ಬಿಡಿಎ ಇಲ್ಲದ ಬೆಂಗಳೂರು ಅಭಿವೃದ್ಧಿ ಖಾತೆ ನನಗೇಕೆ? : ಬೆಂಗಳೂರು ನಗರಾಭಿವೃದ್ಧಿ ಖಾತೆ ವಹಿಸಿಕೊಳ್ಳಲು ಕೃಷ್ಣಭೈರೇಗೌಡ ಹಿಂದೇಟು

ರಾಜ್ಯ ರಾಜಕಾರಣದಲ್ಲಿ ಖಾತೆ ಹಂಚಿಕೆಯ ಕಿಚ್ಚು ಮತ್ತೆ ಜೋರಾಗಿದೆ. ಸಿದ್ದರಾಮಯ್ಯ ಸಂಪುಟದ ಪ್ರಭಾವಿ ಸಚಿವ ಕೃಷ್ಣಭೈರೇಗೌಡ ಅವರು ತಮಗೆ ನೀಡಿರುವ ಬೆಂಗಳೂರು ನಗರಾಭಿವೃದ್ಧಿ ಖಾತೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಅಧಿಕಾರ ವಹಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಖಾತೆ ಹಂಚಿಕೆಯಾಗಿ ಐದು ದಿನಗಳಾದರೂ ಅವರು ಕಚೇರಿಗೆ ಕಾಲಿಡದಿರುವುದು ಈಗ ಕಾಂಗ್ರೆಸ್ ಪಾಳಯದಲ್ಲಿ ತಲ್ಲಣ ಸೃಷ್ಟಿಸಿದೆ. ಅಸಮಾಧಾನಕ್ಕೆ ಮುಖ್ಯ ಕಾರಣ ಬಿಡಿಎ ಮತ್ತು ಬಿಎಂಆರ್‌ಡಿಎ ಈ ಹಿಂದೆ ಕಂದಾಯ ಸಚಿವರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದ ಕೃಷ್ಣಭೈರೇಗೌಡರಿಗೆ ಈ ಬಾರಿ ಬೆಂಗಳೂರು ನಗರಾಭಿವೃದ್ಧಿ … Read more

ಉಜ್ವಲ ಯೋಜನೆ ಫಲಾನುಭವಿಗಳಿಗೆ ಶಾಕ್‌ – ಉಚಿತ ಸಿಲಿಂಡರ್‌ ಸಂಖ್ಯೆ 9 ರಿಂದ 4ಕ್ಕೆ ಇಳಿಕೆ.!

ಬಡ ಕುಟುಂಬಗಳ ಮಹಿಳೆಯರಿಗೆ ಉಚಿತ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ಕೇಂದ್ರ ಸರ್ಕಾರದ (Central Government) ಪ್ರಮುಖ ಯೋಜನೆಯಾದ ‘ಪ್ರಧಾನ ಮಂತ್ರಿ ಉಜ್ವಲ ಯೋಜನೆ’ಯ (Ujjwala scheme) ಫಲಾನುಭವಿಗಳಿಗೆ ಬಿಗ್ ಶಾಕ್ ಎದುರಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಮತ್ತು ಅನಿಲ ದರಗಳ ಏರಿಕೆ ಹಾಗೂ ತೈಲ ಕಂಪನಿಗಳ ನಷ್ಟದ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ಉಜ್ವಲ ಯೋಜನೆಯಡಿ ((Ujjwala scheme) ನೀಡಲಾಗುತ್ತಿದ್ದ ಸಬ್ಸಿಡಿ ಸಿಲಿಂಡರ್‌ಗಳ (Subsidy on Cylinder) ವಾರ್ಷಿಕ ಕೋಟಾವನ್ನು 9 ರಿಂದ 4ಕ್ಕೆ ಕಡಿತಗೊಳಿಸಿದೆ. ಕಡಿತಕ್ಕೆ … Read more

ದರ್ಶನ್‌ ಬಿಡುಗಡೆ ಮಾಡಿಸಿ ಎಂದ ಫ್ಯಾನ್ಸ್‌ – ಪೊಲೀಸರ ಲಾಠಿಯೇಟು ಬೇಕಾ ಎಂದ ಸಿಎಂ ಡಿಕೆಶಿ.!

ಕನಕಪುರ : ನಟ ದರ್ಶನ್‌ (Actor Darshan) ರನ್ನು ಜೈಲಿನಿಂದ ಬಿಡುಗಡೆ ಮಾಡಿಸಿ ಎಂದು ದರ್ಶನ್‌ ಅಭಿಮಾನಿಗಳು ನೇರವಾಗಿ ಸಿಎಂ ಡಿ.ಕೆ. ಶಿವಕುಮಾರ್‌(CM DK Shivakumar) ಗೆ ಬೇಡಿಕೆಯಿಟ್ಟಿರುವ ಘಟನೆ ಭಾನುವಾರ ನಡೆದಿದೆ. ಕನಕಪುರದಲ್ಲಿ ಕೃತಜ್ಞತಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ವೇಳೆ ಸಿಎಂ ಡಿಕೆ ಶಿವಕುಮಾರ್‌ ಮಾತನಾಡುತ್ತಿದ್ದ ವೇಳೆ , ನಟ ದರ್ಶನ್‌ ಅಭಿಮಾನಿಗಳು ನೇರವಾಗಿ ಸಿಎಂ ಎದುರ ಡಿಬಾಸ್‌ ಬಿಡುಗಡೆಯಾಗಬೇಕು ಎಂದು ಘೋಷಣೆ ಕೂಗಿದ್ದಾರೆ. ಮೊದಲು ಅಭಿಮಾನಿಗಳ ಬೇಡಿಕೆಯನ್ನು ನಿರ್ಲಕ್ಷಿಸಿದ ಸಿಎಂ ಡಿಕೆಶಿ , ಬಳಿಕ ಅವರ … Read more

ನೀರಿನ ಸಂಪ್‌ಗೆ ಬಿದ್ದು 1.5 ವರ್ಷದ ಕಂದಮ್ಮ ಸಾವು! ಮರುಜೀವದ ಆಸೆಯಿಂದ ಮಗುವನ್ನು ಉಪ್ಪಿನಲ್ಲಿಟ್ಟ ಪೋಷಕರು

ಬಾಗಲಕೋಟೆಯ ನವನಗರದ (ಸೆಕ್ಟರ್ 38) ಬಳಿ ಎದೆಗುಂದುವ ಘಟನೆಯೊಂದು ನಡೆದಿದೆ. ಆಟವಾಡುತ್ತಿದ್ದ 18 ತಿಂಗಳ ಹಸುಗೂಸು ಅಮೀನಾ ಪಠಾಣ್, ಎದುರು ಮನೆಯ ನೀರಿನ ಸಂಪ್‌ಗೆ ಬಿದ್ದು ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದಾಳೆ. ಕುರುಡು ನಂಬಿಕೆ ಮತ್ತು ಪೋಷಕರ ಕಣ್ಣೀರು: ಮಗು ಸಾವನ್ನಪ್ಪಿದ್ದರೂ ಆ ಕಟು ಸತ್ಯವನ್ನು ಅರಗಿಸಿಕೊಳ್ಳಲಾಗದ ಪೋಷಕರು, “ನೀರಿನಲ್ಲಿ ಮುಳುಗಿ ಮೃತಪಟ್ಟವರನ್ನು ಉಪ್ಪಿನಲ್ಲಿ ಮುಚ್ಚಿಟ್ಟರೆ ಮರಳಿ ಬದುಕುತ್ತಾರೆ” ಎಂಬ ನಂಬಿಕೆಯಿಂದ ವಿಶಿಷ್ಟ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಬಾಗಲಕೋಟೆ ಜಿಲ್ಲಾಸ್ಪತ್ರೆಯ ಶವಾಗಾರದ ಮುಂದೆಯೇ ಮಗುವಿನ ದೇಹವನ್ನು ಉಪ್ಪಿನಲ್ಲಿ ಮುಚ್ಚಿಡಲಾಗಿತ್ತು. ಕೇವಲ … Read more

‘ನಾನು ಗೆದ್ದಿದ್ರೆ ಸಿದ್ದು ಸಿಎಂ ಆಗ್ತಿರಲಿಲ್ಲ..’ 3 ಬಾರಿ ಸಿಎಂ ಸ್ಥಾನ ಕೈತಪ್ಪಿತು; ಡಿಸಿಎಂ ಜಿ. ಪರಮೇಶ್ವರ್ ಭಾವುಕ

‘ನನ್ನ ಜೀವನದಲ್ಲಿ 3 ಬಾರಿ ಮುಖ್ಯಮಂತ್ರಿ ಸ್ಥಾನ ಕೈತಪ್ಪಿದೆ’ ಎಂದು ಉಪ ಮುಖ್ಯಮಂತ್ರಿ, ಕಂದಾಯ ಸಚಿವ ಡಾ.ಜಿ.ಪರಮೇಶ್ವರ್(Dr G Parameshwar) ಬಹಿರಂಗ ಬೇಸರ ವ್ಯಕ್ತಪಡಿಸಿದ್ದಾರೆ. ತಮಗೆ ಸಿಎಂ ಹುದ್ದೆ ತಪ್ಪಿದರೂ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದಿರುವುದಾಗಿ ಅವರು ಭಾವುಕರಾಗಿ ನುಡಿದಿದ್ದಾರೆ. ನನ್ನ ರಾಜಕೀಯ ಜೀವನದಲ್ಲಿ ಮೂರು ಬಾರಿ ಸಿಎಂ ಹುದ್ದೆ ಕೈತಪ್ಪಿದೆ ಡಿ.ಕೆ.ಶಿವಕುಮಾರ್‌ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಡಿಸಿಎಂ ಹುದ್ದೆ ಪಡೆದ ಪರಂ ಅವರನ್ನು ಸೋಮವಾರ ಅವರ ಒಡೆತನದ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಅಧ್ಯಾಪಕರು, ಸಿಬ್ಬಂದಿ ಹಾಗೂ … Read more

ಸೋದರಮಾವನ ಮನೆಗೆ ಹೊರಟಿದ್ದ ಅಕ್ಕ-ತಂಗಿಯರ ದುರಂತ ಸಾವು : ಅಪಘಾತದ ದೃಶ್ಯ ಕಂಡು ಕಣ್ಣೀರಿಟ್ಟ ಸಾರ್ವಜನಿಕರು!

ಮಹಾರಾಷ್ಟ್ರ: ರಜೆ ಕಳೆಯಲು ಸೋದರಮಾವನ ಮನೆಗೆ ಅತ್ಯಂತ ಸಂತೋಷದಿಂದ ಹೊರಟಿದ್ದ ಇಬ್ಬರು ಅಕ್ಕ-ತಂಗಿಯರನ್ನು ಮಾರ್ಗಮಧ್ಯದಲ್ಲೇ ವಿಧಿ ಮೃತ್ಯು ರೂಪದಲ್ಲಿ ಆಪೋಶನ ತೆಗೆದುಕೊಂಡಿರುವ ಘೋರ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ನಿರಾ-ಮೋರ್‌ಗಾಂವ್ ರಾಜ್ಯ ಹೆದ್ದಾರಿಯ ಚೌಧರವಾಡಿ ಫಾಟಾ ಸಮೀಪ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸೋದರಿಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಸೇಜಲ್ ಜ್ಞಾನೇಶ್ವರ್ ಬೋರ್ಡೆ (17) ಮತ್ತು ಅಕ್ಷರಾ ಜ್ಞಾನೇಶ್ವರ್ ಬೋರ್ಡೆ (15) ಎಂದು ಗುರುತಿಸಲಾಗಿದೆ. ಇವರೊಂದಿಗೆ ಪ್ರಯಾಣಿಸುತ್ತಿದ್ದ ಇವರ ಕಿರಿಯ ಸಹೋದರ ಪವನ್ (12) ತೀವ್ರವಾಗಿ ಗಾಯಗೊಂಡಿದ್ದು, … Read more

ಐಡಿ ಇಲ್ಲದಿದ್ರೆ ಪಬ್ ಮತ್ತು ಬಾರ್ ಗಳಲ್ಲಿ ಪ್ರವೇಶವಿಲ್ಲ: ಅಪ್ರಾಪ್ತರ ಮದ್ಯಪಾನ ತಡೆಗೆ ಹೊಸ ರೂಲ್ಸ್ ಜಾರಿಗೆ ತಂದ ಗೃಹ ಸಚಿವ ಖರ್ಗೆ

ಹದಿಹರೆಯದವರಲ್ಲಿ ಹೆಚ್ಚುತ್ತಿರುವ ಮದ್ಯಪಾನ ಮತ್ತು ಮಾದಕ ದ್ರವ್ಯಗಳ ಅತಿಯಾದ ಬಳಕೆಯು ಸರ್ಕಾರಕ್ಕೆ ದೊಡ್ಡ ಆತಂಕವನ್ನುಂಟುಮಾಡಿದೆ. ಅಲ್ಲದೇ ಚಿಕ್ಕವಯಸ್ಸಿನಲ್ಲೇ ದುಶ್ಚಟಗಳಿಗೆ ದಾಸರಾಗಿ ಆರೋಗ್ಯ ಹಾಳು ಮಾಡುಕೊಳ್ಳುತ್ತಿದ್ದಾರೆ. ಹೀಗಾಗಿ ಇದನ್ನು ತಡೆಗಟ್ಟಲು ನೂತನ ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge)   ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಈ ಸಂಬಂಧ ಪಬ್‌, ಬಾರ್‌ಗಳು (Pub And Bars) ಮತ್ತು ಮದ್ಯ ಸರಬರಾಜು ಮಾಡುವ ಎಲ್ಲಾ ವಾಣಿಜ್ಯ ಸಂಸ್ಥೆಗಳ ಮೇಲೆ ಕಠಿಣ ನಿಗಾ ವಹಿಸಲು ಪೊಲೀಸ್ ಇಲಾಖೆಗೆ ಖಡಕ್ ಸೂಚನೆ ನೀಡಿದ್ದು, … Read more

ಮಿಸ್ಡ್ ಕಾಲ್‌ನಲ್ಲಿ ಶುರುವಾದ ಲವ್: 5 ಮಕ್ಕಳ ತಾಯಿಯನ್ನು ಮದುವೆಯಾದ 19ರ ಯುವಕ! ‘ನಮ್ಮನ್ನು ಬೇರೆಮಾಡಬೇಡಿ’ ಎಂದು ಕಣ್ಣೀರಿಟ್ಟ ಜೋಡಿ…

ಬಿಹಾರ: ಒಂದು ಮಿಸ್ಡ್ ಕಾಲ್ ಇಡೀ ಬದುಕನ್ನೇ ಬದಲಾಯಿಸಬಲ್ಲದೇ? ಬಿಹಾರದ ಜಮುಯಿ ಜಿಲ್ಲೆಯ ಖೈರಾ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಇಂತಹುದೇ ಒಂದು ಅಚ್ಚರಿಯ ಘಟನೆ ನಡೆದಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. 36 ವರ್ಷದ, ಐದು ಮಕ್ಕಳ ತಾಯಿಯೊಬ್ಬರು ತನಗಿಂತ 17 ವರ್ಷ ಚಿಕ್ಕವನಾದ 19 ವರ್ಷದ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಈ ವಿಚಿತ್ರ ಜೋಡಿಯ ಪ್ರೇಮ ಪುರಾಣ ಈಗ ಇಡೀ ಗ್ರಾಮದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮಿಸ್ಡ್ ಕಾಲ್ ತಂದ ಮದುವೆ ಯೋಗ! … Read more

ನಂಗೆ ಬೆಂಗಳೂರು ಉಸ್ತುವಾರಿಯೂ ಬೇಡ ಏನೂ ಬೇಡ, ಜಲಸಂಪನ್ಮೂಲ ಖಾತೆಯಲ್ಲೇ ಮುಂದುವರೆಯುವೆ: ರಾಮಲಿಂಗಾರೆಡ್ಡಿ ಯೂ ಟರ್ನ್

ರಾಜ್ಯ ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆ ಕುರಿತು ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಈ ಹಿಂದೆ ಮುನಿಸಿಕೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಅವರು ತಮ್ಮ ನಿಲುವನ್ನು ಈಗ ಬದಲಿಸಿದ್ದು, ತಮಗೆ ಸದ್ಯ ಹಂಚಿಕೆಯಾಗಿರುವ ಜಲಸಂಪನ್ಮೂಲ ಹಾಗೂ ಸಣ್ಣ ನೀರಾವರಿ ಇಲಾಖೆಯಲ್ಲೇ ತಾವು ಮುಂದುವರಿಯುವುದಾಗಿ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರು ಉಸ್ತುವಾರಿ ನನಗೆ ಬೇಡ, ಕೊಟ್ಟರು ಬೇಡ ಅಂತಿನಿ. ತಮಗೆ ಬೇರೆ ಯಾವುದೇ ಇಲಾಖೆಯ ಅಗತ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. ವಿಧಾನಸೌಧದಲ್ಲಿ ಜಲಸಂಪನ್ಮೂಲ … Read more

ಮಾಜಿ ಪುರಸಭೆ ಅಧ್ಯಕ್ಷೆಯ ಪುತ್ರಿ ನೇಣು ಬಿಗಿದ ಸ್ಥಿತಿಯಲ್ಲಿ ಹೆಣವಾಗಿ ಪತ್ತೆ! ಕೊಲೆ ಆರೋಪ ಮಾಡಿದ ಪೋಷಕರು!

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭೀಕರ ಘಟನೆಯೊಂದು ಬೆಳಕಿಗೆ ಬಂದಿದೆ. ವಿವಾಹಿತ ಗೃಹಿಣಿಯೊಬ್ಬರು ತಮ್ಮ ನಿವಾಸದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಇದು ಆತ್ಮಹತ್ಯೆಯಲ್ಲ, ಪತಿಯೇ ಮಾಡಿರುವ ಕೊಲೆ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಯಾರು ಈ ಮೃತ ದುರ್ದೈವಿ? ಮೃತ ಗೃಹಿಣಿಯನ್ನು ಸಂಧ್ಯಾ (30) ಎಂದು ಗುರುತಿಸಲಾಗಿದೆ. ಈಕೆ ಹುಣಸೂರು ಪುರಸಭೆಯ ಮಾಜಿ ಅಧ್ಯಕ್ಷೆಯಾದ ಗೀತಾ ನಿಂಗರಾಜು ಅವರ ಪುತ್ರಿಯಾಗಿದ್ದಾರೆ. ಸದ್ಯ ಮೈಸೂರಿನ ಸರಸ್ವತಿಪುರಂನ ಜವರೇಗೌಡ ಪಾರ್ಕ್ ಸಮೀಪದ ನಿವಾಸದಲ್ಲಿ ಈ ಘಟನೆ ಸಂಭವಿಸಿದೆ. … Read more