‘ಇಂಧನ ಬಳಕೆಯಲ್ಲಿ ಮಿತಿಯಿರಲಿ, ವರ್ಷದ ಮಟ್ಟಿಗೆ ಚಿನ್ನ ಖರೀದಿಸಬೇಡಿ..’ ಪ್ರಧಾನಿ ಮೋದಿ ಮಹತ್ವದ ಕರೆ

ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷದಿಂದಾಗಿ ಜಾಗತಿಕ ಮಟ್ಟದಲ್ಲಿ ಅನಿಶ್ಚಿತತೆ ಮೂಡಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಮಹತ್ವದ ಮನವಿಯೊಂದನ್ನು ಮಾಡಿದ್ದಾರೆ. ಜಾಗತಿಕ ಬಿಕ್ಕಟ್ಟನ್ನು ಎಷ್ಟೇ ನಿಭಾಯಿಸಿದರೂ ಸಾಲದು. ಸಾಧ್ಯವಾದಷ್ಟು ಪೆಟ್ರೋಲ್-ಡೀಸೆಲ್ ಅನ್ನು ಮಿತವಾಗಿ ಬಳಸುವ ಮೂಲಕ ದೇಶದ ಮೀಸಲು ಸಂಪತ್ತನ್ನು ಉಳಿಸಲು ಜನರು ಕೈಜೋಡಿಸಬೇಕು. ತೈಲವನ್ನು ಮಿತವಾಗಿ ಬಳಸಬೇಕು ಮತ್ತು ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ಮಾಡುವ ಸಂಸ್ಕೃತಿಗೆ ಆದ್ಯತೆ ನೀಡಬೇಕು ಎಂದು ಅವರು ತಿಳಿಸಿದ್ದಾರೆ. ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ನಡೆದ … Read more

ಕಣ್ಣ ಮುಂದೆ ಮಗುವನ್ನು ಚಿರತೆ ಕೊಂದಿತು, ಮಲೆ ಮಹದೇಶ್ವರದಲ್ಲಿ ಮಗನ ಕಳ್ಕೊಂಡ ತಾಯಿ ಆಕ್ರಂದನ

ತಾಯಿ ಜೊತೆ ಮಲೆ ಮಹದೇಶ್ವರನ ಬೆಟ್ಟಕ್ಕೆ ಹೋಗಿದ್ದ ಬಾಲಕ ಹರ್ಷಿತ್ ಚಿರತೆ ದಾಳಿಗೆ ಬಲಿಯಾದ ಘಟನೆ ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದೆ. ನನ್ನ ಮಗುವನ್ನು ಕಣ್ಣ ಮುಂದೆ ಚಿರತೆ ಎತ್ತಿಕೊಂಡು ಹೋಗಿ ಕೊಂದಿತು ಎಂದು ಕಣ್ಣೀರಿಟ್ಟಿದ್ದಾರೆ. ತಾಯಿ ಜೊತೆ ದೇವರ ದರ್ಶನಕ್ಕಾಗಿ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ಬೆಂಗಳೂರಿನ ಬಾಲಕನ ಮೇಲೆ ಚಿರತೆ ದಾಳಿ ನಡೆಸಿದ ಘಟನೆಗೆ ತೀವ್ರ ಆಕ್ರೋಶಗಳು ವ್ಯಕ್ತವಾಗುತ್ತಿದೆ. ತಾಯಿ ಮುಂದೆ ಮಗನ ಎತ್ತಿಕೊಂಡು ಹೋದ ಚಿರತೆ ಕೊಂದು ಹಾಕಿದೆ. ಸುರೇಶ್ ಹಾಗೂ ಪವಿತ್ರ ದಂಪತಿಯ … Read more

ಇನ್‌ಸ್ಟಾಗ್ರಾಮ್‌ನಲ್ಲಿ ಶುರುವಾದ ಪ್ರೇಮ ಕಥೆ: ಬೆಂಗಳೂರಿನಲ್ಲಿ ಲಿವ್-ಇನ್ ಪಾರ್ಟ್‌ನರ್ ಸಾವು, ಪ್ರಿಯತಮೆ ನಾಪತ್ತೆ

ಇಲ್ಲಿನ ಶ್ರೀಗಂಧನಗರದ ಬಾಡಿಗೆ ಮನೆಯೊಂದರಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದ 28 ವರ್ಷದ ಯುವಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಪ್ರಿಯತಮೆಯ ಕಿರುಕುಳವೇ ಇದಕ್ಕೆ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯ ಮೃತ ಯುವಕನನ್ನು ಚಿತ್ರದುರ್ಗ ಜಿಲ್ಲೆಯ ತಿಪ್ಪೇಸ್ವಾಮಿ ಎಂದು ಗುರುತಿಸಲಾಗಿದೆ. ಈತ ಬೆಂಗಳೂರಿನ ಗಾರ್ಮೆಂಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ತನಿಖೆಯ ಪ್ರಾಥಮಿಕ ವರದಿಗಳ ಪ್ರಕಾರ, ತಿಪ್ಪೇಸ್ವಾಮಿಗೆ ದಾವಣಗೆರೆ ಮೂಲದ ಪ್ರಿಯಾಂಕಾ ಎಂಬಾಕೆಯ … Read more

ರೇವಂತ್ ರೆಡ್ಡಿಗೆ ಆಫರ್ ಕೊಟ್ಟ ಪ್ರಧಾನಿ: ನನ್ನ ಜೊತೆ ಸೇರ್ಕೊಂಡು ಬಿಡಿ ಎಂದ ಪ್ರಧಾನಿ ಮೋದಿ

ನರೇಂದ್ರ ಮೋದಿ ಮತ್ತು ರೇವಂತ್ ರೆಡ್ಡಿ ಒಂದೇ ವೇದಿಕೆಯಲ್ಲಿ ಹಂಚಿಕೊಂಡ ಮಾತುಕತೆ ಈಗ ತೆಲಂಗಾಣ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ನಡೆದ ಈ ಸಂಭಾಷಣೆ ರಾಜಕೀಯ ವಲಯದ ಗಮನ ಸೆಳೆದಿದೆ. ಹೈದರಾಬಾದ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯದ ಅಭಿವೃದ್ಧಿಗೆ ಕೇಂದ್ರದ ಹೆಚ್ಚಿನ ಬೆಂಬಲ ಅಗತ್ಯವಿದೆ ಎಂದು ರೇವಂತ್ ರೆಡ್ಡಿ ಮನವಿ ಮಾಡಿದರು. ತೆಲಂಗಾಣದ ಮಹತ್ವಾಕಾಂಕ್ಷಿ ಯೋಜನೆಗಳಿಗೆ ನೆರವು ನೀಡುವಂತೆ ಅವರು ಪ್ರಧಾನಿಯನ್ನು ಕೋರಿದರು. ರಾಜ್ಯದ ಆರ್ಥಿಕ ಬೆಳವಣಿಗೆಯಲ್ಲಿ ಕೇಂದ್ರದ ಪಾತ್ರ ನಿರ್ಣಾಯಕವಾಗಲಿದೆ ಎಂಬ … Read more

ಮಹಿಳೆಯರೇ ಎಚ್ಚರ : ‘ತಲೆ ಕೂದಲು’ ಕೊಟ್ಟು ಪಾತ್ರೆ ಖರೀದಿಸುವವರು ತಪ್ಪದೇ ಇದನ್ನೊಮ್ಮೆ ಓದಿ.!

ನಮ್ಮ ಬೀದಿಗಳಲ್ಲಿ ಉದುರಿದ ಕೂದಲನ್ನು ತೆಗೆದುಕೊಂಡು ಪ್ಲಾಸ್ಟಿಕ್ , ಸ್ಟೀಲ್ ಪಾತ್ರೆಗಳನ್ನ ಕೊಡುತ್ತಾರೆ. ನೀವು ಕೂಡ ಈ ರೀತಿ ಕೂದಲನ್ನ ಮಾರಾಟ ಮಾಡುತ್ತಿದ್ದರೆ, ತಕ್ಷಣ ಎಚ್ಚೆತ್ತುಕೊಳ್ಳಿ. ಯಾಕಂದ್ರೆ, ಇದರ ಹಿಂದೆ ಜ್ಯೋತಿಷ್ಯ, ಆರೋಗ್ಯ ಮತ್ತು ಧಾರ್ಮಿಕ ಕಾರಣಗಳು ಇಲ್ಲಿವೆ. ಜ್ಯೋತಿಷ್ಯದ ಪ್ರಕಾರ.! ಜ್ಯೋತಿಷ್ಯದ ಪ್ರಕಾರ, ಕೂದಲು ಮಾರಾಟ ಮಾಡುವುದು ತುಂಬಾ ಅಶುಭ. ವ್ಯಕ್ತಿಯ ಪ್ರಭಾವಲಯ ಶಕ್ತಿಯು ಅವರ ಕೂದಲಿನಲ್ಲಿರುತ್ತದೆ. ಅದರ ಮೂಲಕ ಸಂಮೋಹನದಂತಹ ಕಾರ್ಯವಿಧಾನಗಳನ್ನು ಮಾಡಲು ಸಾಧ್ಯವಿದೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಕೂದಲು ಚಂದ್ರ ಮತ್ತು ಶುಕ್ರನಿಗೆ … Read more

ಪುಂಡನ ಜೊತೆ ಓಡಿಹೋಗಲು ಗಂಡನ ಮನೆಗೇ ಕನ್ನ – ಕಳ್ಳ, ಮಳ್ಳಿ ಇಬ್ಬರೂ ಅರೆಸ್ಟ್‌.!

ಹಳೆಯ ಪ್ರಿಯಕರನೊಂದಿಗೆ ಓಡಿ ಹೋಗಲು ಪತಿಯ ಮನೆಗೆ ಕನ್ನ ಹಾಕಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿರುವ ಘಟನೆ ( Crime news) ರಾಮದುರ್ಗ ತಾಲೂಕಿನ ಹೊಸಕೋಟಿ ಗ್ರಾಮದಲ್ಲಿ ನಡೆದಿದೆ. ಬಂಧಿತ ಆರೋಪಿಗಳನ್ನು ಹಣಮಂತ ಮಾರಾಪೂರ ಹಾಗೂ ಹಸೀನಾ ನದಾಫ್ ಎಂದು ಗುರುತಿಸಲಾಗಿದೆ. ಬೆಳಗಾವಿಯ (Belagavi) ಹೊಸಕೋಟಿ ಗ್ರಾಮದ ಶರೀಫ್ ಎಂಬುವರ ಮನೆಯಲ್ಲಿ ಸುಮಾರು 21 ಲಕ್ಷ ರೂ. ಮೌಲ್ಯದ 154.6 ಗ್ರಾಂ ಚಿನ್ನಾಭರಣ ಹಾಗೂ 11 ಸಾವಿರ ರೂ. ಮೌಲ್ಯದ 45 ಗ್ರಾಂ ಬೆಳ್ಳಿಯ … Read more

IFS ಪರೀಕ್ಷೆಯಲ್ಲಿ ಕನ್ನಡಿಗರ ಕಮಾಲ್‌: ಬಸವರಾಜ ಕೆಂಪವಾಡ ದೇಶಕ್ಕೆ ಪ್ರಥಮ ರ‍್ಯಾಂಕ್, ಸಿದ್ದರಾಮಯ್ಯ ವಿಶ್

ಭಾರತೀಯ ಅರಣ್ಯ ಸೇವೆ (IFS Exam Results) ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ‍್ಯಾಂಕ್ ಪಡೆದು ಕನ್ನಡಿಗ ಬಸವರಾಜ ಕೆಂಪವಾಡ ಅವರು ಅನನ್ಯ ಸಾಧನೆ ಮಾಡಿದ್ದಾರೆ. ಇನ್ನೂ ಇದೇ ಪರೀಕ್ಷೆಯಲ್ಲಿ 14ನೇ ರ‍್ಯಾಂಕ್ ಪಡೆದ ದೀಕ್ಷಿತ್.ಎನ್ ಅವವರು ರಾಜ್ಯದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಅವರಿಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದನೆ ತಿಳಿಸಿದ್ದಾರೆ. ಐಎಫ್‌ಎಸ್ ಪರೀಕ್ಷೆಯಲ್ಲಿ ಸಾಧನೆ ತೋರಿದ ಕನ್ನಡಿಗರ ಕುರಿತು ಸಿದ್ದರಾಮಯ್ಯ ಅವರು ಎಕ್ಸ್ ಪೋಸ್ಟ್ ಮಾಡಿದ್ದಾರೆ. ‘ಕನ್ನಡಿಗರ ಪರಿಶ್ರಮ, ಪ್ರಯತ್ನ ಮತ್ತು ಆತ್ಮವಿಶ್ವಾಸವಿದ್ದರೆ ಕಠಿಣಾತಿ ಕಠಿಣ … Read more

ವಾಯು ಚಂಡಮಾರುತ ಹಿನ್ನೆಲೆ : ಬೆಂಗಳೂರು ಸೇರಿದಂತೆ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರಿ ಮಳೆ.!

ರಾಜ್ಯದಲ್ಲಿ ಈಗಾಗಲೇ ಉತ್ತರ ಕರ್ನಾಟಕದಲ್ಲಿ ಬಿಸಿಲಿನ ತಾಪಮಾನ ಭಾರಿ ಏರಿಕೆ ಕಂಡಿದ್ದು, ಇನ್ನೂ ಕೆಲವು ಜಿಲ್ಲೆಗಳಲ್ಲಿ ಅಲಲ್ಲಿ ಮಳೆ ಆಗುತ್ತಿದೆ. ಇದೀಗ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೌದು ರಾಜ್ಯದಲ್ಲಿ ಬಿಸಿಲ ಝಳದ ಮಧ್ಯ ಮಳೆಯ ಸಿಂಚನವಾಗುತ್ತಿದೆ. ದಕ್ಷಿಣ ಒಳನಾಡಿನಲ್ಲಿ 5 ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಮಳೆ ಸುರಿಯಲಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಶುಷ್ಕ ವಾತಾವರಣ ಮುಂದುವರಿಯಲಿದೆ. … Read more

ಕ್ಯಾಮೆರಾ ಎದುರು ಲಂಚ ತೆಗೆದುಕೊಳ್ಳುವ ಕಳ್ಳ ಸುವೇಂದು ಅಧಿಕಾರಿ – ಮೋದಿ ಹಳೆಯ ಭಾಷಣ ವೈರಲ್‌!

ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಒಂದು ಕಾಲದ ಪರಸ್ಪರ ವೈರಿಗಳು ಇಂದು ಒಂದೇ ವೇದಿಕೆಯಲ್ಲಿ ಕೈಜೋಡಿಸಿರುವುದು ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಈ ಬೆಳವಣಿಗೆಯನ್ನು ಕಂಡು ಸಾಮಾನ್ಯ ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕಳೆದ ಹತ್ತು ವರ್ಷಗಳ ಹಿಂದೆ, ಅಂದರೆ 2016ರ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಂದಿನ ತೃಣಮೂಲ ಕಾಂಗ್ರೆಸ್ ನಾಯಕ ಸುವೇಂದು ಅಧಿಕಾರಿ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದ್ದರು. ಕ್ಯಾಮೆರಾ ಮುಂದೆ ಲಂಚ ಪಡೆಯುತ್ತಾ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ಸುವೇಂದು ಅಧಿಕಾರಿಯವರನ್ನು ಮೋದಿ … Read more

‘ಬಿಜೆಪಿಯೇ ನಮ್ಮ ಮೊದಲ ಶತ್ರು’ : ಬಂಗಾಳದಲ್ಲಿ ಸುವೇಂದು ಪ್ರಮಾಣವಚನದ ಬೆನ್ನಲ್ಲೇ ಮಮತಾ ಗುಡುಗು!

ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರು ಪದಗ್ರಹಣ ಮಾಡಿದ ಬೆನ್ನಲ್ಲೇ, ತೃಣಮೂಲ ಕಾಂಗ್ರೆಸ್ (TMC) ಅಧಿನಾಯಕಿ ಮಮತಾ ಬ್ಯಾನರ್ಜಿ ರಾಜಕೀಯವಾಗಿ ಭರ್ಜರಿ ತಿರುಗೇಟು ನೀಡಿದ್ದಾರೆ. “ನಮ್ಮ ಮೊದಲ ಶತ್ರು ಬಿಜೆಪಿ” ಎಂದು ಘೋಷಿಸಿರುವ ಅವರು, ರಾಜ್ಯದಲ್ಲಿ ಬಿಜೆಪಿಯನ್ನು ಎದುರಿಸಲು ಎಲ್ಲಾ ವಿರೋಧ ಪಕ್ಷಗಳು ಒಂದಾಗಬೇಕು ಎಂದು ಕರೆ ನೀಡಿದ್ದಾರೆ. ಸುವೇಂದು ಅಧಿಕಾರಿ ಅವರ ನೇತೃತ್ವದ ಸರ್ಕಾರವನ್ನು ಎದುರಿಸಲು ಎಡಪಕ್ಷಗಳು, ಕಾಂಗ್ರೆಸ್ ಮತ್ತು ಇತರ ಪ್ರಾದೇಶಿಕ ಶಕ್ತಿಗಳು ತೃಣಮೂಲ ಕಾಂಗ್ರೆಸ್‌ನೊಂದಿಗೆ ಕೈಜೋಡಿಸಬೇಕು ಎಂದು … Read more