ಮದುವೆ ಎಂಬ ಪವಿತ್ರ ಬಂಧನವನ್ನು ದುರುಪಯೋಗಪಡಿಸಿಕೊಂಡು, ಮದುವೆಯಾದ ಮೊದಲ ರಾತ್ರಿಯೇ ನವವಧುವೊಬ್ಬಳು ಪತಿಗೆ ನಂಬಿಕೆ ದ್ರೋಹ ಎಸಗಿರುವ ಶಾಕಿಂಗ್ ಘಟನೆಯೊಂದು ಬೆಳಕಿಗೆ ಬಂದಿದೆ. “ನನಗೆ ಪೀರಿಯಡ್ಸ್ (ಮುಟ್ಟು) ಆಗಿದೆ, ನಾವು ನಾಳೆ ನೋಡಿಕೊಳ್ಳೋಣ” ಎಂದು ಪತಿಯನ್ನು ನಂಬಿಸಿ, ಆತ ನಿದ್ರೆಗೆ ಜಾರಿದ ನಂತರ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನು ದೋಚಿಕೊಂಡು ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ.
ಘಟನೆಯ ವಿವರ:
ರಾಹುಲ್ ಕುಮಾರ್ ಎಂಬ ಯುವಕನಿಗೆ ಸಮೀಪದ ಗ್ರಾಮದ ರಾಣಿ ಕುಮಾರಿ ಎಂಬ ಯುವತಿಯೊಂದಿಗೆ ವಿವಾಹವಾಗಿತ್ತು. ಈ ಮದುವೆಯಲ್ಲಿ ವರನ ಕಡೆಯವರು ಯಾವುದೇ ವರದಕ್ಷಿಣೆ ಅಥವಾ ಉಡುಗೊರೆಗಳನ್ನು ಅಪೇಕ್ಷಿಸಿರಲಿಲ್ಲ. ಆದರೆ, ವಧು ರಾಣಿ ಕುಮಾರಿ ಮಾತ್ರ ಮೊದಲೇ ಸ್ಕೆಚ್ ಹಾಕಿ, ತನ್ನ ಪ್ರಿಯಕರನೊಂದಿಗೆ ಸೇರಿ ಈ ಕೃತ್ಯ ಎಸಗಿದ್ದಾಳೆ.
ಮೊದಲ ರಾತ್ರಿಯನ್ನೇ ಎಸ್ಕೇಪ್ ಆದ ವಂಚಕಿ:
ಸಾಮಾನ್ಯವಾಗಿ ಮದುವೆಯ ನಂತರ ಮೊದಲ ರಾತ್ರಿಯನ್ನು ದಂಪತಿಗಳು ಅತ್ಯಂತ ವಿಶೇಷ ಹಾಗೂ ಪವಿತ್ರವಾದ ಸಮಯ ಎಂದು ಭಾವಿಸುತ್ತಾರೆ. ಆದರೆ, ಈ ವಂಚಕಿ ಆ ಸಮಯವನ್ನೇ ತನ್ನ ಕಳ್ಳತನದ ಪ್ಲಾನ್ಗೆ ದಾಳವಾಗಿ ಬಳಸಿಕೊಂಡಿದ್ದಾಳೆ.
ಮೊದಲ ರಾತ್ರಿ ಕೋಣೆಗೆ ಬಂದ ಪತಿಗೆ ತನಗೆ ಪೀರಿಯಡ್ಸ್ ಆಗಿದೆ ಎಂದು ಸುಳ್ಳು ಹೇಳಿದ್ದಾಳೆ. ಪತಿ ರಾಹುಲ್ ಆಕೆಯ ಮಾತನ್ನು ನಂಬಿ, ವಿಶ್ರಾಂತಿ ತೆಗೆದುಕೊಳ್ಳಲಿ ಎಂದು ಪ್ರಶಾಂತವಾಗಿ ನಿದ್ರಿಸಿದ್ದಾನೆ. ಪತಿ ಗಾಢ ನಿದ್ರೆಯಲ್ಲಿದ್ದಾಗ, ರಾಣಿ ಕುಮಾರಿ ಮನೆಯಲ್ಲಿದ್ದ ಬೆಲೆಬಾಳುವ ಒಡವೆಗಳು ಮತ್ತು ನಗದು ಹಣವನ್ನು ಬ್ಯಾಕ್ನಲ್ಲಿ ತುಂಬಿಕೊಂಡು, ತಡರಾತ್ರಿ ಅಲ್ಲಿಂದ ಕಾಲ್ಕಿತ್ತಿದ್ದಾಳೆ.
ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ಪತ್ನಿ
ನಾಪತ್ತೆಯಾಗಿರುವುದು ಮತ್ತು ಮನೆಯಲ್ಲಿದ್ದ ಕಪಾಟುಗಳು ತೆರೆದಿರುವುದನ್ನು ಕಂಡು ವರ ಹಾಗೂ ಆತನ ಕುಟುಂಬಸ್ಥರು ತೀವ್ರ ದಿಗ್ಭ್ರಮೆಗೊಂಡಿದ್ದಾರೆ. ಸದ್ಯ ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಆಕೆಯ ವಂಚನೆಯ ಬುದ್ಧಿಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮದುವೆ ರಾತ್ರಿಯೇ ಪತಿಗೆ ನಾಮ ಹಾಕಿದ ನವವಧು: ‘ಪೀರಿಯಡ್ಸ್’ ನೆಪ ಹೇಳಿ ನಗದು, ಒಡವೆಯೊಂದಿಗೆ ಪ್ರಿಯಕರನ ಜೊತೆ ಪರಾರಿ!
WhatsApp Group
Join Now