ಬ್ಯಾಂಕ್ ಖಾತೆಯಲ್ಲಿ ಐದು ಲಕ್ಷಕ್ಕಿಂತ ಹೆಚ್ಚಿನ ಹಣ ಇಟ್ಟವರಿಗೆ ಇದೀಗ ಆರ್ ಬಿಐ ಹೊಸ ಸೂಚನೆಯನ್ನು ನೀಡಿದೆ. ಇತ್ತೀಚಿನ ಪಂಜಾಬ್, ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಹಗರಣ ಹಾಗೂ 2020 ರಲ್ಲಿ ಯೆಸ್ ಬ್ಯಾಂಕ್ ದಿವಾಳಿಯಿಂದ ಸಾವಿರಾರು ಠೇವಣಿದಾರರು ತಾವಿಟ್ಟ ಹಣವನ್ನ ತೆಗೆದುಕೊಳ್ಳಲಾಗದೆ ಕಂಗಾಲಾಗಿದ್ದರು. ಇದೀಗ ಖಾತೆದಾರರ ಸುರಕ್ಷಿತ ದೃಷ್ಟಿಯಿಂದ ಈ ನಿಯಮವನ್ನ ಜಾರಿ ಮಾಡಿದೆ.
ಒಂದು ವೇಳೆ ಬ್ಯಾಂಕುಗಳು ದಿವಾಳಿ ಆದರೆ ಅಥವಾ ನಷ್ಟ ಉಂಟಾದ್ರೆ ಕೇಂದ್ರದಿಂದ ಸಾರ್ವಜನಿಕರಿಗೆ ಎಷ್ಟು ಬ್ಯಾಂಕ್ ಠೇವಣಿ ಹಣ ವಾಪಸ್ ಬರುತ್ತದೆ ಎಂಬ ಗೊಂದಲ ಹಲವರಲ್ಲಿ ಇದೆ. ಕೇಂದ್ರ ಹಣಕಾಸು ಇಲಾಖೆ ಹಾಗೂ ಆರ್ ಬಿಐ ನಿಯಮಗಳ ಪ್ರಕಾರ ಬ್ಯಾಂಕ್ನಲ್ಲಿರುವ ಸಾರ್ವಜನಿಕರ ಹಣಕ್ಕೆ ಒಂದಿಷ್ಟು ಭದ್ರತೆಯನ್ನ ಕೂಡ ನೀಡಲಾಗುತ್ತದೆ. ಒಂದು ವೇಳೆ ಬ್ಯಾಂಕ್ ದಿವಾಳಿ ಆದರೆ ನಿಮ್ಮ ಖಾತೆಯಲ್ಲಿ ಎಷ್ಟೇ ಹಣವಿದ್ರೂ ಕೂಡ ನಿಮಗೆ ಗರಿಷ್ಠ 5 ಲಕ್ಷದವರೆಗೆ ಮಾತ್ರ ವಿಮೆ ರಕ್ಷಣೆಯನ್ನ ದೊರೆಯುತ್ತದೆ. ಈ ಮೊತ್ತವು ಪ್ರಧಾನ ಮೊತ್ತ ಮತ್ತೆ ಅದರ ಮೇಲಿನ ಬಡ್ಡಿ ಎರಡನ್ನ ಕೂಡ ಒಳಗೊಂಡಿರುತ್ತದೆ.
ಒಂದೇ ವ್ಯಕ್ತಿಯ ಎಲ್ಲಾ ಖಾತೆಗಳಿಗೆ ಒಂದೇ ರಕ್ಷಣೆ ಆಗಿರುತ್ತದೆ. ಅಂದರೆ ನಿಮ್ಮ ಹೆಸರಿನಲ್ಲಿ ಒಂದೇ ಬ್ಯಾಂಕಿನ ವಿವಿಧ ಶಾಖೆಗಳಲ್ಲಿ ಬೇರೆ ಬೇರೆ ಖಾತೆಗಳಿದ್ದರೂ, ಉದಾಹರಣೆಗೆ ಉಳಿತಾಯ ಖಾತೆ, ಸ್ಥಿರ ಠೇವಣಿ ಖಾತೆ, ಚಾಲ್ತಿ ಖಾತೆ ಅವೆಲ್ಲವನ್ನ ಸೇರಿಸಿ ಒಂದೇ ವ್ಯಕ್ತಿಯ ಖಾತೆ ಅಂತ ಹೇಳಿ ಪರಿಗಣಿಸಿ ಒಟ್ಟು 5 ಲಕ್ಷ ಮಾತ್ರ ವಿಮಾ ರಕ್ಷಣೆಯನ್ನ ನಿಮಗೆ ನೀಡಲಾಗುತ್ತದೆ. ಆದರೆ ಬೇರೆ ಬೇರೆ ಬ್ಯಾಂಕ್ ಗಳಿಗೆ ಪ್ರತ್ಯೇಕ ರಕ್ಷಣೆ ಇರ್ತದೆ. ನಿಮ್ಮ ಹಣವನ್ನ ಬೇರೆ ಬೇರೆ ಬ್ಯಾಂಕ್ ಗಳಲ್ಲಿ ನೀವು ಇಟ್ಟಿದ್ರೆ ಉದಾಹರಣೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್ ಸೇರಿದಂತೆ ಪ್ರತಿ ಬ್ಯಾಂಕಿನಲ್ಲಿರುವ ನಿಮ್ಮ ಠೇವಣಿಗೆ ಪ್ರತ್ಯೇಕವಾಗಿ ಐದು ಲಕ್ಷದ ವಿಮ ರಕ್ಷಣೆ ಲಭ್ಯವಿರುತ್ತೆ.
ಯಾವ ಸಂಸ್ಥೆ ನಿಮಗೆ ವಿಮೆಯನ್ನ ನೀಡಲಿದೆ.?
DICGC ಪ್ರಸ್ತುತ ಬಹುತೇಕ ಎಲ್ಲಾ ವಾಣಿಜ್ಯ ಬ್ಯಾಂಕುಗಳು ಮತ್ತೆ ಸಣ್ಣ ಹಣಕಾಸು ಬ್ಯಾಂಕುಗಳು, ಇನ್ನು ಪಾವತಿ ಬ್ಯಾಂಕುಗಳು, ಎಲ್ಲಾ ಸಹಕಾರಿ ಬ್ಯಾಂಕುಗಳನ್ನ ಒಳಗೊಂಡಿದೆ. ಬ್ಯಾಂಕುಗಳು ಗ್ರಾಹಕರ ಪರವಾಗಿ ಡಿಐಸಿಜಿಸಿ ಗೆ ಪ್ರೀಮಿಯಂ ಅನ್ನ ಪಾವತಿ ಮಾಡುತ್ತವೆ. ಈ ಕಾರಣಕ್ಕೆ ಬ್ಯಾಂಕ್ ವೈಫಲ್ಯವಾದಾಗ ಠೇವಣಿದಾರರಿಗೆ ನೇರವಾಗಿ ಡಿಐಸಿಜಿಸಿ ವಿಮಾ ಪಾವತಿಯನ್ನ ಮಾಡುತ್ತದೆ. ಈಗ ಇತ್ತೀಚಿಗೆ ಹಲವಷ್ಟು ಬ್ಯಾಂಕುಗಳು ಕೂಡ ನಷ್ಟ ಹೊಂದುತ್ತದೆ.
ಬ್ಯಾಂಕ್ ನಷ್ಟಕ್ಕೆ ಕಾರಣಗಳೇನು.?
ಬ್ಯಾಂಕುಗಳು ದಿವಾಳಿಯಾಗಲು ಅಥವಾ ನಷ್ಟಕ್ಕೆ ಒಳಗಾಗಲು ಹಲವಾರು ಪ್ರಮುಖ ಕಾರಣಗಳಿವೆ. ದುರುಪಯೋಗ, ವಂಚನೆ, ಪಂಜಾಬ್ ಹಾಗು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಹಗರಣದಲ್ಲಿ ನೋಡಿದಂತೆ ಆಂತರಿಕ ವಂಚನೆ ಮತ್ತೆ ದುರುಪಯೋಗ ಕೂಡ ಬ್ಯಾಂಕುಗಳ ತೀವ್ರ ನಷ್ಟಕ್ಕೆ ದೂಡಬಹುದು. ಅದೇ ರೀತಿ ದೊಡ್ಡ ಸಾಲಗಾರರಿದ್ದಾಗ ಪಡೆದ ಸಾಲಗಳನ್ನ ಮರುಪಾವತಿ ಮಾಡದೇ ಇದ್ದಾಗ ಅಥವಾ ಅವರು ದೇಶ ಬಿಟ್ಟು ಹೋದಾಗ ಅಥವಾ ಸಾಲಮನ್ನಾ ಮಾಡುವುದು ಇತ್ಯಾದಿ ಪರಿಸ್ಥಿತಿ ಬ್ಯಾಂಕಗಳಿಗೆ ಒದಗಬಹುದು. ಹೀಗಾಗಿ ಕೂಡ ಕೆಲವೊಂದು ಸಲ ಬ್ಯಾಂಕ್ ನಷ್ಟಕ್ಕೆ ಕಾರಣವಾಗ್ತದೆ.
ಅದೇ ರೀತಿ ಬ್ಯಾಂಕುಗಳು ನಷ್ಟವಾದಾಗ ಪ್ರಮುಖ ನಿರ್ಧಾರವನ್ನ ಆರ್ಬಿಐ ಹೇಗೆ ಕೈಗೊಳ್ಳುತ್ತೆ ಅಂತ ಹೇಳಿದ್ರೆ ಬ್ಯಾಂಕುಗಳೊಂದಿಗೆ ವಿಲೀನ ಮಾಡುತ್ತದೆ. ಇದು ಠೇವಣಿದಾರರ ಹಣದ ಸುರಕ್ಷತೆಯನ್ನ ಖಚಿತಪಡಿಸುತ್ತದೆ. ಉದಾಹರಣೆಗೆ ಗ್ಲೋಬಲ್ ಟ್ರಸ್ಟ್ ಬ್ಯಾಂಕ್ ನ್ನು ಇತ್ತೀಚಿಗೆ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಜೊತೆ ಹಾಗು ವಿಜಯ ಬ್ಯಾಂಕ್ ನ್ನು ಬ್ಯಾಂಕ್ ಆಫ್ ಬರೋಡ ಜೊತೆ ವಿಲೀನಗೊಳಿಸಲಾಯಿತು. ಹೀಗೆ ಖಾತದಾರರ ಸುರಕ್ಷಿತ ದೃಷ್ಟಿಯಿಂದ ಹೀಗೆ ಕೂಡ ಮಾಡಲಾಗ್ತದೆ.