ಮಹಾ ಮಾಯಾಂಗಿ: ಗಂಡನನ್ನೇ ಮುಗಿಸಿ, 2 ಕೋಟಿ ಹಣದಲ್ಲಿ ‘ಲವ್ವರ್’ ಜೊತೆ ಮಜಾ ಉಡಾಯಿಸಿದ ಆಂಟಿ!

Spread the love

ಮೇಲ್ನೋಟಕ್ಕೆ ನೋಡಿದರೆ ಸಾಚಾ ತರ ಕಾಣ್ತಾಳೆ.. ಆದ್ರೆ ಒಳಗೊಳಗೇ ಗಂಡನಿಗೆ ಯಮಪಾಶ ಬಿಗಿಯೋಕೆ ಪ್ಲಾನ್ ಮಾಡಿ ಸಿಕ್ಕಿಬಿದ್ದಿರೋ ಮಯಾಂಗನೆ ಈಕೆ! 

ಎಗ್‌ರೈಸ್ ಅಂಗಡಿಯವನ ಜೊತೆ ‘ಅಕ್ರಮ’ ಪಾರ್ಟ್‌ನರ್‌ಶಿಪ್!

ಈಕೆಯ ಹೆಸರು ಸುಮಾ ಮಂಜರಗಿ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಘೋಡಗೇರಿ ನಿವಾಸಿ. ಈಕೆಗೆ ಮಾಜಿ ಸೈನಿಕನಾಗಿದ್ದ ಸಂದೀಪ್ ಎಂಬುವವರ ಜೊತೆ ಮದುವೆಯಾಗಿ, ಮುದ್ದಾದ ಮಕ್ಕಳು, ನೆಮ್ಮದಿಯ ಸಂಸಾರ ಇತ್ತು. ಆದ್ರೆ ಈ ಆಂಟಿಗೆ ನೆಮ್ಮದಿಗಿಂತ ಕಾಸಿನ ಹುಚ್ಚು ಹೆಚ್ಚಾಗಿತ್ತು!

ಹೀಗಿರುವಾಗ ಈಕೆಗೆ ಪರಿಚಯವಾಗಿದ್ದೇ ಎಗ್‌ರೈಸ್ ಅಂಗಡಿ ಇಟ್ಕೊಂಡಿದ್ದ ಪುಂಡಲೀಕ ಅನ್ನೋ ಆಸಾಮಿ. ಆತನ ಅಂದ-ಚಂದಕ್ಕೋ ಏನೋ, ಈ ಆಂಟಿ ಕರಗಿ ನೀರಾಗಿದ್ದಳು. ಇತ್ತ ಆಂಟಿ ಗಂಡ ಸಂದೀಪ್‌ಗೂ ಈ ಪುಂಡಲೀಕ ಪರಿಚಯವಾಗಿ, ಇಬ್ಬರೂ ಸೇರಿ ಹಿಡಕಲ್ ಡ್ಯಾಂ ಬಳಿ ಹೋಟೆಲ್ ಶುರು ಮಾಡಿದ್ರು. ಹೋಟೆಲ್‌ನಲ್ಲಿ ಪಾರ್ಟ್ನರ್ ಆಗಿದ್ದವನು, ಆಮೇಲೆ ಆಂಟಿ ಜೊತೆ ಸಂಸಾರದಲ್ಲೂ ‘ಪಾರ್ಟ್ನರ್’ ಆಗ್ಬಿಟ್ಟ! ಇವರಿಬ್ಬರ ಪ್ರೇಮದಾಟ ಜೋರಾಗ್ತಿದ್ದಂತೆ, ಗಂಡ ಸಂದೀಪ್‌ನನ್ನ ಮುಗಿಸೋಕೆ ಮುಹೂರ್ತ ಇಟ್ಟೇ ಬಿಟ್ರು!

ಗ್ಲೂಕೋಸ್ ಬಾಟಲಿಗೆ ವಿಷ! ಕೊಲೆಗೆ ಸ್ಕೆಚ್..

ತಿಂಗಳ ಹಿಂದೆ ಜಾತ್ರೆಗೆ ಹೋಗಿದ್ದಾಗ ಸಂದೀಪ್‌ಗೆ ಆಕ್ಸಿಡೆಂಟ್ ಆಗಿ ಆಸ್ಪತ್ರೆ ಸೇರಿದ್ದ. ಇದನ್ನೇ ಕಾಯ್ತಿದ್ದ ಈ ಕಿರಾತಕಿ, ಆಸ್ಪತ್ರೆ ಸಿಬ್ಬಂದಿ ರಾಹುಲ್ ಜೋಗಿ ಅನ್ನೋನನ್ನ ಬುಕ್ ಮಾಡಿದ್ಲು. ಗಂಡನಿಗೆ ನಿದ್ದೆ ಮಾತ್ರೆ ಕೊಟ್ಟು, ಗ್ಲೂಕೋಸ್ ಬಾಟಲಿಯಲ್ಲಿ ವಿಷ ಮಿಕ್ಸ್ ಮಾಡಿ ಇಂಜೆಕ್ಟ್ ಮಾಡಿಸಿ, ಆಸ್ಪತ್ರೆಯಲ್ಲೇ ಸಂದೀಪ್ ಪ್ರಾಣ ಪಕ್ಷಿ ಹಾರುವಂತೆ ಮಾಡಿದ್ರು!

FSL ಅಧಿಕಾರಿಗಳಿಗೇ ಕಾಸಿನ ಆಮಿಷ.. ಇಡೀ ಕೇಸ್ ಉಲ್ಟಾಪಲ್ಟಾ!

ಅಂತ್ಯಕ್ರಿಯೆ ಮುಗಿಯುತ್ತಿದ್ದಂತೆ ಆಂಟಿಗೆ ಮರಣೋತ್ತರ ಪರೀಕ್ಷೆ (Post-Mortem) ಮತ್ತು FSL ರಿಪೋರ್ಟ್‌ನಲ್ಲಿ ಸತ್ಯ ಹೊರಬರುತ್ತೆ ಅನ್ನೋ ನಡುಕ ಶುರುವಾಗಿತ್ತು. ತಕ್ಷಣ ತನ್ನ ತಾಯಿಯನ್ನ ಈ ಮಸಲತ್ತಿಗೆ ಬಳಸಿಕೊಂಡ್ಲು. ಪೊಲೀಸ್ ಕಮಿಷನರ್ ಕಚೇರಿಯ ಪೇದೆಯೊಬ್ಬನ ಸಂಪರ್ಕ ಹಿಡಿದು, FSL ಕಚೇರಿಯ ಸಿಪಾಯಿ ಅಪ್ಪಸಾಬ್‌ಗೆ ಗಾಳ ಹಾಕಿದ್ರು.

ಅಲ್ಲಿಂದ ಲ್ಯಾಬ್ ಸಹಾಯಕ ಚನ್ನಯ್ಯ ಹಾಗೂ ಸೀನಿಯರ್ ಆಫೀಸರ್ ನಾಗರಾಜ್‌ಗೆ ಲಕ್ಷ ಲಕ್ಷ ಹಣದ ಆಮಿಷವೊಡ್ಡಿ, “ಇದು ಕೊಲೆಯಲ್ಲ, ಹೃದಯಾಘಾತ (Heart Attack)” ಅಂತ ಸುಳ್ಳು ರಿಪೋರ್ಟ್ ರೆಡಿ ಮಾಡಿಸಿಬಿಟ್ರು!

2 ಕೋಟಿ ಇನ್ಶೂರೆನ್ಸ್ ಹಣ ತಂದಿಟ್ಟ ಆಪತ್ತು!

ಇದೆಲ್ಲಾ ನಡೆದು ಮೂರು ತಿಂಗಳು ಕಳೆದಿತ್ತು. ಗಂಡ ಸತ್ತಿದ್ದಕ್ಕೆ ಇನ್ಶೂರೆನ್ಸ್‌ನಿಂದ ಬರೋಬ್ಬರಿ 2 ಕೋಟಿ ರೂಪಾಯಿ ಹಣ ಆಂಟಿ ಕೈ ಸೇರಿತ್ತು. ದುಡ್ಡು ಕೈಗೆ ಬರ್ತಿದ್ದಂತೆ ಇತ್ತ ಲವ್ವರ್ ಪುಂಡಲೀಕ ಮತ್ತು ಸುಮಾ ಮಧ್ಯೆ ಹಣದ ಹಂಚಿಕೆಗೆ ಗಲಾಟೆ ಶುರುವಾಗಿದೆ.

ಸಿಟ್ಟಿಗೆದ್ದ ಪುಂಡಲೀಕ ಸೋಶಿಯಲ್ ಮೀಡಿಯಾದಲ್ಲಿ, “ಸಂದೀಪ್ ಕೊಲೆಯ ಹಿಂದೆ ಬೇರೆಯದ್ದೇ ಕಥೆಯಿದೆ” ಅಂತ ಒಂದು ಸ್ಟೇಟಸ್ ಹಾಕಿದ್ದ! ಇದನ್ನು ನೋಡಿ ಅನುಮಾನಗೊಂಡ ಸಂದೀಪ್ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪುಂಡಲೀಕನನ್ನ ಎತ್ತಿಹಾಕಿಕೊಂಡು ಬಂದು ‘ಥರ್ಡ್ ಡಿಗ್ರಿ’ ಟ್ರೀಟ್‌ಮೆಂಟ್ ಕೊಡ್ತಿದ್ದಂತೆ, ಆಂಟಿಯ ಇಡೀ ಕಾಮಪುರಾಣ, ಕೊಲೆ ರಹಸ್ಯ ಎಳೆಎಳೆಯಾಗಿ ಬಿಚ್ಚಿಕೊಂಡಿದೆ!

ಈಗ ಕಂಬಿ ಎಣಿಸ್ತಿದ್ದಾಳೆ ಕಿರಾತಕಿ ಆಂಟಿ!

ಗಂಡನನ್ನ ಕೊಂದು, ಆತನ ಕಾಸಲ್ಲೇ ಮಜಾ ಉಡಾಯಿಸೋಕೆ ಪ್ಲಾನ್ ಮಾಡಿದ್ದ ಈ ಮಾಯಾಂಗಿ ಸುಮಾ, ಅವಳ ಪ್ರಿಯಕರ ಪುಂಡಲೀಕ ಮತ್ತು ಇವರಿಗೆ ಸಾಥ್ ಕೊಟ್ಟ FSL ಅಧಿಕಾರಿಗಳು ಸೇರಿದಂತೆ ಒಟ್ಟು 10 ಮಂದಿ ಈಗ ಜೈಲು ಕಂಬಿ ಎಣಿಸುತ್ತಿದ್ದಾರೆ.

ನಿಮ್ಮ ಅನಿಸಿಕೆ ಏನು?: ಕಾಸಿಗಾಗಿ ಮತ್ತು ಕಾಮಕ್ಕಾಗಿ ಸ್ವಂತ ಗಂಡನನ್ನೇ ಕೊಂದ ಇಂಥ ರಾಕ್ಷಸಿಗೆ ಯಾವ ರೀತಿಯ ಶಿಕ್ಷೆಯಾಗಬೇಕು? ಕಮೆಂಟ್ ಮಾಡಿ!

WhatsApp Group Join Now

Spread the love

Leave a Reply