ದರ್ಶನ್‌ ಬಿಡುಗಡೆ ಮಾಡಿಸಿ ಎಂದ ಫ್ಯಾನ್ಸ್‌ – ಪೊಲೀಸರ ಲಾಠಿಯೇಟು ಬೇಕಾ ಎಂದ ಸಿಎಂ ಡಿಕೆಶಿ.!

Spread the love

ಕನಕಪುರ : ನಟ ದರ್ಶನ್‌ (Actor Darshan) ರನ್ನು ಜೈಲಿನಿಂದ ಬಿಡುಗಡೆ ಮಾಡಿಸಿ ಎಂದು ದರ್ಶನ್‌ ಅಭಿಮಾನಿಗಳು ನೇರವಾಗಿ ಸಿಎಂ ಡಿ.ಕೆ. ಶಿವಕುಮಾರ್‌(CM DK Shivakumar) ಗೆ ಬೇಡಿಕೆಯಿಟ್ಟಿರುವ ಘಟನೆ ಭಾನುವಾರ ನಡೆದಿದೆ. ಕನಕಪುರದಲ್ಲಿ ಕೃತಜ್ಞತಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ವೇಳೆ ಸಿಎಂ ಡಿಕೆ ಶಿವಕುಮಾರ್‌ ಮಾತನಾಡುತ್ತಿದ್ದ ವೇಳೆ , ನಟ ದರ್ಶನ್‌ ಅಭಿಮಾನಿಗಳು ನೇರವಾಗಿ ಸಿಎಂ ಎದುರ ಡಿಬಾಸ್‌ ಬಿಡುಗಡೆಯಾಗಬೇಕು ಎಂದು ಘೋಷಣೆ ಕೂಗಿದ್ದಾರೆ.

ಮೊದಲು ಅಭಿಮಾನಿಗಳ ಬೇಡಿಕೆಯನ್ನು ನಿರ್ಲಕ್ಷಿಸಿದ ಸಿಎಂ ಡಿಕೆಶಿ , ಬಳಿಕ ಅವರ ಕೂಗನ್ನು ಆಲಿಸಿದರು. ಅಷ್ಟರಲ್ಲೇ ಅಭಿಮಾನಿಗಳು ಡಿಬಾಸ್‌ ಡಿಬಾಸ್‌ ಎಂದು ಕಿರುಚಲಾರಂಭಿಸಿದ್ದರಿಂದ ಯಾವ ಡೀಬಾಸೂ ಇಲ್ಲ‌, ಗೀಬಾಸೂ ಇಲ್ಲ ಸುಮ್ಮನಿರ್ರೋ ಎಂದು ಕಿಡಿಕಾರಿದರು.

ಆದರೆ ಅಭಿಮಾನಿಗಳು ಅಷ್ಟಕ್ಕೇ ಸುಮ್ಮನಾಗದೇ ಡಿಬಾಸ್‌ ಡಿಬಾಸ್‌ ಎಂದು ಜೈಕಾರ ಹಾಕಲಾರಂಭಿಸಿದ ಘಟನೆ ನಡೆದಿದೆ. ಈ ವೇಳೆ ಅಸಮಾಧಾನಗೊಂಡ ಡಿಕೆಶಿ, ಜಾಸ್ತಿ ಗಲಾಟೆ ಮಾಡಿದ್ರೆ ಪೊಲೀಸರ ಲಾಠಿಯೇಟು ಬೀಳುತ್ತೆ ಎಂದು ವಾರ್ನಿಂಗ್‌ ನೀಡಿ ವೇದಿಕೆಯಿಂದ ಕೆಳಗಿಳಿದ ಘಟನೆ ನಡೆದಿದೆ.

WhatsApp Group Join Now

Spread the love

Leave a Reply