ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ IPL ಟಿಕೆಟ್ ಬ್ಲಾಕ್ ದಂಧೆ ಬಯಲಿಗೆ.! ಕ್ಯಾಂಟೀನ್ ನೌಕರ ಅರೆಸ್ಟ್.!

Spread the love

ಬೆಂಗಳೂರಿನ ಕ್ರಿಕೆಟ್ ಪ್ರೇಮಿಗಳೇ ಎಚ್ಚರ! ಐಪಿಎಲ್ ಕ್ರೇಜ್ ಬಳಸಿಕೊಂಡು ಹಣ ಮಾಡಲು ಇಳಿದಿದ್ದ ದೊಡ್ಡ ಜಾಲವೊಂದನ್ನು ಸಿಸಿಬಿ (CCB) ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.ಐಪಿಎಲ್ ಕ್ರೇಜ್ ಅನ್ನೇ ಬಂಡವಾಳ ಮಾಡಿಕೊಂಡು ಕ್ರಿಕೆಟ್ ಅಭಿಮಾನಿಗಳ ಜೇಬಿಗೆ ಕನ್ನ ಹಾಕುತ್ತಿದ್ದ ಬೃಹತ್ ಜಾಲವನ್ನು ಸಿಸಿಬಿ (CCB) ಪೊಲೀಸರು ಭೇದಿಸಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದ ಒಳಗೇ ಕೆಲಸ ಮಾಡುತ್ತಿದ್ದ ಕ್ಯಾಂಟೀನ್ ನೌಕರನೊಬ್ಬನನ್ನು ಬಂಧಿಸಿರುವ ಪೊಲೀಸರು, ಆತನಿಂದ ನೂರಾರು ಟಿಕೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಕೇವಲ ₹1,200 ಮುಖಬೆಲೆಯ ಟಿಕೆಟ್‌ಗಳನ್ನು ಬರೋಬ್ಬರಿ ₹19,000 ವರೆಗೆ ಮಾರಾಟ ಮಾಡುತ್ತಿದ್ದ ಆಘಾತಕಾರಿ ಸತ್ಯ ತನಿಖೆಯಲ್ಲಿ ಹೊರಬಂದಿದೆ

ಏನಿದು ಘಟನೆ?

ಚಿನ್ನಸ್ವಾಮಿ ಕ್ರೀಡಾಂಗಣದ ಒಳಗೇ ಇದ್ದು ಕೆಲಸ ಮಾಡುತ್ತಿದ್ದ ‘ಶ್ರೀ ಲಕ್ಷ್ಮಿ ಕ್ಯಾಂಟೀನ್’ ನೌಕರ ಪಿ. ಚಂದ್ರಶೇಖರ್ ಈಗ ಪೊಲೀಸರ ಅತಿಥಿ. ಈತನ ಬಳಿ ಬರೋಬ್ಬರಿ 100ಕ್ಕೂ ಹೆಚ್ಚು ಐಪಿಎಲ್ ಟಿಕೆಟ್‌ಗಳು ಪತ್ತೆಯಾಗಿವೆ!: ₹1,200 ಮುಖಬೆಲೆಯ ಟಿಕೆಟ್‌ಗಳನ್ನು ಬರೋಬ್ಬರಿ ₹15,000 ದಿಂದ ₹19,000 ವರೆಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ.

· ಕೆಎಸ್‌ಸಿಎ ಸದಸ್ಯನ ಕೈವಾಡ: ಈ ಪ್ರಕರಣದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (KSCA) ಸದಸ್ಯ ಎನ್ನಲಾದ ಗಣೇಶ್ ಹರಿಕೇಶ್ ಎಂಬುವವರ ಹೆಸರೂ ಕೇಳಿಬಂದಿದೆ. ಆರೋಪಿ ಚಂದ್ರಶೇಖರ್ ವಿಚಾರಣೆ ವೇಳೆ ಗಣೇಶ್ ಹರಿಕೇಶ್ ಅವರೇ ತನಗೆ ಈ ಟಿಕೆಟ್‌ಗಳನ್ನು ನೀಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸೂಚಿಸಿದ್ದರು ಎಂದು ಬಾಯ್ಬಿಟ್ಟಿದ್ದಾನೆ.

· ಯಾವ ಪಂದ್ಯಗಳ ಟಿಕೆಟ್?: ಮಾರ್ಚ್ 28 ರಂದು ನಡೆದ ಆರ್‌ಸಿಬಿ ಮತ್ತು ಎಸ್‌ಆರ್‌ಹೆಚ್ (RCB vs SRH) ಪಂದ್ಯದ 81 ಟಿಕೆಟ್ ಹಾಗೂ ಆರ್‌ಸಿಬಿ ಮತ್ತು ಎಲ್‌ಎಸ್‌ಜಿ (RCB vs LSG) ಪಂದ್ಯದ 100 ಟಿಕೆಟ್‌ಗಳನ್ನು ಈ ಜಾಲವು ಹೊಂದಿತ್ತು ಎನ್ನಲಾಗಿದೆ.

· ಕಂಪನಿಗಳ ಮೇಲೆ ಎಫ್‌ಐಆರ್: ಟಿಕೆಟ್ ಅಕ್ರಮ ಮಾರಾಟಕ್ಕೆ ಸಹಕರಿಸಿದ ಆರೋಪದ ಮೇಲೆ ಕೆಲವು ಖಾಸಗಿ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧವೂ ಸಿಸಿಬಿ ಎಫ್‌ಐಆರ್ ದಾಖಲಿಸಿದೆ.

ಬೆಲೆ ಏರಿಕೆ ಶಾಕ್!

ಸಾಮಾನ್ಯ ಅಭಿಮಾನಿಗಳಿಗೆ ಟಿಕೆಟ್ ಸಿಗುತ್ತಿಲ್ಲ, ಆದರೆ ಇಲ್ಲಿ ನೋಡಿ:

ಟಿಕೆಟ್ ಮುಖಬೆಲೆ : ₹1,200 (ಅಂದಾಜು)
ಬ್ಲಾಕ್ ಮಾರ್ಕೆಟ್ ಬೆಲೆ : ₹15,000 ರಿಂದ ₹19,000!
ಅಭಿಮಾನಿಗಳ ಜೇಬಿಗೆ ಕನ್ನ ಹಾಕುತ್ತಿದ್ದ ಈ ದಂಧೆಕೋರರು ಸಿಕ್ಕಿಬಿದ್ದಿದ್ದಾರೆ.

ದೊಡ್ಡವರ ಕೈವಾಡ.?

ಕೆಎಸ್‌ಸಿಎ (KSCA) ಸದಸ್ಯ ಎನ್ನಲಾದ ಗಣೇಶ್ ಹರಿಕೇಶ್ ಎಂಬುವವರ ಸೂಚನೆಯಂತೆ ಈ ಕೃತ್ಯ ನಡೆದಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಂದಿದೆ.ಆರ್‌ಸಿಬಿ vs ಎಸ್‌ಆರ್‌ಹೆಚ್ ಮತ್ತು ಆರ್‌ಸಿಬಿ vs ಎಲ್‌ಎಸ್‌ಜಿ ಪಂದ್ಯಗಳ ನೂರಾರು ಟಿಕೆಟ್‌ಗಳು ಜಪ್ತಿಯಾಗಿದೆ. ಈ ಅಕ್ರಮಕ್ಕೆ ಸಾಥ್ ನೀಡಿದ ಖಾಸಗಿ ಕಂಪನಿಗಳ ಎಂಡಿಗಳ ವಿರುದ್ಧವೂ FIR ದಾಖಲಾಗಿದೆ.

ಪೊಲೀಸ್ ವಾರ್ನಿಂಗ್ :

“ಐಪಿಎಲ್ ಟಿಕೆಟ್ ಬ್ಲಾಕ್ ಮಾರಾಟಕ್ಕೆ ಸಂಬಂಧಿಸಿದಂತೆ ಈಗಾಗಲೇ 10 ಪ್ರಕರಣಗಳು ದಾಖಲಾಗಿವೆ. ಅಕ್ರಮ ಎಸಗುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುತ್ತೇವೆ!” ಶ್ರೀಹರಿಬಾಬು, (ಡಿಸಿಪಿ, ಸಿಸಿಬಿ) ಎಚ್ಚರಿಕೆ ನೀಡಿದ್ದಾರೆ

ಅಭಿಮಾನಿಗಳ ಗಮನಕ್ಕೆ :

ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಇಂತಹ ಬ್ಲಾಕ್ ದಂಧೆಕೋರರಿಗೆ ನೀಡಿ ಮೋಸ ಹೋಗಬೇಡಿ. ಅಧಿಕೃತ ಮೂಲಗಳಿಂದ ಮಾತ್ರ ಟಿಕೆಟ್ ಖರೀದಿಸಿ.

WhatsApp Group Join Now

Spread the love

Leave a Reply