PF Account : ಕೇಂದ್ರದ ನರೇಂದ್ರ ಮೋದಿ ಸರ್ಕಾರ ಈಗ ಪಿಂಚಣಿ ನಿಯಮದಲ್ಲಿ ಬಹು ದೊಡ್ಡ ಬದಲಾವಣೆಯನ್ನ ಮಾಡಿದೆ. ಪಿಂಚಣಿ ನಿಯಮದಲ್ಲಿ ಬಹು ದೊಡ್ಡ ಬದಲಾವಣೆಯನ್ನ ಮಾಡುವುದರ ಮೂಲಕ 60 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರಿಗೆ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಈಗ ಸಿಹಿ ಸುದ್ದಿಯನ್ನ ಕೊಟ್ಟಿದೆ. ಹಾಗಾದರೆ ಕೇಂದ್ರ ಸರ್ಕಾರ ಪಿಂಚಣಿ ನಿಯಮದಲ್ಲಿ ಮಾಡಿರುವ ಬದಲಾವಣೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ.
ಕೇಂದ್ರದ ನರೇಂದ್ರ ಮೋದಿ ಸರ್ಕಾರ ಈಗ ಏಕೀಕೃತ ಪಿಂಚಣಿ ಯೋಜನೆಯಲ್ಲಿ ಬಹು ದೊಡ್ಡ ಬದಲಾವಣೆಯನ್ನ ಮಾಡಿದೆ. ಏಕೀಕೃತ ಪಿಂಚಣಿ ಯೋಜನೆ ಅಂತ ಹೇಳಿದ್ರೆ ಯುನೈಟೆಡ್ ಪೆನ್ಶನ್ ಸ್ಕೀಮ್ ಆಗಿದೆ. ಹೊಸ ಬದಲಾವಣೆಯ ಪ್ರಕಾರ ಒಬ್ಬ ಸರ್ಕಾರಿ ನೌಕರ ನಿವೃತ್ತಿಯನ್ನ ಪಡೆದುಕೊಂಡ ತಕ್ಷಣವೇ ಆತ ಪಿಂಚಣಿ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು. ಅಂದರೆ ಒಬ್ಬ ಉದ್ಯೋಗಿ ಸ್ವಯಂ ಪ್ರೇರಿತ ನಿವೃತ್ತಿಯನ್ನ ಪಡೆದುಕೊಂಡರೆ ಆತ ನಿವೃತ್ತಿ ಪಡೆದುಕೊಂಡ ತಕ್ಷಣವೇ ಪಿಂಚಣಿ ಪ್ರಯೋಜನವನ್ನು ಪಡೆದುಕೊಳ್ಳಲು ಅರ್ಹತೆಯನ್ನು ಪಡೆದುಕೊಳ್ಳುತ್ತಾನೆ. ಈ ಹಿಂದೆ ಸ್ವಯಂ ನಿವೃತ್ತಿಯನ್ನ ಪಡೆದುಕೊಂಡರು ಕೂಡ ಪಿಂಚಣಿಗಾಗಿ ಬಹಳ ಸಮಯ ಕಾಯಬೇಕಾಗಿತ್ತು. ಆದರೆ ಇನ್ನು ಮುಂದೆ ನಿವೃತ್ತಿ ಪಡೆದುಕೊಂಡ ತಕ್ಷಣವೇ ಪಿಂಚಣಿ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.
ದೇಶದಲ್ಲಿ ಎಂಟನೇ ವೇತನ ಆಯೋಗ ಜಾರಿಗೆ ಬರುವುದಕ್ಕೂ ಮುನ್ನವೇ ಏಕೀಕೃತ ಪಿಂಚಣಿ ಯೋಜನೆಯಲ್ಲಿ ಈಗ ಬದಲಾವಣೆಯನ್ನ ಮಾಡಲಾಗಿದೆ. ಏಕೀಕೃತ ಪಿಂಚಣಿ ಯೋಜನೆಯಲ್ಲಿ ಬದಲಾವಣೆಯನ್ನ ಮಾಡಿದರೂ ಕೂಡ ದೇಶದಲ್ಲಿ ಶೇಕಡ 1% ಉದ್ಯೋಗಿಗಳು ಮಾತ್ರ ಏಕೀಕೃತ ಪಿಂಚಣಿ ಯೋಜನೆಯನ್ನ ಆಯ್ಕೆ ಮಾಡಿಕೊಂಡಿದ್ದಾರೆ. ಕೆಲವು ಸಂದರ್ಭಗಳಲ್ಲಿ ಅಂದರೆ ಕೆಲವು ವಿಶೇಷ ಕಾರಣಗಳಿಂದ ಕೆಲವು ಉದ್ಯೋಗಿಗಳು ಸ್ವಯಂ ಪ್ರೇರಿತ ನಿವೃತ್ತಿಯನ್ನ ಪಡೆದುಕೊಳ್ಳುತ್ತಾರೆ.
ಸ್ವಯಂ ಪ್ರೇರಿತ ನಿವೃತ್ತಿಯನ್ನು ಪಡೆದುಕೊಳ್ಳುವ ಉದ್ಯೋಗಿಗಳು ಆದಷ್ಟು ಬೇಗ ಪರಿಹಾರವನ್ನು ಪಡೆದುಕೊಳ್ಳಬೇಕು ಅನ್ನು ಉದ್ದೇಶದಿಂದ ಈಗ ಏಕೀಕೃತ ಪಿಂಚಣಿ ಯೋಜನೆಯಲ್ಲಿ ಬದಲಾವಣೆಯನ್ನ ಮಾಡಲಾಗಿದೆ. ಏಕೀಕೃತ ಪಿಂಚಣಿ ಯೋಜನೆಯಲ್ಲಿ ಬದಲಾವಣೆಯನ್ನ ಮಾಡುವುದರ ಮೂಲಕ ಎಲ್ಲಾ ಉದ್ಯೋಗಿಗಳಿಗೆ ಈಗ ಕೇಂದ್ರ ಸರ್ಕಾರ ಸಿಹಿ ಸುದ್ದಿಯನ್ನ ಕೊಟ್ಟಿದೆ.