ಜಗತ್ತಿನಾದ್ಯಂತ ತಾಯಂದಿರ ದಿನವನ್ನು ಆಚರಿಸಲಾಗುತ್ತಿದ್ದ ದಿನವೇ ಮಾನವೀಯತೆ ತಲೆತಗ್ಗಿಸುವಂತಹ ಘಟನೆಯೊಂದು ದೆಹಲಿಯಲ್ಲಿ ಜರುಗಿದೆ. ಪ್ರೀತಿ ಮತ್ತು ಮಮತೆಯ ಸಂಕೇತವಾಗಿರಬೇಕಾದ ಮಗನೇ ಕ್ರೂರವಾಗಿ ವರ್ತಿಸಿ ತನ್ನ ತಾಯಿಯನ್ನೇ ಇಲ್ಲವಾಗಿಸಿದ್ದಾನೆ.
ಹಣ ಮತ್ತು ಆಸ್ತಿಯ ಮೇಲಿನ ವ್ಯಾಮೋಹ ಕೃತ್ಯಕ್ಕೆ ಕಾರಣ ಎನ್ನಲಾಗಿದೆ.
ಈ ಭೀಕರ ಕೃತ್ಯದಲ್ಲಿ ಕೇವಲ ತಾಯಿ , ತನ್ನ ಒಡಹುಟ್ಟಿದ ತಮ್ಮನನ್ನೂ ಕೂಡ ಆರೋಪಿ ಹತ್ಯೆ ಮಾಡಿದ್ದಾನೆ. ಮನೆಯ ಹಂಚಿಕೆ ಮತ್ತು ಆಸ್ತಿಗೆ ಸಂಬಂಧಿಸಿದಂತೆ ಕುಟುಂಬದಲ್ಲಿ ಕಳೆದ ಕೆಲವು ಸಮಯದಿಂದ ಕಿತ್ತಾಟ ನಡೆಯುತ್ತಿತ್ತು. ಈ ಕಲಹ ಅಂತಿಮವಾಗಿ ತೀವ್ರ ಸ್ವರೂಪಕ್ಕೆ ತಿರುಗಿ, ಆರೋಪಿ ಹರಿತವಾದ ಆಯುಧದಿಂದ ಇಬ್ಬರನ್ನೂ ಕೊಚ್ಚಿ ಕೊಂದಿದ್ದಾನೆ. ಈ ಘಟನೆಯ ನಂತರ ಸ್ಥಳೀಯರಲ್ಲಿ ಆತಂಕ ಮನೆಮಾಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ತಾಯಂದಿರ ದಿನದಂದೇ ಈ ದುರಂತ ಸಂಭವಿಸಿದ್ದು, ಈ ಇಬ್ಬರು ವ್ಯಕ್ತಿಗಳ ಹತ್ಯೆಗೆ ಮೂಲ ಕಾರಣ ಕುಟುಂಬದ ಆಸ್ತಿಯ ಹಂಚಿಕೆಯ ವಿವಾದ ಎಂದು ಪೊಲೀಸರು ದೃಢಪಡಿಸಿದ್ದಾರೆ. ದೆಹಲಿ ಪೊಲೀಸರು ಈಗಾಗಲೇ ಆರೋಪಿಯನ್ನು ಬಂಧಿಸಿದ್ದು, ಆತ ಕೃತ್ಯಕ್ಕೆ ಬಳಸಿದ ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ.
ಆಸ್ತಿ ಹಪಾಹಪಿಗೆ ರಕ್ತ ಸಂಬಂಧಗಳ ಬಲಿ.! ತಾಯಿ, ತಮ್ಮನನ್ನೇ ಕೊಲೆಗೈದ ಪಾಪಿ ಮಗ.!
WhatsApp Group
Join Now