ನಿನ್ನೆ ಏಕನ ಕ್ರೀಡಾಂಗಣದಲ್ಲಿ ನಡೆದ 18ನೇ ಐಪಿಎಲ್‌ನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 6 ವಿಕೆಟ್‌ಗಳ ಗೆಲುವನ್ನು ದಾಖಲಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿ ಕ್ವಾಲಿಫಯರ್ 1ಗೆ ಕಾಲಿಟ್ಟಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ರಿಷಭ್ ಪಂತ್ ಶತಕ ಹಾಗೂ ಮಾರ್ಷ್ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 227 ರನ್ ಕಲೆಹಾಕಿ ಆರ್‌ಸಿಬಿಗೆ 228 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 18.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 230 ರನ್ ಬಾರಿಸಿತು.
ಇನ್ನು ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವು ಕಂಡರೆ ಆಟಗಾರನಾಗಿ ರಿಷಭ್ ಪಂತ್ ಅಬ್ಬರದ ಶತಕ ಬಾರಿಸಿ ಉತ್ತಮ ಕಮ್‌ಬ್ಯಾಕ್ ಮಾಡಿದರು. ಪಂತ್ 61 ಎಸೆತಗಳಲ್ಲಿ 11 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ ಅಜೇಯ 118 ರನ್ ಬಾರಿಸಿದರು.
ಹೀಗೆ ಪಂತ್ ಅಬ್ಬರದ ಶತಕ ಬಾರಿಸುತ್ತಿದ್ದಂತೆ ಅತ್ತ ʼಸ್ಪೈಡಿ 100ʼ ಎಂದು ಬರೆದುಕೊಂಡು ಶತಕವನ್ನು ಸಂಭ್ರಮಿಸಿತ್ತು. ತಮ್ಮದಲ್ಲದ ಪಂದ್ಯದ ಶತಕಗಳ ಕುರಿತು ಪೋಸ್ಟ್ ಹಂಚಿಕೊಳ್ಳದ ಚೆನ್ನೈ ಸೂಪರ್ ಕಿಂಗ್ಸ್ ಪಂತ್ ಬಗ್ಗೆ ಹೊಗಳಿ ಆರ್‌ಸಿಬಿ ಕಾಲೆಳೆದಿತ್ತು. ಹೀಗೆ ಲಕ್ನೋ ಇನ್ನಿಂಗ್ಸ್ ಸಮಯದಲ್ಲಿ ಪೋಸ್ಟ್ ಮಾಡಿ ಸಂಭ್ರಮಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ಬಳಿಕ ಸೈಲೆಂಟ್ ಆಗಿದೆ.
ಈ ಟ್ವೀಟ್‌ಗೆ ಕಾಮೆಂಟ್ ಮಾಡಿರುವ ನೆಟ್ಟಿಗರು ನಿಮ್ಮ ತಂಡಕ್ಕೆ ಸಂಬಂಧಪಟ್ಟಿಲ್ಲದ ಪೋಸ್ಟ್ ಹಂಚಿಕೊಂಡು ಆರ್‌ಸಿಬಿಯನ್ನು ಕಾಲೆಳೆಯುವಂತಹ ದ್ವೇಷ ಯಾಕೆ ಎಂದು ಕಿಡಿಕಾರಿದ್ದಾರೆ.