RCB ಅಭಿಮಾನಿಗಳಿಗೆ ಬಿಗ್ ಶಾಕ್.! ಆರ್‌ಸಿಬಿ – ಎಲ್‌ಎಸ್‌ಜಿ ಪಂದ್ಯ ರದ್ದು ಸಾಧ್ಯತೆ.!

Spread the love

ಐಪಿಎಲ್ 2025 ರ 70 ನೇ ಪಂದ್ಯ ಆರ್‌ಸಿಬಿ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ನಡುವೆ ಮೇ 27ರಂದು ನಡೆಯಲಿದೆ. ಈ ಹೈವೋಲ್ವೇಜ್ ಪಂದ್ಯದಲ್ಲಿ ಗೆಲುವು ಅನಿವಾರ್ಯತೆ ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಘಾತವೊಂದು ಎದುರಾಗಿದೆ. ಅದೇನು ಅಂತೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಈ ಸೀಸನ್ ಆರಂಭದಿಂದಲೂ ಬ್ಯಾಟಿಂಗ್‌, ಬೌಲಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರುತ್ತಾ ಬಂದಿದ್ದು, ಪ್ಲೇ ಆಪ್‌ ಸಹ ಪ್ರವೇಶ ಮಾಡಿದೆ. ಇದೀಗ ಅಗ್ರ ಎರಡು ಸ್ಥಾನದಲ್ಲಿ ಕಾಣಿಸಿಕೊಳ್ಳುವ ಮೂಲಕ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆಯುವ ಕಾತರದಲ್ಲಿದೆ. ಈಗಾಗಲೇ ಮೇ 23ರಂದು ಎಸ್‌ಆರ್‌ಎಚ್‌ ವಿರುದ್ಧ ಸೋತು ಒಂದು ಚಾನ್ಸ್‌ ಮಿಸ್‌ ಮಾಡಿಕೊಂಡಿದೆ. ಇನ್ನೂ ಒಂದು ಅವಕಾಶ ಇದೆ ಅಗ್ರ ಎರಡು ಸ್ಥಾನದಲ್ಲಿ ಕಾಣಿಸಿಕೊಳ್ಳಲು.

ಇಂದು (ಮೇ 25) ವೇಳೆ ಇಂದು ನಡೆಯಲಿರುವ 67ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್‌ ಸಿಎಸ್‌ಕೆ ವಿರುದ್ಧ ಸೋತರೆ, ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನ ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ. ಇದು ಸಾಧ್ಯವಾದ್ರೆ, ರಾಯಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅನುಕೂಲ ಆಗಲಿದೆ. ಯಾಕೆಂದ್ರೆ, ಜಿಟಿಗೆ ಇದೇ ಕೊನೇ ಪಂದ್ಯ ಆಗಿದ್ದು, ಆರ್‌ಸಿಬಿಗೆ ಇನ್ನೊಂದು ಪಂದ್ಯ ಬಾಕಿಯಿದೆ.

ಸದ್ಯ ಗುಜರಾತ್ ಟೈಟಾನ್ಸ್ 18 ಅಂಕಗಳೊಂದಿಗೆ ಪಾಯಿಂಟ್ಸ್‌ ಟೇಬಲ್‌ನಲ್ಲಿಅಗ್ರ ಸ್ಥಾನದಲ್ಲಿದ್ದು, ಇದೇ ಸ್ಥಾನದಲ್ಲೇ ಉಳಿದುಕೊಳ್ಳು ಇಂದು ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇಬೇಕಿದೆ. ಇಲ್ಲದಿದ್ದರೆ, ಇದು ಕೈತಪ್ಪಿ ಹೋಗುವ ಸಾಧ್ಯತೆ ಹೆಚ್ಚಿದೆ. ಮತ್ತೊಂದೆಡೆ ಸದ್ಯ 17 ಅಂಕಗಳೊಂದಿಗೆ ಪಾಯಿಂಟ್ಸ್‌ ಟೇಬಲ್‌ನಲ್ಲಿ ಆರ್‌ಸಿಬಿ 3ನೇ ಸ್ಥಾನದಲ್ಲಿದ್ದು, ಉಳಿದ ಒಂದು ಪಂದ್ಯದಲ್ಲಿ ಗೆದ್ದರೆ 19 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರುವುದರಲ್ಲಿ ಯಾವುದೇ ಅನುಮಾನವಿಲ್ಲ.

ಮುಂದಿನ ಉಳಿದ ಒಂದು ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಲಕ್ನೋ ಸೂಪರ್ ಜೈಂಟ್ಸ್‌ ತಂಡದ ವಿರುದ್ಧ ಆಡಬೇಕಿದೆ. ಇದು ಆರ್‌ಸಿಬಿ ಪಾಲಿಗೆ ಗೆಲ್ಲಲ್ಲೇಬೇಕಾದ ಸವಾಲಿನ ಪಂದ್ಯ ಆಗಿದ್ದು, ಇದನ್ನು ರಜತ್ ಪಾಟೀದಾರ್‌ ಪಡೆ ಗೆದ್ದೇ ಗೆಲ್ಲಲ್ಲೇಬೇಕೆಂಬ ಪಣ ತೊಟ್ಟಿದೆ. ಆದರೆ, ಈ ನಡುವೆಯೇ ಆತಂಕವೊಂದು ಎದುರಾಗಿದೆ. ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯಂತೆ ಮಳೆ ಸುರಿದರೆ ಪಂದ್ಯ ರದ್ದಾಗುವ ಸಾಧ್ಯತೆಯಿದೆ.

ಈಗಾಗಲೇ ಕೇರಳಕ್ಕೆ ಮುಂಗಾರು ಎಂಟ್ರಿ ಕೊಟ್ಟಿದೆ. ಈ ನಡುವೆಯೇ ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಉಂಟಾಗಿರುವ ಪರಿಣಾ ದೇಶದ ಹಲವು ರಾಜ್ಯಗಳಲ್ಲಿ ಭಾರೀ ಮಳೆ ಮುಂದುವರೆದಿದೆ. ಹಾಗೆಯೇ ಮುಂದಿನ ಹಲವು ದಿನಗಳ ಕಾಲ ಉತ್ತರ ಪ್ರದೇಶದಲ್ಲೂ ಸಹ ಕೆಲವೆಡೆ ಭಾರೀ ಮಳೆಯಾಗಲಿದೆ ಎನ್ನುವ ಮುನ್ಸೂಚನೆ ಇದೆ. ಇಲ್ಲಿನ ಲಕ್ನೋದಲ್ಲಿ ಭಾರೀ ಮಳೆ ಸುರಿದರೆ ಆರ್‌ಸಿಬಿ-ಲಕ್ನೋ ಸೂಪರ್ ಜೈಂಟ್ಸ್‌ ನಡುವೆ ನಡೆಯುವ ಪಂದ್ಯ ರದ್ದಾಗುವ ಸಾಧ್ಯತೆಯಿದೆ.

ಭಾರೀ ಮಳೆ ಸುರಿದು ಪಂದ್ಯ ರದ್ದಾದರೆ ಎರಡು ತಂಡಗಳಿಗೂ ತಲಾ ಒಂದೊಂದು ಅಂಕ ನೀಡಲಾಗುತ್ತದೆ. ಆಗ ಆರ್‌ಸಿಬಿ 18 ಅಂಕಗಳೊಂದಿಗೆ ಅಗ್ರಸ್ಥಾನದ ಆಸೆ ಬಿಡಬೇಕಾಗುತ್ತದೆ. ಆಗ ಮುಂದಿನ ಅಂದರೆ ಮೇ 26ರಂದು ನಡೆಯುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಪಂಜಾಬ್‌ ಕಿಂಗ್ಸ್‌ ತಂಡದ ವಿರುದ್ಧ ಸೋತರೆ ಆರ್‌ಸಿಬಿ ಎರಡನೇ ಸ್ಥಾನ ಅಲಂಕರಿಸಲಿದೆ.

ಭಾರೀ ಮಳೆ ಮುಂದುವರೆದರೆ, ಪಂದ್ಯ ರದ್ದುಪಡಿಸಿ ಎರಡು ತಂಡಗಳಿಗೆ ತಲಾ ಒಂದೊಂದು ಅಂಕ ನೀಡಲಾಗುತ್ತದೆ. ಸಾಧಾರಣ ಮಳೆಯಾದ್ರೆ, ಓವರ್‌ಗಳನ್ನು ಕಡಿತಗೊಳಿಸಿ ಆಡಿಸಲಾಗುತ್ತದೆ. ಓವರ್ ಕಡಿತ ಮಾಡಿ ಆಡಿಸಿದರೆ, ಬೌಲಿಂಗ್‌ ಆಯ್ಕೆ ಮಾಡಿಕೊಂಡ ತಂಡಕ್ಕೆ ಹೆಚ್ಚು ಅನುಕೂಲ ಆಗಲಿದೆ. ಯಾಕೆಂದ್ರೆ, ಈ ಪಿಚ್‌ನಲ್ಲಿ ಚೇಸಿಂಗ್‌ ಮಾಡುವವರಿಗೆ ಹೆಚ್ಚು ಅನುಕೂಲವಾಗಲಿದೆ ಎನ್ನುವ ನಂಬಿಕೆಯಿದೆ ಆದ್ದರಿಂದ.

ಮತ್ತೊಂದೆಡೆ ಯಾವುದೇ ಅನಾನುಕೂಲ ಆಗದೇ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಎಲ್‌ಎಸ್‌ಜಿ ವಿರುದ್ಧ ಗೆದ್ದು ಬೀಗಿದರೆ, ಯಾವುದೇ ಬೇರೆ ತಂಡದ ಸೋಲಿಗೆ ಕಾಯದೇ ಅಗ್ರ ಸ್ಥಾನವನ್ನು ಅಲಂಕರಿಸುವುರದಲ್ಲಿ ಯಾವುದೇ ಅನುಮಾನವಿಲ್ಲ. ಆದ್ದರಿಂದ ಈ ಗೆಲುವು ಆರ್‌ಸಿಬಿ ಪಾಲಿಗೆ ದೊಡ್ಡ ಸವಾಲಾಗಿದೆ. ಅದೇನೇ ಇರಲಿ, ಈ ಪಂದ್ಯದಲ್ಲಿ ರಾಯಲ್‌ ಟೀಂ ಗೆದ್ದು ಅಗ್ರಸ್ಥಾನಕ್ಕೇರಲಿ ಎನ್ನುವುದೇ ಅಭಿಮಾನಿಗಳ ಬೇಡಿಕೆಯಾಗಿದೆ.

ಎಲ್‌ಎಸ್‌ಜಿ ವಿರುದ್ಧದ ಆರ್‌ಸಿಬಿ ಪಂದ್ಯ ಮೇ 27ರಂದು ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಕ್ರೀಡಾಂಣದಲ್ಲಿ ನಡೆಯಲಿದೆ. ಈ ಹೈವೋಲ್ಟೇಜ್‌ ಪಂದ್ಯವನ್ನು ಬರೀ ಕರ್ನಾಟಕ ಅಷ್ಟೇ ಅಲ್ಲದೆ ಇಡೀ ದೇಶವೇ ವೀಕ್ಷಣೆ ಮಾಡಲು ಕಾತರದಿಂದ ಕಾಯುತ್ತಿದೆ. ಅಷ್ಟರ ಮಟ್ಟಿದೆ ಆರ್‌ಸಿಬಿ ಐಪಿಎಲ್‌ನಲ್ಲಿ ಕ್ರೇಜ್‌ ಹುಟ್ಟುಹಾಕಿದ ತಂಡವಾಗಿದೆ.

WhatsApp Group Join Now

Spread the love

Leave a Reply