ನೀಟ್ ಪೇಪರ್ 10 ಲಕ್ಷಕ್ಕೆ ಖರೀದಿ, 15 ಲಕ್ಷಕ್ಕೆ ಸೇಲ್!‌ : ಆರೋಪಿ ಶುಭಂ ಅಸಲಿಗೆ ಯಾರು?

ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ ನೀಟ್ (NEET UG 2026) ಪರೀಕ್ಷಾ ಅಕ್ರಮದ (Question Paper Leak) ತನಿಖೆ ಚುರುಕುಗೊಂಡಿದ್ದು, ಸಿಬಿಐ (CBI) ಈಗ ಮಹಾರಾಷ್ಟ್ರದ ನಾಸಿಕ್‌ನಲ್ಲಿ 30 ವರ್ಷದ ಬಿಎಎಂಎಸ್ (BAMS) ವಿದ್ಯಾರ್ಥಿ ಶುಭಂ ಖೈರ್ನಾರ್‌ನನ್ನು ಅಧಿಕೃತವಾಗಿ ವಶಕ್ಕೆ ಪಡೆದಿದೆ. ನಾಸಿಕ್ ಜಿಲ್ಲೆಯ ನಂದಗಾಂವ್ ಮೂಲದವನಾದ ಶುಭಂ, ಸದ್ಯ ಕುಟುಂಬದೊಂದಿಗೆ ನಾಸಿಕ್‌ನ ಇಂದಿರಾನಗರದಲ್ಲಿ ವಾಸವಿದ್ದ. ಆಯುರ್ವೇದ ವೈದ್ಯಕೀಯ (BAMS) ವಿದ್ಯಾರ್ಥಿಯಾದ ಈತ, ಪರೀಕ್ಷಾ ಅಕ್ರಮದ ಜಾಲದಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ. ರಾಜಸ್ಥಾನ ಪೊಲೀಸರು ನೀಡಿದ ಖಚಿತ … Read more

ಸಾರ್.‌ ನನ್ನ ಹೆಂಡತಿ ಮದುವೆಯನ್ನು ತಪ್ಪಿಸಿ..! ಬೆಳಗಾವಿಯಲ್ಲಿ ಪತಿಯ ಗೋಳಾಟ!

ಪರಸ್ಪರ ಒಪ್ಪಿಗೆಯಿಂದ ಮದುವೆಯಾದ ಪತ್ನಿಯನ್ನು ಆಕೆಯ ಮನೆಯವರೇ ಕೂಡಿಹಾಕಿ, ಇದೀಗ ಮತ್ತೊಬ್ಬರ ಜೊತೆ ಮದುವೆ ಮಾಡಲು ಸಂಚು ರೂಪಿಸಿದ್ದಾರೆ ಎಂದು ಬೆಳಗಾವಿ ಜಿಲ್ಲೆಯ ಹಿರೆಬಾಗೇವಾಡಿಯಲ್ಲಿ ವೆಂಕಟೇಶ್ವರ ರಾಠೋಡ್ ಎಂಬುವವರು ಗಂಭೀರ ಆರೋಪ ಮಾಡಿದ್ದಾರೆ. ಇದು 2016 ಲವ್‌ ಸ್ಟೋರಿ ಸುದ್ದಿಗಾರರೊಂದಿಗೆ ಮಾತನಾಡಿದ ವೆಂಕಟೇಶ್ವರ ರಾಠೋಡ್, “ನನಗೆ ಮಂಜುಳಾ ಹಂಚಿನಮನಿ ಎಂಬಾಕೆಯ ಪರಿಚಯ 2016ರಿಂದಲೇ ಇತ್ತು. ಆಕೆಯನ್ನು ನಾನು 2022ರಲ್ಲಿ ಮದುವೆಯಾಗಿದ್ದೇನೆ. ಆದರೆ ಈಗ ಆಕೆಯ ತಂದೆ ಹಿರೆಬಾಗೇವಾಡಿಯ ರುದ್ರಪ್ಪ ಹಂಚಿನಮನಿ ಹಾಗೂ ಸಹೋದರ ಪ್ರದೀಪ್ ಹಂಚಿನಮನಿ ಅವರು … Read more

ಮುಂದಿನ 3 ದಿನ ರಾಜ್ಯದ ಈ 8 ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಆಲಿಕಲ್ಲು ಮಳೆ : ಕರಾವಳಿ ಜನರೇ ಎಚ್ಚರ

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಹವಾಮಾನದಲ್ಲಿ ಭಾರಿ ಬದಲಾವಣೆಯಾಗಲಿದ್ದು, ಆಲಿಕಲ್ಲು ಮಳೆ (Hailstorm) ಬೀಳುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ (IMD) ನೀಡಿದೆ. ಉತ್ತರ ಒಳನಾಡಿನಲ್ಲಿ ಮೇ 14 ಮತ್ತು 15 ರಂದು ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇನ್ನು ದಕ್ಷಿಣ ಒಳನಾಡಿನಲ್ಲೂ ಕೂಡ ಮೇ 15 ರಂದು ಒಂದು ಅಥವಾ ಎರಡು ಸ್ಥಳಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ. ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಮಳೆಯಾಗಲಿದ್ದು, ಗಾಳಿಯ ವೇಗ ಗಂಟೆಗೆ … Read more

ಒಬ್ಬ ಮುಸಲ್ಮಾನನ ಮೇಲೆ ಕೈ ಇಟ್ಟರೂ ನಾವು ನಿಮ್ಮನ್ನು ಕೊಲ್ಲುತ್ತೇವೆ: ಕೊಲೆ ಬೆದರಿಕೆ ಹಾಕಿದ ಶಾಸಕ ಹುಮಾಯೂನ್ ಕಬೀರ್

ಪಶ್ಚಿಮ ಬಂಗಾಳದ ರಾಜಕೀಯ ವಲಯದಲ್ಲಿ ಈಗ ದೊಡ್ಡ ಸಂಚಲನ ಸೃಷ್ಟಿಯಾಗಿದೆ. ಮುರ್ಷಿದಾಬಾದ್ ಜಿಲ್ಲೆಯ ಭರತ್ ಪುರ ಕ್ಷೇತ್ರದ ಶಾಸಕ ಹುಮಾಯೂನ್ ಕಬೀರ್ ಅವರು ಪಶ್ಚಿಮ ಬಂಗಾಳದ ಪ್ರಮುಖ ನಾಯಕ ಶುಭೇಂದು ಅಧಿಕಾರಿ ಅವರಿಗೆ ನೇರವಾದ ಕೊಲೆ ಬೆದರಿಕೆ ಹಾಕುವ ಮೂಲಕ ವಿವಾದದ ಕಿಚ್ಚು ಹಚ್ಚಿದ್ದಾರೆ. ಬಾಂಗ್ಲಾದೇಶದ ಫೇಸ್ ದ ಪೀಪಲ್ ಎಂಬ ಸುದ್ದಿ ವಾಹಿನಿಗೆ ನೀಡಿದ ಪ್ರಚೋದನಾಕಾರಿ ಸಂದರ್ಶನದಲ್ಲಿ ಈ ಆಘಾತಕಾರಿ ಹೇಳಿಕೆ ಹೊರಬಿದ್ದಿದೆ. ಈ ಸಂದರ್ಶನದ ವೇಳೆ ಅತ್ಯಂತ ತೀಕ್ಷ್ಣವಾಗಿ ಮಾತನಾಡಿದ ಕಬೀರ್ ಅವರು, ಶುಭೇಂದು … Read more