ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ದಿನದಿಂದ ದಿನಕ್ಕೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೊಲೆ, ದರೋಡೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಿಲಿಕಾನ್ ಸಿಟಿ ಬೆಂಗಳೂರು ಕ್ರೈಂ (Crime) ಸಿಟಿ ಆಗಿದ್ಯಾ ಅನ್ನೋ ಪ್ರಶ್ನೆ ಕಾಡ್ತಿದೆ.
ಈ ಬೆನ್ನಲ್ಲೇ ನಗರದಲ್ಲಿ ಕೇವಲ 800 ರೂಪಾಯಿಗೆ ಭೀಕರ ಮರ್ಡರ್ ನಡೆದು ಹೋಗಿದೆ. ಆಟೋ ಚಾಲಕ ರಕ್ಷಿತ್ ಎಂಬಾತನನ್ನು ಕೊಲೆ ಮಾಡಿದ್ದ ಆರೋಪಿಗಳು ಶವವನ್ನ ಹೂತುಹಾಕಿದ್ದರು.
ಕೊಲೆ ಪ್ರಕರಣದ ಹಿಂದೆ ಗಾಂಜಾ ಘಾಟು
ಕುಂಬಳಗೋಡು ಠಾಣೆ ವ್ಯಾಪ್ತಿಯಲ್ಲಿ ಕೊಲೆ ಮಾಡಿ ಶವ ಹೂತಿಟ್ಟ ಪ್ರಕರಣಕ್ಕೆ ಆಟೋ ಮೇಲಿನ ಬ್ಲಡ್ ಮಾರ್ಕ್ ಕ್ಲೂ ಕೊಟ್ಟಿತ್ತು. ಗಾಂಜಾ ಅಮೌಂಟ್ ವಿಚಾರಕ್ಕೆ ಆಟೋ ಡ್ರೈವರ್ ರಕ್ಷಿತ್ ಕೊಲೆಯಾಗಿತ್ತು. ಕೊಲೆಯಾದ ರಕ್ಷಿತ್ ಹಾಗೂ ಆರೋಪಿಗಳು ಎಲ್ಲರೂ ಪರಿಚಯಸ್ಥರಾಗಿದ್ದರು. ಎಲ್ಲರ ಮಧ್ಯೆ ಆಗಾಗ ಗಾಂಜಾ ವ್ಯವಹಾರ ನಡೀತಿತ್ತು, ಆರೋಪಿಗಳ ಬಳಿ ಕೊಲೆಯಾದ ರಕ್ಷಿತ್ ಗಾಂಜಾ ಖರೀದಿಸಿದ್ದನು. ಆದ್ರೆ, ಗಾಂಜಾ ಪಡೆದು ಹಣ ಕೊಟ್ಟಿರಲಿಲ್ಲ, 800 ರೂಪಾಯಿ ಹಣ ಕೊಡುವಂತೆ ಆರೋಪಿಗಳು ರಕ್ಷಿತ್ ಬಳಿ ಜಗಳ ತೆಗೆದಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ಜೋರಾಗಿದೆ. ಜಗಳದ ನಡುವೆ ಆರೋಪಿಗಳು ರಕ್ಷಿತ್ಗೆ ದೊಣ್ಣೆಯಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ.
ಆಟೋ ಮೇಲಿನ ರಕ್ತದ ಕಲೆ ನೋಡಿ ಲಾಕ್..!
ಕೊಲೆ ಮಾಡಿದ ಬಳಿಕ ಆರೋಪಿಗಳು ರಕ್ಷಿತ್ ಶವವನ್ನ ಆತನ ಆಟೋದಲ್ಲೇ ಸಾಗಿಸಿದ್ದಾರೆ. ರಾಮಸಂದ್ರ ಬಳಿಯ ಕೆರೆಯ ಬಳಿ ಶವ ತೆಗೆದೊಯ್ದು ಹೂತಾಕಿದ್ದರು. ಶವ ಹೂತಿಟ್ಟು ಏನು ಗೊತ್ತಿಲ್ದಂತೆ ಹೋಗ್ತಿದ್ದ ಆರೋಪಿಗಳ ಮೇಲೆ ಬೀಟ್ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಬಳಿಕ ಆಟೋ ಮೇಲಿನ ರಕ್ತದ ಕಲೆ ನೋಡಿ ಆರೋಪಿಗಳನ್ನು ಲಾಕ್ ಮಾಡಿದ್ದಾರೆ.
ಆಟೋ ತಡೆದು ಬೀಟ್ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆಟೋ ಮೇಲಿನ ರಕ್ತದ ಕಲೆ ನೋಡಿ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದಾರೆ. ಏನಿದು ರಕ್ತದ ಕಲೆ ಎಂದಾಗ ಆರೋಪಿಗಳು ತಡಬಡಾಯಿಸಿದ್ದರು. ನಂತರ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕೊಲೆ ಮಾಡಿರೋದು ಬಾಯ್ಬಿಟ್ಟಿದ್ದಾರೆ. ಸದ್ಯ, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು, ಮೋಹ್ಸಿನ್ ಪಾಷಾ ಹಾಗೂ ಹಸನ್ ಎಂಬುವರು ಅರೆಸ್ಟ್ ಮಾಡಿದ್ದಾರೆ.
ಇನ್ನು ಈ ಕೊಲೆ ಪ್ರಕರಣದ ಬಗ್ಗೆ ನೈರುತ್ಯ ವಿಭಾಗದ ಡಿಸಿಪಿ ಅನಿತಾ ಹದ್ದಣ್ಣನವರ್ ಮಾಹಿತಿ ನೀಡಿದ್ದಾರೆ. ನಿನ್ನೆ ಆಟೋ ಒಂದಕ್ಕೆ ರಕ್ತದ ಕಲೆ ಹತ್ತಿತ್ತು, ಆ ಮಾಹಿತಿ ಅನ್ವಯ ಮಾಹಿತಿ ಕಲೆ ಹಾಕಲಾಗ್ತಿತ್ತು, ಇದೇ ವೇಳೆ ಕೊಲೆಯಾದ ರಕ್ಷಿತ್ ತಾಯಿ ಬಂದು ದೂರು ನೀಡಿದ್ದಾರೆ. ಹಣದ ವಿಚಾರಕ್ಕೆ ನಿನ್ನ ಮಗನನ್ನ ಹೊಡೆದು ಹಾಕಿದ್ದೀವಿ ಆತನ ಸ್ನೇಹಿತರು ಹೇಳಿರುತ್ತಾರೆ, ಈ ಬಗ್ಗೆ ರಕ್ಷಿತ್ ತಾಯಿ ದೂರು ನೀಡಿರುತ್ತಾರೆ.
ಹಣ ಕೊಡುವ ಮತ್ತು ತೆಗೆದುಕೊಳ್ಳುವ ವಿಚಾರಕ್ಕೆ ಇಬ್ಬರಿಗೂ ಜಗಳ ಆಗಿರುತ್ತೆ, ಬೇರೊಂದು ಕಡೆ ರಕ್ಷಿತ್ ನ ಕರೆದೊಯ್ದು ಹಲ್ಲೆ ಮಾಡಿ ಕೊಲೆ ಮಾಡಿರುತ್ತಾರೆ. ನಂತರ ಶವ ತೆಗೆದುಕೊಂಡು ಹೋಗಿ ಗುಂಡಿಯೊಂದಕ್ಕೆ ಹಾಕಿರ್ತಾರೆ, ಸದ್ಯ ಘಟನೆ ಸಂಬಂಧ ನಾವು ಇಬ್ಬರು ಆರೋಪಿಗಳನ್ನ ಬಂಧಿಸಿ ತನಿಖೆ ಮುಂದುವರೆಸಲಾಗಿದೆ.
ಕೇವಲ ₹800 ವಿಚಾರಕ್ಕೆ ಬಿತ್ತು ಹೆಣ! ಶವ ಹೂತು ಎಸ್ಕೇಪ್ ಆಗ್ತಿದ್ದ ಹಂತಕರು ಲಾಕ್ ಆಗಿದ್ದೇಗೆ.?
WhatsApp Group
Join Now