ಕೆನರಾ ಬ್ಯಾಂಕ್ ನಲ್ಲಿ ಅತ್ಯಂತ ಹಳೆ ಖಾತೆ ಇದ್ದವರಿಗೆ ಸಿಹಿಸುದ್ದಿ | Canara Bank Easy Loan

Spread the love

ತುರ್ತು ಹಣಕಾಸಿನ ಅಗತ್ಯ ಅಥವಾ ವೈಯಕ್ತಿಕ ಉದ್ದೇಶಕ್ಕಾಗಿ ಸಾಲ ಹುಡುಕುತ್ತಾ ಇದ್ದವರಿಗೆ ಕೆನರಾ ಬ್ಯಾಂಕ್ನಿಂದ ಇದೀಗ ಉತ್ತಮ ಅವಕಾಶ ಸಿಕ್ಕಿದೆ. ಇದೀಗ ಬ್ಯಾಂಕ್ 2025ರ ಹೊಸ ಯೋಜನೆ ಅಡಿಯಲ್ಲಿ ಪರ್ಸನಲ್ ಲೋನ್ ಕೂಡ ನೀಡಲು ಆರಂಭ ಮಾಡಿದೆ.

ಕೆನರಾ ಬ್ಯಾಂಕ್ ಪರ್ಸನಲ್ ಲೋನ್ ಸಂಪೂರ್ಣವಾಗಿ ಒಂದು ಸೆಕ್ಯೂರ್ಡ್ ಆಗಿದ್ದು, ಯಾವುದೇ ಜಾಮೀನು ಅಥವಾ ಗ್ಯಾರೆಂಟರ್ ಇಲ್ಲದೆ ಲೋನ್ ಕೂಡ ನೀಡ್ತಾ ಇದೆ. ಅರ್ಜಿದಾರರು 50 ಸಾವಿರದಿಂದ 10 ಲಕ್ಷದವರೆಗೆ ಸಾಲ ಪಡೆಯಬಹುದು. ಬಡ್ಡಿದರವು ಗ್ರಾಹಕನ ಕ್ರೆಡಿಟ್ ಸ್ಕೋರ್ ನ್ನ ಆಧರಿಸಿ 10% ರಿಂದ 16% ವರೆಗೆ ನಿಗದಿಯಾಗುತ್ತದೆ. ಗ್ರಾಹಕರು 12 ರಿಂದ 84 ತಿಂಗಳವರೆಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ಮರುಪಾವತಿ ಅವಧಿಯನ್ನ ಆಯ್ಕೆ ಮಾಡಬಹುದು.

ವಿಶೇಷವಾಗಿ ಮುಂಚಿತ ಪಾವತಿಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಮುಗಿಸಲು ಅವಕಾಶ ಇದೆ. ಇದು ಅನೇಕ ಸಾಲಗಾರರಿಗೆ ಬಹಳಷ್ಟು ಉಪಯುಕ್ತವಾಗಲಿದೆ. ಇನ್ನು ಸಾಲ ಪಡೆಯಲು ಅರ್ಹರಾಗಲು ಅರ್ಜಿದಾರರ ವಯಸ್ಸು 21 ರಿಂದ 60 ವರ್ಷಗಳ ನಡುವೆ ಇರಬೇಕು. ಮತ್ತು ತಿಂಗಳಿಗೆ ಕನಿಷ್ಠ 15000 ಆದಾಯ ಇರಬೇಕು. ಜೊತೆಗೆ ಸಿಬಿಲ್ ಸ್ಕೋರ್ 700ಕ್ಕಿಂತ ಹೆಚ್ಚು ಕೂಡ ಇರಬೇಕು. ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಇತ್ತೀಚಿನ ಫೋಟೋ ಮತ್ತು ಆರು ತಿಂಗಳ ಸಂಬಳ ಸ್ಲಿಪ್ ಸಲ್ಲಿಸಬೇಕು.

ಬ್ಯಾಂಕ್ ಅಧಿಕೃತ ವೆಬ್ಸೈಟ್ ನಲ್ಲಿ ನೀವು ಪರ್ಸನಲ್ ಲೋನ್ ವಿಭಾಗಕ್ಕೆ ತೆರಳಿ ಆನ್ಲೈನ್ ನಲ್ಲಿ ಅರ್ಜಿಯನ್ನ ಸಲ್ಲಿಸಬಹುದು. ಪರಿಶೀಲನೆ ಪ್ರಕ್ರಿಯೆ ಬಳಿಕ ಎರಡರಿಂದ ಏಳು ದಿನಗಳಲ್ಲಿ ಹಣವನ್ನ ನೇರವಾಗಿ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಹಾಗಾಗಿ ತುರ್ತು ಖರ್ಚು, ಶಿಕ್ಷಣ, ಮದುವೆ ಅಥವಾ ಯಾವುದೇ ಉದ್ದೇಶಕ್ಕಾಗಿ ಪರ್ಸನಲ್ ಲೋನ್ ಬೇಕಿರುವವರು ಕಡಿಮೆ ದರ ಮತ್ತು ಸುಲಭ ಪ್ರಕ್ರಿಯೆಯಿಂದ ಕೆನರಾ ಬ್ಯಾಂಕ್ ನಿಂದ ಪರ್ಸನಲ್ ಲೋನ್ ಪಡಬಹುದು.

WhatsApp Group Join Now

Spread the love

Leave a Reply