ಬರೋಬ್ಬರಿ 14KM ಕಾಲ್ನಡಿಯಲ್ಲಿ SSLC ಪರೀಕ್ಷೆ ಬರೆದು 615 ಮಾಕ್ಸ್ ಮೂಲಕ ರಾಜ್ಯಕ್ಕೆ ಮಾದರಿಯಾದ ಶಿರಸಿಯ ಹೆಣ್ಣುಮಗಳು
ಸಾಧಿಸುವ ಮನಸ್ಸಿದ್ದರೆ ಯಾವುದೂ ಕೂಡ ಕಷ್ಟವಲ್ಲ . ಹೌದು ಮುಂಜಾನೆಯಾಗುತ್ತಲೇ ಮನೆ ಬಿಟ್ಟು ಶಾಲೆಗೆ ತೆರಳಿ, ಪುನಃ ರಾತ್ರಿ ವೇಳೆಯೇ ಮನೆ ಸೇರುತ್ತಿದ್ದ ವಿದ್ಯಾರ್ಥಿನಿಯೋರ್ವಳು ನಿತ್ಯ 14 ಕಿ.ಮೀ. ಕಾಲ್ನಡಿಗೆಯಲ್ಲಿಯೇ ಸಾಗಿ, ಸಮಯ ವ್ಯರ್ಥ ಮಾಡಿಕೊಂಡರೂ SSLC ಪರೀಕ್ಷೆಯಲ್ಲಿ 615 ಅಂಕ ಪಡೆಯುವ ಮೂಲಕ ರಾಜ್ಯವೇ ತಿರುಗಿ ನೋಡುವಂತಹ ಸಾಧನೆ ಮಾಡಿದ್ದಾಳೆ. ಶಿರಸಿ ತಾಲೂಕಿನ ಸಾಲ್ಕಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀಲ್ಕಣಿ ಗ್ರಾಮದ ಮಾನಸ ನಾಗೇಶ ಗೌಡ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 615 ಅಂಕ ಪಡೆದು ಗಮನ … Read more