ಯಾರ ಮಾತು ಕೇಳಿ ಹಿಂದಿ ಭಾಷೆಯನ್ನು ತೆಗೆದ್ರಿ? : ರಾಜ್ಯ ಸರ್ಕಾರದ ವಿರುದ್ಧ ಶೋಭಾ ಕರಂದ್ಲಾಜೆ ವಾಗ್ದಾಳಿ

ಹಿಂದಿ ಪರೀಕ್ಷೆ ಕಡ್ಡಾಯವಲ್ಲ ಎಂಬ ಸರ್ಕಾರದ ನಿರ್ಧಾರದ ವಿಚಾರಕ್ಕೆ ಸಂಬಂಧಪಟ್ಟಂತೆ ಭಾಷೆ ಕಲಿಯುವಂತದ್ದು ಅದು ಹೇರಿಕೆ ಅಲ್ಲ. ಯಾರ ಮಾತು ಕೇಳಿ ಹಿಂದಿ ಭಾಷೆ ತೆಗೆದಿದ್ದೀರಿ ಎಂದು ಸರ್ಕಾರಕ್ಕೆ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಪ್ರಶ್ನೆ ಮಾಡಿದ್ದಾರೆ. ಮೊದಮೊದಲು ದೆಹಲಿಗೆ ಹೋದಾಗ ನನ್ನ ಭಾಷೆ ಕೇಳಿ ನಗುತ್ತಿದ್ದರು. ಯಾವ ಭಾಷೆ ಮಾತನಾಡುವುದು ನೀವು ಅಂತ ನಗುತ್ತಿದ್ದರು. ಹಿಂದಿ ಕಲಿಯುವುದರಿಂದ ಸಮಸ್ಯೆ ಏನಾಗುತ್ತದೆ? ರಾಜ್ಯ ಸರ್ಕಾರ ತ್ರೀ ಭಾಷಾ ನೀತಿಯ ಬಗ್ಗೆ ಗೊಂದಲ ಸೃಷ್ಟಿಸುತ್ತಿದೆ. ನಾವು ತ್ರೀ ಭಾಷಾ … Read more

ಮಕ್ಕಳ ಪಾಲಿಗೆ ಮೃತ್ಯು ಕೂಪವಾದ ಕೃಷಿ ಹೊಂಡ: ನಾಲ್ವರು ಪುಟ್ಟ ಕಂದಮ್ಮಗಳ ಬದುಕು ದಾರುಣ ಅಂತ್ಯ

ನಾಲ್ವರು ಪುಟ್ಟ ಮಕ್ಕಳ ಪಾಲಿಗೆ ಕೃಷಿಹೊಂಡ ಯಮನಾಗಿದೆ. ಕೃಷಿ ಹೊಂಡದಲ್ಲಿ ಈಜುಲು ಹೋದ ನಾಲ್ವರು ಮಕ್ಕಳು ದಾರುಣವಾಗಿ ಸಾವನಪ್ಪಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ನಗನೂರು ಗ್ರಾಮದಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ. ಇಂದು ಕೃಷಿ ಹೊಂಡದಲ್ಲಿ ನಾಲ್ವರು ಪುಟ್ಟ ಮಕ್ಕಳ ಬದುಕು ಅಂತ್ಯಗೊಂಡಿದೆ. ಇದರಿಂದ ಸಂಬಂಧಿಕರ ಆಕ್ರಂದನ ಮುಗಿಲ ಮುಟ್ಟಿದೆ. ಈಜಲು ಹೋದ ನಾಲ್ವರು ಪುಟ್ಟ ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ದುರಂತದಿಂದ ಗ್ರಾಮದಲ್ಲಿ ತೀವ್ರ ಆಘಾತ ಮತ್ತು ದುಃಖದ ವಾತಾವರಣ ನಿರ್ಮಾಣವಾಗಿದೆ. ಪೋಷಕರು … Read more

ಸುಟ್ಟ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ: ಎದುರು ಮನೆಯವರಿಂದಲೇ ನಡೀತಾ ಭೀಕರ ಕೊಲೆ.?

ಸುಟ್ಟ ಸ್ಥಿತಿಯಲ್ಲಿ ಯುವಕನೊರ್ವನ ಶವ ಗದಗ ತಾಲೂಕಿನ ಹುಯಿಲಗೋಳ ಗ್ರಾಮದಲ್ಲಿ ಪತ್ತೆಯಾಗಿದೆ. ಮೃತ ಯುವಕನನ್ನು ಚಂದ್ರು ಕುರಿ (27) ಎಂದು ಗುರುತಿಸಲಾಗಿದ್ದು, ಮಂಗಳವಾರ ರಾತ್ರಿ ಮನೆಯಿಂದ ಹೊರ ಹೋದ ಚಂದ್ರು ಮೃತದೇಹ ಸೇತುವೆಯೊಂದರ ಕೆಳಭಾಗ ಕಂಡುಬಂದಿದೆ. ಕೊಲೆ ಅನುಮಾನ ವ್ಯಕ್ತವಾಗಿದ್ದು, ಮಗನನ್ನು ಸಾಯಿಸಿ ಬಳಿಕ ದೇಹವನ್ನು ಸುಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮನೆಯ ಹೆಣ್ಣು ಮಕ್ಕಳನ್ನು ನೋಡ್ತಾನೆ ಎಂದು ಆರೋಪಿಸಿ ಎದುರಿನ ಮನೆ ಕುಟುಂಬಸ್ಥರು ಹಲವು ಬಾರಿ ಜಗಳ ತೆಗೆದಿದ್ದರು. ಮೈ ಮೇಲೆ ಬೈಕ್ ಹತ್ತಿಸಲೂ ಬಂದಿದ್ದರು. … Read more

ತನ್ನ ಕಾಮದಾಟಕ್ಕೆ ಅಡ್ಡಿಯಾಗುತ್ತಿದ್ದ ಪತಿಯನ್ನೇ ಸುಪಾರಿ ನೀಡಿ ಕೊಲೆ ಮಾಡಿಸಿದ ಪತ್ನಿ!

ಸುಖವಾಗಿದ್ದ ಸಂಸಾರಕ್ಕೆ ‘ಸೈತಾನ’ನಂತೆ ಎಂಟ್ರಿ ಕೊಟ್ಟ ಪರಪುರುಷನ ಮೋಹಕ್ಕೆ ಬಿದ್ದ ಪತ್ನಿಯೊಬ್ಬಳು, ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದ ಪತಿಯನ್ನೇ ಸುಪಾರಿ ನೀಡಿ ಕೊಲೆ ಮಾಡಿಸಿದ ಭೀಕರ ಘಟನೆ ಯಾದಗಿರಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಅಪಘಾತ ಎಂದು ಬಿಂಬಿಸಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಆರೋಪಿಗಳ ಕರಾಳ ಕೃತ್ಯ ಈಗ ಬಯಲಾಗಿದೆ. ಯಾದಗಿರಿ ತಾಲೂಕಿನ ಚಾಮನಹಳ್ಳಿ ತಾಂಡದ ನಿವಾಸಿ, ಆಟೋ ಚಾಲಕ ಸಾಗರ್ ರಾಠೋಡ್ (35) ಕೊಲೆಯಾದ ದುರ್ದೈವಿ. ಸಾಗರ್ ಪತ್ನಿ ಪೂಜಾ ಹಾಗೂ ಅದೇ ಊರಿನ ರೆಡ್ಡಿ … Read more

ತಂದೆಗೆ ವಿಷದ ಮಿಲ್ಕ್‌ಶೇಕ್ ಕುಡಿಸಿ ಕೊಂದ ಪೊಲೀಸ್ ಪುತ್ರಿ! 3 ವರ್ಷಗಳ ಬಳಿಕ ಬಯಲಾಯ್ತು ಘೋರ ಕೃತ್ಯ

ಮಹಾರಾಷ್ಟ್ರದಲ್ಲಿ ಕರ್ತವ್ಯನಿರತ ಪೊಲೀಸ್ ಅಧಿಕಾರಿಯಾಗಿದ್ದ ತಂದೆಗೆ ಸ್ವತಃ ಮಗಳೇ ವಿಷದ ಮಿಲ್ಕ್‌ಶೇಕ್ ನೀಡಿ ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಪ್ರಕರಣ ನಡೆದ ಮೂರು ವರ್ಷಗಳ ನಂತರ ಪೊಲೀಸರು ಆರೋಪಿ ಪುತ್ರಿ ಹಾಗೂ ಇತರ ಮೂವರನ್ನು ಬಂಧಿಸಿದ್ದಾರೆ. 2023ರ ಏಪ್ರಿಲ್ 25ರಂದು ಮಹಾರಾಷ್ಟ್ರದ ಪೊಲೀಸ್ ಅಧಿಕಾರಿ ಜಯಂತ್ ಬಲ್ಲಾವರ್ (45) ಎಂದಿನಂತೆ ಕೆಲಸಕ್ಕೆ ಹೊರಡಲು ಸಿದ್ಧರಾಗಿದ್ದರು. ಈ ವೇಳೆ ಅವರ ಪುತ್ರಿ ಆರ್ಯ (ಈಕೆಯೂ ಪೊಲೀಸ್ ಆಗಿ ಕೆಲಸ ಮಾಡುತ್ತಿದ್ದಳು) ತಂದೆಗೆ ಮಿಲ್ಕ್‌ಶೇಕ್ ನೀಡಿದ್ದಳು. ಅದನ್ನು ಕುಡಿದು … Read more

ಮದುವೆಗೆ ಹೋಗಿದ್ದ ನಾಲ್ವರು ಮಸಣ ಸೇರಿದರು; ಈಜಾಡುವ ಮೋಜು ಮೃತ್ಯುವಾಗಿದ್ದೇಗೆ? ಇಲ್ಲಿದೆ ವಿವರ

ರಾಯಚೂರು : ಮದುವೆ ಸಂಭ್ರಮದ ಮನೆಯಲ್ಲಿ ನಗು-ಸಡಗರ ತುಂಬಿರಬೇಕಾದ ಹೊತ್ತಲ್ಲೇ ವಿಧಿಯಾಟಕ್ಕೆ ನಾಲ್ವರು ಬಲಿಯಾಗಿದ್ದಾರೆ. ಮದುವೆ ಊಟ ಮುಗಿಸಿ ಹರಿಯುವ ತುಂಗಭದ್ರಾ ನದಿಯಲ್ಲಿ ಈಜಾಡಲು ಹೋದ ನಾಲ್ವರು ಜಲಸಮಾಧಿಯಾದ ದಾರುಣ ಘಟನೆ ಆಂಧ್ರಪ್ರದೇಶದ ಗಡಿಭಾಗದಲ್ಲಿ ನಡೆದಿದೆ. ಈ ಘಟನೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆಯ ವಿವರ: ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದ ನಿವಾಸಿಗಳು ಆಂಧ್ರಪ್ರದೇಶದ ಕೋಸಿಗಿ ಮಂಡಲದ ಕಂದುಕೂರು ಗ್ರಾಮಕ್ಕೆ … Read more

ಹೂವಿನಂತಹ ಮೂವರು ಮಕ್ಕಳನ್ನು ಬಾವಿಗೆ ಎಸೆದು ತಾನೂ ಪ್ರಾಣಬಿಟ್ಟ ತಾಯಿ; ವಿಜಯಪುರದಲ್ಲಿ ಘೋರ ದುರಂತ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮಿರಗಿ ಗ್ರಾಮದಲ್ಲಿ ಮನಕಲಕುವ ಘಟನೆಯೊಂದು ನಡೆದಿದ್ದು, ತಾಯಿಯೊಬ್ಬಳು ತನ್ನ ಮೂವರು ಪುಟ್ಟ ಮಕ್ಕಳೊಂದಿಗೆ ಬಾವಿಗೆ ಹಾರಿ ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾಳೆ. ಸಂಸಾರದ ಸುಂದರ ಬದುಕಿನ ಆಸೆಗಳನ್ನೆಲ್ಲಾ ಮಣ್ಣುಪಾಲು ಮಾಡಿ, ಹೂವಿನಂತಹ ಮಕ್ಕಳೊಂದಿಗೆ ತಾಯಿ ಸಾವಿಗೆ ಶರಣಾಗಿರುವುದು ಇಡೀ ಗ್ರಾಮವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ. ಮಿರಗಿ ಗ್ರಾಮದ ನಿವಾಸಿ ರಾಜಶ್ರೀ ಶಂಕ್ರಪ್ಪ ಹಳ್ಳೂರ (28) ಎಂಬಾಕೆಯೇ ಆ*ತ್ಮಹ*ತ್ಯೆ ಮಾಡಿಕೊಂಡ ದುರ್ದೈವಿ ತಾಯಿ. ಈಕೆಯೊಂದಿಗೆ ಆಕೆಯ ಪುಟ್ಟ ಮಕ್ಕಳಾದ ಅನುಶ್ರೀ (6), ತನು (3) ಮತ್ತು ಕೇವಲ … Read more

ಆಂಧ್ರಪ್ರದೇಶ ಬಸ್‌ ದುರಂತ : ಮಗನನ್ನು ಕಿಟಕಿಯಿಂದ ಹೊರದೂಡಿ ಸಜೀವ ದಹನವಾದ ತಾಯಿ.!

ಆಂಧ್ರಪ್ರದೇಶದ ಮಾರ್ಕಾಪುರಂ ಜಿಲ್ಲೆಯಲ್ಲಿ ಖಾಸಗಿ ಬಸ್ ಮತ್ತು ಟಿಪ್ಪರ್ ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ 13 ಮಂದಿ ಸಜೀವ ದಹನವಾಗಿದ್ದಾರೆ. ಈ ದುರಂತದಲ್ಲಿ, ತಾಯಿಯೊಬ್ಬರು ತನ್ನ ಮಗನನ್ನು ಕಿಟಕಿಯಿಂದ ಹೊರಗೆ ತಳ್ಳಿ ಉಳಿಸಿ, ತಾನು ಬೆಂಕಿಗೆ ಆಹುತಿಯಾದ ಹೃದಯವಿದ್ರಾವಕ ಘಟನೆ ನಡೆದಿದೆ. ಚಲಿಸುತ್ತಿದ್ದ ಬಸ್ಸಿನಲ್ಲಿ ಬೆಂಕಿ ಆವರಿಸುತ್ತಿದ್ದಂತೆ ತನ್ನ ಮಗನನ್ನು ಹೇಗಾದರೂ ಮಾಡಿ ಉಳಿಸಲೇಬೇಕೆಂಬ ಹಂಬಲದಿಂದ ಕಿಟಕಿಯಿಂದ ಹೊರಕ್ಕೆ ತಳ್ಳಿದ ತಾಯಿಯೊಬ್ಬರು, ತಾನು ಮಾತ್ರ ಬೆಂಕಿಗಾಹುತಿಯಾದ ಹೃದಯವಿದ್ರಾವಕ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಆಂಧ್ರಪ್ರದೇಶದ ಮಾರ್ಕಾಪುರಂ ಜಿಲ್ಲೆಯಲ್ಲಿ … Read more

ಅಕ್ರಮ ಸಂಬಂಧದಿಂದಾಗಿ ತಾಯಿಯನ್ನು ನಿಂದಿಸಿದ ಕಾರಣ ಬಾಲಕನಿಂದ ಡಬಲ್‌ ಮರ್ಡರ್!

ಅಕ್ರಮ ಸಂಬಂಧವಾಗಿ ತಮ್ಮ ಮನೆಗೆ ನುಗ್ಗಿ ತಾಯಿ ಜತೆ ಜಗಳಕ್ಕಿಳಿದ ಪರಿಚಿತ ಮಹಿಳೆ ಹಾಗೂ ಆತನ ಸೋದರನನ್ನು ಚಾಕುವಿನಿಂದ ಮನಬಂದಂತೆ ಇರಿದು ಅಪ್ರಾಪ್ತ ಬಾಲಕನೊಬ್ಬ ಹತ್ಯೆಗೈದಿರುವ ಭೀಕರ ಘಟನೆ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ. ತಿಗಳರಪಾಳ್ಯದ ಯಮುನಾ (36) ಹಾಗೂ ಆಕೆಯ ಸೋದರ ಸುದೀಪ್‌ (34) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ 16 ವರ್ಷದ ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಹಾಗೂ ಆಕೆಯ ತಾಯಿ ಛಾಯಾಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆಲ ದಿನಗಳಿಂದ ಆರೋಪಿತ … Read more

ಮದುವೆಯಾದ ತಂಗಿಯ ಮೇಲೆ ಕಣ್ಣುಹಾಕಿದ ಬಾಮೈದನ ಕಥೆ ಮುಗಿಸಿದ ಭಾವ!

ರಾಜಧಾನಿಯ ಹೊರವಲಯದ ಆನೇಕಲ್ ತಾಲೂಕಿನಲ್ಲಿ ಸಂಬಂಧಗಳ ನಡುವಿನ ಸಂಘರ್ಷ ಭೀಕರ ಕೊಲೆಯಲ್ಲಿ ಅಂತ್ಯವಾಗಿದೆ. ತನ್ನ ತಂಗಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂಬ ಕಾರಣಕ್ಕೆ ಭಾವನೇ ತನ್ನ ಬಾಮೈದನನ್ನು ಅಮಾನುಷವಾಗಿ ಹತ್ಯೆ ಮಾಡಿ, ಶವವನ್ನು ಕಾರಿನ ಡಿಕ್ಕಿಯಲ್ಲಿಟ್ಟುಕೊಂಡು ಪೊಲೀಸ್ ಠಾಣೆಗೆ ಬಂದು ಶರಣಾಗಿರುವ ಘಟನೆ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬನ್ನೇರುಘಟ್ಟ ಸಮೀಪದ ಬೈರಪ್ಪನಹಳ್ಳಿ ನಿವಾಸಿ ಶ್ರೀನಿವಾಸ್ ಕೊಲೆ ಮಾಡಿದ ಆರೋಪಿ. ಮರಸೂರು ಮೂಲದ ರಂಜಿತ್ (24) ಕೊಲೆಯಾದ ದುರ್ದೈವಿ. ವಿಶೇಷವೆಂದರೆ, ಶ್ರೀನಿವಾಸ್ ಅವರು ರಂಜಿತ್‌ನ ಸ್ವಂತ … Read more