ಮಿಸ್ಟರ್ ಭಗವಾನ್, ನಿನ್ನ ಕೊಡುಗೆ ಏನು? ನಾಲಿಗೆ ಹರಿಬಿಟ್ಟಿದ್ದ ಪ್ರೊಫೆಸರ್‌ಗೆ ಮಾಜಿ ಸಂಸದ ಉಗ್ರಪ್ಪ ತರಾಟೆ

Spread the love

ಹಿಂದೂ ದೇವರು, ಅದರಲ್ಲೂ ಶ್ರೀರಾಮ, ರಾಮಾಯಣದ ಬಗ್ಗೆ ನಾಲಿಗೆ ಹರಿಬಿಟ್ಟು, ವಿವಾದಾತ್ಮಕ ಹೇಳಿಕೆ ನೀಡುವ ಕೆಎಸ್ ಭಗವಾನ್ ವಿರುದ್ಧ ಕಾಂಗ್ರೆಸ್ ನಾಯಕ, ಮಾಜಿ ಸಂಸದ ವಿಎಸ್ ಉಗ್ರಪ್ಪ ಗರಂ ಆಗಿದ್ದಾರೆ.

ಬಾಗಲಕೋಟೆಯಲ್ಲಿ ಮಾತನಾಡಿದ ವಿಎಸ್ ಉಗ್ರಪ್ಪ, ಮಿಸ್ಟರ್ ಭಗವಾನ್, ರಾಮಾಯಣ ಎಷ್ಟು ಬಾರಿ ಓದಿದ್ದಿಯಾ? ಅಂತ ಏಕವಚನದಲ್ಲೇ ಪ್ರಶ್ನಿಸಿದ್ದಾರೆ. ಮಿಸ್ಟರ್ ಭಗವಾನ್ ಈ ದೇಶಕ್ಕೆ ಮತ್ತು ರಾಜ್ಯಕ್ಕೆ ನಿನ್ನ ಕೊಡುಗೆ ಏನು? ಅಂತ ಖಾರವಾಗಿ ಪ್ರಶ್ನಿಸಿದ್ದಾರೆ.

ಭಗವಾನ್ ವಿರುದ್ಧ ಉಗ್ರಪ್ಪ ಕಿಡಿ

ಕೆಎಸ್ ಭಗವಾನ್ ರಾಮಾಯಣ ಬಗ್ಗೆ ಆಗಾಗ ಬೇಜವಾಬ್ದಾರಿ ಹೇಳಿಕೆ ಕೊಡ್ತಾರೆ. ಅದು ಅಕ್ಷಮ್ಯ ಅಪರಾಧ ಅಂತ ವಿಎಸ್ ಉಗ್ರಪ್ಪ ಹೇಳಿದ್ದಾರೆ. ಹರಿಹರದಲ್ಲಿ ಮತ್ತೆ ರಾಮಾಯಣ ಹಾಗೂ ಮಹರ್ಷಿ ವಾಲ್ಮೀಕಿ ಅವ್ರ ಬಗ್ಗೆ ಭಗವಾನ್ ಹೇಳಿಕೆ ನೀಡಿದ್ದಾರೆ. ಅದು ವಾಲ್ಮೀಕಿ ವಂಶಸ್ಥರಿಗೆ ಅಗೌರವ ತೋರಿಸಿದ ಹಾಗೇ. ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣದ ಬಗ್ಗೆ ಸಮಸ್ತ ಜನರಿಗೆ ಅಪಮಾನ ಮಾಡ್ತಿದ್ದಾರೆ ಅಂತ ಕಿಡಿಕಾರಿದ್ದಾರೆ.

ರಾಮಾಯಣ ಎಷ್ಟು ಬಾರಿ ಓದಿದ್ದೀಯಾ?

ಮಿಸ್ಟರ್ ಭಗವಾನ್ ರಾಮಾಯಣ ಎಷ್ಟು ಬಾರಿ ದ್ದೀಯಾ? ಅಂತ ಏಕವಚನದಲ್ಲೇ ಪ್ರಶ್ನಿಸಿದ ವಿಎಸ್ ಉಗ್ರಪ್ಪ, ಶಂಭುಕನ ಪ್ರಕರಣ ಇಟ್ಕೊಂಡು ಮನಸೋ ಇಚ್ಛೆ ಮಾತಾಡ್ತಿದ್ದಿಯಲ್ಲಾ? 7 ಸಾವಿರ ವರ್ಷಗಳ ಹಿಂದೆ ಬರೆದ ರಾಮಾಯಣದಲ್ಲಿ 24 ಸಾವಿರ ಶ್ಲೋಕಗಳಿವೆ, 500 ಸರ್ಗಗಳಿವೆ ಅಂತ ಉಗ್ರಪ್ಪ ವಿವರಿಸಿದ್ದಾರೆ.

ರಾಮಾಯಣದಲ್ಲಿರೋದು ಸಮಾಜಮುಖಿ ಸಂದೇಶ

ನಿಮಗೆ ಗೊತ್ತಿದೆಯಾ? ಗಾಂಧಿ ಯಾಕೆ ರಾಮರಾಜ್ಯ ಬಯಸಿದ್ರು ಅಂತ? ಸಮಾಜಮುಖಿ ಸಂದೇಶ ರಾಮಾಯಣದಲ್ಲಿರೋದು. ಜಾತಿ ರಹಿತ, ವರ್ಗ ರಹಿತ, ಶೋಷಣೆ ರಹಿತ, ಸಮ ಸಮಾಜದ ರಾಮಾಯಣದಲ್ಲಿ ಬಯಸಿರೋದು. ಮಹರ್ಷಿ ವಾಲ್ಮೀಕಿಯವರು ರಾಮಾಯಣದಲ್ಲಿ ಕೊಟ್ಟಿರೋದ್ರ ಅರಿವು ಇದೆಯಾ? ಅಂತ ಪ್ರಶ್ನಿಸಿದ್ರು. ಈಗ‌ ನಮ್ಮ ದೇಶದಲ್ಲಿ‌ ರಾಮನ‌ ಜಪ ಮಾಡೋರು ಕಳೆದ ಹತ್ತು ವರ್ಷದಲ್ಲಿ 160 ಲಕ್ಷಕ್ಕೂ ಅಧಿಕ ಕೋಟಿ ಸಾಲ ಮಾಡಿದ್ದಾರೆ. 1947ರಿಂದ 2014ರವರೆಗೆ ಇದ್ದ ದೇಶದ ಸಾಲ 52 ಲಕ್ಷ ಕೋಟಿ. ಇದರ ಬಗ್ಗೆ ಹೇಳೋದು ಬಿಟ್ಟು ಹೋಗಿ ಬಂದು ರಾಮಾಯಣ ಮತ್ತು ವಾಲ್ಮೀಕಿ ಬಗ್ಗೆ ಹೇಳೋದಾ? ಅಂತ ಉಗ್ರಪ್ಪ ಕಿಡಿಕಾರಿದ್ರು.

ಮಿಸ್ಟರ್ ಭಗವಾನ್, ದೇಶಕ್ಕೆ ನಿನ್ನ ಕೊಡುಗೆ ಏನು?

ಮಿಸ್ಟರ್ ಭಗವಾನ್, ಈ ದೇಶಕ್ಕೆ & ರಾಜ್ಯಕ್ಕೆ ನಿನ್ನ ಕೊಡುಗೆ ಏನು? ಅಂತ ಉಗ್ರಪ್ಪ ಖಾರವಾಗಿ ಪ್ರಶ್ನಿಸಿದ್ದಾರೆ. ಬರೀ ಈ ರೀತಿ ಉಡಾಫೆ ಮಾತುಗಳನ್ನು ಆಡೋದಾ? ನಿಮ್ಮ ಉಡಾಫೆ ಮಾತುಗಳನ್ನು ನಿಲ್ಲಿಸಿ. ಮಹರ್ಷಿ ವಾಲ್ಮೀಕಿ ಆಗ್ಲಿ, ರಾಮಾಯಣ ಬಗ್ಗೆ ಆಗ್ಲಿ ಮನಸೋ ಇಚ್ಚೇ ಮಾತಾಡಿದ್ರೆ ಬರುವ ದಿನಗಳಲ್ಲಿ ಅದರ ಪರಿಣಾಮ ಎದುರಿಸಬೇಕಾಗುತ್ತೆ ಎಂದು ಭಗವಾನ್‌ಗೆ ವಿಎಸ್ ಉಗ್ರಪ್ಪ ಎಚ್ಚರಿಕೆ ನೀಡಿದ್ದಾರೆ. ಸರ್ಕಾರ ಸಹ ಈ ರೀತಿ ಉಡಾಫೆ ಹೇಳಿಕೆ ಕೊಡುವವರ ವಿರುದ್ಧ ಕ್ರಮ ಜರುಗಿಸುವಂತೆ ಉಗ್ರಪ್ಪ ಆಗ್ರಹಿಸಿದ್ದಾರೆ.

ಶ್ರೀರಾಮನ ಬಗ್ಗೆ ನಾಲಿಗೆ ಹರಿಬಿಟ್ಟಿದ್ದ ಭಗವಾನ್

ಶ್ರೀರಾಮ ದಶರಥನಿಗೆ ಹುಟ್ಟಿದವನಲ್ಲ. ದಶರಥ ಪುತ್ರ ಕಾಮೇಷ್ಠಿ ಪೂಜೆ ಮಾಡುತ್ತಾನೆ. ಆ ಪೂಜೆಯಲ್ಲಿ ರಾಣಿ ಪುರೋಹಿತರ ಜೊತೆ ರಾತ್ರಿ ಮಲಗಬೇಕು. ಅಂದರೆ ನೀವೇ ಅರ್ಥ ಮಾಡಿಕೊಳ್ಳಿ ಎಂದು ಭಗವಾನ್ ನಾಲಿಗೆ ಹರಿಬಿಟ್ಟಿದ್ದ. ಭಗವಾನ್ ವಿರುದ್ಧ ಸಿ.ಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

WhatsApp Group Join Now

Spread the love

Leave a Reply