Tractor Subsidy : ಟ್ರಾಕ್ಟರ್ ಖರೀದಿಸಲು ರೈತರಿಗೆ 50% ಸಹಾಯಧನ..! ಹೇಗೆ ಅರ್ಜಿ ಸಲ್ಲಿಸುವುದು.? ಬೇಕಾಗುವ ದಾಖಲೆಗಳೇನು.?

Tractor Subsidy : ನಮಸ್ಕಾರ ಸ್ನೇಹಿತರೇ, ಕೇಂದ್ರ ಸರ್ಕಾರ ರೈತರಿಗೆ ಟ್ರಾಕ್ಟರ್ ಖರೀದಿಸಲು ಸಹಾಯಧನ ನೀಡುತ್ತಿದೆ. ಇದರ ಆಡಿಯಲ್ಲಿ ರೈತರು ಯಾವುದೇ ಕಂಪನಿಯ ಟ್ರ್ಯಾಕ್ಟರ್ ಗಳನ್ನು ಅರ್ಧ ಜರದಲ್ಲಿ ಖರೀದಿಸಬಹುದು. ಉಳಿದ ಅರ್ಧದಷ್ಟು ಹಣವನ್ನು ಸರ್ಕಾರವು ಸಬ್ಸಿಡಿಯಾಗಿ ನೀಡುತ್ತದೆ.

ಈ ಯೋಜನೆಯಲ್ಲಿ ಟ್ಯಾಕ್ಟರ್ ಖರೀದಿಸುವ ಪ್ರತಿಯೊಬ್ಬ ರೈತನಿಗೂ ಕೇಂದ್ರ ಸರ್ಕಾರದಿಂದ ಸಬ್ಸಿಡಿ ನೀಡಲಾಗುತ್ತದೆ. ಈ ಯೋಜನೆ ಪಡೆಯಲು ದೇಶದ ಎಲ್ಲ ಅರ್ಹ ರೈತರು ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ. ಅರ್ಜಿ ಸಲ್ಲಿಸಲು ಯಾರೆಲ್ಲಾ ಅರ್ಹರು.? ಹೇಗೆ ಅರ್ಜಿ ಸಲ್ಲಿಸುವುದು.? ಹಾಗು ಬೇಕಾಗುವ ದಾಖಲೆಗಳೇನು.? ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

WhatsApp Group Join Now

ಇದನ್ನೂ ಕೂಡ ಓದಿ : PM Awas Yojana : ಪಿಎಂ ಆವಾಸ್ ಯೋಜನೆಯಡಿ 3 ಕೋಟಿ ಕುಟುಂಬಗಳಿಗೆ ಸ್ವಂತ ಮನೆ | ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್

ಯೋಜನೆಗೆ ಯಾರು ಅರ್ಹರು?

  • ಈ ಯೋಜನೆಗೆ ಅರ್ಜಿ ಸಲ್ಲಿಸುವ ರೈತರು ಕಳೆದ 7 ವರ್ಷಗಳಲ್ಲಿ ಸರಕಾರದ ಯಾವುದೇ ಯೋಜನೆಯಲ್ಲಿ ಟ್ರ್ಯಾಕ್ಟರ್ ಖರೀದಿಸಿರಬಾರದು.
  • ಅರ್ಜಿ ಸಲ್ಲಿಸುವಂತಹ ರೈತ ತನ್ನ ಹೆಸರಿನಲ್ಲಿ ಕೃಷಿಭೂಮಿಯನ್ನು ಹೊಂದಿರಬೇಕು.
  • ಒಂದು ಕುಟುಂಬದಲ್ಲಿ ಒಬ್ಬ ರೈತರು ಮಾತ್ರ ಪಿಎಂ ಕಿಸಾನ್ ಯೋಜನೆಯಲ್ಲಿ ಟ್ರ್ಯಾಕ್ಟರ್ ಖರೀದಿಸಲು ಅರ್ಜಿಯನ್ನು ಸಲ್ಲಿಸಬಹುದು.
  • ಈ ಯೋಜನೆಯಲ್ಲಿ ರೈತ ಖರೀದಿಸುವಂತಹ ಟ್ರಾ ಕ್ಟರ್ ಅನ್ನು ಬೇರೆ ಯಾವುದೇ ಸಬ್ಸಿಡಿ ಯೋಜನೆಯೊಂದಿಗೆ ಸಂಯೋಜಿಸಬಾರದು.
  • ಈ ಯೋಜನೆಯು ಕಡಿಮೆ ಹಿಡುವಳಿ ಭೂಮಿ ಹೊಂದಿರುವಂತಹ ರೈತರಿಗೆ ಸೀಮಿತವಾಗಿದೆ. ಈ ಎಲ್ಲಾ ಶರತ್ತುಗಳನ್ನು ಕಡ್ಡಾಯವಾಗಿ ಹೊಂದಿರುವಂತಹ ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಇದನ್ನೂ ಕೂಡ ಓದಿ : PMJAY : ಜನಸಾಮಾನ್ಯರಿಗೆ ಕೇಂದ್ರ ಸರ್ಕಾರದಿಂದ 5 ಲಕ್ಷ ರೂಪಾಯಿಯ ಬಂಪರ್ ಗಿಫ್ಟ್​! ಇದನ್ನ ಪಡೆಯುವುದು ಹೇಗೆ.? ಸಂಪೂರ್ಣ ಮಾಹಿತಿ

WhatsApp Group Join Now

ಬೇಕಾಗುವ ದಾಖಲೆಗಳೇನು.?

  • ಕಡಿಮೆ ಹಿಡುವಳಿ ಭೂಮಿ ಹೊಂದಿರುವ ಬಗ್ಗೆ ಜಮೀನಿಗೆ ಸಂಬಂಧಿಸಿದ ದಾಖಲೆ ಪತ್ರವನ್ನು ಹೊಂದಿರಬೇಕು ಅಂದರೆ ಪಹಣಿ ಮತ್ತು ಹಕ್ಕು ಪತ್ರಗಳನ್ನು ಹೊಂದಿರಬೇಕು.
  • ನೋಂದಣಿಗಾಗಿ ಅಭ್ಯರ್ಥಿಯ ಆಧಾರ್ ಕಾರ್ಡನ್ನು ಹೊಂದಿರಬೇಕು.
  • ಅರ್ಜಿದಾರನು ಗುರುತಿನ ಚೀಟಿ ಅಂದರೆ ವೋಟರ್ ಐಡಿ ಕಾರ್ಡ್ ನ್ನು ತಪ್ಪದೇ ಅರ್ಜಿಯೊಂದಿಗೆ ಸಲ್ಲಿಸಬೇಕು.
  • ಜೊತೆಗೆ ಪಾನ್ ಕಾರ್ಡ್ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಸಹ ಹೊಂದಿರಬೇಕು.
  • ಅರ್ಜಿದಾರನ ಚಾಲ್ತಿಯಲ್ಲಿರುವಂತಹ ಮೊಬೈಲ್ ನಂಬರನ್ನು ನೀಡಬೇಕಾಗುತ್ತದೆ.
  • ಅರ್ಜಿದಾರನ ಚಾಲ್ತಿಯಲ್ಲಿರುವಂತಹ ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಅನ್ನು ನೀಡಬೇಕು.
  • ಅರ್ಜಿದಾರನ ಇತ್ತೀಚಿನ ಪಾಸ್ಪೋರ್ಟ್ ಅಳತೆಯ 4 ಫೋಟೋಗಳನ್ನು ಸಲ್ಲಿಸಬೇಕು.

ಕೃಷಿ ಯಂತ್ರೋಪಕರಣಗಳನ್ನು ಸಹಾಯಧನ ಯೋಜನೆಯಡಿ ಖರೀದಿಸಲು ಸಲ್ಲಿಕೆಯಾಗಿರುವ ಅರ್ಜಿಗಳ ಪರಿಶೀಲನೆ ಮತ್ತು ಸಹಾಯಧನ ಮಂಜೂರಾತಿ :-

ಕೆ-ಕಿಸಾನ್ ವೆಬ್ ಸೈಟ್ ನಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿಗಳು ಪರಿಶೀಲಿಸುವುದು. ಉಪಕರಣ / ಘಟಕದ ಖರೀದಿಗೆ ಬ್ಯಾಂಕ್‌ನಿಂದ ಸಾಲ ಪಡೆದಿದ್ದಲ್ಲಿ, ಬ್ಯಾಂಕ್ ಸಾಲದ ಖಾತೆ ವಿವರಗಳೊಂದಿಗೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳಿಗೆ ಅರ್ಜಿಯೊಂದಿಗೆ ಎಲ್ಲಾ ದಾಖಲಾತಿಗಳನ್ನು ಸಲ್ಲಿಸುವುದು.

ಇದನ್ನೂ ಕೂಡ ಓದಿ : ತಾಯಿ-ಮಗು ಸಹಾಯ ಹಸ್ತ ಯೋಜನೆ – ₹6,000 ರೂಪಾಯಿ ಆರ್ಥಿಕ ನೆರವು ಪಡೆಯಲು ಅರ್ಜಿ ಆಹ್ವಾನ.! ಬೇಕಾಗುವ ದಾಖಲೆಗಳೇನು.?

WhatsApp Group Join Now

ವಿವಿಧ ಯೋಜನೆಗಳಡಿ ವಿತರಿಸುವ ಉಪಕರಣ / ಸವಲತ್ತಿನ ಬೆಲೆಯು ರೂ.20,000/- ಕ್ಕಿಂತ ಅಧಿಕವಿದ್ದಲ್ಲಿ, ಸವಲತ್ತನ್ನು ಪಡೆಯಲು ಇಚ್ಚಿಸಿರುವ ರೈತರಿಂದ ರೂ.20/-ರ ಛಾಪಾ ಕಾಗದದ ಮೇಲೆ ಸದರಿ ಕೃಷಿ ಯಂತ್ರೋಪಕರಣವನ್ನು ಕೃಷಿ ಕಾರ್ಯಕ್ರಮಕ್ಕಾಗಿ ಮಾತ್ರ ಉಪಯೋಗಿಸುವ ಬಗ್ಗೆ, ದುರುಪಯೋಗಪಡಿಸಿಕೊಳ್ಳುವುದಿಲ್ಲವೆಂದು ಹಾಗೂ ಪರಬಾರೆ ಮಾಡುವುದಿಲ್ಲವೆಂದು ಘೋಷಣಾ ಪತ್ರವನ್ನು ಪಡೆಯುವುದು.

ಒಂದು ವೇಳೆ ರೈತರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಕೆಲವು ಮಾರ್ಪಾಡುಗಳನ್ನು ಕೋರಿದಲ್ಲಿ, ರೈತರ ವಂತಿಕೆ ಪಾವತಿಸಿದ challan entry ಮಾಡುವ ಮುನ್ನ, ಸ.ಕೃ.ನಿ ಲಾಗಿನ್ ಐಡಿಯಲ್ಲಿ ಮಾರ್ಪಾಡುಗಳನ್ನು ಮಾಡಲು ಅವಕಾಶ ಕಲ್ಪಿಸಲಾಗಿರುತ್ತದೆ. ಅದರಂತೆ, ಸಂಬಧಿಸಿದ ರೈತರಿಂದ ಒಪ್ಪಿಗೆ ಪತ್ರ ಪಡೆದು (ಅನುಬಂಧ-ಋ), ಸೂಕ್ತ ಕ್ರಮಕೈಗೊಳ್ಳುವುದು.

ತಾಲ್ಲೂಕು ಸ.ಕೃ.ನಿ ರವರು ರೈತರು ದರ ಕರಾರು ಹೊಂದಿರುವ ಸಂಸ್ಥೆಯ ಖಾತೆಗೆ ಜಮೆ ಮಾಡಿರುವ ರೈತರ ವಂತಿಕೆಗೆ ಪಾವತಿಸಿರುವ ಕುರಿತು UTR / Challan ಸಂಖ್ಯೆಯನ್ನು ವೆಬ್ ಸೈಟ್ ನಲ್ಲಿ ಅಪ್‌ಲೋಡ್ ಮಾಡುವುದು. ಹಾಗೂ ಸ.ಕೃ.ನಿ ರವರು ಸಂಬಂಧಿಸಿದ ದರಕರಾರು ಹೊಂದಿರುವ ಸಂಸ್ಥೆಗೆ, ಸರಬರಾಜು ಆದೇಶವನ್ನು (ಅನುಬಂಧ-ಉ) ನೀಡುವುದು.

ಇದನ್ನೂ ಕೂಡ ಓದಿ : Shrama Shakthi Scheme : ಕರ್ನಾಟಕ ಶ್ರಮ ಶಕ್ತಿ ಯೋಜನೆ ಮೂಲಕ ₹50,000/- ಹಣ ಸಿಗಲಿದೆ.! ಅರ್ಜಿ ಸಲ್ಲಿಸುವುದು ಹೇಗೆ.?

ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು, ಸ.ಕೃ.ನಿ. ಕಛೇರಿರವರು ದರ ಕರಾರು ಹೊಂದಿರುವ ಸಂಸ್ಥೆಗೆ ನೀಡಿರುವ ಕಾರ್ಯಾದೇಶದನ್ವಯ ಯಂತ್ರೋಪಕರಣಗಳ ಸರಬರಾಜು ಪಡೆದು, ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಮತ್ತು ಕೃಷಿ ಅಧಿಕಾರಿ ಭೌತಿಕ ಪರಿಶೀಲನೆಯನ್ನು ಕೆ-ಕಿಸಾನ್ ಮೊಬೈಲ್ ಆಪ್ ನಲ್ಲಿ ಅಪ್ ಲೋಡ್ ಮಾಡಿ ವಿತರಿಸುವುದು.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply