ಮಾನವೀಯತೆಯನ್ನೇ ಮುಜುಗರಕ್ಕೀಡುಮಾಡುವ ಘಟನೆಗಳು ನಡೆದಾಗ, ತಾಯ್ತನದ ಮಮತೆಗಿಂತ ನ್ಯಾಯವೇ ದೊಡ್ಡದು ಎಂಬುದನ್ನು ಪಶ್ಚಿಮ ಬಂಗಾಳದ ತಾಯಿಯೊಬ್ಬರು ಸಾಬೀತುಪಡಿಸಿದ್ದಾರೆ.
ಪಶ್ಚಿಮ ಬಂಗಾಳದ ಬರುಯಿಪುರದಲ್ಲಿ ನಡೆದ 12 ವರ್ಷದ ಬಾಲಕಿಯ ಮೇಲಿನ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿ ಪ್ರಭಾಷ್ ಎನ್ಕೌಂಟರ್ನಲ್ಲಿ ಹತನಾಗಿದ್ದಾನೆ. ಆದರೆ, ಈ ಸುದ್ದಿ ತಿಳಿಯುತ್ತಿದ್ದಂತೆ ಆತನ ಹೆತ್ತ ತಾಯಿ ಆಡಿದ ಮಾತುಗಳು ಈಗ ಇಡೀ ದೇಶದ ಗಮನ ಸೆಳೆದಿದೆ.
ತಾಯಿ ಹೇಳಿದ್ದೇನು.?
“ಅವನು ಮಾಡಿದ್ದು ಮಹಾ ಅಪರಾಧ, ಅದಕ್ಕೆ ತಕ್ಕ ಶಿಕ್ಷೆಯೇ ಅವನಿಗೆ ಸಿಕ್ಕಿದೆ. ಆತನ ಶವವನ್ನು ನಾನು ಸ್ವೀಕರಿಸುವುದಿಲ್ಲ, ನಮ್ಮ ಮನೆಗೆ ಆತನ ಹೆಣವನ್ನು ತರುವುದೂ ಇಲ್ಲ. ಅವನು ಯಾವುದೇ ಒಳ್ಳೆಯ ಕೆಲಸ ಮಾಡಿಲ್ಲ. ತಪ್ಪು ಮಾಡಿದ್ದಾನೆ, ಶಿಕ್ಷೆ ಅನುಭವಿಸಿದ್ದಾನೆ. ಪೊಲೀಸರು ಆತನ ಶವವನ್ನು ಏನು ಬೇಕಾದರೂ ಮಾಡಿಕೊಳ್ಳಲಿ, ನನ್ನದೇನೂ ಆಕ್ಷೇಪವಿಲ್ಲ” ಎಂದು ತಾಯಿ ಮಾಧ್ಯಮಗಳ ಮುಂದೆ ಕಣ್ಣೀರು ಹಾಕುತ್ತಲೇ ಆಕ್ರೋಶ ಹೊರಹಾಕಿದ್ದಾರೆ.
ಎನ್ಕೌಂಟರ್ ನಡೆದದ್ದು ಹೇಗೆ.?
ತನಿಖೆಯ ಭಾಗವಾಗಿ ಪೊಲೀಸರು ಆರೋಪಿ ಪ್ರಭಾಶ್ ಮೊಂಡಲ್ನನ್ನು ಅಪರಾಧ ನಡೆದ ಸ್ಥಳದ ಮರುಸೃಷ್ಟಿಗೆ (Crime Scene Reconstruction) ಕರೆದೊಯ್ದಿದ್ದರು. ಈ ವೇಳೆ ಆರೋಪಿ ಪೊಲೀಸರ ಬಂದೂಕನ್ನು ಕಸಿದುಕೊಂಡು ತಲೆತಪ್ಪಿಸಿಕೊಳ್ಳಲು ಯತ್ನಿಸಿ, ಪೊಲೀಸರ ಮೇಲೆಯೇ ಗುಂಡು ಹಾರಿಸಿದ್ದಾನೆ. ಪೊಲೀಸರು ಆತ್ಮರಕ್ಷಣೆಗಾಗಿ ನಡೆಸಿದ ಮರುಸೇಡಿನ ಗುಂಡಿನ ದಾಳಿಯಲ್ಲಿ ಪ್ರಭಾಶ್ ಮೊಂಡಲ್ ಹತನಾಗಿದ್ದಾನೆ.
ಏನಿದು ಘಟನೆ.?
ಕಳೆದ ಜುಲೈ 4 ರಂದು ನಾಪತ್ತೆಯಾಗಿದ್ದ 12 ವರ್ಷದ ಹೆಣ್ಣು ಮಗುವಿನ ಮೃತದೇಹವು ಮಾರನೇ ದಿನ ಚೀಲದಲ್ಲಿ ತುಂಬಿದ ಸ್ಥಿತಿಯಲ್ಲಿ ಕೆರೆಯೊಂದರಲ್ಲಿ ಪತ್ತೆಯಾಗಿತ್ತು. ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಅತ್ಯಂತ ಕ್ರೂರವಾಗಿ ಕೊಲೆ ಮಾಡಲಾಗಿತ್ತು. ಈ ಘಟನೆ ಇಡೀ ರಾಜ್ಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಮಗಳ ಕಳೆದುಕೊಂಡ ಕುಟುಂಬದ ಆಕ್ರೋಶ ಒಂದೆಡೆಯಾದರೆ, ಹೆತ್ತ ಮಗನೇ ಇಂತಹ ನೀಚ ಕೃತ್ಯ ಎಸಗಿದ್ದಕ್ಕೆ ಆತನ ಹೆಣವನ್ನೂ ಮುಟ್ಟಲ್ಲ ಎಂದು ನಿರಾಕರಿಸಿದ ಈ ತಾಯಿಯ ನಿರ್ಧಾರ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ತಪ್ಪು ಮಾಡಿದವನು ಹೆತ್ತ ಮಗನೇ ಆದರೂ ಆತನ ಪರ ನಿಲ್ಲದ ಈ ತಾಯಿಯ ನ್ಯಾಯಪ್ರಜ್ಞೆಗೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
‘ಅವನಿಗೆ ತಕ್ಕ ಶಾಸ್ತಿಯಾಗಿದೆ, ಮಗನಾದರೂ ಅವನ ಹೆಣವೂ ಬೇಡ! – ಅತ್ಯಾಚಾರ, ಕೊಲೆ ಆರೋಪಿಯ ಶವ ಪಡೆಯಲು ನಿರಾಕರಿಸಿದ ಹೆತ್ತ ತಾಯಿ!
WhatsApp Group
Join Now