ಸಿಎಂ ಸಿದ್ದರಾಮಯ್ಯ ನೀಚ ರಾಜಕಾರಣಿ. ತಾನಿಲ್ಲದಿದ್ದರೆ ಕಾಂಗ್ರೆಸ್ಗೆ ಭವಿಷ್ಯ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ. ಅವರು ಬರುವ ಮುನ್ನವೇ ಕಾಂಗ್ರೆಸ್ ಪಕ್ಷ ಇತ್ತು. ರಾಜ್ಯದಲ್ಲಿ ಕಾಂಗ್ರೆಸ್ ಕೊನೆಗಾಣಿಸಿಯೇ ಅವರು ಅಧಿಕಾರದಿಂದ ಕೆಳಗಿಳಿಯುವುದು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಟೀಕಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಸಿದ್ಧಾಂತವೇ ಅಹಿಂದ. ಅದು ಸಿದ್ದರಾಮಯ್ಯನಿಗೆ ಗೊತ್ತಿಲ್ಲ. ತನ್ನಿಂದಲೇ ಎಲ್ಲ ಅಂದುಕೊಂಡಿದ್ದಾರೆ. ಮುಸ್ಲಿಮರು ಕಾಂಗ್ರೆಸ್ನ ಮತದಾರರು. ಉಪ ಚುನಾವಣೆಯಲ್ಲಿ ಆವರ್ಗದ ಮತದಾರರು ಕಾಂಗ್ರೆಸ್ನಿಂದ ವಿಮುಖ ಆಗುವಂತೆ ಮಾಡಿದರು. ನಾನಿದ್ದರೆ ಮಾತ್ರ ಕಾಂಗ್ರೆಸ್, ಇಲ್ಲದಿದ್ದರೆ ಅಧಿಕಾರದಲ್ಲಿರಬಾರದು ಎನ್ನುತ್ತಾರೆ.
ಬಿಜೆಪಿ&ಜೆಡಿಎಸ್ ಮೈತ್ರಿ ಮಾಡಿಕೊಂಡಿಲ್ಲ. ಬದಲಿಗೆ ಕಾಂಗ್ರೆಸ್&ಬಿಜೆಪಿ ಮೈತ್ರಿ ಇದೆ. ಬಿ.ವೈ.ವಿಜಯೇಂದ್ರ, ಪ್ರಹ್ಲಾದ್ ಜೋಶಿ ಗೆಲ್ಲಲು ಕಾಂಗ್ರೆಸ್ ನೆರವು ನೀಡಿತು ಎಂದು ಆರೋಪಿಸಿದರು.
ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಅಧಿಕಾರಕ್ಕೆ ತಂದಿಲ್ಲವಾ ? ಒಕ್ಕಲಿಗರು ಕಾಂಗ್ರೆಸ್ಗೆ ಮತ ಹಾಕಿಲ್ಲವಾ ? ಒಪ್ಪಂದದಂತೆ ಅಧಿಕಾರ ಬಿಟ್ಟುಕೊಡಬೇಕು. ಆದರೆ, ಸಿದ್ದರಾಮಯ್ಯ ಮೋಸ ಮಾಡುತ್ತಿದ್ದಾರೆ. ಸಚಿವರಾಗುವಂತೆ ತಮ್ಮವರಿಗೆ ಕೆಲವರಿಗೆ ಹೇಳಿ ದೆಹಲಿಗೆ ಕಳುಹಿಸಿದ್ದಾರೆ. ರಾಯರಡ್ಡಿ ಅವರ ಶಿಷ್ಯ. ಅದಕ್ಕೆ ಒಪ್ಪಂದ ಆಗಿಲ್ಲ ಎನ್ನುತ್ತಾರೆಂದು ತಿರುಗೇಟು ನೀಡಿದರು.
ಅಭಿವೃದ್ಧಿ ಮರೆ
ರಾಜ್ಯದಲ್ಲಿ ಅಕ್ಷರವೂ ಇಲ್ಲ, ಆರೋಗ್ಯವೂ ಇಲ್ಲ. ಜನರಿಗೆ ಉದ್ಯೋಗವಿಲ್ಲ. ನರೇಗಾ ಸೇರಿ ಎಲ್ಲ ಬಂದ್ ಮಾಡಿದ್ದಾರೆ. 9 ಲಕ್ಷ ಕೋಟಿ ರೂ. ಸಾಲವಿದ್ದು, 5 ಲಕ್ಷ ಕೋಟಿ ರೂ. ಸಿದ್ದರಾಮಯ್ಯನವರೇ ಮಾಡಿದ್ದಾರೆ. ಎನ್ಇಪಿ ಬಗ್ಗೆ ಜ್ಞಾನ ಇಲ್ಲ. ಭಾಷೆ ಬಗ್ಗೆ ಅರಿವಿಲ್ಲ. ಪಿಯುಸಿ ೇಲ್ ಆದ ಶಿಕ್ಷಣ ಮಂತ್ರಿ ಮನಸ್ಸಿಗೆ ಬಂದಿದ್ದು ಮಾಡುತ್ತಿದ್ದಾನೆ. ಎಲ್ಲದರ ಮೇಲೆ ಹೆಚ್ಚುವರಿ ಟ್ಯಾಕ್ಸ್ ಹಾಕಿದ್ದಾರೆ. ಸರ್ಕಾರಿ ಹುದ್ದೆಗಳು ಅರ್ಧಕ್ಕಿಂತ ಹೆಚ್ಚು ಖಾಲಿ ಇವೆ. ಮಾತೆತ್ತಿದ್ದರೆ 10 ಕೆಜಿ ಅಕ್ಕಿ ಕೊಟ್ಟೆ ಅಂತ ಸುಳ್ಳು ಹೇಳುತ್ತಾರೆ. ಇವರು ಬರುವವರೆಗೆ ರಾಜ್ಯದಲ್ಲಿ ಜನ ಅನ್ನ ಕಂಡಿರಲಿಲ್ಲವಾ ಎಂದು ವಿಶ್ವನಾಥ ಪ್ರಶ್ನಿಸಿದರು.
ಸಿಎಂ ಸಿದ್ದರಾಮಯ್ಯ ನೀಚ ರಾಜಕಾರಣಿ. ತಾನಿಲ್ಲದಿದ್ದರೆ ಕಾಂಗ್ರೆಸ್ಗೆ ಭವಿಷ್ಯ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ : ಎಚ್. ವಿಶ್ವನಾಥ್
WhatsApp Group
Join Now