ಮಗಳ ಮದುವೆಗೆ ಒಂದು ದಿನ ಇರುವಾಗ ಮಹಿಳೆಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ತನಲೂರುನಲ್ಲಿ ನಡೆದಿರುವುದು ವರದಿಯಾಗಿದೆ. ಮಲಪ್ಪುರಂ ಜಿಲ್ಲೆಯ ತನಲೂರು ನಿವಾಸಿ 44 ವರ್ಷದ ಜೈನಬಾ ಶುಕ್ರವಾರ (ಮೇ.30) ಸಂಜೆ ಸಾವನ್ನಪ್ಪಿದ್ದಾರೆ.
ನಡೆದಿದ್ದೇನು.?
ಜೈನಬಾ ಅವರ ಮನೆಯಲ್ಲಿ ಮಗಳ ಮದುವೆ ಸಂಭ್ರಮ ನಡೆಯುತ್ತಿತ್ತು. ಈ ವೇಳೆ ಸಂತಸದಿಂದ ಕೇಕ್ ಕಟ್ ಮಾಡಲಾಗಿದೆ. ರಾತ್ರಿ ಕೇಕ್ ತಿಂದು ಉಳಿದಿದ್ದ ಕಪ್ ಕೇಕ್ ಮನೆಯಲ್ಲಿ ಇಡಲಾಗಿತ್ತು. ಗುರುವಾರ (ಮೇ29) ಸಂಜೆ ಜೈನಬಾ ಅವರು ಚಹಾ ಕುಡಿಯುತ್ತಿದ್ದ ವೇಳೆ ಬಾಕಿ ಉಳಿದಿದ್ದ ಕಪ್ ಕೇಕ್ ಸೇವಿಸಿದ್ದಾರೆ.
ಕಪ್ ಕೇಕ್ ತಿನ್ನುತ್ತಿದ್ದಂತೆ, ಅದು ಜೈನಬಾ ಅವರ ಗಂಟಲಲ್ಲಿ ಸಿಲುಕಿಕೊಂಡಿದ್ದ, ಇದರಿಂದ ಅವರಿಗೆ ಉಸಿರಾಟಕ್ಕೆ ತೊಂದರೆ ಉಂಟಾಗಿದೆ. ಕೂಡಲೇ ಅವರನ್ನು ಕೊಟ್ಟಕ್ಕಲ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಆ ಬಳಿಕ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಆದರೆ ನಿರಂತರ ವೈದ್ಯಕೀಯ ಪ್ರಯತ್ನಗಳ ಹೊರತಾಗಿಯೂ, ಜೈನಾಬಾ ಶುಕ್ರವಾರ ಸಂಜೆ ಮೃತಪಟ್ಟಿದ್ದಾರೆ.
ತಾಯಿ ನಿಧನದಿಂದಾಗಿ ಶನಿವಾರ (ಮೇ.31) ನಡೆಯಬೇಕಿದ್ದ ಮದುವೆಯ ಕಾರ್ಯಕ್ರಮದ ನಿಖಾ ಶಾಸ್ತ್ರವನ್ನು ಕೆಲವೇ ಕೆಲ ಜನರ ಸಮ್ಮುಖದಲ್ಲಿ ನೆರವೇರಿಸಲಾಗಿದೆ. ಉಳಿದ ಕಾರ್ಯಕ್ರಮವನ್ನು ಮುಂದೂಡಲಾಗಿದೆ.

ಗಂಟಲಲ್ಲಿ ಕಪ್ ಕೇಕ್ ಸಿಲುಕಿ ಮಹಿಳೆ ಸಾವು ; ಮಗಳ ಮದುವೆಗೆ ಒಂದು ದಿನ ಇರುವಾಗ ನಡೆಯಿತು ದುರಂತ
WhatsApp Group
Join Now