ನಾನು ಯಾರಿಗೂ ನೋವುಂಟು ಮಾಡಿಲ್ಲ, ಮದುವೆ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳಿದ್ದಾರೆ : ಜಡ್ಜ್ ಎದುರು ವಿನಯ್ ಕುಲಕರ್ಣಿ ಹೇಳಿಕೆ!

Spread the love

ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ನಿನ್ನೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಎಲ್ಲಾ 17 ಆರೋಪಿಗಳು ಎಂದು ತೀರ್ಪು ಪ್ರಕಟಿಸಿದೆ. ಇಂದು ಕೋರ್ಟ್ ಆರೋಪಿಗಳಿಗೆ ಶಿಕ್ಷೆ ಪ್ರಮಾಣ ಪ್ರಕಟಿಸಲಿದ್ದು, ವಿಚಾರಣೆಯ ವೇಳೆ ಸಿಬಿಐ ಪರ ವಕೀಲರು ಆರೋಪಿಗಳಿಗೆ ಕಠಿಣವಾದ ಗಲ್ಲು ಶಿಕ್ಷೆ ವಿಧಿಸಿ ಎಂದು ಮನವಿ ಮಾಡಿದರು.

ಇದೇ ವೇಳೆ A15 ಆರೋಪಿ ಶಾಸಕ ವಿನಯ್ ಕುಲಕರ್ಣಿ ನಾನು 27 ವರ್ಷದಿಂದ ರಾಜಕೀಯದಲ್ಲಿ ಇದ್ದೇನೆ. ನಾನು ಯಾರಿಗೂ ನೋವು ಮಾಡಿಲ್ಲ. ರಾಜಕೀಯ ಕಾರಣಕ್ಕೆ ನನ್ನ ಮೇಲೆ ಕೇಸ್ ಹಾಕಿದ್ದಾರೆ. ನನಗೆ ಮದುವೆ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಒಬ್ಬ ಮಗನಿದ್ದಾನೆ ಪಾರ್ಲಿಮೆಂಟ್ ಎಲೆಕ್ಷನ್ ನಿಂತೆ. ನಾನು ಒಬ್ಬ ಕೃಷಿಕನಾಗಿದ್ದು ಮೂರುವರೆ ಸಾವಿರ ಹಸುಗಳಿವೆ. ಕ್ಷೇತ್ರದಲ್ಲಿ ಯಾರಿಗೂ ತೊಂದರೆ ಮಾಡಿಲ್ಲ. ರಾಜಕೀಯ ಕಾರಣಕ್ಕೆ ಕೆಸ್ ಹಾಕಿದ್ದಾರೆ ಎಂದು ವಿನಯ್ ಕುಲಕರ್ಣಿ ಇದೆ ವೇಳೆ ತಿಳಿಸಿದರು.

ಇನ್ನು A4 ಆರೋಪಿಯು ನಾನು ಆಟೋ ಡ್ರೈವರ್ ಆಗಿದ್ದೇನೆ ನನಗೆ ತಂದೆ ತಾಯಿ ಇದ್ದಾರೆ, ನಾನೇ ನೋಡಿಕೊಳ್ಳಬೇಕು ಹಾಗಾಗಿ ನನಗೆ ಕಡಿಮೆ ಶಿಕ್ಷೆ ಕೊಡಿ ಎಂದು ಮನವಿ ಮಾಡಿದ್ದಾನೆ. ಇನ್ನು A5 ಆರೋಪಿ ನಾನು ರಿಯಲ್ ಎಸ್ಟೇಟ್ ಮಾಡುತಿದ್ದೆ ತಂದೆ ತಾಯಿ ಕೊಡಬೇಕು ಎಂದು ಮನವಿ ಮಾಡಿದ್ದಾನೆ. A6 ನನಗು ಚಿಕ್ಕ ಚಿಕ್ಕ ಮಕ್ಕಳಿದ್ದಾರೆ ಕಣ್ಣಿನ ಸಮಸ್ಯೆ ಇದೆ ಹಾಗಾಗಿ ಶಿಕ್ಷೆ ಪ್ರಮಾಣ ಕಡಿಮೆ ಮಾಡಿ ಎಂದು ಮನವಿ ಮಾಡಿದ್ದಾನೆ.

A 16 ನಾನು ಹಾರ್ಟ್ ಪೇಷಂಟ್, ಹೆಂಡತಿಯು ಪೇಷಂಟ್ ಮಗ ಬೇರೆ ಇದ್ದಾನೆ ಮೊಮ್ಮಗ ತೀರಿಕೊಂಡಿದ್ದಾನೆ. ಕಡಿಮೆ ಶಿಕ್ಷೆ ಕೊಡಿ. A17 ಆರೋಪಿಯು ನನಗೆ 5 ವರ್ಷ ಹಾಗೂ 7 ವರ್ಷದ ಮಕ್ಕಳಿದ್ದಾರೆ ಎಲೆಕ್ಟ್ರಿಕ್ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದು ಕಡಿಮೆ ಶಿಕ್ಷೆ ಕೊಡಿ ಇನ್ನು A19 ಆರೋಪಿಯು ನನಗೆ ಯಾವುದೇ ಬ್ಲಾಕ್ ಮಾರ್ಕ್ ಇಲ್ಲ ನಗದು ಪ್ರಶಸ್ತಿ ಸಿಕ್ಕಿದೆ ನನಗೆ ಕಡಿಮೆ ಶಿಕ್ಷೆ ಕೊಡಿ ಎಂದು ಹೇಳಿಕೆ ನೀಡಿದ್ದು, ಎಲ್ಲಾ ಅಪರಾಧಿಗಳ ಹೇಳಿಕೆ ದಾಖಲು ಮುಕ್ತಾಯವಾಗಿದೆ. ಕೆಲವೇ ಕ್ಷಣಗಳಲ್ಲಿ ಶಿಕ್ಷೆಯ ಪ್ರಮಾಣ ಪ್ರಕಟ ಆಗಲಿದೆ.

WhatsApp Group Join Now

Spread the love

Leave a Reply