ಆಕ್ಸಿಡೆಂಟ್‌ ಆದಾಗ ವಿನೀಶ್‌ ಕಾರ್‌ ಡ್ರೈವ್‌ ಮಾಡ್ತಿದ್ರಾ? ಎಲ್ಲದಕ್ಕೂ ಸ್ಪಷ್ಟನೆ ಕೊಟ್ಟ ವಿಜಯಲಕ್ಷ್ಮಿ ದರ್ಶನ್‌

ಸ್ಯಾಂಡಲ್‌ವುಡ್ ನಟ ದರ್ಶನ್ ಅವರ ಪುತ್ರ ವಿನೀಶ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಬೆಂಗಳೂರಿನ ರಾಜರಾಜೇಶ್ವರಿ ನಗರದ ಕೆಂಗೇರಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರದಂದು ಈ ಘಟನೆ ನಡೆದಿರುವುದಾಗಿ ವರದಿಯಾಗಿತ್ತು. ವಿನೀಶ್ ಅವರೇ ಕಾರು ಚಲಾಯಿಸುತ್ತಿದ್ದರು ಮತ್ತು ಅಪಘಾತದ ಬಳಿಕ ಸ್ಥಳೀಯರೊಂದಿಗೆ ವಾಗ್ವಾದ ನಡೆದಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ, ಈ ಎಲ್ಲಾ ವಿಚಾರದ ಬಗ್ಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಸಾಮಾಜಿಕ … Read more

ಒಂದೂವರೆ ವರ್ಷದ ಮಗುವಿನೊಂದಿಗೆ ಆತ್ಮಹತ್ಯೆಗೆ ಶರಣಾದ ನಾಲ್ಕು ತಿಂಗಳ ಗರ್ಭಿಣಿ!

ಕಲಬುರಗಿ ಜಿಲ್ಲೆಯ (Kalburgi)ಆಳಂದ ತಾಲೂಕಿನ ಚಿಂಚನಸೂರ್ ಗ್ರಾಮದಲ್ಲಿ ಗುರುವಾರ ಅತ್ಯಂತ ಮನಕಲಕುವ (Crime) ಘಟನೆಯೊಂದು ನಡೆದಿದೆ. ಒಂದೂವರೆ ವರ್ಷದ ಹಸುಗೂಸಿನೊಂದಿಗೆ ನಾಲ್ಕು ತಿಂಗಳ ಗರ್ಭಿಣಿಯೊಬ್ಬರು ತೆರೆದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದುರಂತವೊಂದು ಸಂಭವಿಸಿದೆ. ಅಂಬಿಕಾ (25) ಹಾಗೂ ಆಕೆಯ ಒಂದೂವರೆ ವರ್ಷದ ಮುದ್ದಾದ ಪುತ್ರ ಆರಾಧ್ಯ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಮೃತ ಮಹಿಳೆ ಅಂಬಿಕಾಗೆ ಮೂರು ವರ್ಷಗಳ ಹಿಂದೆಯಷ್ಟೇ ವೀರಭದ್ರಪ್ಪ ಎಂಬುವವರ ಜೊತೆ ವಿವಾಹವಾಗಿತ್ತು. ದಂಪತಿಗೆ ಒಂದೂವರೆ ವರ್ಷದ ಗಂಡು ಮಗನಿದ್ದನು. ಇದರ ಬೆನ್ನಲ್ಲೇ ಅಂಬಿಕಾ ಈಗ … Read more

ಪವಿತ್ರ ಕ್ಷೇತ್ರದಲ್ಲಿ ಹೇಳುತ್ತಿದ್ದೇನೆ, ಡಿಕೆಶಿ ಜೊತೆ ಆತ್ಮೀಯತೆ ಆರೋಪಕ್ಕೆ ಧರ್ಮಸ್ಥಳದಲ್ಲಿ ವಿಜಯೇಂದ್ರ ಸ್ಪಷ್ಟನೆ

ಅಡ್ಡಮತದಾನ, ಧರ್ಮಸ್ಥಳ ಆಣೆ ಪ್ರಮಾಣಗಳಿಂದ ಸೃಷ್ಟಿಯಾಗಿದ್ದ ವಿವಾದಕ್ಕೆ ತೆರೆ ಎಳೆಯು ಪ್ರಯತ್ವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಾಡಿದ್ದಾರೆ. ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನ ದರ್ಶನ ಪಡೆದ ವಿಜಯೇಂದ್ರ, ಹಿಂದೂಗಳ ರಕ್ಷಣೆ, ರಾಜ್ಯದ ಅಭಿವೃದ್ಧಿಗಾಗಿ ಸರ್ಕಾರ ಬರಲು ಪ್ರಾರ್ಥನೆ ಮಾಡಿದ್ದೇನೆ ಎಂದಿದ್ದಾರೆ. ಇದೇ ವೇಳೆ ಸಿಎಂ ಡಿಕೆ ಶಿವಕುಮಾರ್ ಜೊತೆ ಆತ್ಮೀಯತೆ ಇದೆ ಅನ್ನೋ ಆರೋಪಗಳಿಗೆ ಬಿವೈ ವಿಜಯೇಂದ್ರ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ಡಿಕೆ ಶಿವಕುಮಾರ್ ಜೊತೆ ನನಗೆ ಯಾವುದೇ ವ್ಯವಹಾರಿಕ ಅಥವಾ ಆತ್ಮೀಯತೆ ಇಲ್ಲ. … Read more

ಬಾಲಕಿಯನ್ನು ಫುಟ್‌ಬಾಲ್‌ ನಂತೆ ಒದ್ದ ಅಂಗನವಾಡಿ ಸಹಾಯಕಿ ; ಆಘಾತಕಾರಿ ವೀಡಿಯೋ ವೈರಲ್‌

ಮಹಾರಾಷ್ಟ್ರದ ಪನ್ವೆಲ್‌ನ ನಾಡಗಾಂವ್ ಸರ್ಕಾರಿ ಅಂಗನವಾಡಿ ಕೇಂದ್ರದಲ್ಲಿ ನಡೆದಿರುವ ಅಮಾನುಷ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ಪುಟ್ಟ ಬಾಲಕಿಗೆ ಕಾಲಿನಿಂದ ಒದ್ದು ಮೆಟ್ಟಿಲಿನಿಂದ ಕೆಳಕ್ಕೆ ಬೀಳಿಸಿರುವ ದೃಶ್ಯ ಕಂಡುಬಂದಿದ್ದು, ಈ ಘಟನೆಗೆ ತೀವ್ರ ಖಂಡನೆ ವ್ಯಕ್ತವಾಗಿದೆ. ಮಹಾರಾಷ್ಟ್ರದ ಪನ್ವೆಲ್‌ನ ನಾಡಗಾಂವ್‌ನ ಸರ್ಕಾರಿ ಅಂಗನವಾಡಿ ಕೇಂದ್ರದಲ್ಲಿ ನಡೆದಿರುವ ಈ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಗುಲಾಬಿ ಬಣ್ಣದ ಸೀರೆ ಧರಿಸಿದ ಮಹಿಳೆಯೊಬ್ಬರು ಕೆಂಪು … Read more

‘ತಾಕತ್ತಿದ್ದರೆ ನನ್ನ ಮೇಲೆ ಐಟಿ, ಇಡಿ ದಾಳಿ ಮಾಡಿಸಿ..’ ಕೇಂದ್ರ ಸಚಿವ ಹೆಚ್‌ಡಿಕೆಗೆ ಪ್ರದೀಪ್ ಈಶ್ವರ್ ಸವಾಲು!

ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ(HD Kumaraswamy) ಅವರ ಬಳಿ 85 ವಾಚುಗಳು, 700-800 ಎಕರೆ ಜಮೀನಿದೆ. ಅವರ ವಾಚ್‌ಗಳ ಒಟ್ಟು ಮೌಲ್ಯವೇ 10 ರಿಂದ 20 ಕೋಟಿ ರು. ಆಗುತ್ತದೆ. ಇಷ್ಟು ಆಸ್ತಿಯನ್ನು ಅವರು ಬದನೆಕಾಯಿ ಮಾರಿ ಗಳಿಸಿದರೇ’ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್(Pradeep Eshwar) ಪ್ರಶ್ನೆ ಮಾಡಿದ್ದಾರೆ. ತಾಕತ್ತಿದ್ದರೆ ನನ್ನ ಮೇಲೆ ಐಟಿ, ಇಡಿ ದಾಳಿ ಮಾಡಿಸಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ತೀವ್ರ ವಾಗ್ದಾಳಿ … Read more

RSS ನ್ನು ಈಗಾಗಲೇ ಮೂರು ಬಾರಿ ನಿಷೇಧ ಮಾಡಿದ್ದೇವೆ. ಇದೀಗ ನಮ್ಮ ಮುಂದಿನ ಹೋರಾಟ ಅದೇ ಆಗಿದೆ : ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌

ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಈಗಾಗಲೇ ಮೂರು ಬಾರಿ ನಿಷೇಧ ಮಾಡಿದ್ದೇವೆ. ಇದೀಗ ನಮ್ಮ ಮುಂದಿನ ಹೋರಾಟ ಅದೇ ಆಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌ ಹೇಳಿದರು. ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಆರ್‌ಎಸ್‌ಎಸ್‌ ಟೀಕೆ ಮಾತನಾಡುತ್ತಿದ್ದಾರೆ ಎಂದು, ಜನರ ಗಮನ ಬೆರೆಡೆ ಸೆಳೆಯಲು ಬಿಜೆಪಿ ಭೂ ಹಗರಣದಲ್ಲಿ ಮಲ್ಲಿಕಾರ್ಜುನ್‌ ಖರ್ಗೆ ಭಾಗಿಯಾಗಿದ್ದಾರೆಂದು ಆರೋಪಿಸುತ್ತಿದೆ ಎಂದರು. ‘ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ₹ 4 ಸಾವಿರ ಕೋಟಿ … Read more

ಅಸ್ಲಾಂ ಹುಸೈನ್ ಜೊತೆ ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಆಪ್ ಮಾಜಿ ಅಭ್ಯರ್ಥಿ ನಂದಿನಿ ಶವವಾಗಿ ಪತ್ತೆ

ಭಾರತದೆಲ್ಲೆಡೆ ರಿಲೇಶನ್‌ಶಿಪ್, ಮದುವೆ, ಪ್ರೀತಿ-ಪ್ರೇಮಗಳಲ್ಲಿ ಕೊಲೆ, ಷಡ್ಯಂತ್ರ ಪ್ರಕರಣಗಳೇ ಹೆಚ್ಚು ವರದಿಯಾಗುತ್ತಿದೆ. ಪುಣೆಯ ಉದ್ಯಮಿ ಪುತ್ರನ ಲೋಹಘಡ ಬೆಟ್ಟದಿಂದ ತಳ್ಳಿ ಹಾಕಿ ಕೊಲೆಗೈದ ಭಾವಿ ಪತ್ನಿ ಸೇರಿದಂತೆ ಒಂದರ ಹಿಂದೆ ಒಂದೊಂದು ಘಟನೆಗಳು ವರದಿಯಾಗುತ್ತಿದೆ. ಇದೀಗ ಆಮ್ ಆದ್ಮಿ ಪಕ್ಷದ ಮಾಜಿ ಮುನ್ಸಿಪಲ್ ಚುನಾವಣಾ ಅಭ್ಯರ್ಥಿಯಾಗಿದ್ದ 23 ವರ್ಷದ ನಂದಿನ ಬೊಸಮಿಯಾ ಶವವಾಗಿ ಪತ್ತೆಯಾಗಿದ್ದಾಳೆ. ರಾಜ್‌ಕೋಟ್‌ನ ವಾವ್ದಿ ವಲಯದ ಮನೆಯಲ್ಲಿ ನಂದಿನ ಶವ ಪತ್ತೆಯಾಗಿದೆ. ಕೆಲ ವರ್ಷಗಳ ಹಿಂದೆ ಪರಿಚಯವಾಗಿದ್ದ ಅಸ್ಲಂ ಸಾಮ ಅನ್ನೋ ವ್ಯಕ್ತಿ ಜೊತೆ … Read more

RSS ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತೆ: ವಿಪಕ್ಷಕ್ಕೆ ಟಾಂಗ್ ನೀಡಿ ಪ್ರಿಯಾಂಕ್‌ ಖರ್ಗೆ ಪೋಸ್ಟ್

ಆರ್‌ಎಸ್‌ಎಸ್‌ ನೋಂದಣಿ ವಿಚಾರವಾಗಿ ಆರಂಭವಾದ ಗೊಂದಲ, ವಿವಾದ ದಿನೇ ದಿನೇ ತಾರಕಕ್ಕೇರುತ್ತಿದೆ. ಇದೀಗ ಗೃಹಸಚಿವ ಪ್ರಿಯಾಂಕ್ ಖರ್ಗೆ ಅವರ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಪೋಸ್ಟ್ ಹಾಕಿ ವಿಪಕ್ಷ ಬಿಜೆಪಿಗೆ ಟಾಂಗ್ ನೀಡದ್ದಾರೆ. ಸರ್ಪಕ್ಕೆ ಹೋಲಿಕೆ ಮಾಡಿ ಹಾವಿನ ಬಾಲ ಎಳೆದರೆ ಬುಸುಗುಡುತ್ತದೆ ಎಂಬ ಹಾಗೆ, ಬಿಜೆಪಿಯ ಬಾಲ ಆರ್‌ಎಸ್‌ಎಸ್‌ ಕೈಯಲ್ಲಿದೆ ಎಂದು ವ್ಯಂಗ್ಯವಾಡಿದ್ದಾರೆ. ಪೋಸ್ಟ್‌ನಲ್ಲಿ ಏನಿದೆ? RSS ಅನ್ನು ಯಾರೇ ಪ್ರಶ್ನಿಸಿದರೂ, ಬಿಜೆಪಿ ತನ್ನ ಗಾಂಭೀರ್ಯ ಕಳೆದುಕೊಳ್ಳುತ್ತದೆ.ಸ್ವಾತಂತ್ರ್ಯ ಹೋರಾಟಕ್ಕೆ ಯಾವ ಕೊಡುಗೆಯನ್ನೂ ನೀಡದ ಸಂಘಟನೆ ಇಂದು ದೇಶಕ್ಕೆ … Read more

ಮನೆಯಲ್ಲಿ ಕೃಷಿ ತಾಪಂಡ ಇರದ ವೇಳೆ ಬಂದ ಗೆಳೆಯ ಸಾವು, ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದ ನಟಿ ಹೋಗಿದ್ದೆಲ್ಲಿಗೆ?

ರಾಜಧಾನಿಯ ರಾಜರಾಜೇಶ್ವರಿ ನಗರದ (RR Nagar) ಬಂಗಾರಪ್ಪ ಗುಡ್ಡೆ ಬಳಿ ಇರುವ ‘ಎಲಿಗಂಟ್ ಅಪಾರ್ಟ್‌ಮೆಂಟ್’ನಲ್ಲಿ ನಡೆದ 45 ವರ್ಷದ ಉದ್ಯಮಿ ವೈಶಾಕ್ ಸಾವಿನ ಪ್ರಕರಣ ಈಗ ಹಲವು ಸ್ಪೋಟಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸ್ಯಾಂಡಲ್‌ವುಡ್ ನಟಿ ಕೃಷಿ ತಾಪಂಡ (Krishi Thapanda) ಅವರ ಆಪ್ತ ಗೆಳೆಯನಾಗಿದ್ದ ವೈಶಾಕ್, ನಿನ್ನೆ ರಾತ್ರಿ ಸುಮಾರು 8:30ರ ವೇಳೆಗೆ ನಟಿಯ ಫ್ಲಾಟ್‌ನಲ್ಲಿ ನೇಣಿಗೆ ಶರಣಾಗಿದ್ದಾರೆ. ಈ ಘಟನೆ ಕೇವಲ ಚಿತ್ರರಂಗದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ನಟಿಯ ಫ್ಲಾಟ್‌ಗೆ ಬಂದಿದ್ದೇಕೆ ವೈಶಾಕ್? ಕಾರಿನ ಆಟೋಮೊಬೈಲ್ … Read more

ಮೃತ್ಯು ಕೂಪವಾಯ್ತು ಮುತ್ತತ್ತಿ: ಫೋಟೋ ಹುಚ್ಚಿಗೆ ಕಾವೇರಿ ಒಡಲು ಸೇರಿದ ಒಂದೇ ಕುಟುಂಬದ ಐವರು!

ಮಂಡ್ಯ: “ಸಾವು ಅನ್ನೋ ಘಳಿಗೆ ಬಂತು ಅಂದ್ರೆ ಅದನ್ನ ಯಾರಿಂದಲೂ ತಡೆಯಲು ಸಾಧ್ಯವಿಲ್ಲ” ಎನ್ನುತ್ತಾರೆ ದೊಡ್ಡವರು. ವಿಧಿಯ ಆಟದ ಮುಂದೆ ಮನುಷ್ಯ ಎಷ್ಟೊಂದು ಕುಬ್ಜ ಎಂಬುದಕ್ಕೆ ಮುತ್ತತ್ತಿಯ ಕಾವೇರಿ ನದಿಯಲ್ಲಿ ನಡೆದ ಈ ಘೋರ ದುರಂತವೇ ಸಾಕ್ಷಿ. ದೇವರ ದರ್ಶನ ಮುಗಿಸಿ ಸಂಸಾರದ ಜೊತೆ ಸಂಭ್ರಮಿಸಲು ಹೋದ ಒಂದು ಇಡೀ ಕುಟುಂಬ, ಕೇವಲ ಒಂದು ಕ್ಷಣದ ಬೇಜವಾಬ್ದಾರಿಯಿಂದಾಗಿ ಕಾವೇರಿಯ ಒಡಲಲ್ಲಿ ಮರೆಯಾಗಿದೆ. ನೆಮ್ಮದಿಯ ಪ್ರವಾಸ ದುರಂತ ಅಂತ್ಯ ಕಂಡಿದ್ದು ಹೇಗೆ? ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣದ ಬ್ಯಾಡರಹಳ್ಳಿ … Read more