RCB ಗೆಲುವಿನ ಕ್ರೆಡಿಟ್ ಅನ್ನು ರಜತ್ ಕೊಟ್ಟಿದ್ದು ಯಾರಿಗೆ.? ಪಂದ್ಯದಲ್ಲಿ ಕೊನೆವರೆಗೆ ಪಂಜಾಬ್ ಅನ್ನು ಮೇಲೇಳಲು ಬಿಡಲೇ ಇಲ್ಲ ಈತ

Spread the love

ಕ್ವಾಲಿಫೈಯರ್- 1ರ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸುಲಭ ಜಯ ಪಡೆದಿದೆ. ಮೊದಲ ಇನ್ನಿಂಗ್ಸ್ನಿಂದಲೂ ಎದುರಾಳಿ ಮೇಲೆ ಹಿಡಿತ ಸಾಧಿಸಿದ ಆರ್ಸಿಬಿ ತಂಡ, ಪಂಜಾಬ್ ಅನ್ನು ಯಾವ ಹಂತದಲ್ಲೂ ಮೇಲೆ ಏಳಲು ಬಿಡಲೇ ಇಲ್ಲ. ಸದ್ಯ ತಂಡದಲ್ಲಿ ಯಾರು ಚೆನ್ನಾಗಿ ಆಡಿದ್ದಾರೆ ಎನ್ನುವ ಕುರಿತು ಕ್ಯಾಪ್ಟನ್ ರಜತ್ ಪಾಟಿದಾರ್ ಮಾತನಾಡಿದ್ದಾರೆ.

ಪಂಜಾಬ್ ಕಿಂಗ್ಸ್ ವಿರುದ್ಧ ಗೆಲುವು ಪಡೆದ ಬಳಿಕ ಮಾತನಾಡಿದ ಬೆಂಗಳೂರು ತಂಡದ ಕ್ಯಾಪ್ಟನ್ ರಜತ್ ಪಾಟಿದಾರ್ ಅವರು, ಪಂದ್ಯದಲ್ಲಿ ಹೇಗೆ ಬೌಲಿಂಗ್ ಮಾಡಬೇಕೆಂದು ನಾವು ಸ್ಪಷ್ಟವಾಗಿ ಯೋಜನೆ ಹಾಕಿಕೊಂಡಿದ್ದೇವು. ಆರ್ಸಿಬಿಯ ವೇಗದ ಬೌಲರ್‌ಗಳು ಚೆನ್ನಾಗಿ ಆಡಿದರು. ಆದರೆ ಇವರಿಗಿಂತ ಸುಯಶ್ ಶರ್ಮಾ ಸ್ಪಿನ್ ಎಲ್ಲರನ್ನೂ ಬೆರಗುಗೊಳಿಸಿತು. ಸುಯಶ್ ಶರ್ಮಾ ಬೌಲಿಂಗ್ ಮಾಡಿದ ರೀತಿ ಹಾಗೂ ಅವರು ಬೌಲಿಂಗ್ ಲೈನ್ಸ್ ಅಂಡ್ ಲೆಂತ್‌ಗಳನ್ನು ಎಲ್ಲ ರೀತಿ ನಿಜಕ್ಕೂ ಚೆನ್ನಾಗಿತ್ತು ಎಂದು ಹೇಳಿದರು.

ನಾನು ನಾಯಕನಾಗಿ ಸುಯಶ್ ಸ್ಪಿನ್ ಬೌಲಿಂಗ್ ಅನ್ನು ಚೆನ್ನಾಗಿ ಬಲ್ಲೇ. ಸ್ಟಂಪ್ಗಳನ್ನು ಟಾರ್ಗೆಟ್ ಮಾಡೋದೇ ಸುಯಶ್ ಸ್ಟ್ರೆಂಥ್ ಆಗಿದೆ. ಅವರ ಬೌಲಿಂಗ್ ಅನ್ನು ಜಡ್ಜ್ ಮಾಡೋದು ತುಂಬಾ ಕಷ್ಟ. ಯಾವುದೇ ಕನ್ಫ್ಯೂಸ್ ಮಾಡದೇ ಸುಯಶ್ಗೆ ಕ್ಲೀಯರ್ ಐಡಿಯಾ ಕೊಟ್ಟಿದ್ದೆ. ಸಾಕಷ್ಟು ಅಭ್ಯಾಸ ಮಾಡಿದ್ದರಿಂದ ಈ ಯಶಸ್ಸು ಸಿಕ್ಕಿದೆ. ಗೆಲುವಿನ ಕ್ರೆಡಿಟ್ ಏನಿದ್ದರೂ ಸುಯಶ್ ಶರ್ಮಾದ್ದೇ ಎಂದರು.

ಫಿಲ್ ಸಾಲ್ಟ್ ಬ್ಯಾಟಿಂಗ್ ಅಂದರೆ ನನಗೆ ತುಂಬಾ ಇಷ್ಟ. ಡಗೌಟ್ ಅಲ್ಲಿ ಕುಳಿತು ಸಾಲ್ಟ್ ಬ್ಯಾಟಿಂಗ್ ನೋಡುತ್ತಿರುತ್ತೇನೆ. ಅವರ ಬಿಗ್ ಫ್ಯಾನ್ ನಾನು. ಇದರ ಜೊತೆಗೆ ಎಲ್ಲ ಆರ್ಸಿಬಿ ಅಭಿಮಾನಿಗಳಿಗೆ ತುಂಬಾ ಧನ್ಯವಾದಗಳನ್ನು ಹೇಳುತ್ತೇನೆ. ಎಂ ಚಿನ್ನಸ್ವಾಮಿ ಸ್ಟೇಡಿಯಂ ಅಷ್ಟೇ ಅಲ್ಲ, ನಾವು ಎಲ್ಲೇ ಆಡಲು ಹೋದರೂ ಅದನ್ನು ಹೋಮ್ ಗ್ರೌಂಡ್ ಎಂದು ಭಾವಿಸುತ್ತೇವೆ. We love you, ಯಾವಾಗಲೂ ನಿಮ್ಮ ಸಪೋರ್ಟ್ ಹೀಗೆ ಇರಲಿ. ಇನ್ನೊಂದು ಪಂದ್ಯ ಗೆದ್ದರೇ ಎಲ್ಲರೂ ಒಟ್ಟಿಗೆ ಸೆಲೆಬ್ರೆಷನ್ ಮಾಡೋಣ ಎಂದು ಫ್ಯಾನ್ಸ್ಗೆ ರಜತ್ ಪಾಟಿದಾರ್ ಅವರು ಹೇಳಿದರು.

WhatsApp Group Join Now

Spread the love

Leave a Reply