ಮೇಡಮ್ ಮಗಳಿಗೆ ಹೊಡೀಬೇಡಿ, ತಾಯಿ ಇಲ್ಲದೆ ಬೆಳೆಸಿದ್ದೇನೆ, ಟೀಚರ್ ಮುಂದೆ ಕಣ್ಣೀರಿಟ್ಟ ತಂದೆ

ಟೀಚರ್ ಹೊಡೆಯುತ್ತಾರೆ ನಾನು ಶಾಲೆಗೆ ಹೋಗಲ್ಲ ಎಂದು ಅಳುತ್ತಿದ್ದ ಮಗಳ ಕಣ್ಣೀರು ನೋಡಿ ತಂದೆ ಕಣ್ಣೀರಾಗಿದ್ದಾರೆ. ಮಗಳನ್ನು ಕರೆದುಕೊಂಡು ನೇರವಾಗಿ ಶಾಲೆ ಬಂದ ತಂದೆ, ಆಕೆಯ ತರಗತಿಗೆ ತೆರಳಿ ಆಕೆಯ ಜೊತೆಗೆ ಬೆಂಚ್‌ನಲ್ಲಿ ಕುಳಿತುಕೊಂಡು ತರಗತಿ ಟೀಚರ್‌ಗೆ ಕಣ್ಣೀರಿನ ಮನವಿ ಮಾಡಿದ್ದಾರೆ. ದಯವಿಟ್ಟು ಮೇಡಂ, ನನ್ನ ಮಗಳಿಗೆ ಹೊಡೆಯಬೇಡಿ, ಆಕೆಗೆ ತಾಯಿ ಇಲ್ಲ. ನಾನು ಏಕಾಂಗಿಯಾಗಿ ಮಗಳನ್ನು ಬೆಳೆಸಿದ್ದೇನೆ, ಆಕೆಯೆ ಹೊಡೆಯಬೇಡಿ ಎಂದು ಮಗಳನ್ನು ಅಪ್ಪಿಕೊಂಡು ತಂದೆ ಕಣ್ಣೀರಿಟ್ಟ ಘಟನೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಡೆದಿದೆ. ಮಗಳ … Read more

ಯೋಗ ಕೊನೆಯಾಗುವ ದಿನಗಳು ಸಮೀಪಿಸಿವೆ : ಸಿಎಂ ಸಿದ್ದರಾಮಯ್ಯ ವಿರುದ್ದ ನಟ ಜಗ್ಗೇಶ್ ಬೇಸರ

ಸಿದ್ದರಾಮಯ್ಯ ಅವರು ರಾಘವೇಂದ್ರ ಸ್ವಾಮಿಗಳ ಫೋಟೋವನ್ನು ನಿರಾಕರಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಈ ಘಟನೆಗೆ ತೀವ್ರವಾಗಿ ಪ್ರತಿಕ್ರಿಯಿಸಿರುವ ನಟ ಜಗ್ಗೇಶ್, ಇದು ರಾಯರಿಗೆ ಮಾಡಿದ ಅಪಮಾನವಾಗಿದ್ದು, ಇಂತಹ ಕೃತ್ಯದಿಂದ ಯೋಗ ಕೊನೆಯಾಗಲಿದೆ ಎಂದು ಎಚ್ಚರಿಸಿದ್ದಾರೆ. ಸೋಮವಾರದಿಂದ ಸೋಶಿಯಲ್ ಮೀಡಿಯಾದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋಗೆ ಪ್ರತಿಕ್ರಿಯಿಸಿರುವಗ ನಟ ಜಗ್ಗೇಶ್, ಯೋಗ ಕೊನೆಯಾಗುವ ದಿನಗಳು ಸಮೀಪಿಸಿವೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ರಾಯರನ್ನ ಅಪಮಾನ ಮಾಡಿದ ಯಾರು ಉದ್ಧಾರವಾದ ಇತಿಹಾಸವಿಲ್ಲ. … Read more

ಮಾತನಾಡಲು ನಿರಾಕರಿಸಿದ್ದಕ್ಕೆ 14 ಬಾಲಕಿ ಮೇಲೆ 19ರ ಬಾಲಕ ಆಸಿಡ್ ದಾಳಿ! ಪೊಲೀಸರಿಂದ ‘ಮೆರವಣಿಗೆ’ ಶಾಸ್ತಿ

ತನ್ನೊಂದಿಗೆ ಮಾತನಾಡಲು ನಿರಾಕರಿಸಿದ ಮತ್ತು ಗದರಿಸಿದ ಕಾರಣಕ್ಕೆ 14 ವರ್ಷದ ಶಾಲಾ ಬಾಲಕಿಯ ಮೇಲೆ 19 ವರ್ಷದ ಯುವಕನೊಬ್ಬ ಆಸಿಡ್ ದಾಳಿ ಮಾಡಿದ್ದಾನೆ. ಅದೃಷ್ಟವಶಾತ್ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಈ ಮನಕಲಕುವ ಘಟನೆ ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯಲ್ಲಿ ಇತ್ತೀಚಿಗೆ ನಡೆದಿದೆ. ಬಂಧಿತ ಆರೋಪಿಯನ್ನು ಓಂಪ್ರಕಾಶ್ ಅಲಿಯಾಸ್ ಜಾನಿ (19) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿರುವ ಈತ, ಮದುವೆಯೊಂದರ ಚಿತ್ರೀಕರಣದ ವೇಳೆ 9ನೇ ತರಗತಿ ವಿದ್ಯಾರ್ಥಿನಿಯನ್ನು ನೋಡಿದ್ದನು. ಬಾಲಕಿಯ ಮೇಲೆ ಕಣ್ಣಿಟ್ಟಿದ್ದ ಈತ, ಅವಳನ್ನು ಸಂಪರ್ಕಿಸಲು ಮತ್ತು … Read more

ಇಂದಿನ ಅಡಿಕೆ ಧಾರಣೆ – 20 ಜನವರಿ 2026 – ಇವತ್ತು ಯಾವ್ಯಾವ ಅಡಿಕೆಯ ಧಾರಣೆ ಎಷ್ಟಿದೆ ಗೊತ್ತಾ.?

ಇಂದಿನ ಅಡಿಕೆ ಧಾರಣೆ – ಕರ್ನಾಟಕ ಮಾರುಕಟ್ಟೆ ವಿಧ ಗರಿಷ್ಟ ಬೆಲೆ ಮಾಡೆಲ್ ಬೆಲೆ ಚಿಕ್ಕಮಗಳೂರು ಸಿಪ್ಪೆಗೋಟು ₹13,000 ₹12,651 ಕುಮಟಾ ಫ್ಯಾಕ್ಟರಿ ₹24,829 ₹21,769 ಶಿರಸಿ ಬೆಟ್ಟೆ ₹52,066 ₹45,652 ದಾವಣಗೆರೆ ಸಿಪ್ಪೆಗೋಟು ₹12,000 ₹12,000 ಚಿತ್ರದುರ್ಗ ರಾಶಿ ₹52,469 ₹52,289 ಸಾಗರ ರಾಶಿ ₹58,710 ₹56,299 ಶಿರಸಿ ಕೆಂಪುಗೋಟು ₹39,518 ₹32,936 ಸಾಗರ ಚಾಲಿ ₹45,599 ₹44,599 ಶಿರಸಿ ರಾಶಿ ₹57,109 ₹53,771 ಶಿರಸಿ ಬಿಳೆಗೋಟು ₹43,160 ₹33,654 ಚಿತ್ರದುರ್ಗ ಬೆಟ್ಟೆ ₹38,079 ₹37,849 … Read more

ಗಿಲ್ಲಿ ‘ಬಡವನ ಥರ ಗೆಟಪ್ ಹಾಕ್ಕೊಂಡು ಬಿಗ್ ಬಾಸ್ ಗೆದ್ದಿದ್ದಾರೆ’ : ಅಶ್ವಿನಿ ಗೌಡ

ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆಯಲ್ಲಿ ಗಿಲ್ಲಿ ನಟ (ಗಿಲ್ಲಿ ನಟರಾಜ್) ಅಧಿಕೃತವಾಗಿ ಟ್ರೋಫಿ ಗೆದ್ದು ಕನ್ನಡಿಗರ ಮನಗೆದ್ದಿದ್ದಾರೆ. ಜನವರಿ 18, 2026ರಂದು ನಡೆದ ಫಿನಾಲೆಯಲ್ಲಿ ಗಿಲ್ಲಿ ಭರ್ಜರಿ ಮತಗಳೊಂದಿಗೆ ವಿನ್ನರ್ ಆಗಿ ಹೊರಹೊಮ್ಮಿದ್ದು, ₹50 ಲಕ್ಷ ಬಹುಮಾನ ಹಣ, ಹೊಸ SUV ಕಾರು ಮತ್ತು ಹೋಸ್ಟ್ ಕಿಚ್ಚ ಸುದೀಪ್‌ ಅವರಿಂದ ₹10 ಲಕ್ಷ ಗಿಫ್ಟ್ ಪಡೆದಿದ್ದಾರೆ. ರಕ್ಷಿತಾ ಶೆಟ್ಟಿ ಮೊದಲ ರನ್ನರ್ ಅಪ್ ಆಗಿದ್ದರೆ, ಅಶ್ವಿನಿ ಗೌಡ ಎರಡನೇ ರನ್ನರ್ ಅಪ್ ಸ್ಥಾನ … Read more

ಉಡುಪಿ ಶ್ರೀ ಕೃಷ್ಣ ಮಠಕ್ಕೆ ಆಗಮಿಸುವ ಭಕ್ತರೇ ಗಮನಿಸಿ: ಇನ್ಮುಂದೆ ವಸ್ತ್ರ ಸಂಹಿತೆ ಜಾರಿ!

ಉಡುಪಿ ಶ್ರೀ ಕೃಷ್ಣ ಮಠಕ್ಕೆ ಆಗಮಿಸುವ ಭಕ್ತರಿಗೆ ಕಟ್ಟುನಿಟ್ಟಿನ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಿದ್ದು, ದೇವಾಲಯದ ಆವರಣವನ್ನು ಪ್ರವೇಶಿಸುವ ಮೊದಲು ಪುರುಷ ಭಕ್ತರು ತಮ್ಮ ಶರ್ಟ್‌ಗಳನ್ನು ತೆಗೆಯುವುದು ಕಡ್ಡಾಯವಾಗಿದೆ. ಪರ್ಯಾಯ ಶಿರೂರು ಮಠ ಹೊರಡಿಸಿದ ಈ ನಿರ್ದೇಶನವು ಜನವರಿ 19 ಸೋಮವಾರದಿಂದ ಜಾರಿಗೆ ತಂದಿದೆ. ಮಹಿಳಾ ಭಕ್ತರು ಸಾಧಾರಣ ಮತ್ತು ಸಾಂಪ್ರದಾಯಿಕ ಉಡುಪನ್ನು ಧರಿಸುವುದು ಕಡ್ಡಾಯವಾಗಿದೆ, ಆದರೆ ಜೀನ್ಸ್, ಟಿ-ಶರ್ಟ್, ತೋಳಿಲ್ಲದ ಬಟ್ಟೆ ಅಥವಾ ಇತರ ಸಾಂಪ್ರದಾಯಿಕವಲ್ಲದ ಉಡುಪುಗಳನ್ನು ಧರಿಸಿ ಬರಬಾರದು. ಪುರುಷರು ದರುಶನಕ್ಕೆ ಆಗಮಿಸುವ ವೇಳೆ ಶರ್ಟ್, … Read more

ಪ್ರಿಯಕರನ ಜೊತೆ ಚಕ್ಕಂದವಾಡುತ್ತಿದ್ದುದನ್ನು ನೋಡಿದ ಮಗುವಿನ ಕೊಲೆ – ತಾಯಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

ಪ್ರಿಯಕರನೊಂದಿಗೆ ಸೇರಿ ತಾಯಿಯೊಬ್ಬಳು ತನ್ನ ಮೂರು ವರ್ಷದ ಮಗನನ್ನು ಎರಡು ಅಂತಸ್ತಿನ ಮನೆಯ ಮೇಲಿಂದ ಎಸೆದು ಕೊಂದ ಘಟನೆ ಏಪ್ರಿಲ್ 28, 2023 ರಂದು ಗ್ವಾಲಿಯರ್ ಜಿಲ್ಲೆಯ ಥಾಟಿಪುರದಲ್ಲಿ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಸೆಷನ್ಸ್ ನ್ಯಾಯಾಲಯವು ಆರೋಪಿ ತಾಯಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಏನಿದು ಘಟನೆ? ಪ್ರಾಸಿಕ್ಯೂಷನ್ ಪ್ರಕಾರ, ತನ್ನ ಮಗನನ್ನು ಕೊಲೆ ಮಾಡಿದ ಆರೋಪ ಹೊತ್ತಿರುವ ಜ್ಯೋತಿ ರಾಥೋಡ್, ತನ್ನ ನೆರೆಯ ಉದಯ್ ಇಂದೌಲಿಯಾ ಜೊತೆ ಛಾವಣಿಯ ಮೇಲೆ ಇದ್ದಳು. ಈ ವೇಳೆ … Read more

ಸಾಲ ತೀರಿಸಲು ಒಂಟಿ ಮಹಿಳೆ ಕೊಲೆ ಮಾಡಿ ಕರಿಮಣಿ ಸರ ಕದ್ದಿದ್ದ ಆರೋಪಿ ಅರೆಸ್ಟ್

ಕುಂಬಡಾಜೆ ಪಂಚಾಯತ್‌ ಪರಿಸರದಲ್ಲಿ ವಾಸಿಸುತ್ತಿದ್ದ 72 ವರ್ಷದ ಪುಷ್ಪಲತಾ ವಿ ಶೆಟ್ಟಿ ಅವರ ಕೊಲೆಗೆ ಸಂಬಂಧಿಸಿದಂತೆ ಪ್ರಕರಣದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿಯನ್ನು ಬದಿಯಡ್ಕ ಪಂಚಾಯತ್‌ನ ಪೆರ್ಡಾಲ ಮೂಲದ ಪರಮೇಶ್ವರ ಅಲಿಯಾಸ್ ರಮೇಶ್ ನಾಯಕ್ (47) ಎಂದು ಗುರುತಿಸಲಾಗಿದೆ. ಕುಂಬದಾಜೆ ಪಂಚಾಯತ್ ವ್ಯಾಪ್ತಿಯ ಮೊವ್ವಾರ್ ಗ್ರಾಮದ ಅಜಿಲದಲ್ಲಿರುವ ತಮ್ಮ ಮನೆಯಲ್ಲಿ ಪುಷ್ಪಲತಾ ಶೆಟ್ಟಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಬುಧವಾರ ಬೆಳಿಗ್ಗೆ ಅವರು ಮೃತಪಟ್ಟಿರುವುದು ಪತ್ತೆಯಾಗಿದ್ದು, ಆರಂಭಿಕ ತಪಾಸಣೆಯಲ್ಲಿ ಕೊಲೆ ಎಂದು ಶಂಕಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ … Read more

ಮಗನನ್ನು ಶಾಲೆಗೆ ಬಿಡಲು ಹೋಗುತ್ತಿದ್ದಾಗ ಅಪಘಾತ – ತಾಯಿ, ಮಗು ಸಾವು!

ಬೆಳ್ಳಂ ಬೆಳಗ್ಗೆಯೇ ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಾಲೇಜು ಬಸ್ ಡಿಕ್ಕಿ ಹೊಡೆದ ಪರಿಣಾಮ ಶಾಲೆ ಕಡೆಗೆ ಹೋಗ್ತಿದ್ದ ತಾಯಿ-ಮಗ ಸಾವನ್ನಪ್ಪಿರುವ ದಾರುಣ ಘಟನೆ ವಿವೇಕನಗರ ಮುಖ್ಯ ರಸ್ತೆಯಲ್ಲಿ ನಡೆದಿದೆ. ಮಗನನ್ನ ಶಾಲೆಗೆ ಕರೆದುಕೊಂಡು ಹೋಗ್ತಿದ್ದ ವೇಳೆ ಬಸ್ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ. ರಸ್ತೆ ದಾಟುತ್ತಿದ್ದ ವೇಳೆ ತಾಯಿ-ಮಗನಿಗೆ ಬಸ್ ಡಿಕ್ಕಿ ಮಗನ ಜೊತೆ ಶಾಲೆಗೆ ತಾಯಿ ಕೂಡ ನಡೆದುಕೊಂಡು ಹೋಗುತ್ತಿದ್ರು. ಇಬ್ಬರು ವಿವೇಕನಗರ ಜಂಕ್ಷನ್ ಬಳಿ ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ … Read more

ಬೆಟ್ಟಿಂಗ್ ಕಟ್ಟಿ 19 ‘ಬಿಯರ್’ ಕುಡಿದ ಇಬ್ಬರು ಸಾಫ್ಟ್ ವೇರ್ ಎಂಜಿನಿಯರ್ ಗಳು ಸಾವು.!

ಬೆಟ್ಟಿಂಗ್ ಕಟ್ಟಿ 19 ಬಿಯರ್ ಕುಡಿದು ಇಬ್ಬರು ಸಾಫ್ಟ್‌ ವೇರ್ ಉದ್ಯೋಗಿಗಳು ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಕೆ.ವಿ.ಪಲ್ಲಿ ಮಂಡಲದ ಬಂಡ ಪಾಡಿಪಲ್ಲಿಯಲ್ಲಿ ನಡೆದಿದೆ. ರಾಯಚೋಟಿ ಡಿಎಸ್‌ಪಿ ಕೃಷ್ಣಮೋಹನ್ ಸಾವಿಗೆ ಕಾರಣ ಅತಿಯಾದ ಮದ್ಯಪಾನ ಎಂದು ಹೇಳಿದ್ದಾರೆ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಆರು ಸ್ನೇಹಿತರು ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಯ ಸಮಯದಲ್ಲಿ, ಮಣಿಕುಮಾರ್ (34) ಮತ್ತು ಪುಷ್ಪರಾಜ್ (26) ಎಂಬ ಇಬ್ಬರು ಸಾಫ್ಟ್‌ವೇರ್ ಉದ್ಯೋಗಿಗಳು ಪರಸ್ಪರ ಪೈಪೋಟಿ ನಡೆಸಿ ಮದ್ಯಪಾನ ಮಾಡಿದ್ದರು. ಕಳೆದ ಶನಿವಾರ ಮಧ್ಯಾಹ್ನ … Read more