ಹಾಸನದಲ್ಲಿ (Hassan ) ಹೆತ್ತವರ ತೀವ್ರ ವಿರೋಧದ ನಡುವೆಯೂ ಅಂತರ್ಜಾತಿ ಪ್ರೇಮಿಗಳಿಬ್ಬರು (Lovers )ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಯ ಸಾಕ್ಷಿಯಾಗಿ ವಿವಾಹವಾಗಿರುವ (Marriage ) ಅಪರೂಪದ ಘಟನೆ ನಡೆದಿದೆ.
ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿಯ ಮನೋಜ್ ಹಾಗೂ ಮೂಕಲಿ ಗ್ರಾಮದ ಯುವತಿ ಕಳೆದ ಕೆಲವು ಸಮಯದಿಂದ ಪ್ರೀತಿಸುತ್ತಿದ್ದರು. ಇವರ ಪ್ರೀತಿಗೆ ಜಾತಿಯ ಗೋಡೆ ಎದುರಾಗಿದ್ದು, ಎರಡು ಕುಟುಂಬಗಳ ಪೋಷಕರು ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಪೋಷಕರನ್ನು ಒಪ್ಪಿಸಲು ಸಾಧ್ಯವಾಗದಿದ್ದಾಗ ಧೃತಿಗೆಡದ ಯುವ ಜೋಡಿ, ಹಾಸನದ ಡಿಸಿ ಕಚೇರಿ ಆವರಣಕ್ಕೆ ಆಗಮಿಸಿ ಸಂವಿಧಾನ ಶಿಲ್ಪಿಯ ಪ್ರತಿಮೆ ಎದುರು ಸರಳವಾಗಿ ಹಾರ ಬದಲಾಯಿಸಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಹೆತ್ತವರ ವಿರೋಧ ಕಟ್ಟಿ ಕೊಂಡಿರುವುದರಿಂದ ತಮಗೆ ಕುಟುಂಬಸ್ಥರಿಂದ ಜೀವಬೆದರಿಕೆ ಇರುವ ಆತಂಕವನ್ನು ನವದಂಪತಿ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮದುವೆಯ ಬೆನ್ನಲ್ಲೇ ತಮಗೆ ಸೂಕ್ತ ರಕ್ಷಣೆ ನೀಡುವಂತೆ ಕೋರಿ ಜೋಡಿಯು ಹಾಸನದ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರೇಮಿಗಳ ಧೈರ್ಯದ ಹೆಜ್ಜೆಗೆ ಸಾರ್ವಜನಿಕರಿಂದ ವ್ಯಾಪಕ ಬೆಂಬಲ ಹಾಗೂ ಪ್ರಶಂಸೆ ವ್ಯಕ್ತವಾಗುತ್ತಿದೆ.
ಪ್ರೀತಿಗೆ ಅಡ್ಡ ಬಂದ ಜಾತಿ – ಅಂಬೇಡ್ಕರ್ ಪ್ರತಿಮೆಯೆದುರು ಕೈಹಿಡಿದ ಜೋಡಿ!
WhatsApp Group
Join Now