ಚಿನ್ನದ ಕುರಿತು ‘ಬಾಬಾ ವಂಗಾ’ ಭವಿಷ್ಯವಾಣಿ ವೈರಲ್! ಬಂಗಾರದ ಬೆಲೆ ಎಷ್ಟು ಹೆಚ್ಚಾಗುತ್ತೆ ಗೊತ್ತಾ?

ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿವೆ. ಚಿನ್ನ ಮತ್ತು ಬೆಳ್ಳಿ ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದೆ. ಈ ಸಂದರ್ಭದಲ್ಲಿ, ಪ್ರಸಿದ್ಧ ಅತೀಂದ್ರಿಯ ಮತ್ತು ಬಲ್ಗೇರಿಯನ್ ಬಾಬಾ ವಂಗಾ ಅವರ ಭವಿಷ್ಯವಾಣಿಗಳು ಮತ್ತೊಮ್ಮೆ ಚರ್ಚೆಯ ವಿಷಯವಾಗಿದೆ. ಬಾಬಾ ವಂಗಾ ಹಿಂದೆ ಚಿನ್ನದ ಬೆಲೆಗಳ ಬಗ್ಗೆ ಭವಿಷ್ಯ ನುಡಿದಿದ್ದರು. ಆ ಭವಿಷ್ಯವಾಣಿಯನ್ನ ತಿಳಿದು ಅನೇಕ ಜನರು ಈಗ ಆಘಾತಕ್ಕೊಳಗಾಗಿದ್ದಾರೆ. ಯಾಕಂದ್ರೆ, ವಂಗಾ ಅವರ ಭವಿಷ್ಯವಾಣಿಗಳು ಅಕ್ಷರಶಃ ನಿಜವಾಗಿವೆ. ಚಿನ್ನದ ಬೆಲೆ ಎಷ್ಟು ಮತ್ತು ಯಾವಾಗ ಹೆಚ್ಚಾಗುತ್ತದೆ ಎಂದು ಬಾಬಾ … Read more

ಚಿನ್ನದ ಆಸೆಗೆ ದೊಡ್ಡಪ್ಪ-ದೊಡ್ಡಮ್ಮನನ್ನೇ ಕೊಂದ ವೈದ್ಯ! ಭದ್ರಾವತಿ ದಂಪತಿ ನಿಗೂಢ ಸಾವು ಪ್ರಕರಣಕ್ಕೆ ಟ್ವಿಸ್ಟ್.!

ಉಕ್ಕಿನ ನಗರಿ ಭದ್ರಾವತಿಯನ್ನು ಬೆಚ್ಚಿಬೀಳಿಸಿದ ವೃದ್ಧ ದಂಪತಿಗಳ ನಿಗೂಢ ಸಾವಿನ ಪ್ರಕರಣವನ್ನು ಪೊಲೀಸರು ಕೇವಲ 24 ಗಂಟೆಗಳಲ್ಲಿ ಭೇದಿಸಿ, ಭೀಕರ ಸತ್ಯವನ್ನು ಹೊರಗೆಳೆದಿದ್ದಾರೆ. ಹಣ ಹಾಗೂ ಚಿನ್ನದ ಲಾಲಸೆಗೆ ಸ್ವಂತ ದೊಡ್ಡಪ್ಪ-ದೊಡ್ಡಮ್ಮನನ್ನೇ ವೈದ್ಯನೊಬ್ಬ ಕೊಂದಿರುವುದು ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ. ಭದ್ರಾವತಿಯ ಭೂತನ್ ಗುಡಿ ಪ್ರದೇಶದಲ್ಲಿ ವಾಸವಾಗಿದ್ದ ಚಂದ್ರಪ್ಪ (68) ಮತ್ತು ಅವರ ಪತ್ನಿ ಜಯಮ್ಮ (65) ಅವರು ಜನವರಿ 20ರ ಬೆಳಗ್ಗೆ ಅನುಮಾನಾಸ್ಪದವಾಗಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮನೆಯೊಳಗೆ ಯಾವುದೇ ಗಲಾಟೆ ಅಥವಾ ಹೋರಾಟದ ಗುರುತುಗಳಿರಲಿಲ್ಲ. … Read more

ರಾಜ್ಯದ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ‘ಬಯೋಮೆಟ್ರಿಕ್’ ಬರದಿದ್ದರೆ ಮ್ಯಾನುವಲ್ ಆಗಿ ಬರೆದು ಪಡಿತರ ವಿತರಣೆ.!

ಆಹಾರ ಭದ್ರತಾ ಕಾಯ್ದೆಯು ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಇದನ್ನು ಖಾತ್ರಿಪಡಿಸುವ ಉದ್ದೇಶದಿಂದ ನಾಲ್ಕು ದಿನಗಳ ಜಿಲ್ಲಾ ಭೇಟಿ ಕೈಗೊಂಡಿದ್ದು ಪರಿಶೀಲನೆ ನಡೆಸಿ, ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷರಾದ ಡಾ.ಹೆಚ್ ಕೃಷ್ಣ ತಿಳಿಸಿದರು. ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರಾಜ್ಯ ಆಹಾರ ಆಯೋಗದ ಜಿಲ್ಲೆಯ ಭೇಟಿ ಮತ್ತು ಪರಿಶೀಲನೆ ಕುರಿತು ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು. ಹಿಂದೆ ಆಹಾರದ ಕೊರತೆ ಇತ್ತು. ಇದೀಗ ಕೊರತೆ ಇಲ್ಲ, ಆಹಾರ ನಮ್ಮ ಹಕ್ಕಾಗಿದ್ದು … Read more

ಮದುವೆಯಾಗದ ಮೊಮ್ಮಗಳಿಗೆ ಹುಟ್ಟಿದ ಮಗು ; ಒಂದೇ ನಿಮಿಷಕ್ಕೆ ಹಸುಗೂಸಿನ ಕುತ್ತಿಗೆ ಹಿಸುಕಿ ತಿಪ್ಪೆಗೆಸೆದ ಅಜ್ಜಿ!

ಚಿಕ್ಕಮಗಳೂರು : ಕಾಫಿನಾಡಿನಲ್ಲಿ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಹೃದಯವಿದ್ರಾವಕ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಮದುವೆಯಾಗದ ಮೊಮ್ಮಗಳು ಗರ್ಭಿಣಿಯಾದ ವಿಷಯ ಹೊರಗೆ ತಿಳಿದರೆ ಎಲ್ಲಿ ಗೌರವ ಹೋಗುತ್ತದೋ ಎಂಬ ಭಯಕ್ಕೆ, ಹುಟ್ಟಿದ ಕೇವಲ ಒಂದು ನಿಮಿಷಕ್ಕೆ ಗಂಡು ಮಗುವನ್ನು ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ತರೀಕೆರೆ ತಾಲೂಕಿನ ಬಾವಿಕೆರೆ ಗ್ರಾಮದಲ್ಲಿ ನಡೆದಿದೆ. ಘಟನೆಯ ಹಿನ್ನೆಲೆ: ತಾನೇ ಹೆತ್ತು, ತಾನೇ ಕೊಂದ ನರ್ಸ್! ಕೊಲೆಯಾದ ಮಗುವಿನ ತಾಯಿ ವೃತ್ತಿಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಯುವತಿ. … Read more

ಶಬರಿಮಲೆ ಪ್ರಸಾದ ನೀಡಲು ಹೋಗುತ್ತಿರುವ ವೇಳೆ ಭೀಕರ ಅಪಘಾತ – ಮಗ ಸಾವು ತಂದೆಗೆ ಗಂಭೀರ ಗಾಯ

ಶಬರಿಮಲೆಯ ಪ್ರಸಾದವನ್ನು ಸಂಬಂಧಿಕರಿಗೆ ನೀಡಲು ತೆರಳುತ್ತಿರುವ ವೇಳೆ ಅಪಾಯಕಾರಿ ತಿರುವಿನಲ್ಲಿ ಬೈಕ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮೋರಿಯಿಂದ ಕೆಳಕ್ಕೆ ಉರುಳಿ ಬಿದ್ದ ಪರಿಣಾಮ ಬೈಕ್ ಸವಾರ ಮಗ ಮೃತಪಟ್ಟು ಸಹಸವಾರ ತಂದೆ ತಂದೆ ಗಂಭೀರ ಗಾಯಗೊಂಡ ಘಟನೆ ಬೆಳ್ಳಾರೆ – ಸುಳ್ಯ ಮುಖ್ಯ ರಸ್ತೆಯ ಕಲ್ಲೋಣಿ ಎಂಬಲ್ಲಿ ಇಂದು ಮಂಗಳವಾರ ಬೆಳಗ್ಗೆ ಸಂಭವಿಸಿದೆ. ಮೃತನನ್ನು ಕಡಬ ತಾಲೂಕಿನ ಮರ್ಧಾಳ ಸಮೀಪದ ಕೊಲ್ಯ ಮೋನಪ್ಪ ಅವರ ಪುತ್ರ ನಿಶಾಂತ್ (24) ಎಂದು ಗುರುತಿಸಲಾಗಿದೆ. ನಿಶಾಂತ್ ತಂದೆ … Read more

ಯುವಕನ ಕಿರುಕುಳಕ್ಕೆ ಬಲಿಯಾದಳೇ 15ರ ಬಾಲಕಿ? ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಬಾವಿಯಲ್ಲಿ ಶವವಾಗಿ ಪತ್ತೆ!

ಬೀದರ್ : ಯುವಕನ ಕಿರುಕುಳಕ್ಕೆ ಬಲಿಯಾಯಿತೇ ಬಾಲಕಿಯ ಬಾಳು. ಜಿಲ್ಲೆಯ ಭಾಲ್ಕಿ ತಾಲೂಕಿನ ಗ್ರಾಮವೊಂದರಲ್ಲಿ 15 ವರ್ಷದ ಅಪ್ರಾಪ್ತ ಬಾಲಕಿ ಬಾವಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಚ್ಚಿಬೀಳಿಸಿದೆ. ಬಾಲಕಿಯ ಸಾವಿಗೆ ಕೃಷ್ಣ ಎಂಬ ಯುವಕ ನೀಡುತ್ತಿದ್ದ ನಿರಂತರ ಕಿರುಕುಳವೇ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಶಾಲೆಗೆ ಹೋಗುವಾಗಲೂ ಬಿಡದ ಕಾಮುಕ: ಮೃತ ಬಾಲಕಿಯು ದಿನನಿತ್ಯ ಶಾಲೆಗೆ ತೆರಳುವಾಗ ಕೃಷ್ಣ ಎಂಬಾತ ಆಕೆಯನ್ನು ಹಿಂಬಾಲಿಸಿ ಚುಡಾಯಿಸುತ್ತಿದ್ದ ಎನ್ನಲಾಗಿದೆ. ಈ ವಿಷಯ ತಿಳಿದ ಬಾಲಕಿಯ ಕುಟುಂಬಸ್ಥರು, ಈ … Read more

ಬೆಂಗಳೂರು ಆರ್‌ಟಿಒ ಕರ್ಮಕಾಂಡ: ಹೊರರಾಜ್ಯದ ವಾಹನಗಳಿಗೆ ತಪಾಸಣೆ ಇಲ್ಲದೆ ‘ಫಿಟ್ನೆಸ್ ಸರ್ಟಿಫಿಕೇಟ್’ ಆರೋಪ

ಬೆಂಗಳೂರು : ನಗರದ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (RTO) ತಪಾಸಣೆಯೇ ಇಲ್ಲದೇ ಹೊರರಾಜ್ಯದ ವಾಹನಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪ ಇದೀಗ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಗುಜರಾತ್ ಮತ್ತು ಮಹಾರಾಷ್ಟ್ರದ ವಾಹನಗಳಿಗೆ ಯಾವುದೇ ಭೌತಿಕ ತಪಾಸಣೆ ನಡೆಸದೇ ಅಕ್ರಮವಾಗಿ ಫಿಟ್ನೆಸ್ ಸರ್ಟಿಫಿಕೇಟ್‌ಗಳನ್ನು ‘ಮಾರಾಟ’ ಮಾಡಲಾಗುತ್ತಿದೆ ಎಂಬ ಮಾಹಿತಿ ಗುಜರಾತ್ ಅಧಿಕಾರಿಗಳಿಂದಲೇ ಲಭಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆರೋಪಿಸಿದ್ದಾರೆ. ಈ ಕುರಿತು ತೀವ್ರ ವಾಗ್ದಾಳಿ ನಡೆಸಿರುವ ವಿಜಯೇಂದ್ರ, “ಇದು ಕೇವಲ … Read more

ನಮ್ಮ ತಾಳ್ಮೆಗೂ ಮಿತಿಯಿದೆ ಎಂದ ಡಿಕೆ ಸುರೇಶ್‌ ; ಸಕಾರಾತ್ಮಕ ಸಂದೇಶ ಬಂದಿದೆ – ಶಾಸಕರ ಸಭೆ ಬೇಡವೆಂದ ಡಿಕೆ ಶಿವಕುಮಾರ್!

ಕರ್ನಾಟಕ ಸಿಎಂ ಸ್ಥಾನ ಬದಲಾವಣೆ ವಿಚಾರವಾಗಿ 2 ಮಹತ್ವದ ವಿದ್ಯಮಾನ ನಡೆದಿವೆ. ನಮ್ಮ ತಾಳ್ಮೆಗೂ ಮಿತಿಯಿದೆ ಎಂದು ಮಾಜಿ ಸಂಸದ ಡಿಕೆ ಸುರೇಶ್‌ ಹೇಳಿದ್ರೆ, ಸಕಾರಾತ್ಮಕ ಸಂದೇಶ ಬಂದಿದೆ, ಶಾಸಕರ ಸಭೆ ಬೇಡ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ ಎನ್ನಲಾಗಿದೆ. ಅಧಿಕಾರ ಹಸ್ತಾಂತರ ವಿಚಾರದಲ್ಲಿ ವಿಳಂಬ ತಂತ್ರಕ್ಕೆ ಡಿಸಿಎಂ ಡಿಕೆ ಶಿವಕುಮಾರ್‌ ಸಹೋದರ ಡಿಕೆ ಸುರೇಶ್‌ ಗರಂ ಆಗಿದ್ದು, ‘ಮಾತು ಕೊಟ್ಟಿದ್ದೀರಿ, ಅಧಿಕಾರ ಬಿಟ್ಟುಕೊಡಿ ಎಂದು ಹೇಳುವುದು ಬಹಳ ಕಷ್ಟ’ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ … Read more

Accident : ಬರ್ತ್‌ಡೇ ಪಾರ್ಟಿಯ ಥ್ರಿಲ್ ರೈಡ್ ಆಯ್ತು ಲಾಸ್ಟ್ ರೈಡ್ : ನಾಲ್ವರು ಸ್ನೇಹಿತರು ಜೊತೆಗೆ ಸಾವು

Accident : ಗೆಳೆಯನ ಹುಟ್ಟುಹಬ್ಬದ ಜಾಲಿ ಮೂಡ್‌ನಲ್ಲಿದ್ದ ನಾಲ್ವರು ಸ್ನೇಹಿತರು ಜೊತೆಯಾಗಿ ಮಸಣ ಸೇರಿದ್ದಾರೆ. ಹೌದು ಅವರ ಕೈಯಲ್ಲಿ ಸಿಗರೇಟ್‌ಗಳಿದ್ದವು, ಕಾರಿನೊಳಗೆ ಮ್ಯೂಸಿಕ್ ಕಿವಿಗಡಚಿಕ್ಕುತ್ತಿದ್ದವು. ಅಹ್ಮದಾಬಾದ್‌ನ ಬೈಪಾಸ್ ರಸ್ತೆಯಲ್ಲಿ ಕಾರು ಚಾಲನೆಯಲ್ಲಿದ್ದಾಗಲೇ ಡ್ರೈವಿಂಗ್ ಸೀಟ್‌ನಲ್ಲಿದ್ದ ಓರ್ವ ಗೆಳೆಯ ಕಾರು 140 ವೇಗಕ್ಕೆ ತಲುಪುವವರೆಗೂ ಆಕ್ಸಿಲರೇಟರ್ ಮೇಲೆ ಕಾಲಿಟ್ಟಿದ್ದ ಮುಂದೆ ಆಗಿದ್ದು, ದೊಡ್ಡ ಅನಾಹುತ. ಕಾರು ಪಲ್ಟಿಯಾಗಿ ಕಾರಿನಲ್ಲಿದ್ದ ಆರು ಜನರಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅಪಘಾತದ ರಭಸಕ್ಕೆ ಗಾಜು ಒಡೆದಂತೆ ಜೋರಾಗಿ ಸದ್ದಾಗಿ ನಂತರ ಕತ್ತಲಾವರಿಸಿತು. ಈ … Read more

ಗುಂಡೇಟಿನಿಂದ ಒಂದೇ ಕುಟುಂಬದ ಐವರು ಸಾವು, ಕೋಣೆಯಲ್ಲಿನ ದೃಶ್ಯ ಕಂಡು ಭಯಭೀತನಾದ ಸಹೋದರ!

ಉತ್ತರ ಪ್ರದೇಶದ ಸಹರಾನ್‌ಪುರದ ಕೊಠಡಿಯೊಂದರಲ್ಲಿ ಒಂದೇ ಕುಟುಂಬದ ಐದು ಸದಸ್ಯರು ಮೃತಪಟ್ಟಿರುವುದು ಪತ್ತೆಯಾಗಿದೆ. ಮೃತರಲ್ಲಿ ಭೂ ಸರ್ವೇಯರ್ ಅವರ ಪತ್ನಿ, ತಾಯಿ ಮತ್ತು ಅವರ ಇಬ್ಬರು ಪುತ್ರರು ಸೇರಿದ್ದಾರೆ. ಅಶೋಕ್ ಮತ್ತು ಅವರ ಪತ್ನಿ ಅಂಜಿತಾ ಶವಗಳು ನೆಲದ ಮೇಲೆ ಬಿದ್ದಿದ್ದರೆ, ಅವರ ತಾಯಿ ಮತ್ತು ಇಬ್ಬರು ಮಕ್ಕಳ ಶವ ಹಾಸಿಗೆಯ ಮೇಲೆ ಪತ್ತೆಯಾಗಿದೆ. ಎಷ್ಟೇ ಕರೆ ಮಾಡಿದರೂ ಸ್ವೀಕರಿಸದ ಕಾರಣ ಅಶೋಕ್ ಸಹೋದರ ಮನೆಗೆ ಬಂದು ನೋಡಿದ ನಂತರ ದಾರುಣ ಘಟನೆ ಬೆಳಕಿಗೆ ಬಂದಿದೆ. ಪ್ರಾಥಮಿಕ … Read more