Horoscope Today : 08 ಏಪ್ರಿಲ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ಸಂಬಂಧಿಕರ ಸ್ಥಳದಲ್ಲಿ ಶುಭಕರ ಸಮಾರಂಭದಲ್ಲಿ ಭಾಗವಹಿಸುವ ಆಹ್ವಾನವು ಇಂದು ನಿಮ್ಮನ್ನು ನಿಜವಾಗಿ ಉತ್ಸಾಹಗೊಳಿಸುವುದಿಲ್ಲ. ತಳಮಳಗೊಂಡಿರುವ ಮನಸ್ಥಿತಿ ಹಾಗೂ ದಿನವಿಡೀ ನಿಮ್ಮನ್ನು ಕಾಡುವ ಸಣ್ಣಮಟ್ಟದ ವ್ಯಾಧಿಯಿಂದಾಗಿ ದುರ್ಭರವಾಗಿರುವಂತೆ ಕಾಣಬಹುದು. ಕಾರಣವು ಸಾಮಾನ್ಯವಾಗಿರಬಹುದು, ಸಾಮಾನ್ಯ ಬೇಸರದಿಂದ ಸಣ್ಣ ಜಗಳ ಅಥವಾ ನಿಮ್ಮ ಕಾರ್ಯಕ್ಷೇತ್ರದಲ್ಲಿ ಅಥವಾ ಮನೆಯಲ್ಲಿನ ಭಿನ್ನಾಭಿಪ್ರಾಯದಿಂದಲೂ ಆಗಿರಬಹುದು. ನಿಮ್ಮ ಸಿಡುಕನ್ನು ನಿಯಂತ್ರಿಸುವಂತೆ ಗಣೇಶ ನಿಮಗೆ ತೀಕ್ಷ್ಣವಾಗಿ ಶಿಫಾರಸು ಮಾಡುತ್ತಾರೆ ಇಲ್ಲವಾದಲ್ಲಿ ನೀವು ನಂತರ ನೀವು ಮಾಡಿರುವ ಕ್ರಿಯೆಗಳ ಸಮರ್ಥನೆಗಾಗಿ ನೀವು ತಡಕಾಡಬೇಕಾಗಬಹುದು. ಇದು ಸದ್ಯಕ್ಕೆ ನೀವು … Read more

ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದು ಶಿಕ್ಷಕಿಯ ಮೃತದೇಹ ಸುಟ್ಟ ದುಷ್ಟ: ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ನಡೆದಿದ್ದು ಭೀಕರ ಕೊಲೆ

ಕಮಲಾಪುರ ತಾಲೂಕಿನ ಕಲ್ಮೂಡ ಗ್ರಾಮದ ಬಳಿ ಅರೆಬೆಂದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣದ ರಹಸ್ಯ ಕೊನೆಗೂ ಬಯಲಾಗಿದೆ. ಕೊಲೆಯಾದ ಮಹಿಳೆ ಶಾಲಾ ಶಿಕ್ಷಕಿ ಜ್ಯೋತಿ ಕಪಾಳೆ ಹಿರೇಮಠ(57) ಎಂಬುದು ಗೊತ್ತಾಗಿದ್ದು, ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಪರಿಚಯಸ್ಥ ವ್ಯಕ್ತಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದು ಶಿಕ್ಷಕಿಯ ಮೃತ ದೇಹವನ್ನು ಸುಟ್ಟು ಹಾಕಿರೋದು ಹೊತ್ತಾಗಿದೆ. ಪ್ರಕರಣ ಸಂಬಂಧ ಆರೋಪಿ ಆನಂದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವಂದರಖೇಡ ಗ್ರಾಮದಲ್ಲಿ ಶಿಕ್ಷಕಿಯಾಗಿ ಜ್ಯೋತಿ ಕಪಾಳೆ ಹಿರೇಮಠ ಕೆಲಸ … Read more

ಕರ್ನಾಟಕದಲ್ಲಿ ಲೋಕಾಯುಕ್ತರ ಮಿಂಚಿನ ದಾಳಿ: 5 ಭ್ರಷ್ಟ ಅಧಿಕಾರಿಗಳ ಮನೆಯಲ್ಲಿ ದಾಖಲೆಗಳ ಪರಿಶೀಲನೆ

ಕರ್ನಾಟಕದ 5 ಜಿಲ್ಲೆಗಳಲ್ಲಿ ಏಕಕಾಲಕ್ಕೆ ಲೋಕಾಯುಕ್ತ ದಾಳಿಯಾಗಿದೆ. ಈ ಮೂಲಕ ಭ್ರಷ್ಟಾಚಾರ ಆರೋಪಗಳ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ನಡೆಸಿದ ಸಮಗ್ರ ದಾಳಿಗಳು ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿವೆ. ಚಿತ್ರದುರ್ಗ, ಮೈಸೂರು, ಬಳ್ಳಾರಿ, ಶಿವಮೊಗ್ಗ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಏಕಕಾಲಕ್ಕೆ ನಡೆದ ಈ ಕಾರ್ಯಾಚರಣೆಗಳಲ್ಲಿ ಹಲವಾರು ಸರ್ಕಾರಿ ಅಧಿಕಾರಿಗಳ ಮನೆಗಳು, ಕಚೇರಿಗಳು ಹಾಗೂ ಸಂಬಂಧಿತ ಸ್ಥಳಗಳಲ್ಲಿ ತೀವ್ರ ಪರಿಶೀಲನೆ ನಡೆಸಲಾಗಿದೆ. ಚಿತ್ರದುರ್ಗದಲ್ಲಿ ವಿ.ಆರ್.ಎಸ್ ಪಡೆದ ಮಹಿಳಾ ಅಧಿಕಾರಿ ಮನೆ ಮೇಲೆ ದಾಳಿ ಚಿತ್ರದುರ್ಗದಲ್ಲಿ ನಿರ್ಮಿತಿ ಕೇಂದ್ರದ ಮಾಜಿ ಅಕೌಂಟೆಂಟ್ ಸುಶೀಲಮ್ಮ … Read more

Arecanut Price : ಇಂದಿನ ಅಡಿಕೆ ಧಾರಣೆ – 07 ಏಪ್ರಿಲ್ 2026 – ಇವತ್ತು ಯಾವ್ಯಾವ ಅಡಿಕೆಧಾರಣೆ ಎಷ್ಟಿದೆ ಗೊತ್ತಾ.?

ಇಂದಿನ ಅಡಿಕೆ ಬೆಲೆ – ಕರ್ನಾಟಕ ಮಾರುಕಟ್ಟೆ ಅಡಿಕೆ ವಿಧ ಗರಿಷ್ಟ ಬೆಲೆ ಮಾಡೆಲ್ ಬೆಲೆ ಸಾಗರ ಬಿಳೆಗೋಟು ₹32,500 ₹31,699 ಸಾಗರ ಕೋಕಾ ₹36,309 ₹32,799 ಯಲ್ಲಾಪುರ ಚಾಲಿ ₹50,009 ₹48,809 ಸಾಗರ ಸಿಪ್ಪೆಗೋಟು ₹22,779 ₹21,209 ಯಲ್ಲಾಪುರ ಕೋಕಾ ₹33,410 ₹28,999 ಯಲ್ಲಾಪುರ ರಾಶಿ ₹57,369 ₹54,219 ಶಿರಸಿ ಕೆಂಪುಗೋಟು ₹35,223 ₹31,303 ಕುಂದಾಪುರ ಹಣ್ಣು ₹50,000 ₹47,000 ಕುಮಟಾ ಚಾಲಿ ₹46,988 ₹46,988 ಪುತ್ತೂರು ಹೊಸ ವೆರೈಟಿ ₹50,000 ₹40,000 ಬೆಳ್ತಂಗಡಿ ಬೇರೆ … Read more

ಫೇಸ್‌ ಬುಕ್ ಲವರ್ ಜೊತೆಗೆ ಓಡಿ ಹೋದ ಪತ್ನಿ : ಪೋಲೀಸರ ಮುಂದೆಯೇ ಚಾಕುವಿನಿಂದ ಇರಿದು ಕೊಂದ ಪತಿ!

ಫೇಸ್‌ಬುಕ್‌ನಲ್ಲಿ ಪರಿಚಯವಾದ ವ್ಯಕ್ತಿಯೊಂದಿಗೆ ಮನೆ ಬಿಟ್ಟು ಹೋಗಿದ್ದ ಪತ್ನಿಯನ್ನ ಪತ್ತೆ ಹಚ್ಚಿದ ಪತಿ, ಪೊಲೀಸ್ ವಾಹನದಲ್ಲಿ ಬರುತ್ತಿರುವಾಗಲೇ ಆಕೆಯನ್ನು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ಜಹೀರಾಬಾದ್‌ನಲ್ಲಿ ನಡೆದಿದೆ. ಘಟನೆಯ ಹಿನ್ನೆಲೆ : ಝರಾಸಂಗಂ ಮಂಡಲದ ತುಂಬನಪಲ್ಲಿ ನಿವಾಸಿ ಸಿದ್ಧಾರೆಡ್ಡಿ (35) ಮತ್ತು ಕವಿತಾ (29) ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಜಹೀರಾಬಾದ್‌ನಲ್ಲಿ ವಾಸವಿದ್ದ ಸಿದ್ಧಾರೆಡ್ಡಿ ಪಾನಿಪುರಿ ವ್ಯಾಪಾರ ಮಾಡುತ್ತಿದ್ದರೆ, ಕವಿತಾ ಮನೆಯಲ್ಲೇ ಟೈಲರಿಂಗ್ ಕೆಲಸ ಮಾಡುತ್ತಿದ್ದರು. ಕೆಲವು ಸಮಯದ ಹಿಂದೆ ಕವಿತಾಗೆ ಫೇಸ್‌ಬುಕ್ ಮೂಲಕ … Read more

ಸಾವಿನಲ್ಲೂ ಒಂದಾದ ಯುವ ದಂಪತಿ! ಪತ್ನಿಯ ಸಾವಿನ ದಿನವೇ ರಸ್ತೆ ಅಪಘಾತದಲ್ಲಿ ಪ್ರಾಣಬಿಟ್ಟ ಪತಿ

ಬೆಳಗಾವಿ : ಜಿಲ್ಲೆಯಲ್ಲಿ ಒಂದೇ ದಿನ ಪತಿ-ಪತ್ನಿ (Husband and wife death) ಸಾವನ್ನಪ್ಪಿರುವ ಘಟನೆ ನಡೆದಿದ್ದು, ದಂಪತಿಯ ಮೂವರು ಮಕ್ಕಳು ಅನಾಥರಾಗಿದ್ದಾರೆ. ಪತ್ನಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದ ಪತಿ, ಬೈಕ್ನಲ್ಲಿ ಬರುವಾಗ ಅಪಘಾತಕ್ಕೀಡಾಗಿದ್ದು, ದಾರುಣವಾಗಿ ಸಾವನ್ನಪ್ಪಿದ್ದಾನೆ. ಹೊಟ್ಟೆನೋವಿನಿಂದ ಬಳಲುತ್ತಿದ್ದ ಪತ್ನಿ ಬೈಲಹೊಂಗಲ ತಾಲೂಕಿನ ಅರವಳ್ಳಿ ಗ್ರಾಮದ ಕರೆಪ್ಪ (36) ಹಾಗೂ ಅವರ ಪತ್ನಿ ಮಧುರಾ (30) ಮೃತ ದಂಪತಿ. ಹಲವು ವರ್ಷಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದ ಮಧುರಾ, ನೋವು ತಾಳಲಾರದೆ ಕ್ರಿಮಿನಾಶಕ ಮಾತ್ರೆ … Read more

Rain alert : ರಾಜ್ಯದಲ್ಲಿ ಇಂದು ಗುಡುಗು ಸಹಿತ ಭಾರಿ ಮಳೆ ; 3 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಣೆ.!

ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಮುಂದುವರಿಯುವ ಸೂಚನೆ ಸಿಕ್ಕಿದೆ. ಹವಾಮಾನ ಇಲಾಖೆಯು ಇಂದು ಚಾಮರಾಜನಗರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಿಸಿದ್ದು, ಸಂಜೆ ವೇಳೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ಮತ್ತು ರಾಮನಗರದಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಬಲವಾದ ಗಾಳಿಯೊಂದಿಗೆ ಮಳೆ ಬರುವ ನಿರೀಕ್ಷೆಯಿದೆ. ಆದರೆ ಕರಾವಳಿ ಮತ್ತು ಉತ್ತರ ಒಳನಾಡಿನ ಭಾಗಗಳಲ್ಲಿ ಒಣ ಹವೆ ಮುಂದುವರಿಯಲಿದೆ ಎಂದು ವರದಿಯಾಗಿದೆ.ಹವಾಮಾನ ಇಲಾಖೆಯು ಇಂದು ಚಾಮರಾಜನಗರ, ಕೋಲಾರ ಮತ್ತು … Read more

ಚುನಾವಣೆ ಮೊದಲು ಇನ್ನೊಂದು ಪಹಲ್ಗಾಂ ದಾಳಿ.? ಪ್ರಧಾನಿ ಮೌನ ಪ್ರಶ್ನಿಸಿದ ಮಮತಾ ಬ್ಯಾನರ್ಜಿ

‘ಚುನಾವಣೆಗೂ ಮುನ್ನ ಪಹಲ್ಗಾಂ ಮಾದರಿಯ ದಾಳಿ ನಡೆಸಲು ಬಿಜೆಪಿ ಯೋಜನೆ ರೂಪಿಸಿದೆಯೇ?’ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸ್ಫೋಟಕ ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ, ದೀದಿ ನೇತೃತ್ವದ ರಾಜ್ಯಸರ್ಕಾರವನ್ನು ಹಿಂದೂ ವಿರೋಧಿ ಎಂದು ಕರೆದಿದ್ದು, ‘ಅಲ್ಪಸಂಖ್ಯಾತರ ಮತ ಸೆಳೆಯಲು ಇಂತಹ ಹೇಳಿಕೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದೆ. ಖ್ವಾಜಾರ ಹೇಳಿಕೆಗೆ ಪ್ರತಿಕ್ರಿಯೆಯನ್ನೇಕೆ ನೀಡಲಿಲ್ಲ? ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್‌ ಕೋಲ್ಕತಾದ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಒಡ್ಡಿದ್ದನ್ನು ಉಲ್ಲೇಖಿಸಿದ ಮಮತಾ, … Read more

ರೆಡಿಮೇಡ್ ದೋಸೆ ಹಿಟ್ಟು ಸೇವಿಸಿ ಇಬ್ಬರು ಮಕ್ಕಳು ಸಾವು ; ಪೋಷಕರ ಸ್ಥಿತಿ ಗಂಭೀರ.!

ನಗರದ ಹೋಟೆಲ್‌ಗಳಲ್ಲಿ ಕಲಬೆರಕೆ ಆಹಾರದ ಬಗ್ಗೆ ಹತ್ತಾರು ದೂರುಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಅಹಮದಾಬಾದ್‌ನ ಚಾಂದ್‌ಖೇಡಾ ಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಮಾರುಕಟ್ಟೆಯಿಂದ ತಂದಿದ್ದ ರೆಡಿಮೇಡ್ ದೋಸೆ ಹಿಟ್ಟಿನಿಂದ ತಯಾರಿಸಿದ ದೋಸೆ ಸೇವಿಸಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ದಂಪತಿಗಳು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಚಾಂದ್‌ಖೇಡಾ ನಿವಾಸಿಗಳಾದ ವಿಮಲ್ ಪ್ರಜಾಪತಿ ಮತ್ತು ಭಾವನಾ ಪ್ರಜಾಪತಿ ದಂಪತಿಗಳು ಸ್ಥಳೀಯ ಡೈರಿಯಿಂದ ದೋಸೆ ಹಿಟ್ಟನ್ನು ಖರೀದಿಸಿ ತಂದಿದ್ದರು. ಇದನ್ನು ಸೇವಿಸಿದ ಇಡೀ ಕುಟುಂಬಕ್ಕೆ ತೀವ್ರವಾಗಿ ವಾಂತಿ-ಭೇದಿಯಾಗಿ ಫುಡ್‌ ಪಾಯ್ಸನ್‌ ಆಗಿ ಪರಿಣಮಿಸಿದೆ. … Read more

Gold Price : ಚಿನ್ನದ ಬೆಲೆ ಭರ್ಜರಿ 18,000 ರೂ. ಇಳಿಕೆ, ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್‌

ಚಿನ್ನ ಪ್ರಿಯರಿಗೆ ಏಪ್ರಿಲ್ 7ರ ಮಂಗಳವಾರ ಭರ್ಜರಿ ಗುಡ್‌ನ್ಯೂಸ್ ಸಿಕ್ಕಿದೆ. ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯು ಭಾರೀ ಏರಿಳಿತ ಕಂಡಿತ್ತು. ಇದೀಗ ಚಿನ್ನ ಮತ್ತು ಬೆಳ್ಳಿ ಬೆಲೆಯು ಭರ್ಜರಿ ಇಳಿಕೆಯಾಗಿದೆ. ಇಂದಿನ ಚಿನ್ನ ಬೆಲೆ ಇಳಿಕೆಯು ಚಿನ್ನ ಪ್ರಿಯರಲ್ಲಿ ಸಂತೋಷವನ್ನುಂಟು ಮಾಡಿದೆ. ಹಾಗಾದರೆ ಏಪ್ರಿಲ್ 7ರಂದು ಚಿನ್ನ ಮತ್ತು ಬೆಳ್ಳಿಯ ನಿಖರವಾದ ಬೆಲೆ ಎಷ್ಟಿದೆ ಎನ್ನುವುದನ್ನು ಈ ಲೇಖನದಲ್ಲಿ ನೋಡೋಣ. ಬೆಂಗಳೂರು ಸೇರಿದಂತೆ ಕರ್ನಾಟಕದ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯು ಭಾರೀ ಇಳಿಕೆ … Read more