ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಆಯ್ಕೆ | Suvendu Adhikari

ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಸುದೀರ್ಘ 15 ವರ್ಷಗಳ ತೃಣಮೂಲ ಕಾಂಗ್ರೆಸ್ ಆಡಳಿತಕ್ಕೆ ಅಂತಿಮ ತೆರೆ ಬಿದ್ದಿದೆ. ಐತಿಹಾಸಿಕ ವಿಧಾನಸಭಾ ಚುನಾವಣಾ ಗೆಲುವಿನ ಬೆನ್ನಲ್ಲೇ, ಭಾರತೀಯ ಜನತಾ ಪಕ್ಷವು (ಬಿಜೆಪಿ) ಶುಕ್ರವಾರ ಸುವೇಂದು ಅಧಿಕಾರಿ ಅವರನ್ನು ರಾಜ್ಯದ ನೂತನ ಮುಖ್ಯಮಂತ್ರಿಯನ್ನಾಗಿ ಘೋಷಿಸಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧಾರ: ಕೋಲ್ಕತ್ತಾದ ಹೋಟೆಲ್‌ವೊಂದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ವೀಕ್ಷಕರ ಸಮ್ಮುಖದಲ್ಲಿ ನಡೆದ ಬಿಜೆಪಿ ಶಾಸಕರ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಮಮತಾ ಬ್ಯಾನರ್ಜಿ … Read more

ರಕ್ತಸಂಬಂಧವನ್ನೇ ಮರೆತು ಹಸೆಮಣೆಗೆ ಏರಿದ ಅಕ್ಕ ತಮ್ಮ..! ಪೋಷಕರು ವಿರೋಧಿಸಿದ್ದಕ್ಕೆ ಓಡಿ ಹೋಗಿ ಮದುವೆ!

ಪ್ರೀತಿ ಕುರುಡು ಎಂಬ ಮಾತಿಗೆ ಸಾಕ್ಷಿಯೆಂಬಂತೆ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರಕ್ತಸಂಬಂಧದ ಮನ್ನಣೆಯನ್ನೇ ಮರೆತು ಅಕ್ಕ-ತಮ್ಮ ಹಸೆಮಣೆ ಏರಿರುವ ವಿಲಕ್ಷಣ ಘಟನೆ ನಡೆದಿದೆ. ವರಸೆಯಲ್ಲಿ ಅಕ್ಕ-ತಮ್ಮನಾಗಬೇಕಿದ್ದ ಜೋಡಿ ಈಗ ಸಪ್ತಪದಿ ತುಳಿಯುವ ಮೂಲಕ ಸಾಮಾಜಿಕ ಚರ್ಚೆಗೆ ಗ್ರಾಸವಾಗಿದ್ದಾರೆ. ದೇವನಹಳ್ಳಿಯ ಸಾವಕನಹಳ್ಳಿ ಮೂಲದ ಶಶಿಕಲಾ ಹಾಗೂ ಹೊಸಕೋಟೆಯ ಪ್ರವೀಣ್ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ವಿಶೇಷವೆಂದರೆ, ಇವರಿಬ್ಬರ ತಾಯಂದಿರು ಸ್ವಂತ ಅಕ್ಕ-ತಂಗಿಯರು. ಅಂದರೆ ವರಸೆಯಲ್ಲಿ ಶಶಿಕಲಾ ಮತ್ತು ಪ್ರವೀಣ್ ಅಕ್ಕ-ತಮ್ಮನಾಗಬೇಕು. ಆದರೆ ಈ ಸಂಬಂಧದ ಗಡಿಯನ್ನು ಮೀರಿ ಇಬ್ಬರೂ ಮದುವೆಯಾಗಲು … Read more

ಶೂ ಹಾಕಲು ಕಷ್ಟಪಡುತ್ತಿದ್ದ ಮಲ್ಲಿಕಾರ್ಜುನ ಖರ್ಗೆಗೆ ರಾಹುಲ್ ಗಾಂಧಿ ಏನ್ ಮಾಡಿದ್ರು ನೋಡಿ, Video

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಲವು ಬಾರೀ ತನ್ನ ಸರಳ ನಡವಳಿಕೆಯಿಂದ ಎಲ್ಲರ ಮನಗೆಲ್ಲುತ್ತಾರೆ. ತನ್ನ ಸ್ಥಾನವನ್ನು ಗಮನಿಸದೆ ಅವರ ಸರಳತೆ ಎಲ್ಲರಿಗೂ ಇಷ್ಟವಾಗುತ್ತದೆ. ಇದೀಗ ಅಂತಹದ್ದೇ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಡೋರ್ ಬಳಿ ಶೂ ಹಾಕಲು ಕಷ್ಟಪಡುತ್ತಿದ್ದ ಮಲ್ಲಿಕಾರ್ಜುನ ಖರ್ಗೆಗೆ ರಾಹುಲ್ ಗಾಂಧಿ ಸ್ವತಃ ತನ್ನ ಕೈಯಾರೆ ಶೂವನ್ನು ಇಟ್ಟು ಸಹಾಯ ಮಾಡಿದ್ದಾರೆ. ರಾಹುಲ್ ಗಾಂಧಿಯವರ ಈ ಸರಳತೆ ಇದೀಗ ಎಲ್ಲರ ಮನಗೆದ್ದಿದೆ. ವೀಡಿಯೋದಲ್ಲಿ ರಾಹುಲ್ ಗಾಂಧಿ ಸಾಮಾನ್ಯ ರಬ್ಬರ್ ಚಪ್ಪಲಿ … Read more

ದಪ್ಪಗಿದ್ದಾಳೆಂದು ಪತ್ನಿಯನ್ನೇ ಕೊಂದ ಪಾಪಿ ಪತಿ ; ವಿಷಕ್ಕಾಗಿ 80,000 ರೂ. ಖರ್ಚು ಮಾಡಿದ್ದ ಕಿರಾತಕ.!

ಹೆಂಡತಿಯ ತೂಕ ಹೆಚ್ಚಾಯಿತು ಎಂಬ ಕ್ಷುಲ್ಲಕ ಕಾರಣಕ್ಕೆ, ಎಂಟು ವರ್ಷಗಳ ದಾಂಪತ್ಯವನ್ನು ಮರೆತು ಪತಿಯೊಬ್ಬ ತನ್ನ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆಂಧ್ರಪ್ರದೇಶದ ವೈಎಸ್‌ಆರ್ ಕಡಪ ಜಿಲ್ಲೆಯಲ್ಲಿ ವರದಿಯಾಗಿದೆ. ‘ಸುಖಿ ಸಂಸಾರ’ ಎಂದು ಭಾವಿಸಿದ್ದ ನೆರೆಹೊರೆಯವರು ಈ ಕ್ರೌರ್ಯ ಕಂಡು ದಿಗಿಲುಗೊಂಡಿದ್ದಾರೆ. ಘಟನೆಯ ಹಿನ್ನೆಲೆ : ಮನೆಯಳಿಯನಾಗಿದ್ದ ಕಿರಣ್ ಆಂಧ್ರದ ಮುದ್ದನೂರು ಮಂಡಲದ ಪದ್ಮಜಾ (31) ಮತ್ತು ಪ್ರೊದ್ದಟೂರಿನ ಭದ್ರಾಪಲ್ಲಿ ಕಿರಣ್ ಕುಮಾರ್ ಅವರು 2018ರಲ್ಲಿ ಮದುವೆಯಾಗಿದ್ದರು. ಮದುವೆಯ ನಂತರ ಕಿರಣ್ ತನ್ನ ಪತ್ನಿಯ ಮನೆಯಲ್ಲೇ … Read more

ತಮಿಳುನಾಡಿನಲ್ಲಿ ಯಾರೂ ಬಹುಮತ ಪಡೆಯಲ್ಲ, ದಯವಿಟ್ಟು ಬಿಜೆಪಿ ಬಲಪಡಿಸಿ: 2 ವರ್ಷದ ಹಿಂದೆಯೇ ಅಣ್ಣಾಮಲೈ ನೀಡಿದ್ದ ಸಲಹೆ ಕಡೆಗಣಿಸಿ ಕೆಟ್ಟ ಬಿಜೆಪಿ

ತಮಿಳುನಾಡು ರಾಜಕಾರಣದಲ್ಲಿ ಸದ್ಯ ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು, ಎಲ್ಲರ ಚಿತ್ತ ಟಿವಿಕೆ ಯಾವಾಗ ಸ್ಪಷ್ಟ ಬಹುಮತ ಸಾಬೀತುಪಡಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎನ್ನುವುದರತ್ತ ಇದೆ. ಫಲಿತಾಂಶ ಹೊರಬಿದ್ದು ಮೂರು ದಿನಗಳಾದರೂ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಟಿವಿಕೆಗೆ ಇನ್ನೂ ಸಹ ಬಹುಮತ ಸಾಬೀತುಪಡಿಸಲು ಸಾಧ್ಯವಾಗದೇ ಇದ್ದು, ಭಾರೀ ಕುತೂಹಲ ಮೂಡಿಸಿದೆ. ಇನ್ನು ಟಿವಿಕೆಗೆ 5 ಕ್ಷೇತ್ರಗಳಲ್ಲಿ ಗೆದ್ದಿರುವ ಕಾಂಗ್ರೆಸ್ ಬೆಂಬಲ ಸೂಚಿಸಿ ಕೈ ಜೋಡಿಸಿದ್ದು, ಉಳಿದ ಸ್ಥಾನಗಳಿಗೆ ಸಣ್ಣ ಪಕ್ಷಗಳ ಮೊರೆ ಹೋಗಬೇಕಿದೆ. ಹೀಗೆ ಅತಿ ದೊಡ್ಡ ಪಕ್ಷವಾಗಿ … Read more

ಒಂದೇ ಒಂದು ವಾಟ್ಸಾಪ್ ಮೆಸೇಜ್; ವಿಜಯ್ ನಡೆಗೆ ದಂಗಾದ ಎಡರಂಗ: ಉಲ್ಟಾ ಹೊಡೆಯುತ್ತಾ ರಾಜಕೀಯ ಲೆಕ್ಕಾಚಾರ?

ತಮಿಳುನಾಡಿನಲ್ಲಿ ಸರ್ಕಾರ ರಚನೆಯ ರಾಜಕೀಯ ಹೋರಾಟ ಈಗ ವಾಟ್ಸಾಪ್ ರಾಜಕೀಯದತ್ತ ತಿರುಗಿದೆ. ನಟ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷ, ಸರ್ಕಾರ ರಚಿಸಲು ಅಗತ್ಯವಿರುವ ಬೆಂಬಲಕ್ಕಾಗಿ ಸಿಪಿಐ, ಸಿಪಿಐ(ಎಂ) ಮತ್ತು ವಿಸಿಕೆ ಪಕ್ಷಗಳನ್ನು ನೇರ ಸಭೆಗಳಿಗೆ ಕರೆಯುವುದಕ್ಕಿಂತ ವಾಟ್ಸಾಪ್ ಸಂದೇಶಗಳ ಮೂಲಕ ಸಂಪರ್ಕಿಸಿರುವುದು ರಾಜ್ಯ ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಇದೀಗ ಸರ್ಕಾರ ರಚನೆಗೂ ವಾಟ್ಸಾಪ್ ಸಾಕೇ? ಇದಕ್ಕೆ ಎಡಪಂಥೀಯ ನಾಯಕರು ಅಸಮಾಧಾನ ವ್ಯಕ್ತ ಪಡಿಸಿರುವಾದದರೂ ಏಕೆ ಎನ್ನುವುದನ್ನು ನೋಡೋಣ ಬನ್ನಿ. ಅತಿದೊಡ್ಡ ಪಕ್ಷವಾಗಿ … Read more

BIG BREAKING : ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಸಂಚಲನ : ಸಂಪುಟ ವಜಾಗೊಳಿಸಿದ ರಾಜ್ಯಪಾಲರು

ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಇಂದು ಮಹತ್ವದ ಬೆಳವಣಿಗೆಯಾಗಿದೆ. ತೃಣಮೂಲ ಕಾಂಗ್ರೆಸ್ ಸರ್ಕಾರದ ಪಟ್ಟು ಸಡಿಲಿಸಿರುವ ರಾಜ್ಯಪಾಲ ಆರ್.ಎನ್. ರವಿ, ರಾಜ್ಯ ವಿಧಾನಸಭೆಯನ್ನು ವಿಸರ್ಜಿಸುವ ಮೂಲಕ ಮಮತಾ ಬ್ಯಾನರ್ಜಿ ಅವರ ಸುದೀರ್ಘ ಆಡಳಿತಕ್ಕೆ ಅಧಿಕೃತವಾಗಿ ತೆರೆ ಎಳೆದಿದ್ದಾರೆ. ಘಟನೆಯ ಪ್ರಮುಖ ಮುಖ್ಯಾಂಶಗಳು: ಸಂಪುಟ ವಜಾ: ಸಂವಿಧಾನದ ದತ್ತ ಅಧಿಕಾರವನ್ನು ಬಳಸಿ ರಾಜ್ಯಪಾಲರು ಮಮತಾ ಬ್ಯಾನರ್ಜಿ ಅವರ ಸಚಿವ ಸಂಪುಟವನ್ನು ವಜಾಗೊಳಿಸಿದ್ದಾರೆ. ಇದು ರಾಜ್ಯದ ಇತಿಹಾಸದಲ್ಲಿ ಅತ್ಯಂತ ಅನಿರೀಕ್ಷಿತ ಬೆಳವಣಿಗೆಯಾಗಿದೆ. ಪ್ರಮುಖ ಕಾರಣಗಳು: ಮೂಲಗಳ ಪ್ರಕಾರ, ಮಮತಾ ಬ್ಯಾನರ್ಜಿ ಅವರ … Read more

SHOCKING : ನಿನ್ನ ರೇಟ್ ಎಷ್ಟು? ಬರ್ತೀಯ? : ಕಾಮುಕ ಮಾತು ಕೇಳಿ ಬೆಚ್ಚಿದ ಮಹಿಳಾ IPS ಅಧಿಕಾರಿ – Video Viral

ಮಹಿಳಾ ಸುರಕ್ಷತೆ ಬಗ್ಗೆ ಮಹಿಳಾ ಅಧಿಕಾರಿಯೊಬ್ಬರು ಮಾರು ವೇಷದಲ್ಲಿ ಬೀದಿಯಲ್ಲಿ ನಿಂತು ಪರಿಶೀಲನೆ ನಡೆಸಿದಾಗ ಅಘಾತಕಾರಿ ಘಟನೆ ನಡೆದಿದ್ದು, ಕೇವಲ ಮೂರು ಗಂಟೆಗಳಲ್ಲಿ ಸುಮಾರು 40 ಮಂದಿ ಅವರಿಗೆ ಕಿರುಕುಳ ನೀಡಿದ್ದಾರೆ. ಈ ಘಟನೆ ನಡೆದಿರುವುದು ಹೈದ್ರಾಬಾದ್ ನಲ್ಲಿ. ತೆಲಂಗಾಣದ ಮಹಿಳಾ ಐಪಿಎಸ್ ಅಧಿಕಾರಿ ಸುಮತಿ ಅವರು ಮೇ 1 ರಂದು ಮಲ್ಕಾಜ್‌ಗಿರಿ ಪೊಲೀಸ್ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡರು. ಅಂದೇ ಮಧ್ಯರಾತ್ರಿ, ಅವರು ಮಹಿಳಾ ಸುರಕ್ಷತೆಯನ್ನು ಪರೀಕ್ಷಿಸಲು ಮುಂದಾದರು. ಹೈದರಾಬಾದ್‌ನ ಜನನಿಬಿಡ ದಿಲ್‌ಸುಖ್‌ನಗರ ಬಸ್ ನಿಲ್ದಾಣದಲ್ಲಿ … Read more

ಕೊಪ್ಪಳ ಹೋಟೆಲ್ ನಲ್ಲಿ ಅಪ್ರಾಪ್ತೆಯೊಂದಿಗೆ ಸಿಕ್ಕಿಬಿದ್ದ ಅನ್ಯಕೋಮಿನ ಯುವಕ, ಭುಗಿಲೆದ್ದ ವಿವಾದ

ಕೊಪ್ಪಳದಲ್ಲಿ ಮತ್ತೊಂದು ಲವ್ ಜಿಹಾದ್ ಶಂಕೆ ವ್ಯಕ್ತವಾಗಿದೆ. ಅಪ್ರಾಪ್ತ ಹಿಂದೂ ಯುವತಿಯ ಜೊತೆ ಮುಸ್ಲಿಂ ಯುವಕ ಹರ್ಷಾ ಹೋಟೆಲ್ ನಲ್ಲಿ ಪತ್ತೆಯಾಗಿದ್ದು, ಪ್ರಶ್ನೆ ಮಾಡಿದ ಭಜರಂಗ ದಳದ ಕಾರ್ಯಕರ್ತರ ಮೇಲೆ ಎಫ್ ಐ ಆರ್ ದಾಖಲು ಮಾಡಿರುವ ಆರೋಪ ಕೇಳಿಬಂದಿದೆ. ಶಮೀರ್ ಎಂಬಾತನ ಜೊತೆ ಅಪ್ರಾಪ್ತ ಹಿಂದೂ ಯುವತಿ ಪತ್ತೆಯಾದಳು. ಅಪ್ರಾಪ್ತೆಯನ್ನ ಕರೆತಂದಿರೋ ಬಗ್ಗೆ ಭಜರಂಗದಳದ ಕಾರ್ಯಕರ್ಯರು ಪ್ರಶ್ನೆ ಮಾಡಿದ್ದರು. ಪ್ರಶ್ನೆ ಮಾಡಿದ್ದಕ್ಕೆ ಭಜರಂಗದಳದ 8 ಜನರನ್ನ ಪೊಲೀಸರು ಬಂಧಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ವಿವಿಧ ಆಯಾಮಗಳಲ್ಲಿ … Read more

BIG NEWS: ‘ಪತಿ ನಿರುದ್ಯೋಗಿ’ಯಾದರೂ ‘ಪತ್ನಿಗೆ ಜೀವನಾಂಶ’ ನೀಡಬೇಕು: ಹೈಕೋರ್ಟ್ ಮಹತ್ವದ ತೀರ್ಪು

“ದುಡಿಯುವ ಸಾಮರ್ಥ್ಯವಿರುವ ಪತಿಯು ತಾನು ನಿರುದ್ಯೋಗಿ ಎಂಬ ಕಾರಣ ನೀಡಿ ಪತ್ನಿಗೆ ಜೀವನಾಂಶ ನೀಡುವುದರಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಪತ್ನಿಯು ಉದ್ಯೋಗದಲ್ಲಿದ್ದು ಸಂಬಳ ಪಡೆಯುತ್ತಿದ್ದರೂ ಸಹ, ವಿವಾಹದ ನಂತರ ಪತಿಯ ಮನೆಯಲ್ಲಿ ಆಕೆ ಅನುಭವಿಸುತ್ತಿದ್ದ ಜೀವನಮಟ್ಟವನ್ನು ಕಾಪಾಡಿಕೊಳ್ಳಲು ಪತಿಯಿಂದ ಜೀವನಾಂಶ ಪಡೆಯಲು ಅರ್ಹಳಾಗಿರುತ್ತಾಳೆ” ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಪ್ರಕರಣದ ಹಿನ್ನೆಲೆ: ಅರ್ಜಿದಾರ ಪತಿ ಮತ್ತು ಪತ್ನಿ ಇಬ್ಬರೂ ಈ ಮೊದಲೇ ವಿಚ್ಛೇದನ ಪಡೆದವರಾಗಿದ್ದು, 2021ರಲ್ಲಿ ಮರು ವಿವಾಹವಾಗಿದ್ದರು. ಆದರೆ, ದಾಂಪತ್ಯದಲ್ಲಿ ಮೂಡಿದ ಭಿನ್ನಾಭಿಪ್ರಾಯದಿಂದಾಗಿ 2022ರಲ್ಲಿ … Read more