ಅವನನ್ನ ಕೊಂದು ಬಿಡು, ಇಬ್ಬರು ಚೆನ್ನಾಗಿರೋಣ; ಗಂಡನ ಉಸಿರು ನಿಲ್ಲಿಸಿ ಜೈಲು ಸೇರಿದ ಪತ್ನಿ

Spread the love

ಮೈಸೂರಿನ ಸರಗೂರು ತಾಲೂಕಿನಲ್ಲಿ ನಡೆದ ಜವರಪ್ಪ ಕೊಲೆ ಪ್ರಕರಣವನ್ನು ಪೊಲೀಸರು 24 ಗಂಟೆಯೊಳಗೆ ಭೇದಿಸಿದ್ದಾರೆ. ಪತ್ನಿ ಅಮೃತಾ ತನ್ನ ಪ್ರಿಯಕರ ಸಿದ್ದೇಶ್ ಜೊತೆ ಸೇರಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಹತ್ಯೆಗೈದಿದ್ದು, ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ.

ಪ್ರಿಯಕರನೊಂದಿಗೆ ಸೇರಿಕೊಂಡು ಗಂಡನನ್ನು ಕೊ*ಲೆಗೈದ ಪ್ರಕರಣದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಪ್ರಕರಣ ದಾಖಲಾದ 24 ಗಂಟೆಯೊಳಗೆ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಕುರ್ಣೇಗಾಲ ಗ್ರಾಮದಲ್ಲಿ ಈ ಕೊ*ಲೆ ನಡೆದಿತ್ತು.

ಕುರ್ಣೇಗಾಲದ ನಿವಾಸಿ ಜವರಪ್ಪ ಕೊಲೆಯಾಗಿದ ದುರ್ದೈವಿ. ಮೈಸೂರು ತಾಲೂಕಿನ ಮಾವಿನಹಳ್ಳಿ ಗ್ರಾಮದ ಸಿದ್ದೇಶ್ (32), ಜವರಪ್ಪನ ಪತ್ನಿ ಅಮೃತಾ(26) ಬಂಧಿತ ಆರೋಪಿಗಳು. ಕುರ್ಣೇಗಾಲ ಗ್ರಾಮದ ಹೊರವಲಯದಲ್ಲಿ ಅನುಮಾನಾಸ್ಪದವವಾಗಿ ಜವರಪ್ಪ ಶವ ಪತ್ತೆಯಾಗಿತ್ತು.

ಈ ಸಂಬಂಧ ಅನುಮಾನ ವ್ಯಕ್ತಪಡಿಸಿ ಜವರಪ್ಪ ಅವರ ಸೋದರ ರವಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ತನಿಖೆ ನಡೆಸುವಂತೆ ಆಗ್ರಹಿಸಿದ್ದರು.

ಮೈಸೂರು ತಾಲೂಕಿನ ಮಾವಿನಹಳ್ಳಿ ಗ್ರಾಮದ ಸಿದ್ದೇಶ್ ಎಂಬಾತನೊಂದಿಗೆ ಅಮೃತಾ ಅಕ್ರಮ ಸಂಬಂಧ ಹೊಂದಿದ್ದಳು. ಇಬ್ಬರು ಮಕ್ಕಳಿದ್ರೂ ಸಿದ್ದೇಶ್ ಜೊತೆ ಅಮೃತಾ ವಿವಾಹೇತರ ಸಂಬಂಧದಲ್ಲಿದ್ದಳು. ಆದ್ರೆ ಇವರಿಬ್ಬರ ಸಂಬಂಧಕ್ಕೆ ಗಂಡ ಜವರಪ್ಪ ಅಡ್ಡಿಯಾಗಿದ್ದನು. ಇತ್ತೀಚೆಗೆ ಅಮೃತಾ ಮತ್ತು ಜವರಪ್ಪ ನಡುವೆ ಸಣ್ಣಪುಟ್ಟ ವಿಚಾರಕ್ಕೂ ಗಲಾಟೆ ನಡೆಯುತ್ತಿತ್ತು.

12 ದಿನಗಳ ಹಿಂದೆ ಹಬ್ಬಕ್ಕಾಗಿ ಮಕ್ಕಳೊಂದಿಗೆ ಅಮೃತಾ ತವರು ಸೇರಿದ್ದಳು. ಏಪ್ರಿಲ್ 16ರಂದು ಪತ್ನಿಯ ಊರಿಗೆ ಹೋಗುತ್ತಿರುವ ವಿಷಯವನ್ನು ಸೋದರ ರವಿ ಮುಂದೆ ಜವರಪ್ಪ ಹೇಳಿಕೊಂಡಿದ್ದರು. ಪತ್ನಿ ಊರಿಗೆ ಹೋಗಿದ್ದ ಜವರಪ್ಪ ಅಂದು ಗ್ರಾಮಕ್ಕೆ ಹಿಂದಿರುಗಿ ಬಂದಿರಲಿಲ್ಲ. ಮರುದಿನ ಬೆಳಗ್ಗೆ ಸುಮಾರು 6.30ರ ವೇಳೆಗೆ ಜವರಪ್ಪ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿತ್ತು.

ಯಾರೋ ಕೊ*ಲೆ ಮಾಡಿದ್ದಾರೆಂದು ಎಂದು ಅನುಮಾನಿಸಿ ರವಿ ದೂರು ದಾಖಲು ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡ ಸರಗೂರು ಠಾಣೆಯ ಪೊಲೀಸರು ತನಿಖೆಗೆ ಮೂರು ತಂಡಗಳನ್ನು ರಚನೆ ಮಾಡಿದ್ದರು. ಈ ವೇಳೆ ಜವರಪ್ಪ ಕೊ*ಲೆಗೆ ಪತ್ನಿಯ ಅಕ್ರಮ ಸಂಬಂಧವೇ ಕಾರಣ ಎಂದು ಗೊತ್ತಾಗಿದ್ದು, ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಅಮೃತಾಳ ಕುಮ್ಮಕ್ಕಿನಿಂದಲೇ ಸಿದ್ದೇಶ್ ಕೊಲೆ ಮಾಡಿರೋದು ತನಿಖೆಯಲ್ಲಿ ತಿಳಿದು ಬಂದಿದೆ.

WhatsApp Group Join Now

Spread the love

Leave a Reply