Post office Scheme : ನಮಸ್ಕಾರ ಸ್ನೇಹಿತರೇ, ಗಳಿಸಿರುವ ಹಣಕ್ಕೆ ತಕ್ಕನಾದ ಬಡ್ಡಿದರದ ಜೊತೆಗೆ ಪ್ರತಿ ತಿಂಗಳೂ ಹಣವನ್ನು ಪಡೆದುಕೊಳ್ಳಲು ಯಾವ ಸ್ಕೀಮ್, ಯಾವ ಬ್ಯಾಂಕ್ ಬೆಸ್ಟ್ ಎನ್ನುವ ಯೋಚನೆಯಲ್ಲಿದ್ದೀರಾ? ಅತಿ ಹೆಚ್ಚು ಬಡ್ಡಿ ಪಡೆಯುವ ಜೊತೆಗೆ, ಅದೇ ರೀತಿಯ ವಿಶ್ವಾಸಾರ್ಹವಾಗಿರುವ ಜಾಗವನ್ನು ಹುಡುಕುತ್ತಿದ್ದೀರಾ?
ಹಾಗಿದ್ದರೆ ಬ್ಯಾಂಕ್‌ಗಳಿಗಿಂತಲೂ ಅತಿ ಹೆಚ್ಚು ಬಡ್ಡಿ ಸಿಗುವುದು ಎಂದು ಅದು ಅಂಚೆ ಕಚೇರಿ (Post office) ಮಾತ್ರ. ಕೆಲವು ಸಹಕಾರಿ ಸಂಸ್ಥೆಗಳು ಬಡ್ಡಿಯನ್ನು ಹೆಚ್ಚಿಗೆ ನೀಡಿದರೂ ಅದರಲ್ಲಿ ಹೂಡಿಕೆ ಮಾಡುವುದು ಅಷ್ಟೇ ತೊಂದರೆ ಇದೆ. ಮೋಸ, ವಂಚನೆಗಳ ಹೆಚ್ಚಾಗುತ್ತವೆ. ಯಾವಾಗ ಈ ಸಂಸ್ಥೆಗಳು ಜಾಗ ಖಾಲಿ ಮಾಡಿಕೊಂಡು ಹೋಗುತ್ತದೆ ಎನ್ನುವುದನ್ನು ಹೇಳುವುದೇ ಕಷ್ಟ. ಆದ್ದರಿಂದ ನಿಮ್ಮ ಹಣ ಸಂಪೂರ್ಣ ಸುರಕ್ಷಿತವಾಗಿ ಇರಬೇಕು ಜೊತೆಗೆ ಹೆಚ್ಚಿಗೆ ಬಡ್ಡಿ ಸಿಗಬೇಕು ಎಂದರೆ, ಅಂಚೆ ಕಚೇರಿಗಿಂತಲೂ ಮತ್ತೊಂದು ಜಾಗವಿಲ್ಲ. ಅಷ್ಟಕ್ಕೂ ಕೆಲ ವರ್ಷಗಳಿಂದ ಅಂಚೆ ಕಚೇರಿ ಬ್ಯಾಂಕ್ ಆಗಿ ಕಾರ್ಯನಿರ್ವಹಿಸುತ್ತಿದೆ. ಜನಸಾಮಾನ್ಯರು ತಮ್ಮದೇ ಸ್ಥಳಗಳಲ್ಲಿ ಅಂಚೆ ಸೌಲಭ್ಯ ಪಡೆಯಬಹುದಾಗಿದ್ದರಿಂದ ಇದು ಕೂಡ ಜನರಿಗೆ ಹೆಚ್ಚು ಇಷ್ಟವಾಗುತ್ತಿದೆ.
ಕೇಂದ್ರ ಸರ್ಕಾರ, ಇದಾಗಲೇ ಪೋಸ್ಟ್ ಆಫೀಸ್ನಲ್ಲಿ ಹಲವಾರು ಸ್ಕೀಮ್ಗಳನ್ನು ಜಾರಿಗೆ ತಂದಿದೆ. ನಿಮಗೆ ಅಗತ್ಯವಾಗಿರುವ ಯೋಜನೆ ಕುರಿತು ಅಂಚೆ ಕಚೇರಿಗೆ ಭೇಟಿ ಕೊಟ್ಟು ಮಾಹಿತಿ ಪಡೆದುಕೊಳ್ಳಬಹುದು. ಮಕ್ಕಳಿಗೆ, ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ… ಹೀಗೆ ವಿವಿಧ ಉಳಿತಾಯ ಸ್ಕೀಮ್ಗಳು ಇದಾಗಲೇ ಜಾರಿಯಾಗಿವೆ. ಇಲ್ಲಿ ಹೇಳ ಹೊರಟಿರುವುದು ಅಂಚೆ ಕಚೇರಿ ಮಾಸಿಕ ಉಳಿತಾಯ ಯೋಜನೆಗೆ ಕುರಿತು. ಕಳೆದ ವರ್ಷದ ಅಂದರೆ 2023ರ ಬಜೆಟ್ನಲ್ಲಿ ಈ ಬಗ್ಗೆ ಘೋಷಣೆಯಾಗಿದ್ದರೂ ಇದರ ಬಗ್ಗೆ ಹೆಚ್ಚಿನ ಮಂದಿಗೆ ತಿಳಿದಿಲ್ಲ. ಮಾಸಿಕವಾಗಿ ಒಂದಿಷ್ಟು ಹಣ ಬರಬೇಕು ಎಂಬ ಯೋಚನೆ ನಿಮ್ಮಲ್ಲಿದ್ದರೆ ನೀವು ಪ್ರತಿ ತಿಂಗಳೂ ₹9,250 ರೂಪಾಯಿವರೆಗೆ ಹಣವನ್ನು ಪಡೆಯಲು ಇದು ಅವಕಾಶ ಮಾಡಿಕೊಡುತ್ತದೆ.
ಒಂದು ಲಕ್ಷ ಠೇವಣಿಗೆ 50 ಸಾವಿರ ರೂ. ಬಡ್ಡಿ: ಎಲ್ಲಕ್ಕಿಂತ ಬೆಸ್ಟ್ ಅಂಚೆ ಇಲಾಖೆಯ ಎಫ್‌ಡಿ!
ಇಲ್ಲಿಯವರೆಗೆ ಅಂಚೆ ಕಚೇರಿ ಮಾಸಿಕ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವವರು ಗರಿಷ್ಠ 4.5ಲಕ್ಷದವರೆಗೆ ಹೂಡಿಕೆ ಮಾಡಬಹುದಿತ್ತು. ಆದರೆ ಈಗ ಈ ಮಿತಿ 9 ಲಕ್ಷದವರೆಗೆ ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ ಅತಿ ಹೆಚ್ಚಿನ ಮಾಸಿಕ ಲಾಭ ಪಡೆದುಕೊಳ್ಳಬಹುದಾಗಿದೆ. ಮನೆಯ ಒಬ್ಬರೇ ಸದಸ್ಯರು ಬಯಸಿದರೆ, 9 ಲಕ್ಷದ ವರೆಗೆ ಹೂಡಿಕೆ ಮಾಡಬಹುದು, ಜಂಟಿಯಾಗಿದ್ದರೆ 15 ಲಕ್ಷದವರೆಗೆ ಅವಕಾಶವನ್ನು ಕಲ್ಪಿಸಲಾಗಿದೆ. ಈ ಯೋಜನೆ ಅಡಿಯಲ್ಲಿ ಕನಿಷ್ಠ 1 ಸಾವಿರ ರೂಪಾಯಿಯಿಂದ ಗರಿಷ್ಠ 15 ಲಕ್ಷ ರೂಪಾಯಿವರೆಗೆ (ಜಂಟಿಯಾಗಿದ್ದರೆ) ಹೂಡಿಕೆ ಮಾಡಲು ಅವಕಾಶವಿದೆ. ಸದ್ಯದ ಬಡ್ಡಿ ದರವು ಶೇಕಡಾ ಶೇ 7.4ರಷ್ಟು ಇದೆ. ಬಡ್ಡಿ ಪ್ರತಿ ತಿಂಗಳ ಕೊನೆಗೆ ನಿಮಗೆ ಲಭಿಸುತ್ತದೆ.
ಒಂದು ವೇಳೆ ಪ್ರತಿ ತಿಂಗಳ ಬಡ್ಡಿಯನ್ನು ಹಾಗೆಯೇ ಇಟ್ಟು ಒಟ್ಟಿಗೇ ತೆಗೆದುಕೊಳ್ಳೋಣ ಎಂದುಕೊಂಡದ್ದೇ ಆದರೆ, ನೀವು ಹಾಗೆ ಮಾಡಬಹುದು. ಆದರೆ ಹೆಚ್ಚುವರಿ ಬಡ್ಡಿ ಲಾಭ ನಿಮಗೆ ಸಿಗುವುದಿಲ್ಲವಷ್ಟೇ. ಈ ಯೋಜನೆಯ ಅಡಿ ಹೂಡಿಕೆ ಐದು ವರ್ಷಗಳದ್ದು. ಯೋಜನೆ ಆರಂಭ ಮಾಡಿದ ಮೊದಲ ವರ್ಷ ನಿಮಗೆ ಹೂಡಿಕೆ ಮೊತ್ತವನ್ನು ತೆಗೆಯಲು ಅವಕಾಶ ಇಲ್ಲ. ಒಂದು ವೇಳೆ ಮೂರು ವರ್ಷಗಳ ಒಳಗೆ ಅಂದ್ರೆ ಒಂದು ವರ್ಷದಿಂದ 3 ವರ್ಷದ ಒಳಗೆ ಠೇವಣಿ ನೀವು ಹಿಂದಕ್ಕೆ ಪಡೆದುಕೊಂಡರೆ ಒಟ್ಟು ಅಸಲಿನ ಮೊತ್ತದಲ್ಲಿ ಶೇ 2ರಷ್ಟು ದಂಡ ವಿಧಿಸಲಾಗುತ್ತದೆ. 3-5 ವರ್ಷದ ಒಳಗಾದರೆ ಒಟ್ಟು ಅಸಲಿನ ಮೊತ್ತದಲ್ಲಿ ಶೇ 1ರಷ್ಟು ದಂಡ ಕಟ್ಟಬೇಕಾಗುತ್ತದೆ.
ಒಂದು ವೇಳೆ, ಠೇವಣಿದಾರರು ಮೆಚ್ಯೂರಿಟಿ ಅವಧಿಗೂ ಮುನ್ನ ಮೃತಪಟ್ಟರೆ ಖಾತೆಯನ್ನು ಮುಚ್ಚಿ ನಾಮಿನಿಗೆ ಅಸಲು ಹೂಡಿಕೆ ಮೊತ್ತ ಮತ್ತು ಬಡ್ಡಿಯನ್ನು ನೀಡಲಾಗುತ್ತದೆ. ನೀವು ಈ ಯೋಜನೆ ಅಡಿ, 9 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು 5,550 ರೂಪಾಯಿ ಲಭಿಸುತ್ತದೆ. ಜಂಟಿ ಖಾತೆಯಲ್ಲಿ 15 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, 9,250 ರೂಪಾಯಿಗಳ ಬಡ್ಡಿ ಲಾಭ ಸಿಗುತ್ತದೆ. ಇದರ ಬಡ್ಡಿದರ ಈ ರೀತಿ ಇದೆ.
- ತಾತನಿಂದ ತಂದೆಗೆ ಬಂದ ಆಸ್ತಿಯೆಲ್ಲವೂ ಪಿತ್ರಾರ್ಜಿತವಲ್ಲ; ಮಕ್ಕಳಿಗೆ ಜನ್ಮಸಿದ್ಧ ಹಕ್ಕಿಲ್ಲ ಎಂದ ಹೈಕೋರ್ಟ್
- ದಿನ ಭವಿಷ್ಯ (01-08-2026) ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?
- ಇಂದಿನ ರಾಶಿಭವಿಷ್ಯ : ಉದ್ಯೋಗ, ವ್ಯವಹಾರ, ಕುಟುಂಬ ಜೀವನ ಹೇಗಿರಲಿದೆ.?
- ಧಾರ್ಮಿಕ ವಿಧಿವಿಧಾನವಿಲ್ಲದ ವಿವಾಹ ಅಸಿಂಧು : ಹೈಕೋರ್ಟ್ ಮಹತ್ವದ ತೀರ್ಪು.!
- ಆಧಾರ್, PAN, Voter ID ಇದ್ದರೂ ಭಾರತೀಯ ಪ್ರಜೆ ಎಂದು ಸಾಬೀತಾಗಲ್ಲ! ಹೈಕೋರ್ಟ್ ಶಾಕಿಂಗ್ ತೀರ್ಪು
- ಇಂದಿನ ಅಡಿಕೆ ಬೆಲೆ (31 ಜುಲೈ 2026): ಶಿವಮೊಗ್ಗ, ಕುಂದಾಪುರ, ಪುತ್ತೂರು ಸೇರಿ ಕರ್ನಾಟಕದ ಎಲ್ಲಾ ಪ್ರಮುಖ ಮಾರುಕಟ್ಟೆಗಳ ಸಂಪೂರ್ಣ ದರ
- ಕಿಡ್ನಿ ಫೇಲ್ಯೂರ್ಗೆ ಮುನ್ನ ದೇಹ ನೀಡುವ ಕೊನೆಯ ಎಚ್ಚರಿಕೆ ಇದು! ನಿರ್ಲಕ್ಷಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ!
- ಗೃಹಜ್ಯೋತಿ ಫಲಾನುಭವಿಗಳೇ ಎಚ್ಚರ: ಜುಲೈ ವಿದ್ಯುತ್ ಬಿಲ್ ಬಗ್ಗೆ ಬೆಸ್ಕಾಂನಿಂದ ಹೊಸ ಪ್ರಕಟಣೆ!
- Gold Loan New Rules : ಚಿನ್ನದ ಸಾಲಗಾರರಿಗೆ ಬಿಗ್ ಅಲರ್ಟ್! ಬುಲೆಟ್ ಪಾವತಿ ಬಂದ್? EMI ಕಡ್ಡಾಯಕ್ಕೆ ಹೊಸ ನಿಯಮ ಸಾಧ್ಯತೆ
- ಹೊಸ ರೇಷನ್ ಕಾರ್ಡ್ ಪಡೆಯುವವರಿಗೆ ಗುಡ್ ನ್ಯೂಸ್! ಪ್ರತ್ಯೇಕ ಕಾರ್ಡ್ಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ
- ದೇಶಾದ್ಯಂತ ಇನ್ಮೇಲೆ ಇಂತವರಿಗೆ ಬ್ಯಾಂಕ್ ಸಾಲ ಸಿಗದಂತೆ ಹೊಸ ರೂಲ್ಸ್ | Bank Loan New Rules 2026
- ‘ಬ್ಯಾಂಕ್’ ಗ್ರಾಹಕರೇ ಗಮನಿಸಿ : ಖಾತೆಯಿಂದ ಈ 10 ವಹಿವಾಟು ಮಾಡಿದ್ರೆ ನಿಮಗೆ ‘IT ನೋಟಿಸ್’ ಗ್ಯಾರೆಂಟಿ.! Bank Rules
- ಅನ್ಯ ಧರ್ಮಿಯ ಜೊತೆ ಮದುವೆ : ಪುತ್ರಿಗೆ ಅಪ್ಪನ ಆಸ್ತಿಯಲ್ಲಿ ಹಕ್ಕಿಲ್ಲ – ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
- ಗುರುವಾರದ ರಾಶಿ ಭವಿಷ್ಯ : ಯಾರಿಗೆ ಅದೃಷ್ಟ, ಯಾರಿಗೆ ಎಚ್ಚರಿಕೆ.?
- ಸೊಸೆಗೆ ಅತ್ತೆ, ಮಾವ ಊಟ ಕೇಳಿದರೆ ಅದು ಕಿರುಕುಳವಲ್ಲ : ಕರ್ನಾಟಕ ಹೈಕೋರ್ಟ್.!
- ಶಿಕ್ಷಣ ಸಾಲಕ್ಕೆ ಪೋಷಕರ ‘ಸಿಬಿಲ್ ಸ್ಕೋರ್’ ಮಾನದಂಡವಲ್ಲ: ಹೈಕೋರ್ಟ್ ಮಹತ್ವದ ತೀರ್ಪು
- ಜಮೀನು ಖರೀದಿಸುವ ಮುನ್ನ ಎಚ್ಚರ : ‘ಪೋಡಿ’ ಮತ್ತು ‘ದುರಸ್ತಿ’ ಎಂದರೇನು? ಇಲ್ಲಿದೆ ಉಪಯುಕ್ತ ಮಾಹಿತಿ
- ರೈತರಿಗೆ ಸರ್ಕಾರದ ಬಂಪರ್ ಗಿಫ್ಟ್ : ಸೋಲಾರ್ ಪಂಪ್ಗೆ 90% ಸಬ್ಸಿಡಿ, ಈ ಅವಕಾಶ ಮಿಸ್ ಮಾಡಿಕೊಳ್ಳಬೇಡಿ!
- ಗಂಡನ ಆಸ್ತಿಗೆ ಕೇಳುವ ಹೆಂಡತಿಯರಿಗೆ ಹೇಗಿದೆ ನಿಯಮ | ಗಂಡನ ಆಸ್ತಿಯಲ್ಲಿ ಪತ್ನಿಗೆ ಪಾಲು ಇದೆಯಾ.? property Rules
- Daily Horoscope : ದಿನ ಭವಿಷ್ಯ (29-07-2026) ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?
- ಪತ್ನಿಗೆ ನೇಣು ಹಾಕಿ ಒದ್ದಾಡುವುದನ್ನು ಅತ್ತೆ – ಮಾವನಿಗೆ ವಿಡಿಯೋ ಕಾಲ್ ಮಾಡಿ ತೋರಿಸಿದ ಪತಿ!
- ಮಗನಿಗೆ ತಂದೆಯ ಆಸ್ತಿಯಲ್ಲಿ ಹಕ್ಕು ಇಲ್ಲ.? ಕೋರ್ಟ್ ಆದೇಶ – ಏನಿದು ಹೊಸ ನಿಯಮ.?
- Bank Rules : ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಇರಬೇಕು? ತಪ್ಪಿದರೆ ಯಾವ್ಯಾವ ಬ್ಯಾಂಕಿನಿಂದ ಎಷ್ಟೆಷ್ಟು ದಂಡ ಬೀಳುತ್ತೆ?
- PM Awas Yojana 2026 : ₹1.50 ಲಕ್ಷ ಸಹಾಯಧನದ ಸುವರ್ಣ ಅವಕಾಶ – ಸ್ವಂತ ಮನೆ ಕಟ್ಟಲು ಈಗಲೇ ಅರ್ಜಿ ಸಲ್ಲಿಸಿ
- Pension Scheme : ವಿಧವಾ ಪಿಂಚಣಿ’ ಯೋಜನೆಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ.! ಹೇಗೆ ಅರ್ಜಿ ಸಲ್ಲಿಸುವುದು.?























