ದೀದಿ ಮಾತ್ರ ನಿಮ್ಮನ್ನು ರಕ್ಷಿಸಲು ಸಾಧ್ಯ: ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌

‘ಬಿಜೆಪಿ ಮತ್ತು ಚುನಾವಣಾ ಆಯೋಗದ ಪಿತೂರಿಯಿಂದ ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಹೆಸರಿನಲ್ಲಿ 90 ಲಕ್ಷ ಮತದಾರರನ್ನು ಕೈಬಿಡಲಾಯಿತು’ ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಭಾನುವಾರ ಆರೋಪಿಸಿದ್ದಾರೆ. ಇಲ್ಲಿನ ರಾಸ್ ಬಿಹಾರಿ ಕ್ಷೇತ್ರದಲ್ಲಿ ಟಿಎಂಸಿ ಪರ ಚುನಾವಣಾ ಪ್ರಚಾರ ನಡೆಸಿದ ಅವರು, ಪೌರತ್ವ ಹಕ್ಕುಗಳನ್ನು ಕಸಿದುಕೊಳ್ಳಲು ಬಿಜೆಪಿ ಬಯಸುತ್ತಿದೆ ಎಂದು ಹೇಳಿದ್ದಾರೆ. ‘ನಿಮ್ಮ ಪೌರತ್ವ ಹಕ್ಕುಗಳನ್ನು ಕಸಿದುಕೊಳ್ಳಲು ಬಯಸುತ್ತಿರುವ ಬಿಜೆಪಿಯ ವಿರುದ್ಧದ ಈ ಹೋರಾಟದಲ್ಲಿ ದೀದಿ(ಮಮತಾ ಬ್ಯಾನರ್ಜಿ) ಗೆಲ್ಲಲೇಬೇಕು. ನಿಮ್ಮ ಸ್ನೇಹಿತರು, … Read more

ನಿಶ್ಚಿತಾರ್ಥ ಬಿಟ್ಟು ಬೆರೊಬ್ಬ ಯುವಕನ ಜೊತೆ ಯುವತಿ ಪರಾರಿ – ಹಿಂದೂ ಸಂಘಟನೆಗಳ‌ ಲವ್ ಜಿಹಾದ್ ಆರೋಪ

ನಿಶ್ಚಿತಾರ್ಥಕ್ಕೆ ಒಂದು ದಿನ ಇರುವಾಗಲೇ ರಾತ್ರೋರಾತ್ರಿ ಯುವತಿ ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿ ಕುಟುಂಬಕ್ಕೆ ಶಾಕ್ ನೀಡಿದ ಘಟನೆ ಹಾನಗಲ್ ತಾಲ್ಲೂಕಿನ ಶಂಕ್ರಿಕೊಪ್ಪ ಗ್ರಾಮದಲ್ಲಿ ನಡೆದಿದೆ. ಈ ಘಟನೆ ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು ಲವ್ ಜಿಹಾದ್ ಆರೋಪ ಕೇಳಿಬಂದಿದೆ.ಶಂಕ್ರಿಕೊಪ್ಪ ಗ್ರಾಮದ ನಿವಾಸಿ ಶಂಕ್ರಮ್ಮ ಕೆರಿಮತ್ತಿಹಳ್ಳಿ (24) ನಾಪತ್ತೆಯಾದ ಯುವತಿ. ಈಕೆಗೆ ಏಪ್ರಿಲ್ 26ರಂದು ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ನಿಗದಿಯಾಗಿತ್ತು, ಮೇ 11ಕ್ಕೆ ಮದುವೆ ಮುಹೂರ್ತವೂ ನಿಶ್ಚಯವಾಗಿತ್ತು. ಆದರೆ ನಿಶ್ಚಿತಾರ್ಥದ ಹಿಂದಿನ ರಾತ್ರಿ ಶಂಕ್ರಮ್ಮ ನಾಪತ್ತೆಯಾಗಿದ್ದಾಳೆ.ನರೇಗಲ್ ಗ್ರಾಮದ ನಿವಾಸಿ … Read more

‘ಬೆಂದ ಮನೆಯಲ್ಲಿ ‘ಗಳ’ ಹಿರಿಯುವ ಕೆಲಸಕ್ಕೆ ಕೈ ಹಾಕಲ್ಲ;  5ನೇ ಬಾರಿ ದೇವರು ಜೀವನ ಕೊಟ್ಟಿದ್ದಾನೆ : ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ

ದಾವಣಗೆರೆ ಉಪ ಚುನಾವಣೆ ಸಂದರ್ಭ ಟಿಕೆಟ್ ವಿಚಾರವಾಗಿ ಕಾಂಗ್ರೆಸ್ನಲ್ಲಿ ವೈಮನಸು ಮೂಡಿದ್ದು, ತಮ್ಮ ಸಮುದಾಯಕ್ಕೆ ಟಿಕೆಟ್ ನೀಡಿಲ್ಲವೆಂದು ಸಚಿವ ಜಮಿರ್ ಅಹ್ಮದ್ ಖಾನ್ ಅಸಮಾಧಾನಗೊಂಡಿದ್ದರು. ಹೀಗಾಗಿ ಜಮಿರ್ ಅಹ್ಮದ್ ಖಾನ್ ಕಾಂಗ್ರೆಸ್ ತೊರೆದು ವಾಪಸ್ ಜೆಡಿಎಸ್ ಸೇರುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಈ ಸಂಬಂಧ ಈಗಾಗಲೇ ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಸಚಿವ ಹೆಚ್‍ಡಿ ಕುಮಾರಸ್ವಾಮಿ ಅವರು, ಇದೀಗ ಮತ್ತೊಮ್ಮೆ ಉತ್ತರಿಸಿದ್ದು, ಅಧಿಕಾರಕ್ಕಾಗಿ ಅಂತಹವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಅನಿವಾರ್ಯ ನಮಗೆ ಬಂದಿಲ್ಲ ಎಂದು ತಿಳಿಸಿದ್ದಾರೆ . ಹಾಸನದಲ್ಲಿ ಈ … Read more

ಬೆಂಗಳೂರು ಮಧ್ಯೆದಲ್ಲಿ ಡಾ ರಾಜ್‌ ಸಮಾಧಿಗೆ 2.5 ಎಕರೆ ಭೂಮಿ ಕೊಟ್ಟಿದ್ದು ಸರಿಯಲ್ಲ; ಅಣ್ಣಾವ್ರ ಹುಟ್ಟುಹಬ್ಬದಂದೇ ನಟ ಚೇತನ್ ಹೇಳಿಕೆ ವಿವಾದ

ಬೆಂಗಳೂರಿನ ನಗರ ಮಧ್ಯದಲ್ಲಿ ಡಾ.ರಾಜ್‌ಕುಮಾರ್‌ ಅವರ ಸಮಾಧಿ ಕಾಂಪ್ಲೆಕ್ಸ್‌ಗಾಗಿ ಜಾಗ ನೀಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್‌ ಅಹಿಂಸ ಅವರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಡಾ ರಾಜ್‌ಕುಮಾರ್‌ ಅವರ ಹುಟ್ಟುಹಬ್ಬದಂದೇ ಇಂಥದ್ದೊಂದು ಪೋಸ್ಟ್‌ ಮಾಡುವ ಮೂಲಕ ನಟ ಚೇತನ್‌ ಅವರು ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ‘ನಾವು ರಾಜಕುಮಾರ್‌ ಅವರನ್ನು ಒಬ್ಬ ಮಹಾನ್‌ ಕಲಾವಿದರಾಗಿ ಗೌರವಿಸುತ್ತೇವೆ. ಆದರೆ, ಬೆಂಗಳೂರು ನಗರ ಮಧ್ಯದಲ್ಲಿ 2006ರಲ್ಲಿ ಒಬ್ಬ ನಟನ ‘ಸಮಾಧಿ ಕಾಂಪ್ಲೆಕ್ಸ್’ಗಾಗಿ 2.5 ಎಕರೆ … Read more

ಮುಗ್ದ ಮಕ್ಕಳ ಹಿಂದೆ ಅಡಗಿ ಟ್ವೀಟ್ ಮಾಡುವುದನ್ನು ಬಿಡಿ, ಅದು ಹೇಡಿತನ ಎಂದು ಸಚಿವ ಪ್ರಿಯಾಂಕ್ ಖರ್ಗೆಗೆ ತಿರುಗೇಟು ನೀಡಿದ ಬಿಜೆಪಿ

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಪ್ರಥಮ ಸ್ಥಾನ ಮತ್ತು ಕಲಬುರಗಿ ಕೊನೆಯ ಸ್ಥಾನ ಪಡೆದಿರುವುದು ರಾಜಕೀಯ ವಿವಾದಕ್ಕೆ ಕಾರಣವಾಗಿದೆ, ಕರಾವಳಿ ಜಿಲ್ಲೆಯ ಬಗ್ಗೆ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗಳನ್ನು ಬಿಜೆಪಿ ಟೀಕಿಸಿದೆ. ದಕ್ಷಿಣ ಕನ್ನಡದಲ್ಲಿ ಕೋಮು ಉದ್ವಿಗ್ನತೆಯಿಂದ ಬಂಡವಾಳ ಹೂಡಿಕೆ ಮೇಲೆ ಪ್ರಭಾವ ಬೀರಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದರು. ಆ ಸಮಯದಲ್ಲಿ ಬಿಜೆಪಿ ನಾಯಕರಿಂದ ಪ್ರಿಯಾಂಕ್ ಖರ್ಗೆ ತೀವ್ರ ಟೀಕೆಗೆ ಗುರಿಯಾಗಿದ್ದರು. ಮಂಗಳೂರು ಉತ್ತರ ನಗರದ ಶಾಸಕ ವೈ ಭರತ್ ಶೆಟ್ಟಿ, … Read more

Breaking News : ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಗಂಭೀರ : ‘ICU’ ನಲ್ಲಿ ಚಿಕಿತ್ಸೆ.!

ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ. ಸುಧಾಕರ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಸದ್ಯ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಕಿಮ್ಸ್ (KIMS) ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ನೀಡಲಾಗುತ್ತಿದೆ. ಸಚಿವರಿಗೆ ಶ್ವಾಸಕೋಶದ ಸೋಂಕು (Lung Infection) ತೀವ್ರವಾಗಿದ್ದು, ಅವರ ಸ್ಥಿತಿ ಕಳವಳಕಾರಿಯಾಗಿದೆ. ಪ್ರಸ್ತುತ ಅವರನ್ನು ಎಕ್ಮೋ (ECMO) ಲೈಫ್ ಸಪೋರ್ಟ್‌ನಲ್ಲಿ ಇರಿಸಲಾಗಿದೆ ಎಂದು ವರದಿಯಾಗಿದೆ.ಕೆಲವು ದಿನಗಳ ಹಿಂದೆ ಮೊಣಕಾಲು ಶಸ್ತ್ರಚಿಕಿತ್ಸೆಗಾಗಿ ಯಶವಂತಪುರದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆ ಯಶಸ್ವಿಯಾದ ನಂತರ ಹಠಾತ್ತನೆ … Read more

ನೇತಾಜಿ ಘೋಷಣೆ ವಿವೇಕಾನಂದರದ್ದು ಎಂದ ಯೋಗಿ ಆದಿತ್ಯನಾಥ್ ಇತಿಹಾಸದ ಜ್ಞಾನವಿಲ್ಲ ಎಂದು ನೆಟ್ಟಿಗರ ಆಕ್ರೋಶ

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಅಖಾಡದಲ್ಲಿ ರಾಜಕೀಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಈ ನಡುವೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಾಡಿರುವ ಒಂದು ವಿವಾದಾತ್ಮಕ ಹೇಳಿಕೆ ಈಗ ದೇಶಾದ್ಯಂತ ಭಾರೀ ಚರ್ಚೆಗೆ ಮತ್ತು ಟೀಕೆಗೆ ಗುರಿಯಾಗಿದೆ. ಚುನಾವಣಾ ಪ್ರಚಾರದ ಭರದಲ್ಲಿ ಅವರು ದೇಶದ ಇತಿಹಾಸದ ಪ್ರಮುಖ ಘೋಷಣೆಯೊಂದನ್ನು ತಪ್ಪಾಗಿ ಉಲ್ಲೇಖಿಸಿದ್ದು, ನೆಟ್ಟಿಗರು ಇವರ ಇತಿಹಾಸದ ಜ್ಞಾನವನ್ನು ಪ್ರಶ್ನಿಸುವಂತೆ ಮಾಡಿದೆ. ಪಶ್ಚಿಮ ಬಂಗಾಳದಲ್ಲಿ ನಡೆದ ಬೃಹತ್ ಚುನಾವಣಾ ರ್ಯಾಲಿಯಲ್ಲಿ ಮಾತನಾಡುತ್ತಿದ್ದ ಯೋಗಿ ಆದಿತ್ಯನಾಥ್ ಅವರು, … Read more

ಕಟ್ಟಿಂಗ್ ಶಾಪ್‌ನವನ ಜೊತೆ ಓಡಿದ ವಿವಾಹಿತ ಮಹಿಳೆ: ಗಂಡ ಮಕ್ಕಳಿಗೆ ನಿದ್ರೆ ಮಾತ್ರೆ ಹಾಕಿ ಎಸ್ಕೇಪ್

ಇತ್ತಿಚೆಗೆ ವಿವಾಹೇತರ ಸಂಬಂಧಗಳ ಸಂಖ್ಯೆ ತೀವ್ರವಾಗಿ ಹೆಚ್ಚಾಗಿದ್ದು, ಕುಟುಂಬ ವ್ಯವಸ್ಥೆಯೇ ಮುರಿದು ಬೀಳುವ ಆತಂಕ ಎದುರಾಗಿದೆ. ಪ್ರತಿದಿನವೂ ಒಂದಲ್ಲ ಒಂದು ಅನೈತಿಕ ಸಂಬಂಧಗಳಿಂದ ಅವಾಂತರಗಳಾದ ಸುದ್ದಿಗಳು ಬೆಳಕಿಗೆ ಬರುತ್ತಿದ್ದು, ಇದರಿಂದ ಅವರನ್ನು ನಂಬಿದವರು ಬೀದಿಗೆ ಬೀಳುತ್ತಿದ್ದಾರೆ. ಗಂಡ ಮಕ್ಕಳಿದ್ದವರು ಅಥವಾ ಹೆಂಡತಿ ಮಕ್ಕಳಿದ್ದವರು ಎಲ್ಲರನ್ನು ಬಿಟ್ಟು ಮತ್ತೊಬ್ಬರ ಹಿಂದೆ ಹೋಗಿ ತಮ್ಮನ್ನು ನಂಬಿ ಬಂದವರನ್ನು ನಡು ನೀರಲ್ಲಿ ಕೈ ಬಿಡುತ್ತಿದ್ದಾರೆ. ಈಗ ಅಂತಹದ್ದೇ ಮತ್ತೊಂದು ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಕಟ್ಟಿಂಗ್ ಶಾಪ್‌ನವನ ಜೊತೆ ಪ್ರಿಯಾಂಕಾ ಪರಾರಿ … Read more

ನನ್ನಿಂದ ಆಕಾಶವನ್ನೇ ಭೂಮಿಗೆ ಇಳಿಸಲು ಸಾಧ್ಯವಿಲ್ಲ : ಮತದಾರರ ನಡೆಗೆ ಕೃಷಿ ಸಚಿವ ಚಲುವರಾಯಸ್ವಾಮಿ ತೀವ್ರ ಅಸಮಾಧಾನ

ನಾಗಮಂಗಲ ತಾಲೂಕಿನ ಅಭಿವೃದ್ಧಿಗಾಗಿ ಜನರ ನಿರೀಕ್ಷೆಗೂ ಮೀರಿ ಅಹೋರಾತ್ರಿ ಶ್ರಮಿಸುತ್ತಿದ್ದರೂ ಸಹ ಸಾರ್ವಜನಿಕರಲ್ಲಿ ತೃಪ್ತಿ ಕಾಣುತ್ತಿಲ್ಲದಿರುವುದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರ ಬೇಸರಕ್ಕೆ ಕಾರಣವಾಗಿದೆ. ಹೆರಗನಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಲಾದ ಕಲ್ಯಾಣಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಅಭಿವೃದ್ಧಿಯ ಹರಿಕಾರನಾಗಿ ಕೆಲಸ ಮಾಡುತ್ತಿದ್ದರೂ ಕಿಮ್ಮತ್ತಿಲ್ಲದಿದ್ದರೆ ನನ್ನಿಂದ ಆಕಾಶವನ್ನೇ ಭೂಮಿಗೆ ಇಳಿಸಲು ಸಾಧ್ಯವಿಲ್ಲ ಎಂದು ಮಾರ್ಮಿಕವಾಗಿ ನುಡಿದರು. ಕ್ಷೇತ್ರದ ಜನರ ವಿಚಿತ್ರ ನಿಲುವಿನ ಬಗ್ಗೆ ಕೆಂಡಾಮಂಡಲವಾದ ಸಚಿವರು, ನನ್ನ ವಿರುದ್ಧ ಗೆದ್ದವರು ಐದು ವರ್ಷಗಳ ಕಾಲ … Read more

‘ಭಾರತದ ಜನತೆಗೆ ಗೊತ್ತಿದೆ ಭಯೋತ್ಪಾದಕರು ಯಾರು ಅನ್ನೋದು’ ಪ್ರಧಾನಿ ಮೋದಿಗೆ ಟೆರರಿಸ್ಟ್ ಎಂದ ಖರ್ಗೆ ವಿರುದ್ಧ ಬಿಜೆಪಿ ಗರಂ

ಪ್ರಧಾನಿ ಮೋದಿ ಅವರನ್ನು ಕುರಿತು ‘ಭಯೋತ್ಪಾದಕ’ ಎಂದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ರಾಜ್ಯ ಬಿಜೆಪಿ ನಾಯಕರು ತೀವ್ರವಾಗಿ ವಿರೋಧಿಸಿದ್ದು, ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಖರ್ಗೆ ಅವರ ಹೇಳಿಕೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ವಿಧಾನಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕ ಎನ್‌.ರವಿಕುಮಾರ್ ಬಲವಾಗಿ ಖಂಡಿಸಿದ್ದಾರೆ. ಖರ್ಗೆ ದುರಹಂಕಾರದ ಪರಮಾವಧಿ ಖರ್ಗೆ ಅವರೇ, ಮೋದಿ ಅವರನ್ನು ‘ಭಯೋತ್ಪಾದಕ’ ಎಂದು ತೀರಾ ಕೀಳುಮಟ್ಟದಲ್ಲಿ ನೀವು ನೀಡಿರುವ ಹೇಳಿಕೆ ನಿಮ್ಮ ದುರಹಂಕಾರದ … Read more