ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಾಮುಕರ ಅಟ್ಟಹಾಸ ಹೆಚ್ಚಾಗಿದ್ದು, ಈದೀಗ ಸರ್ಜಾಪುರ ಬಳಿ ಯುವಕರ ಗುಂಪೊಂದು ಬೀದಿ ನಾಯಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿಟಿವಿ ದೃಶ್ಯ ಆಧರಿಸಿ ನಾಯಿಯನ್ನು ಪತ್ತೆ ಮಾಡಿದ್ದಾರೆ.
ಬೆಂಗಳೂರಿನ ಬೆಳ್ಳಂದೂರು ಬಳಿಕ ಸರ್ಜಾಪುರದ ಕೊಡತಿ ಗ್ರಾಮದಲ್ಲಿ ಮಹಿಳೆಯೊಬ್ಬರು ಅ.15 ರಂದು ಎಂದಿನಂತೆ ಬೀದಿ ನಾಯಿಗಳಿಗೆ ಊಟ ಹಾಕಲು ಬಂದಾಗ ನಾಲ್ವರು ಯುವಕರು ನಾಯಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ದೂರು ನೀಡಿದ್ದರು. ರಸ್ತೆ ಬದಿ ಮಲಗಿದ್ದ ಹೆಣ್ಣು ನಾಯಿಯನ್ನು ದುಷ್ಕರ್ಮಿಗಳು ಹೊತ್ತೊಯ್ದ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ವರ್ತೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಮಹಿಳೆ ನೀಡಿದ ದೂರಿನನ್ವಯ ವ್ಯಾಪ್ತಿಯನ್ನು ಗಮನಿಸಿದಾಗ ಬೆಳ್ಳಂದೂರು ಪೊಲೀಸ್ ಠಾಣೆಗೆ ಸೇರಿತ್ತು ಹೀಗಾಗಿ ಅದನ್ನು ಬೆಳ್ಳಂದೂರು ಪೊಲೀಸರಿಗೆ ವರ್ಗಾವಣೆ ಮಾಡಲಾಗಿತ್ತು. ಬಳಿಕ ಸುಮಾರು 25 ಸಿಸಿಟಿವಿಯನ್ನು ಪರಿಶೀಲಿಸಲಾಗಿದೆ. ಈ ವೇಳೆ ನಾಯಿ ಸಿಕ್ಕಿದ್ದು, ಸದ್ಯ ನಾಯಿಯ ವೆಜೈನಲ್ ಸ್ವಾಬ್ ಸಂಗ್ರಹಿಸಿ ಎಫ್‌ಎಸ್‌ಎಲ್‌ಗೆ ರವಾನೆ ಮಾಡಲಾಗಿದೆ. ಮೊದಲಿಗೆ ಅತ್ಯಾಚಾರ ಆಗಿದೆಯೇ.? ಇಲ್ಲವೇ.? ಅನ್ನೋದರ ಬಗ್ಗೆ ತನಿಖೆ ನಡೆಸಿ ರಿಪೋರ್ಟ್ ಬಂದ ಬಳಿಕ ಆರೋಪಿಗಳ ಪತ್ತೆಗೆ ಮುಂದಾಗಲಿದ್ದಾರೆ.
ಮನುಷ್ಯ ಅನ್ನೋ ಕ್ರೂರ ಪ್ರಾಣಿಯ ಪೈಶಾಚಿಕ ಕೃತ್ಯಗಳು ನಿಜಕ್ಕೂ ಅಸಹ್ಯ ಎನಿಸುವಷ್ಟು ಮಿತಿಮೀರಿದ್ದು, ಬೆಂಗಳೂರಲ್ಲಿ ನಡೆದಿರುವ ಒಂದು ಘಟನೆ ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಿದೆ. ಬೆಂಗಳೂರಿನಲ್ಲಿ ಬೀದಿ ನಾಯಿ ಮೇಲೆ ಅತ್ಯಾಚಾರವೆಸಗಿ ಗಾಯಗೊಳಿಸಿ ವಿಕೃತಿ ಮೆರೆಯಲಾಗಿದ್ದು, ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲಿನಿ ಗ್ರೌಂಡ್ ಬಳಿ ಈ ಘಟನೆ ನಡೆದಿದೆ.
ಇಬ್ಬರು ಪುರುಷರು ಶ್ವಾನದ ಮರ್ಮಾಂಗವನ್ನು ಕೊಯ್ದು ಸಂಭೋಗ ಮಾಡಿದ್ದಾರೆ ಎನ್ನಲಾಗಿದ್ದು , ಸದ್ಯ ಸಾರ್ವಜನಿಕರು ಓರ್ವ ವ್ಯಕ್ತಿಗೆ ಥಳಿಸಿದ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಭಾಗದಲ್ಲಿ ವಿದ್ಯಾ ಎಂಬ ಮಹಿಳೆ ನಾಯಿಗಳಿಗೆ ಪ್ರತಿನಿತ್ಯ ಊಟ ಹಾಕುತ್ತಾರೆ. ಮೊದಲಿಗೆ ವ್ಯಕ್ತಿಯ ವಿಕೃತಿ ಇವರ ಕಣ್ಣಿಗೆ ಬಿದ್ದಿದ್ದು, ಸದ್ಯ ಪೊಲೀಸರು ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ. ನಾಯಿಯನ್ನು ರಕ್ಷಿಸಿ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರಿನಲ್ಲಿ ಬೀದಿ ನಾಯಿ ಮೇಲೆ ಸಾಮೂಹಿಕ ಅತ್ಯಾಚಾರ – ಸಿಸಿಟಿವಿ ದೃಶ್ಯ ಆಧರಿಸಿ ಸಂತ್ರಸ್ತ ನಾಯಿಯ ಪತ್ತೆ.!
WhatsApp Group
Join Now