ಬ್ಯಾಂಕ್ ಉಳಿತಾಯ ಖಾತೆಗಳಲ್ಲಿ ನಗದು ಜಮೆ ಮಾಡುವ ವ್ಯವಹಾರಗಳ ಮೇಲೆ ಆದಾಯ ತೆರಿಗೆ ಇಲಾಖೆಯು ಹದ್ದಿನ ಕಣ್ಣಿಟ್ಟಿದ್ದು, ನಿಯಮ ಮೀರಿ ಹಣ ಜಮೆ ಮಾಡಿದರೆ ಐಟಿ ನೋಟಿಸ್ ಬರುವ ಸಾಧ್ಯತೆಯಿದೆ. ಒಂದು ಹಣಕಾಸು ವರ್ಷದಲ್ಲಿ ಉಳಿತಾಯ ಖಾತೆಗೆ 10 ಲಕ್ಷ ರೂಪಾಯಿಗಿಂತ ಹೆಚ್ಚಿನ ನಗದು ಜಮೆ ಮಾಡಿದರೆ ಬ್ಯಾಂಕುಗಳು ಆ ಮಾಹಿತಿಯನ್ನು ಕಡ್ಡಾಯವಾಗಿ ಆದಾಯ ತೆರಿಗೆ ಇಲಾಖೆಗೆ ವರದಿ ಮಾಡುತ್ತವೆ.
ದೊಡ್ಡ ಮೊತ್ತದ ನಗದು ವ್ಯವಹಾರ ಮಾಡುವಾಗ ಆದಾಯದ ಮೂಲಕ್ಕೆ ಸರಿಯಾದ ದಾಖಲೆಗಳಿಲ್ಲದಿದ್ದರೆ ಭಾರಿ ದಂಡ ತೆರಬೇಕಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ನಗದು ವಹಿವಾಟಿನ ಬದಲು ಆನ್ಲೈನ್ ವರ್ಗಾವಣೆಗಳಿಗೆ ಆದ್ಯತೆ ನೀಡುವುದು ಇಂತಹ ತೊಂದರೆಗಳಿಂದ ಪಾರಾಗಲು ಉತ್ತಮ ಮಾರ್ಗವಾಗಿದೆ.
ನಮ್ಮ ಸಂಪಾದನೆಯ ಒಂದು ಭಾಗವನ್ನು ಭವಿಷ್ಯದ ಅಗತ್ಯಗಳಿಗಾಗಿ ಬ್ಯಾಂಕಿನಲ್ಲಿ ಜಮೆ ಮಾಡುವುದು ಸಹಜ. ಆದರೆ, ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಇಟ್ಟರೆ ಆದಾಯ ತೆರಿಗೆ ಇಲಾಖೆಯಿಂದ (Income Tax) ನೋಟಿಸ್ ಬರುವುದಿಲ್ಲ? ಎಷ್ಟು ಹಣದ ನಂತರ ಸರ್ಕಾರಕ್ಕೆ ಲೆಕ್ಕ ನೀಡಬೇಕು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಉಳಿತಾಯ ಮತ್ತು ಚಾಲ್ತಿ ಖಾತೆಗಳ ಮಿತಿ
ಸಾಮಾನ್ಯವಾಗಿ ಒಂದು ಹಣಕಾಸು ವರ್ಷದಲ್ಲಿ ನಿಮ್ಮ ಉಳಿತಾಯ ಖಾತೆಗೆ (Savings Account) ಗರಿಷ್ಠ 10 ಲಕ್ಷ ರೂಪಾಯಿ ವರೆಗೆ ನಗದು ಜಮೆ ಮಾಡಬಹುದು. ಈ ಮಿತಿ ಮೀರಿದರೆ ಬ್ಯಾಂಕುಗಳು ಆ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆಗೆ ವರದಿ ಮಾಡುತ್ತವೆ. ಅದೇ ರೀತಿ ಚಾಲ್ತಿ ಖಾತೆಯಲ್ಲಿ (Current Account) ಈ ಮಿತಿ 50 ಲಕ್ಷ ರೂಪಾಯಿ ವರೆಗೆ ಇರುತ್ತದೆ.
ಆದಾಯ ಮತ್ತು ಜಮೆ ನಡುವಿನ ವ್ಯತ್ಯಾಸ
ನಿಮ್ಮ ಜಮೆ 10 ಲಕ್ಷ ರೂಪಾಯಿಗಿಂತ ಕಡಿಮೆ ಇದ್ದರೂ ಸಹ ನೋಟಿಸ್ ಬರುವುದಿಲ್ಲ ಎಂದು ಹೇಳಲಾಗದು. ಒಂದು ವೇಳೆ ನಿಮ್ಮ ವಾರ್ಷಿಕ ಆದಾಯ ಕಡಿಮೆ ಇದ್ದು, ಖಾತೆಯಲ್ಲಿ ಹೆಚ್ಚಿನ ಹಣ ಜಮೆಯಾಗುತ್ತಿದ್ದರೆ, ಆ ಹಣದ ಮೂಲದ ಬಗ್ಗೆ ಅಧಿಕಾರಿಗಳು ಪ್ರಶ್ನಿಸಬಹುದು. ಸೂಕ್ತ ದಾಖಲೆಗಳಿದ್ದರೆ ಯಾವುದೇ ತೊಂದರೆಯಾಗುವುದಿಲ್ಲ.
ಪಾನ್ ಕಾರ್ಡ್ (PAN Card) : ಒಂದೇ ದಿನದಲ್ಲಿ 50,000 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ನಗದನ್ನು ಜಮೆ ಮಾಡಲು ಪಾನ್ ಕಾರ್ಡ್ ವಿವರ ನೀಡುವುದು ಕಡ್ಡಾಯ. ಇದು ದೊಡ್ಡ ಮೊತ್ತದ ವಹಿವಾಟುಗಳನ್ನು ಟ್ರ್ಯಾಕ್ ಮಾಡಲು ಇಲಾಖೆಗೆ ಸಹಕಾರಿಯಾಗುತ್ತದೆ.
ಬಡ್ಡಿಯ ಮೇಲೆ ತೆರಿಗೆ : ಉಳಿತಾಯ ಖಾತೆಯಲ್ಲಿನ ಹಣದ ಮೇಲೆ ಬರುವ ವಡ್ಡಿ 10,000 ರೂಪಾಯಿಗಿಂತ ಹೆಚ್ಚಿದ್ದರೆ, ಅದನ್ನು ನಿಮ್ಮ ಒಟ್ಟು ಆದಾಯಕ್ಕೆ ಸೇರಿಸಿ ನಿಮ್ಮ ಟ್ಯಾಕ್ಸ್ ಸ್ಲ್ಯಾಬ್ ಪ್ರಕಾರ ತೆರಿಗೆ ವಿಧಿಸಲಾಗುತ್ತದೆ.
ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ : ಒಂದು ಲಕ್ಷ ರೂಪಾಯಿಗಿಂತ ಹೆಚ್ಚಿನ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ನಗದು ರೂಪದಲ್ಲಿ ಪಾವತಿಸಿದರೂ ಸಹ ಅದು ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ಹೋಗುತ್ತದೆ.
ಸುರಕ್ಷಿತ ಕ್ರಮಗಳೇನು.?
• ಸಾಧ್ಯವಾದಷ್ಟು ನಗದು ವಹಿವಾಟಿನ ಬದಲಿಗೆ ಆನ್ಲೈನ್ ವರ್ಗಾವಣೆ (UPI, NEFT) ಅಥವಾ ಚೆಕ್ ಮೂಲಕ ವ್ಯವಹಾರ ನಡೆಸಿ.
• ದೊಡ್ಡ ಮೊತ್ತದ ಹಣ ಜಮೆ ಮಾಡುವಾಗ ಅದಕ್ಕೆ ಸಂಬಂಧಿಸಿದ ರಸೀದಿ ಅಥವಾ ದಾಖಲೆಗಳನ್ನು ಭದ್ರವಾಗಿ ಇಟ್ಟುಕೊಳ್ಳಿ.
• ಲೆಕ್ಕ ತೋರಿಸದ ಆದಾಯಕ್ಕೆ ಭಾರಿ ದಂಡ ತೆರಬೇಕಾಗಬಹುದು, ಆದ್ದರಿಂದ ಪಾರದರ್ಶಕ ವಹಿವಾಟು ನಡೆಸುವುದು ಉತ್ತಮ.
ಓದುಗರೇ ಗಮನಿಸಿ : ಇದು ಸಾಮಾನ್ಯ ಮಾಹಿತಿಯಾಗಿದ್ದು, ಹೆಚ್ಚಿನ ವಿವರಗಳಿಗಾಗಿ ಹಣಕಾಸು ತಜ್ಞರನ್ನು ಸಂಪರ್ಕಿಸಿ.
ನಿಮ್ಮ ಬ್ಯಾಂಕ್ ಖಾತೆಗೆ ಪದೇ ಪದೇ ಹಣ ಹಾಕ್ತಿದ್ದೀರಾ ? ‘IT’ ನೋಟಿಸ್ ಬರಬಹುದು ಹುಷಾರ್.!
WhatsApp Group
Join Now