ಜಮೀರ್ ಅಹ್ಮದ್ ಖಾನ್ (Zameer Ahmed Khan), ಕಾಂಗ್ರೆಸ್ನ ಹಿರಿಯ ನಾಯಕ, ಮುಸ್ಲಿಂ ಓಟ್ ಬ್ಯಾಂಕ್ನ ಮಾಸ್ ಲೀಡರ್. ಈ ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ (Siddaramaiah) ಜಮೀರ್ ಗತ್ತು ಬೇರೆ ಲೆವೆಲ್ಗೆ ಇತ್ತು. ಆದರೆ, ಇವತ್ತು ಇದೇ ನಾಯಕ ಸೈಡ್ಲೈನ್ ಆಗೋ ಆತಂಕದಲ್ಲಿದ್ದಾರೆ.
ಜಮೀರ್ ಮೇಲೆ ಬಂದ ಒಂದೇ ಒಂದು ಆರೋಪ, ಇವರ ರಾಜಕೀಯಕ್ಕೇ ಕಗ್ಗಂಟಾಗಿ ಕಾಡುತ್ತಿದೆ. ಸಚಿವ ಸಂಪುಟದ ಮೊದಲ ಪಟ್ಟಿಯಲ್ಲೇ ಇರಬೇಕಿದ್ದ ನಾಯಕ ಈಗ, ಸಚಿವ ಸ್ಥಾನ ಸಿಗುತ್ತೋ ಇಲ್ವೋ ಅನ್ನೋದೇ ಡೌಟ್ ಆಗಿದೆ. ಈ ಬೆನ್ನಲ್ಲೇ ಜಮೀರ್ ಬಗ್ಗೆ ಕೋಡಿಮಠ ಶ್ರೀಗಳಿಂದ (Kodi Mutt Swamiji) ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಸಿಎಂ ಡಿಕೆ ಶಿವಕುಮಾರ್ ಅವರ ಕ್ಯಾಬಿನೆಟ್ನಲ್ಲಿ ಜಮೀರ್ ಅಹ್ಮದ್ ಖಾನ್ ಅವರಿಗೆ ಸ್ಥಾನ ಕೊಡಬೇಕು ಎಂದು ರಾಜ್ಯಾದ್ಯಂತ ಜಮೀರ್ ಬೆಂಬಲಿಗರು ಸಿಡಿದಿದ್ದಾರೆ. ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಿ ಎಂದು ಪಟ್ಟು ಹಿಡಿದಿರುವ ಅಭಿಮಾನಿಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬೆನ್ನಲ್ಲೇ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಜಮೀರ್ ಅವರ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಜಮೀರ್ ಅವರು ಡಿಕೆ ಶಿವಕುಮಾರ್ ಕ್ಯಾಬಿನೆಟ್ನ ಸಚಿವರಾಗಲಿದ್ದಾರೆ ಎಂದು ಹೇಳಿರುವ ಬಗ್ಗೆ ಕನ್ನಡ ಪೋಸ್ಟ್ ವೆಬ್ಸೈಟ್ ವರದಿ ಮಾಡಿದೆ.
‘ಜಮೀರ್ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ’
ಅರಸೀಕೆರೆಯಲ್ಲಿ ಅಲ್ ಅಮೀನ್ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕೋಡಿ ಮಠದ ಶ್ರೀಗಳು ಮಾತನಾಡಿ, ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಪರ ಬ್ಯಾಟ್ ಬೀಸಿದ್ದಾರೆ. ಅಲ್ಲದೇ ಜಮೀರ್ ಅವದ್ದು ಎನ್ನಲಾದ ಆಡಿಯೋ ವಿಚಾರವಾಗಿ ಮಾತನಾಡಿರುವ ಶ್ರೀಗಳು, ಆಡಿಯೋ ಅಪಪ್ರಚಾರ ಮಾಡುವ ಉದ್ದೇಶದಿಂದ ಆಗಿದೆ. ಜಮೀರ್ ಅವರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ, ಅವರು ಮತ್ತೆ ಸಚಿವ ಸ್ಥಾನವನ್ನು ಮರಳಿ ಪಡೆಯುತ್ತಾರೆ ಎಂದು ಹೇಳಿದರು. ಜಮೀರ್ ಅಹ್ಮದ ಖಾನ್ ಅವರು ಇಲ್ಲದೆ ಸರ್ಕಾರ ಆಗಲ್ಲ. ಜಮೀರ್ ಇದ್ದರೆ ಮಾತ್ರ ಅದು ಸರ್ಕಾರ ಎನಿಸಿಕೊಳ್ಳುತ್ತದೆ. ಬೆಂಬಲಿಗರು ಆಕ್ರೋಶಕ್ಕೆ ಒಳಗಾಗಬೇಡಿ. ಶಾಂತಿಯಿಂದ ಇರಿ ಎಂದು ಶ್ರೀಗಳು ಕರೆ ಕೊಟ್ಟಿದ್ದಾರೆ.
ಮೊನ್ನೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಜಮೀರ್ ಬೆಂಬಲಿಗರು ಸಚಿವಸ್ಥಾನಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಕೊಪ್ಪಳದ ಮಹೇಶ್ವರಾನಂದ ಸ್ವಾಮೀಜಿ, ಬಂಜಾರ ಗುರುಪೀಠದ ಸ್ವಾಮೀಜಿಗಳು ಕೂಡ ಜಮೀರ್ ಬೆಂಬಲಕ್ಕಿದ್ದಾರೆ. ಜಮೀರ್ ಅವರು ಸಚಿವ ಅಲ್ಲ, ಉಪಮುಖ್ಯಮಂತ್ರಿ ಅಲ್ಲ, ಅವರು ಸಿಎಂ ಹುದ್ದೆಗೆ ಅರ್ಹತೆ ಇರೋರು, ರಾಜ್ಯದಲ್ಲಿ ಒಂದು ಕೋಟಿ 40 ಲಕ್ಷ ಮುಸ್ಲಿಮರು, 2 ಕೋಟಿ ದಲಿತರು ಇದ್ದಾರೆ, ಅವರು ಮುಸ್ಲಿಮರ ನಾಯಕ ಮಾತ್ರ ಅಲ್ಲ, ಅಹಿಂದ ವರ್ಗದ ನಾಯಕ ಎಂದು ಹೇಳಿದ್ದರು.
ಜಮೀರ್ ಅಹ್ಮದ್ ಅವರನ್ನು ಹೀಗೆ ಕಡೆಗಣಿಸುತ್ತಿರುವುದು ಬಹಳ ಅನ್ಯಾಯ, ಜಮೀರ್ ಅವರು ಕೇರಳದಲ್ಲಿ ಕಾಂಗ್ರೆಸ್ ಸರ್ಕಾರ ಬರುವುದಕ್ಕೆ ಹಗಲು ರಾತ್ರಿ ದುಡಿದಿದ್ದಾರೆ. ಬಿ.ವೈ ರಾಘವೇಂದ್ರರನ್ನು ಗೆಲ್ಲಿಸಿಕೊಂಡು ಬನ್ನಿ ಅಂತ ದಿವಂಗತ ಶಾಮನೂರು ಶಿವಶಂಕರಪ್ಪ ಅವರು ಹೇಳಿದ್ದರು. ಅದು ಪಕ್ಷ ವಿರೋಧಿ ಕೆಲಸ ಆಗಲ್ವಾ.? ಎಂದು ಮಹೇಶ್ವರಾನಂದ ಸ್ವಾಮೀಜಿ ಪ್ರಶ್ನೆ ಮಾಡಿದ್ದರು.
ಜಮೀರ್ ಬಗ್ಗೆ ಕೋಡಿಮಠ ಶ್ರೀಗಳಿಂದ ಸ್ಫೋಟಕ ಭವಿಷ್ಯ! ಸಚಿವ ಸ್ಥಾನದ ಸಿಗುವುದರ ಬಗ್ಗೆ ಹೇಳಿದ್ದೇನು?
WhatsApp Group
Join Now