PM Awas Yojana : ನಮಸ್ಕಾರ ಸ್ನೇಹಿತರೇ, ಮೂರನೇ ಬಾರಿಗೆ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಸುಮಾರು ಮೂರು ಕೋಟಿ ವಸತಿ ರಹಿತ ಬಡ ಕುಟುಂಬಗಳಿಗೆ ನಿಗದಿತ ಕಾಲಮಿತಿಯೊಳಗೆ ಮನೆ ವಿತರಿಸಲು ಕೇಂದ್ರ ಸಂಪುಟ ಸಭೆಯಲ್ಲಿ ತೀರ್ಮಾನಿಸಿದೆ. ಜೂನ್ 10ರಂದು ನಡೆದ ‘ಮೋದಿ 3.0’ ಸರಕಾರದ ಮೊದಲ ಸಚಿವ ಸಂಪುಟ ಸಭೆಯಲ್ಲಿ ‘ಪ್ರಧಾನಮಂತ್ರಿ ಆವಾಸ್ ಯೋಜನೆ’ ಅಡಿಯಲ್ಲಿ 3 ಕೋಟಿ ಮನೆಗಳ ನಿರ್ಮಾಣಕ್ಕೆ ಸರ್ಕಾರವು ಅಧೀಕೃತ ಅನುಮೋದನೆಯನ್ನ ನೀಡಿದೆ.
ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಆವಾಸ್ ಯೋಜನೆ (Pradhan Mantri Awas Yojana- PMAY) ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ಸ್ವಂತ ಮನೆಯಲ್ಲಿ ವಾಸಿಸುವಂತಹ ಕನಸನ್ನ ನನಸು ಮಾಡುವ ಯೋಜನೆ ಇದಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು.? ಬೇಕಾಗುವ ದಾಖಲೆಗಳೇನು.? ಹೇಗೆ ಅರ್ಜಿ ಸಲ್ಲಿಸುವುದು.? ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದಲ್ಲಿ ನೀಡಲಾಗಿದೆ.
ಇದನ್ನೂ ಕೂಡ ಓದಿ : Rain Alert : ರಾಜ್ಯದಲ್ಲಿ ಭಾರೀ ಮಳೆ – ಇನ್ನು 5 ದಿನ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಭಾರೀ ಮಳೆ – ಹವಾಮಾನ ಇಲಾಖೆ ಮುನ್ಸೂಚನೆ
ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು.?
- ವಾಸಿಸಲು ಸ್ವಂತ ಮನೆಯಿಲ್ಲದ ಭಾರತದ ಪ್ರತಿಯೊಬ್ಬರೂ ಕೂಡ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
- ಈ ಯೋಜನೆಯಡಿ ಅರ್ಜಿ ಸಲ್ಲಿಸುವ ಮುನ್ನ ಅರ್ಹ ಫಲಾನುಭವಿಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವತಿಯಿಂದ ನೀಡುವ ಇತರೇ ಯಾವುದೇ ವಸತಿ ಯೋಜನೆಯ ಪ್ರಯೋಜನ ಪಡೆದಿರಬಾರದು.
- ದೇಶದ ಮಹಿಳಾ ಫಲಾನಭವಿಗಳಿಗೆ ಪಿಎಂ ಆವಾಸ್ ಯೋಜನೆಯಲ್ಲಿ ಹೆಚ್ಚಿನ ಆದ್ಯತೆ ಇದೆ. ಅರ್ಜಿದಾರರ ವಾರ್ಷಿಕ ಆದಾಯವು EWS (Economically Weaker Section) ವರ್ಗದವರಿಗೆ 6 ಲಕ್ಷದ ಒಳಗಿರಬೇಕು.
- LIG (Low Income Group) ವರ್ಗದವರಿಗೆ 6 ರಿಂದ 12 ಲಕ್ಷ ರೂಪಾಯಿ ಒಳಗಿರಬೇಕು.
- MIG 1 (Middle Income Group 1) ಮಧ್ಯಮ ವರ್ಗದ ಅಡಿಯಲ್ಲಿ ಬರುವಂತಹ ಫಲಾನುಭವಿಗಳ ವಾರ್ಷಿಕ ಆದಾಯವು 12 ರಿಂದ 18 ಲಕ್ಷ ರೂಪಾಯಿ ಒಳಗಿರಬೇಕು.
- ಇನ್ನು MIG II (Middle Income Group) ವರ್ಗದ ಅಡಿಯಲ್ಲಿ ಬರುವಂತಹ ಫಲಾನುಭವಿಗಳ ವಾರ್ಷಿಕ ಆದಾಯವು 18 ಲಕ್ಷ ಮೇಲಿರಬಾರದು.
ಬೇಕಾಗುವ ದಾಖಲೆಗಳೇನು.?
- ಆಧಾರ್ ಕಾರ್ಡ್
- ಆದಾಯ ಪ್ರಮಾಣ ಪತ್ರ
- ವಿಳಾಸ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್ ಬುಕ್
- ಮೊಬೈಲ್ ನಂಬರ್
- ಪಾಸ್ಪೋರ್ಟ್ ಸೈಜ್ ಫೋಟೋ
ಇದನ್ನೂ ಕೂಡ ಓದಿ : Crop Insurance : ಮುಂಗಾರು ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಅವಕಾಶ.! ಹೇಗೆ ಅರ್ಜಿ ಸಲ್ಲಿಸುವುದು.? ಡೈರೆಕ್ಟ್ ಲಿಂಕ್
ಅರ್ಜಿ ಸಲ್ಲಿಸುವ ವಿಧಾನ.?
ಪ್ರಧಾನಮಂತ್ರಿ ಆವಾಸ್ ಯೋಜನೆ(Pradhan Mantri Awas Yojana- PMAY) ಅಡಿಯಲ್ಲಿ ಅರ್ಜಿ ಸಲ್ಲಿಸುವಂತಹ ಅರ್ಜಿದಾರರು ಈ ಯೋಜನೆಯ ಅಧೀಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.
ಕೆಳಗೆ ನೀಡಿರುವ ಸರ್ಕಾರದ ಅಧೀಕೃತ ವೆಬ್ ಸೈಟ್ ಲಿಂಕ್ ಮೂಲಕ ಸ್ವತಃ ನೀವೇ ಪ್ರಧಾನಮಂತ್ರಿ ಆವಾಸ್ ಯೋಜನೆಗೆ (Pradhan Mantri Awas Yojana- PMAY) ಅರ್ಜಿ ಸಲ್ಲಿಸಲು ನಿಮಗೆ ಸಮಸ್ಯೆಯಿದ್ದಲ್ಲಿ, ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಗ್ರಾಹಕ ಸೇವಾ ಕೇಂದ್ರಕ್ಕೆ ಮೇಲೆ ತಿಳಿಸಿದ ಅಗತ್ಯ ದಾಖಲೆಗಳೊಂದಿಗೆ ಭೇಟಿ ನೀಡಿ, ಆನ್ ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದಾಗಿದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ :- Pradhan Mantri Awas Yojana (Urban)-PMAY (U)
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
- ಮುಂದಿನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಎಂದು ಬ್ಯಾನರ್… ಹೊಸ ಎಡವಟ್ಟು ಮಾಡಿಕೊಂಡ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ
- ಬಾಲಕಿಯರ ವಿಡಿಯೋ ಚಿತ್ರೀಕರಿಸಿ ಆನ್ಲೈನ್ಗೆ ಅಪ್ಲೋಡ್: ಹುಡುಕಿ ಇಬ್ಬರನ್ನ ಬಂಧಿಸಿದ ರಾಮನಗರ ಪೊಲೀಸರು
- ಮೂರುಕಾಸಿನ ಕೆಲಸ ಮಾಡದ ಸಿದ್ದರಾಮಯ್ಯ, ಡಿಕೆಶಿಗೆ ಮುಖ ಮುಚ್ಚಲು ಬುರ್ಖಾ ಬೇಕು, ಪ್ರತಾಪ್ ಸಿಂಹ ಕಿಡಿ
- ಪತ್ನಿಯ ಮುಂದೆ ಅವಮಾನ ಮಾಡಿದ ತಂದೆ-ತಾಯಿಯನ್ನೇ ಕುಟ್ಟಾಣಿಯಿಂದ ಹೊಡೆದು ಕೊಂದ ಮಗ!
- ಬೆಳಗ್ಗೆ ಎದ್ದ ತಕ್ಷಣ ಮಾಡುವ ತಪ್ಪು ಶೇ.80ರಷ್ಟು ಹೃದಯಾಘಾತಕ್ಕೆ ಕಾರಣ? ತಜ್ಞರು ಹೇಳೋದೇನು?
- ಮಹಾರಾಷ್ಟ್ರದಲ್ಲಿ ಘೋರ ದುರಂತ: ಧಾರೆ ಎರೆದುಕೊಡುವ ಮುಹೂರ್ತದಲ್ಲೇ ಹೃದಯಾಘಾತದಿಂದ ವಧುವಿನ ತಂದೆ ಸಾವು!
- ತುಂಗಭದ್ರಾ ಸೇತುವೆ ಮೇಲಿಂದ ಕೆಳಗೆ ಬಿದ್ದ ಟ್ರ್ಯಾಕ್ಟರ್: 7 ಮಂದಿ ದಾರುಣ ಸಾವು, ಹಲವರ ಸ್ಥಿತಿ ಗಂಭೀರ
- ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಪ್ರಧಾನಿ ಮೋದಿ ಕೊಡುಗೆ : ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆರೋಪ!
- 13 ವರ್ಷಗಳ ನಂತರ ಪತ್ತೆಯಾದ ‘ಅಪಹರಣಕ್ಕೊಳಗಾಗಿದ್ದ’ ಬಾಲಕಿ: ಈಗ ನಾಲ್ಕು ಮಕ್ಕಳ ತಾಯಿ! ಸತ್ಯ ತಿಳಿದು ಕುಟುಂಬಸ್ಥರು ಕಂಗಾಲು!
- ಜನಗಣತಿ ಕಾರ್ಯಕ್ಕೆ ತೆರಳುತ್ತಿದ್ದ ಶಿಕ್ಷಕಿಯ ಬಾಳು ಅಂತ್ಯ: ಟ್ರ್ಯಾಕ್ಟರ್ ಅಟ್ಟಹಾಸಕ್ಕೆ ಬಲಿಯಾದ ಪೂರ್ಣಿಮಾ ಭಟ್!
- ನಿರೀಕ್ಷೆಯಂತೆಯೇ ವಿವಿಧ ರಾಜ್ಯಗಳ ಚುನಾವಣೆ ಮುಗಿದ ಮೇಲೆ ಪೆಟ್ರೋಲ್ ಡೀಸೆಲ್ ದರ ಹೆಚ್ಚಿಸಿದ್ದಾರೆ: ಕೇಂದ್ರದ ವಿರುದ್ಧ ಸಿಎಂ ಕಿಡಿ
- ದಕ್ಷ ಅಧಿಕಾರಿ ಇನ್ಸ್ಪೆಕ್ಟರ್ ಶಿವಪ್ಪ ನಾಯಕರ್ ಹೃದಯಾಘಾತದಿಂದ ನಿಧನ; ಪೊಲೀಸ್ ಇಲಾಖೆಯಲ್ಲಿ ಶೋಕ
- ಜಾಮೀನು ನಿರೀಕ್ಷೆಯಲ್ಲಿದ್ದ ನಟ ದರ್ಶನ್ಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್
- ಹೃದಯಾಘಾತ ತಡೆಯುವ ಶಕ್ತಿಶಾಲಿ ಹಣ್ಣು… ತಿಂಗಳಲ್ಲಿ ಒಮ್ಮೆ ತಿನ್ನಿ ಸಾಕು ಹಾರ್ಟ್ ಅಟ್ಯಾಕ್ ಹತ್ತಿರಕ್ಕೂ ಸುಳಿಯಲ್ಲ!
- Electricity bill : ನಿಮ್ಮ ಮನೆಯ ‘ಕರೆಂಟ್ ಬಿಲ್’ ಕಡಿಮೆ ಮಾಡಲು ತಪ್ಪದೇ ಈ ನಿಯಮಗಳನ್ನು ಪಾಲಿಸಿ
- ಅಮ್ಮನ ಕಳೆದುಕೊಂಡಿದ್ದ ಅಪ್ರಾಪ್ತೆ ಮೇಲೆ, ನೆರೆ ಮನೆಯವನಿಂದಲೇ ಅತ್ಯಾಚಾರ! ರಾಜ್ಯದಲ್ಲಿ ಪೈಶಾಚಿಕ ಕೃತ್ಯ
- Horoscope Today : 15 ಮೇ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ಶಿಕ್ಷಕಿಯ ಮೇಲೆ 10ನೇ ತರಗತಿ ವಿದ್ಯಾರ್ಥಿಗಳಿಂದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ: ಬೆಚ್ಚಿಬೀಳಿಸುವ ಘಟನೆ
- ಮೂಗಿನ ಕೂದಲನ್ನು ಕತ್ತರಿಸುವವರೇ ಎಚ್ಚರ : ತಪ್ಪದೇ ಇದನ್ನೊಮ್ಮೆ ಓದಿ.!
- ಪಾದಗಳಲ್ಲಿ ಈ ರೀತಿ ಲಕ್ಷಣಗಳು ಕಾಣಿಸಿಕೊಂಡರೆ ಅದು ಹೃದಯ ಮತ್ತು ಕಿಡ್ನಿ ಸಮಸ್ಯೆಯ ಲಕ್ಷಣವಾಗಿರಬಹುದು ಎಚ್ಚರ.!



















