Darshan Case : ನಟ ದರ್ಶನ್ ಜಾಮೀನು ರದ್ದು ಮಾಡಬೇಕು.! ದರ್ಶನ್ ಗೆ ಶಾಕ್ ಕೊಟ್ಟ ಸಚಿವ ಪರಮೇಶ್ವರ್

Spread the love

Darshan Case : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆನ್ನು ನೋವಿನ ಸಮಸ್ಯೆ ಕಾರಣ ತಿಳಿಸಿ ನಟ ದರ್ಶನ್ ಮಧ್ಯಂತರ ಜಾಮೀನು ಪಡೆದುಕೊಂಡು ಹೊರಗಡೆ ಬಂದಿದ್ದಾರೆ. ಇನ್ನು ಕೊಲೆ ನಡೆದ ಸ್ಥಳದಲ್ಲಿ ನಟ ದರ್ಶನ್ ಅವರ ಕೆಲವು ಫೋಟೋಗಳು ಸಿಕ್ಕಿದ್ದು, ಈ ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಜಾಮೀನು ರದ್ದತಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದರು.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಕೊಲೆಯಾದ ಜಾಗದಲ್ಲಿ ದರ್ಶನ್ ಇರುವ ಫೋಟೋ ಸಿಕ್ಕಿದ ವಿಚಾರವಾಗಿ FSL ರಿಪೋರ್ಟ್ ಗಾಗಿ ಹೈದರಾಬಾದ್ ಗೆ ಆರೋಪಿಗಳ ಮೊಬೈಲ್ ಗಳನ್ನು ಕಳುಹಿಸಿದ್ದೆವು.ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಕೊಲೆಯಾದ ಸ್ಥಳದಲ್ಲಿ ಇರುವಂತಹ ಫೋಟೋ ಸಿಕ್ಕಿದೆ. ಯಾರೋ ದರ್ಶನ್ ಜೊತೆಯಲ್ಲಿದ್ದವನು ವಿಡಿಯೋ ಮಾಡಿಕೊಂಡಿದ್ದ. ಆ ಸಾಕ್ಷಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಜಾಮೀನು ರದ್ದು ಮಾಡಿಸಬೇಕು ಮುಂದೆ ಏನು ಕ್ರಮ ಆಗಬೇಕು ಎಂಬುದರ ಬಗ್ಗೆ ತನಿಖೆ ಆಗುತ್ತಿದೆ ಎಂದು ಸಚಿವ ಪರಮೇಶ್ವರ್ ತಿಳಿಸಿದರು.

ಇನ್ನು ದರ್ಶನ್ ಇನ್ನೂ ಆಪರೇಷನ್ ಮಾಡಿಸಿದ ವಿಚಾರವಾಗಿ, ಆಪರೇಷನ್ ಅಗತ್ಯ ಇಲ್ಲ ಅಂತ ಇದರಿಂದಲೇ ಗೊತ್ತಾಗುತ್ತಿದೆ. ಆಪರೇಷನ್ ಮಾಡದಿದ್ದರೆ ಬೆನ್ನು ಮೂಳೆ ಮುರಿದು ಹೋಗುತ್ತದೆ ಅಂತ ಹೇಳುತ್ತಿದ್ದರು. ಇಷ್ಟು ದಿನ ಆದರೂ ದರ್ಶನ್ ಗೆ ವೈದರು ಆಪರೇಷನ್ ಮಾಡಿಲ್ಲ. ಕೋರ್ಟ್ ವ್ಯವಸ್ಥೆಯಲ್ಲಿ ತೀರ್ಮಾನ ಕೊಡಬೇಕು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿಕೆ ನೀಡಿದರು.

WhatsApp Group Join Now

Spread the love

Leave a Reply