‘ಹಾಯ್ ಬೆಂಗಳೂರು’ ಪತ್ರಿಕೆಯಲ್ಲಿ ರವಿ ಬೆಳೆಗೆರೆ ಹೆಣ್ಣು ಮಕ್ಕಳ ವ್ಯಕ್ತಿತ್ವವನ್ನು ತೀವ್ರವಾಗಿ ಟೀಕಿಸುತ್ತಿದ್ದರು. ರವಿ ಬೆಳೆಗೆರೆ ಪತ್ರಿಕಾ ಲೋಕದ ಒಬ್ಬ ಪಾತಕಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ತೀವ್ರ ಕಿಡಿಕಾರಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಸಾಧನಾ ಸೌರಭ ಕಾರ್ಯಕ್ರಮ ಆಯೋಜಿಸಿ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಅವರಿಗೆ ರಾಷ್ಟ್ರೀಯ ಸೌರಭ ಸಮ್ಮಾನ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಾಪ್ ಸಿಂಹ ಮಾತನಾಡಿ ಹಿರಿಯ ಪತ್ರಕರ್ತ, ದಿ. ರವಿಬೆಳಗೆರೆ ಬಗ್ಗೆ ಆಕ್ರೋಶ ಹೊರ ಹಾಕಿದರು. ಬೆಳಗೆರೆ ಯಾವಾಗಲೂ ಎಲ್ಲರನ್ನು ಹೀಯಾಳಿಸಿ ಪತ್ರಿಕೆಯಲ್ಲಿ ಬರೆಯುತ್ತಿದ್ದರು. ಅದರಲ್ಲೂ ಮಹಿಳೆಯರನ್ನು ಲೇಖನಗಳಲ್ಲಿ ಕೀಳಾಗಿ ಉಲ್ಲೇಖಿಸುತ್ತಿದ್ದ ಎಂದು ಹೇಳಿದರು.
ನನ್ನ ಬಗ್ಗೆ ಅಸಹ್ಯವಾಗಿ ಕೆಟ್ಟ ರೀತಿಯಲ್ಲಿ ಬರೆಯುತ್ತಿದ್ದ ಎಂದರು. ಸತತವಾಗಿ 27 ವಾರ ತಮ್ಮ ಪತ್ರಿಕೆಯಲ್ಲಿ ನನ್ನ ವಿರುದ್ಧ ಬರೆದಿದ್ದ ಎಂದರು.
ಪತ್ರಿಕೆಯಲ್ಲಿ ವೈಯಕ್ತಿಕವಾಗಿ ಮಾನ ಹಾನಿ ಮಾಡಿ ಲೇಖನ ಬರೆಯುತ್ತಿದ್ದರು. ಅದರಲ್ಲೂ ಯಾವುದಾದರೂ ಒಬ್ಬ ಹೆಣ್ಣು ಮಗಳ ಬಗ್ಗೆ ಕೀಳಾಗಿ ಬೈದು ಪತ್ರಿಕೆ ಮಾರಾಟ ಮಾಡುತ್ತಿದ್ದರು. ಚಿತ್ರರಂಗದ ನಟಿಯರ ಬಗ್ಗೆ ಅತಿ ಅಸಹ್ಯವಾಗಿ ಬರೆದು, ಸಮಾಜದಲ್ಲಿ ತಲೆ ಎತ್ತಿ ತಿರುಗಾಡದಂತೆ ಮಾಡುತ್ತಿದ್ದ. ಅವರ ಪತ್ರಿಕೆಯಲ್ಲಿ ಒಳ್ಳೆಯ ವಿಚಾರಗಳು ಇರಲೇ ಇಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಮತಾಂತರದ ಕುರಿತು ನಡೆದ ಚರ್ಚೆಯ ವೇಳೆ, ಹಿರಿಯ ಸಾಹಿತಿ ಎಸ್. ಎಲ್. ಭೈರಪ್ಪ ಅವರ ಬಗ್ಗೆಯೂ ಅತಿ ಕೆಟ್ಟ ಶಬ್ದಗಳನ್ನು ಬಳಸಿ ಬರೆದಿದ್ದರು ಎಂದು ಅಸಮಾಧಾನ ವ್ಯಕ್ತ ಪಡಿಸಿದರು. ಎಸ್ ಎಲ್ ಭೈರಪ್ಪ ಅವರನ್ನು ಎಡ ಪಂಥೀಯರಿಗಿಂತಲೂ ತುಚ್ಛವಾಗಿ ಬರೆದಿದ್ದ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ರವಿ ಬೆಳೆಗೆರೆ ಪತ್ರಿಕೋದ್ಯಮ ಲೋಕದ ಮಹಾ ಪಾತಕಿ; ‘ಹಾಯ್ ಬೆಂಗಳೂರು’ ಪತ್ರಿಕೆಯಲ್ಲಿ ಚಿತ್ರನಟಿಯರ ಚಾರಿತ್ರ್ಯಹರಣ ಮಾಡುತ್ತಿದ್ದ : ಪ್ರತಾಪ್ ಸಿಂಹ
WhatsApp Group
Join Now