IPL 2025 : RCB ಫೈನಲ್ಸ್ ಎಂಟ್ರಿಗೆ ಡಿಂಪಲ್ ಕ್ವೀನ್ ಸಂತಸ, ‘ಈ ಸಲ ಕಪ್ ನಮ್ದೇ’ ಎಂದ ರಚಿತಾ ರಾಮ್

Spread the love

ಐಪಿಎಲ್‌ 2025ನೇ ಆವೃತ್ತಿಯಲ್ಲಿ ಫೈನಲ್‌ಗೇರಿದ ಆರ್‌ಸಿಬಿ ಬಗ್ಗೆ ಅಭಿಮಾನಿಗಳು ಸಂತಸವನ್ನು ಹಂಚಿಕೊಳ್ಳುತ್ತಲಿದ್ದಾರೆ. ಅಷ್ಟೇ ಅಲ್ಲದೆ, ರಾಜ್ಯದಲ್ಲಿನ ರಾಜಕಾರಣಿಗಳು, ಸೆಲೆಬ್ರೆಟಿಗಳು ಕೂಡ ಈ ಸಲ ಕಪ್ ನಮ್ದೆ ಎಂದು ಹೇಳುತ್ತಿದ್ದಾರೆ. ಇದೀಗ ಡಿಂಪಲ್‌ ಕ್ವೀಟ್‌ ರಚಿತಾ ರಾಮ್‌ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಆರಂಭದಿಂದಲೂ ಬ್ಯಾಟಿಂಗ್‌, ಬೌಲಿಂಗ್‌ ಎರಡು ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಇದೀಗ ಫೈನಲ್‌ ಪ್ರವೇಶ ಮಾಡಿದೆ. ಫೈನಲ್‌ ಪಂದ್ಯ ಜೂನ್‌ 3ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಇಂದು (ಜೂನ್‌ 1) ಪಂಜಾಬ್‌ ಕಿಂಗ್ಸ್‌ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಕ್ವಾಲಿಫೈಯರ್-2 ಪಂದ್ಯ ಆಡಲಿದ್ದು, ಇದರಲ್ಲಿ ಗೆದ್ದ ಟೀಂ ಆರ್‌ಸಿಬಿ ವಿರುದ್ಧ ಫೈನಲ್‌ ಆಡಲಿದೆ.

ಈಗಾಗಲೇ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಪಡೆ ಪಂಜಾಬ್‌ ಕಿಂಗ್ಸ್‌ ಪಡೆಯನ್ನು ಹೀನಾಯವಾಗಿ ಸೋಲಿಸಿ ನೇರವಾಗಿ ಫೈನಲ್‌ ಪ್ರವೇಶಸಿದೆ. ಇನ್ನೂ ಇಂದು ಪಂಜಾಬ್‌ ಕಿಂಗ್ಸ್‌ ಕ್ವಾಲಿಫೈಯರ್-2 ಪಂದ್ಯದಲ್ಲಿ ಮುಂಬೈ ವಿರುದ್ಧ ಗೆದ್ದರೆ, ಆರ್‌ಸಿಬಿ ವಿರುದ್ಧ ಜೂನ್‌ 3ರಂದು ಫೈನಲ್ ಆಡಲಿದೆ. ಇನ್ನೂ ಈ ಬಾರಿಯ ಆರ್‌ಸಿಬಿ ತಂಡದ ಪ್ರದರ್ಶನ ಕಂಡು ಎಂಥವರೂ ನಿಬ್ಬೆರಗಾಗಿದ್ದಾರೆ.

ಯಾಕಂದ್ರೆ ಈ ಬಾರಿ ಉತ್ತಮ ತಂಡವನ್ನೇ ಆರ್‌ಸಿಬಿ ಹೊಂದಿದೆ. ಆದ್ದರಿಂದ ಬಹುತೇಕರು ಈ ಬಾರಿ ಟ್ರೋಫಿ ಗೆಲ್ಲುವುದೇ ಬೆಂಗಳೂರು ತಂಡ ಎಂದು ಭವಿಷ್ಯ ನುಡಿಯುತ್ತಲೇ ಇದ್ದಾರೆ. ಈ ನಡುವೆಯೇ ನಟಿ ರಚಿತಾ ರಾಮ್‌ ಕೂಡ ಇದೇ ಭವಿಷ್ಯವನ್ನು ನುಡಿದು ಗಮನ ಸೆಳೆದಿದ್ದಾರೆ.

ಈಗಾಗಲೇ ಬೆಂಗಳೂರು ತಂಡ ಫೈನಲ್ ಪ್ರವೇಶ ಮಾಡಿದೆ. ಟ್ರೋಫಿ ಗೆಲ್ಲಲು ಇನ್ನೋದೇ ಹೆಜ್ಜೆ ಬಾಕಿಯಿದ್ದು, ಇದರ ಬೆನ್ನಲ್ಲೇ ಸ್ಯಾಂಡಲ್‌ವುಡ್ ನಟಿ ರಚಿತಾ ರಾಮ್ ಈ ಬಾರಿ ಕಪ್ ನಮ್ಮದೇ ಎಂದು ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಇದು 18ನೇ ಆವೃತ್ತಿಯಾಗಿದ್ದು, ವಿರಾಟ್ ಕೊಹ್ಲಿ ಅವರ ಜರ್ಸಿ ನಂಬರ್ ಸಹ 18 ಆಗಿದೆ. 18ರ ಜೊತೆ ವಿಶೇಷ ನಂಟಿದೆ. ಆದ್ದರಿಂದ ಈ ಬಾರಿ ಕಪ್ ನಮ್ದೇ ಆಗುತ್ತದೆ ಎಂದು ಹೇಳಿ ಗಮನ ಸೆಳೆದಿದ್ದಾರೆ.

ಮೊದಲನೇ ಕ್ವಾಲಿಫೈಯರ್‌ನಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ಗೆದ್ದ ಆರ್‌ಸಿಬಿ ನೇರವಾಗಿ ಫೈನಲ್‌ ಪ್ರವೇಶ ಮಾಡಿತು. ಅಂದಿನ ಪಂದ್ಯದಲ್ಲಿ ಟಾಸ್‌ ಗೆದ್ದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು. ಅದರಂತೆಯೇ ಮೊದಲು ಬ್ಯಾಟಿ ಬೀಸಿದ ಪಂಜಾಬ್‌ ಕಿಂಗ್ಸ್‌ 14.1 ಓವರ್‌ಗಳಿಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು ಬರೀ 101 ರನ್‌ಗಳನ್ನು ಮಾತ್ರ ಕಲೆಹಾಕಿ 102 ರನ್‌ಗಳ ಗುರಿ ನೀಡಿತು.

ಈ ಸಾಧಾರಣ ಗುರಿ ಬೆನ್ನತ್ತಿದ್ದ ಆರ್‌ಸಿಬಿ ಕೇವಲ 10 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 106 ರನ್‌ಗಳನ್ನು ಕಲೆಹಾಕಿ ಭರ್ಜರಿಯಾಗಿ ಗೆದ್ದು ಬೀಗುವ ಮೂಲಕ ನೇರವಾಗಿ ಫೈನಲ್‌ಗೆ ಲಗ್ಗೆ ಇಟ್ಟಿತು. ಅಂದಿನ ಗೆಲುವಿಗೆ ಬೌಲರ್‌ಗಳ ಮಾರಕ ದಾಳಿ ಹಾಗೂ ಫಿಲ್‌ ಸಾಲ್ಟ್ ಅವರ ಬ್ಯಾಟ್‌ನಿಂದ ಮೂಡಿಬಂದ ಬೃಹತ್‌ ರನ್‌ಗಳೇ ಪ್ರಮುಖ ಕಾರಣ ಅಂದ್ರೆ ತಪ್ಪಾಗಲಾರದು. ಆರಂಭಿಕರಾಗಿ ಕಣಕ್ಕಿಳಿದ ಅವರು ಕೊನೆವರೆಗೂ ಕ್ರೀಸ್‌ನಲ್ಲಿ ನಿಂತು ಪಂಜಾಬ್‌ ಕಿಂಗ್ಸ್‌ ಬೌಲರ್‌ಗಳ ಬೆವರಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

WhatsApp Group Join Now

Spread the love

Leave a Reply