ದರ್ಶನ್ ಕೈ ಹಿಡಿದು ಫೋನ್ ನಂಬರ್ ಕೇಳಿದ ಪವಿತ್ರಾ ಗೌಡ.. ದುಂಬಾಲು ಬಿದ್ದ ಗೆಳತಿಗೆ ದರ್ಶನ್ ಮಾಡಿದ್ದೇನು ಗೊತ್ತಾ.?

Spread the love

ರೇಣುಕಾಸ್ವಾಮಿ ಪ್ರಕರಣದ ಆರೋಪಿಗಳು ಇಂದು 57ನೇ ಸಿಸಿಹೆಚ್ ಕೋರ್ಟ್‌ಗೆ ಹಾಜರಾಗಿದ್ದರು. ತನಿಖೆ ನಡೆಸಿದ್ದ ಕಾಮಾಕ್ಷಿಪಾಳ್ಯ ಪೊಲೀಸರು ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದರು. ಆರೋಪಿಗಳ ವಿರುದ್ಧ ಹೆಚ್ಚುವರಿ ಸಾಕ್ಷ್ಯಗಳನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ.

57ನೇ ಸಿಸಿಹೆಚ್ ಕೋರ್ಟ್‌ಗೆ ಎ1 ಪವಿತ್ರ ಗೌಡ, ಎ2 ನಟ ದರ್ಶನ್ ಸೇರಿದಂತೆ ಇತರೆ ಆರೋಪಿಗಳು ಹಾಜರಾಗಿದ್ದರು. ಮೊದಲೇ ಕೋರ್ಟ್ ಹಾಲ್ ಒಳಗೆ ಪವಿತ್ರಗೌಡ ಅವರು ನಿಂತಿದ್ದರು. ನಟ ಧನ್ವೀರ್ ಜೊತೆ ನಟ ದರ್ಶನ್ ಅವರು ಕಪ್ಪು ಟೀ ಶರ್ಟ್‌ನಲ್ಲಿ ಕೋರ್ಟ್‌ಗೆ ಆಗಮಿಸಿದರು. ಮೊದಲಿಗೆ ದರ್ಶನ್ ಅವರು ಒಳಗೆ ಬರದೆ ಹೊರಗೆ ನಿಂತಿದ್ದರು.

ಪವಿತ್ರಾಗೌಡ ಅವರಿಂದ ದರ್ಶನ್ ದೂರ ನಿಂತಿದ್ದು ನ್ಯಾಯಾಧೀಶರು 1ನೇ ಆರೋಪಿ ಪಕ್ಕ ನಿಲ್ಲಿ ಎಂದು ಸೂಚಿಸಿದರು. ನಂತರ ದರ್ಶನ್ ಹಾಗೂ ಆರೋಪಿಗಳು ಸರತಿ ಸಾಲಿನಲ್ಲಿ ನಿಂತುಕೊಂಡರು.

ಕೋರ್ಟ್ ಹಾಲ್‌ ಒಳಗೆ ದರ್ಶನ್ ಗಪ್ ಚುಪ್ ಆಗಿದ್ದರು. ಆದರೆ ಲಿಫ್ಟ್‌ನಲ್ಲಿ ನಟ ದರ್ಶನ್‌ಗೆ ಪವಿತ್ರಾಗೌಡ ಅವರು ದುಂಬಾಲು ಬಿದ್ದು ಮಾತನಾಡಿಸಿದರು. ಕೈ ಹಿಡಿದು ಫೋನ್ ನಂಬರ್ ನೀಡುವಂತೆ ಒತ್ತಾಯ ಮಾಡಿದರು. ಕೊನೆಗೆ ದರ್ಶನ್ ಅವರು ತನ್ನ ಫೋನ್‌ ನಂಬರ್ ಅನ್ನ ಡಯಲ್ ಮಾಡಿಕೊಟ್ಟಿದ್ದಾರೆ.

WhatsApp Group Join Now

Spread the love

Leave a Reply